Homeಕರ್ನಾಟಕಸಿ.ಟಿ.ರವಿಯ ಬಾಯಲ್ಲಿ ಕುವೆಂಪು, ಶಾಂತವೇರಿಯವರ ಹೆಸರು: ಹೇಳಿಕೊಳ್ಳಲು ಸಿ.ಟಿ.ರವಿಗೆ ಒಂದೂ ಸಂಘಪರಿವಾರದ ಹೆಸರು ಸಿಗಲಿಲ್ಲವೇಕೆ?

ಸಿ.ಟಿ.ರವಿಯ ಬಾಯಲ್ಲಿ ಕುವೆಂಪು, ಶಾಂತವೇರಿಯವರ ಹೆಸರು: ಹೇಳಿಕೊಳ್ಳಲು ಸಿ.ಟಿ.ರವಿಗೆ ಒಂದೂ ಸಂಘಪರಿವಾರದ ಹೆಸರು ಸಿಗಲಿಲ್ಲವೇಕೆ?

- Advertisement -
- Advertisement -

ಡಿ.ಕೆ.ಶಿವಕುಮಾರ್ ರ ಬಂಧನಕ್ಕೆ ಒಕ್ಕಲಿಗರ ಸಂಘಗಳು ಸೇರಿ ಮಾಡಿದ ಪ್ರತಿಭಟನೆಯ ಕುರಿತು ಒಕ್ಕಲಿಗ ಸಮುದಾಯಕ್ಕೆ ಸೇರಿದ ಬಿಜೆಪಿ ಸಚಿವ ಸಿ.ಟಿ.ರವಿ ಆಕ್ಷೇಪಣೆ ಎತ್ತಿ ಮಾತನಾಡಿದರು. ಜಾತಿಯ ಆಧಾರದಲ್ಲಿ ಪ್ರತಿಭಟಿಸಬೇಡಿ ಎಂದು ಅವರು ಹೇಳಲಿಲ್ಲ. ಈ ಮಾತನ್ನು ಬೇರೆ ಕೆಲವರು ಹೇಳಿದ್ದಾರೆ. ಆರ್.ಅಶೋಕ್ ಸೇರಿದಂತೆ ಹಲವರು ತಪ್ಪು ಮಾಡಿದ್ದಾರೆ, ಅನುಭವಿಸುತ್ತಾರೆ ಅಷ್ಟೇ ಹೊರತು ಇದಕ್ಕೆ ಜಾತಿಯ ಬಣ್ಣ ಬಳಿಯಬೇಡಿ ಎಂದು ಹೇಳಿದರು. ಆದರೆ, ಸಿ.ಟಿ.ರವಿ ತಾನು ಭಿನ್ನವಾಗಿ ಹೇಳಬೇಕು ಎಂಬ ಕಾರಣಕ್ಕೆ ಆಶ್ಚರ್ಯಕರವಾದ ಮಾತುಗಳನ್ನು ಹೇಳಿದರು.

‘ಒಕ್ಕಲಿಗ ಸಮುದಾಯದಲ್ಲಿ ಶಾಂತವೇರಿ ಗೋಪಾಲಗೌಡ, ಕುವೆಂಪು, ಕೆಂಗಲ್ ಹನುಮಂತಯ್ಯರಂಥವರು ಇದ್ದರು. ಅವರನ್ನು ಬಿಟ್ಟು ಡಿ.ಕೆ.ಶಿವಕುಮಾರ್ ಥರದವರನ್ನು ನಿಮ್ಮ ನಾಯಕರೆಂದು ಆರಿಸಿಕೊಳ್ಳುತ್ತೀರಾ (ಡಿಕೆಶಿ ಹೆಸರು ಹೇಳದಿದ್ದರೂ, ಅದೇ ಉದ್ದೇಶದಿಂದ ಹೇಳಿದ್ದು) ಯೋಚಿಸಿ’ ಎಂಬುದು ರವಿಯವರ ಹೇಳಿಕೆಯಾಗಿತ್ತು.

ವಿಪರ್ಯಾಸವೆಂದರೆ, ಕೆಂಗಲ್ ಹನುಮಂತಯ್ಯನವರು ಸಿ.ಟಿ.ರವಿಯವರ ಪಕ್ಷದ ಹಿಂದಿನ ಅವತಾರವಾಗಿದ್ದ ಜನಸಂಘದಲ್ಲೇನೂ ಇರಲಿಲ್ಲ. ಅವರು ಕಾಂಗ್ರೆಸ್ ನಾಯಕರಾಗಿದ್ದರು. ಸಿ.ಟಿ.ರವಿಯವರ ಸಂಘಟನೆ ಆರೆಸ್ಸೆಸ್ ಬ್ರಿಟಿಷರ ಪರವಾಗಿ ಕೆಲಸ ಮಾಡಿದರೆ, ಹನುಮಂತಯ್ಯನವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು 9 ಸಾರಿ ಜೈಲು ಅನುಭವಿಸಿದ್ದರು.

ಇನ್ನು ಶಾಂತವೇರಿ ಗೋಪಾಲಗೌಡರು. ಅವರು ಕಾಂಗ್ರೆಸ್ ವಿರುದ್ಧ ಇದ್ದರು. ಆದರೆ, ಬಿಜೆಪಿ ಹಾಗೂ ಆರೆಸ್ಸೆಸ್‍ಅನ್ನು ಸಂಪೂರ್ಣವಾಗಿ ವಿರೋಧಿಸುವ ಸಮಾಜವಾದಿ ಆಶಯದ ಪಕ್ಷದಲ್ಲಿದ್ದರು. ಸಿ.ಟಿ.ರವಿಯವರ ಪಕ್ಷ ಅಥವಾ ಅವರ ಪೂರ್ವಸೂರಿಗಳು ಭೂಮಾಲೀಕರ ಪರವಾಗಿದ್ದರೆ, ಗೋಪಾಲಗೌಡರು ಗೇಣೀದಾರರ ಪರವಾಗಿದ್ದರು. ಇನ್ನು ರವಿಯವರೇ ಕೊಂಡಾಡಿದ ಗೌಡರ ಸರಳತೆ, ಅತ್ಯಂತ ಕೆಳಸ್ತರದಲ್ಲಿದ್ದ ಜನರ ಪರವಾಗಿ ದನಿಯೆತ್ತುವುದೂ ಸಹಾ ರವಿಯವರ ಪಕ್ಷದ ಧೋರಣೆಯಲ್ಲ. ಹಾಗೆಯೇ ಗೋಪಾಲಗೌಡರು ಜಾತಿ ರಾಜಕಾರಣ ಮಾಡಿರಲಿಲ್ಲ. ರವಿ ಬಂದಿರುವ ಮಲೆನಾಡಿನಿಂದಲೇ ಬಂದ ಗೋಪಾಲಗೌಡರು ಕಾಂಗ್ರೆಸ್ಸಿಗೆ ಸಲ್ಲುವ ವ್ಯಕ್ತಿಯಾಗಿರಲಿಲ್ಲ; ಬಿಜೆಪಿಗಂತೂ ಹತ್ತಿರವೂ ಬರುತ್ತಿರಲಿಲ್ಲ.


ಸಿ.ಟಿ.ರವಿಯಂತಹ ವ್ಯಕ್ತಿಗಳು ಕುವೆಂಪು ಅವರ ಹೆಸರಂತೂ ಹೇಳುವುದೇ ಅಪಚಾರ. ಜಾತಿ, ಧರ್ಮ, ಜನಾಂಗಗಳ ಕಾರಣಕ್ಕೆ ದೂರವಿಡುವ ಸಂಸ್ಕೃತಿಯ ರವಿ, ವಿಶ್ವಮಾನವ ತತ್ವವನ್ನು ಹೇಳಿದ ಕುವೆಂಪು ಅವರ ಹೆಸರನ್ನು ಹೇಳಿದ್ದು ವಿಪರ್ಯಾಸ. ರವಿ ಪ್ರತಿಪಾದಿಸುವ ಹಿಂದಿ, ಹಿಂದೂ ಮತ್ತು ಹಿಂದೂರಾಷ್ಟ್ರದ ಕಟುವಿರೋಧಿಗಳಾಗಿದ್ದ ಕುವೆಂಪು ಆರೆಸ್ಸೆಸ್‍ಅನ್ನು ವಿರೋಧಿಸುತ್ತಿದ್ದರಷ್ಟೇ ಅಲ್ಲ, ತಮ್ಮನ್ನು ಒಕ್ಕಲಿಗರೆಂದು ಕರೆಯುವುದನ್ನೂ ಇಷ್ಟಪಡುತ್ತಿರಲಿಲ್ಲ. ಅವರು ಬದುಕಿರುವಷ್ಟು ಕಾಲ ಆದಿಚುಂಚನಗಿರಿ ಮಠಕ್ಕೆ ಭೇಟಿಯೂ ಕೊಡಲಿಲ್ಲ. ಅಂತರ್ಜಾತಿ ಮದುವೆಗಳನ್ನು ಪ್ರೋತ್ಸಾಹಿಸಿದರು. ಸ್ವತಃ ಅವರ ಮಗನ ಅಂತರ್ಜಾತಿ ಮದುವೆಗೆ ಬೆಂಬಲವಾಗಿ ನಿಂತರು.

ಈಗ ಸಿ.ಟಿ.ರವಿಯ ಮಾತನ್ನೇ ಪರಿಗಣಿಸಿ ಕುವೆಂಪು, ಶಾಂತವೇರಿ ಗೋಪಾಲಗೌಡರು, ಕೆಂಗಲ್ ಹನುಮಂತಯ್ಯರವರನ್ನು ಒಕ್ಕಲಿಗ ಸಮುದಾಯ ಆದರ್ಶವಾಗಿ ಪರಿಗಣಿಸಿದರೆ, ಬಿಜೆಪಿ ಒಕ್ಕಲಿಗ ಸಮುದಾಯದ ಮೊದಲ ಶತ್ರುವಾಗಿಬಿಡುತ್ತದೆ. ಜೊತೆಗೆ ಆರೆಸ್ಸೆಸ್‍ನ ಸಿದ್ಧಾಂತದ ಕಡುವಿರೋಧಿಗಳಾಗಿ ಬದಲಾಗಲೇಬೇಕಾಗುತ್ತದೆ. ಹೀಗಾಗಿಯೇ ಉಳಿದವರು ಅಂತಹ ದೊಡ್ಡವರ ಹೆಸರನ್ನು ಹೇಳುವುದಕ್ಕೆ ಹೆದರುತ್ತಾರೆ. ಒಕ್ಕಲಿಗರ ಸಂಘದ ಬೃಹತ್ ಕಾರ್ಯಕ್ರಮವೊಂದರಲ್ಲಿ ಕುವೆಂಪು ಅವರ ಫೋಟೋ ಹಾಕಿಕೊಂಡಿದ್ದಕ್ಕೆ ದೊಡ್ಡ ವಿರೋಧ ಕೇಳಿ ಬಂದಿತ್ತು.

ದುರಂತವೆಂದರೆ, ಸಿ.ಟಿ.ರವಿ ‘ಇವರು ನಿಮ್ಮ ಆದರ್ಶ’ ಎಂದು ತನ್ನ ಪರಿವಾರದ ಹೆಸರುಗಳನ್ನು ಹೇಳುವುದು ಸಾಧ್ಯವಿಲ್ಲ. ಹಾಗಾಗಿ ಈ ಸದ್ಯ ಡಿ.ಕೆ.ಶಿವಕುಮಾರ್‍ರ ಮೇಲೆ ಕೇಂದ್ರ ಸರ್ಕಾರ ಮುಗಿಬಿದ್ದಿರುವ ಸಂದರ್ಭದಲ್ಲಿ ಒಕ್ಕಲಿಗರು ಬಿಜೆಪಿಯ ವಿರುದ್ಧ ತಿರುಗಿ ಬೀಳುತ್ತಿರುವುದನ್ನು ರವಿ ಗ್ರಹಿಸಿದ್ದಾರೆ. ಜಾತಿಯಾಚೆ ಯೋಚಿಸಿ ಎಂದು ‘ಸಂಘಪರಿವಾರದ ಮೂಲದವರಲ್ಲದ’ ಅಶ್ವತ್ಥನಾರಾಯಣ ಹೇಳುತ್ತಿದ್ದರೆ, ಜಾತಿ-ಧರ್ಮಗಳನ್ನು ಬಳಸಿಯೇ ರಾಜಕಾರಣ ಮಾಡುವ ಅಭ್ಯಾಸದ ರವಿಗೆ ಒಕ್ಕಲಿಗ ಹೆಸರುಗಳನ್ನೇ ಮುಂದೆ ಮಾಡುವ ಆಲೋಚನೆ ಬಂದಿದೆ. ಆದರೆ, ಅದಕ್ಕೆ ಅವರು ಆರಿಸಿಕೊಂಡಿರುವ ಹೆಸರುಗಳು ಮಾತ್ರ ಅವರ ವಿರೋಧಿ ಪಾಳೆಯದ್ದು ಎಂಬುದನ್ನು ನೆನಪಿಸುವ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...