Homeಚಳವಳಿಕೈರುನ್ನಿಸಾ ಬಾಬಯ್ಯ ; ಸೆಕ್ಯುಲರಿಸಂನ ನೈಜ ಸಂಕೇತ

ಕೈರುನ್ನಿಸಾ ಬಾಬಯ್ಯ ; ಸೆಕ್ಯುಲರಿಸಂನ ನೈಜ ಸಂಕೇತ

- Advertisement -
- Advertisement -

ಈ ತಿಂಗಳು ಜುಲೈ ಎರಡನೇ ತಾರೀಕು ಕೈರುನ್ನಿಸಾ ತೀರಿಕೊಂಡರು. ಅವರ ಬಗ್ಗೆ ಹೊರಗಿನ ಪಪಂಚಕ್ಕ್ರೆ ಹೆಚ್ಚಿಗೆ ಗೊತ್ತಿಲ್ಲದಿರಬಹುದು. ಆದರೆ ಆಕೆಗೆ ಈ ಪ್ರಪಂಚದ ಬಗ್ಗೆ ಸ್ಪಷ್ಟ ದೃಷ್ಟಿಕೋನವಿತ್ತು. ಸೆಕ್ಯುಲರ್ ಜೀವನ ವಿಧಾನದಿಂದ ಹಿಡಿದು ಕ್ರಾಂತಿಕಾರಿ ರಾಜಕೀಯದವರೆಗೆ ಆಕೆ ವಿಶಾಲ ಮೈದಾನವನ್ನು ಕಂಡಿದ್ದರು. ಆ ಮೈದಾನದಲ್ಲಿ ಒಂದಷ್ಟು ದೂರ ಸಾಗಿದ್ದರು.
ಕೈರುನ್ನಿಸಾ ಆಂಧ್ರದ ರಾಯಲಸೀಮಾ ಪ್ರದೇಶದಲ್ಲಿ ಹುಟ್ಟಿ ಬೆಳೆದವರು. ರಾಯಲಸೀಮ ಫ್ಯಾಕ್ಷನಿಸಂ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ, ನಡೆಯುತ್ತಿದೆ. ಆದರೆ ದೇಶಾದ್ಯಂತ ಕೋಮುವಾದಿ ಗಲಭೆಗಳು ನಡೆಯುತ್ತಿದ್ದರೂ ರಾಯಲಸೀಮದಲ್ಲಿ ಈ ಪಿಡುಗಿನ ಪ್ರಭಾವ ಬಹಳ ಕಡಿಮೆ. ಈ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರ ನಡುವೆ ನೆಲೆಸಿರುವ ಸಾಮಾಜಿಕ ಸಾಮರಸ್ಯ ಬಹಳ ವಿಶೇಷವಾದುದು. ಕೋಮುವಾದಿ ಗಲಭೆಗಳ ಕೊಚ್ಚಿ ಹೋಗುತ್ತಿರುವ ನಮ್ಮ ದೇಶಕ್ಕೆ ರಾಯಲಸೀಮೆಯ ಅನುಭವದಲ್ಲಿ ಒಂದಷ್ಟು ಪರಿಹಾರ ಕಾಣಬಹುದು. ಕೈರುನ್ನೀಸಾ ಅವರ ವ್ಯಕ್ತಿತ್ವದ ಮೇಲೆ ಈ ಸೀಮೆಯ ಧಾರ್ಮಿಕ ಸಾಮರಸ್ಯದ ಪ್ರಭಾವ ಗಾಡವಾಗಿತ್ತು.
ಆಕೆಯ ತಮ್ಮ ಹೇಳುವ ಪ್ರಕಾರ ಆಕೆ ಚಿಕ್ಕಂದಿನಿಂದಲೂ ರೆಬೆಲ್ ಮನಸ್ಥಿತಿಯ ಹುಡುಗಿ. ತಾನು ಇತರರ ಆಸರೆಯಿಲ್ಲದೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಛಲ ಆಕೆಯದು. ತನ್ನ ಕೌಟುಂಬಿಕ ಪರಿಸರ ಓದಿನ ಬಗ್ಗೆ ವಿಶೇಷ ಆಸಕ್ತಿ ತಾಳಿದ ಅವರು ವಿಶಾಖಪಟ್ಟಣದಲ್ಲಿ ನರ್ಸಿಂಗ್ ಕೋರ್ಸ್ ಮುಗಿಸಿ, ಬೆಂಗಳೂರಿನ ಎಚ್‍ಎಎಲ್‍ನ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದರು. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬೇಕೆಂಬುದು ಆಕೆಯ ದೃಡವಾದ ನಿಲುವಾಗಿತ್ತು. ಆಕೆ ನರ್ಸಿಂಗ್ ಕೋರ್ಸ್‍ನಲ್ಲಿದ್ದಾಗಲೇ ಬಾಬಯ್ಯನವರ ಸ್ನೇಹವಾಗಿ, ನಂತರ ಅವರ ಬಾಳ ಸಂಗಾತಿಯೂ ಆದರು. ಬಾಬಯ್ಯನವರಿಗೆ ಚಿಕ್ಕಂದಿನಲ್ಲೇ ತಂದೆ ತಾಯಿಗಳು ತೀರಿಕೊಂಡಿದ್ದರಿಂದಾಗಿ ಕೆಲವು ವರ್ಷಗಳು ಅವರ ಜೀವನ ದಾರವಿಲ್ಲದ ಗಾಳಿಪಟದಂತಾಗಿತ್ತು. ಆದರೆ ಕೈರುನ್ನಿಸಾ ಅವರ ಪರಿಚಯವಾಗಿದ್ದು, ಆಗಲೇ ಆಕೆ ಉದ್ಯೋಗ ಮಾಡುತ್ತಿದ್ದುದರಿಂದ ಬಾಬಯ್ಯನವರ ಉನ್ನತ ವ್ಯಾಸಂಗಕ್ಕೆ ಆಕೆ ಬೆಂಬಲವಾಗಿ ನಿಂತರು.
ಬಾಬಯ್ಯನವರ ಬಾಲ್ಯದ ಬಗ್ಗೆ ಕೇಳಿದರೆ ಮಕ್ಸಿಂಗಾರ್ಕಿಯವರ ಬಾಲ್ಯ ನೆನಪಾಗುತ್ತದೆ. ಬಹಳ ಸಣ್ಣ ವಯಸ್ಸಿನಲ್ಲೇ ಯಾರದೋ ಮನೆಯಲ್ಲಿ ಏನೇನೋ ಚಾಕರಿ ಮಾಡುತ್ತಾ ಬೆಳೆದರೂ ಗಾರ್ಕಿಯಂತೆಯೇ ಜೀವನವನ್ನು ತೀಕ್ಷ್ಣವಾಗಿ ಅವಲೋಕಿಸುತ್ತಾ ಅವರಲ್ಲಿ ಮಾನವೀಯ ಗುಣಗಳು ಮೈದುಂಬಿವೆ. ಮಾನವೀಯ ಸಂಬಂಧಗಳಿಗೆ ಅಡ್ಡಗೋಡೆಯಾಗಿರುವ ಜಾತಿ, ಧರ್ಮ, ವರ್ಗಗಳನ್ನು ಮೀರುವ ಹಾದಿಯಲ್ಲಿ ಕೈರುನ್ನಿಸಾ ಅವರನ್ನು ವಿವಾಹವಾಗಿದ್ದು ಅತ್ಯಂತ ಸಹಜವಾಗಿತ್ತು. ಇವರದು ಅಂತರ್‍ಧರ್ಮೀಯ ಸೆಕ್ಯುಲರ್ ಮದುವೆ. ಕೈರುನ್ನಿಸಾ ಅವರ ರೆಬೆಲ್ ಸ್ವಭಾವಕ್ಕೂ ಬಾಬಯ್ಯನವರ ಮಾನವೀಯ ಸ್ವಭಾವಕ್ಕೂ ಮಧ್ಯೆ ಏರ್ಪಟ್ಟ ಅನುಬಂಧ ಇದು.
ಈ ಇಬ್ಬರ ದೃಡ ನಿರ್ಧಾರದ ಈ ಮದುವೆ ಅರ್ಧ ಶತಮಾನದ ಹಿಂದೆ ಯಾವುದೇ ವಿವಾದವಿಲ್ಲದೆ, ನಿರಾಡಂಬರವಾಗಿ ನಡೆಯಿತು. ಆಗ ದೇಶದ ಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ. ಜಾತಿ ಧರ್ಮಗಳು ಹುಟ್ಟುವ ಮುಂಚಿನಿಂದಲೂ ನಾವೆಲ್ಲರೂ ಮನುಷ್ಯರು ಎಂಬ ಸತ್ಯವನ್ನು ಮನುಷ್ಯರು ಮರೆಯುತ್ತಿದ್ದಾರೆ. ಧರ್ಮ ಎಂಬುದು ಒಂದು ವ್ಯಕ್ತಿಗತ ನಂಬಿಕೆ, ಅದನ್ನು ಮೀರಿ ಧರ್ಮ ಮನುಷ್ಯ ಸಂಬಂಧಗಳ ನಡುವೆ ವಿಷಸರ್ಪವಾಗಿ ಬದಲಾಗಬಾರದು. ಈ ಇಬ್ಬರ ಮದುವೆ ಇಂದಿನ ಸಮಾಜಕ್ಕೆ ಒಂದು ಮಾದರಿಯಾಗಿ, ಸ್ಪೂರ್ತಿಯಾಗಿ ನಿಲ್ಲಬೇಕು.
ಕೈರುನ್ನಿಸಾ ವೈಯುಕ್ತಿಕವಾಗಿ ತನ್ನ ಧಾರ್ಮಿಕ ನಂಬಿಕೆಯನ್ನು ತೊರೆದುಕೊಳ್ಳಲಿಲ್ಲ. ಪ್ರತಿನಿತ್ಯ ಮನೆಯಲ್ಲೇ ನಮಾಜು ಮಾಡುತ್ತಿದ್ದರು. ತನ್ನ ಉಳಿತಾಯದ ಹಣದಿಂದ ಒಂದು ಮಸೀದಿಗೆ ದೇಣಿಗೆಯನ್ನೂ ಕೊಟ್ಟಿದ್ದರು. ಹಾಗೆಂದು ತನ್ನ ಧಾರ್ಮಿಕ ನಂಬಿಕೆಯನ್ನು ತನ್ನ ಗಂಡನ ಮೇಲಾಗಲಿ, ತನ್ನ ಮೂವರು ಮಕ್ಕಳ ಮೇಲಾಗಲಿ ಹೇರಿಕೆ ಮಾಡುವ ಆಲೋಚನೆ ಎಂದಿಗೂ ಆಕೆಗೆ ಬರಲಿಲ್ಲ. ಒಂದು ಸಂದರ್ಭದಲ್ಲಿ ಆಕೆ ತನ್ನ ಹೆಸರನ್ನು ರಾಧ ಎಂದು ಬದಲಾಯಿಸಿಕೊಳ್ಳಬೇಕು ಅಂದುಕೊಂಡರು. ಆಗಾಗ ಹಣೆ ಮೇಲೆ ಬೊಟ್ಟನ್ನೂ ಇಡುತ್ತಿದ್ದರು. ಆ ಬೊಟ್ಟು ಅಲಂಕಾರಿಕವಾಗಿತ್ತೆ ಹೊರತು ಹಿಂದು ಧಾರ್ಮಿಕ ಸಂಕೇತವೆಂದು ಆಕೆಗೆ ಅನಿಸಲಿಲ್ಲ.
ಬಾಬಯ್ಯ ಕೈರುನ್ನಿಸಾ ಮಧ್ಯೆ ಸ್ನೇಹಭಾವವಿತ್ತು ಅಂದರೆ ಭೀನ್ನಾಭಿಪ್ರಾಯಗಳಿರಲಿಲ್ಲ ಎಂದರ್ಥವಲ್ಲ. ಬಾಬಯ್ಯನವರ ಚಳವಳಿಗಳ ಒಡನಾಟದ ಪರಿಣಾಮವಾಗಿ,
ಅದೆಷ್ಟೋ ಕ್ರಾಂತಿಕಾರಿಗಳು ಬಾಬಯ್ಯ ಕೈರುನ್ನಿಸಾ ಕುಟುಂಬದ ಆಸರೆಯನ್ನು ಪಡೆದುಕೊಂಡಿದ್ದಾರೆ. ಆದರೆ ಈ ಕ್ರಾಂತಿಕಾರಿ ರಾಜಕೀಯದ ಸಹವಾಸ ಕೈರುನ್ನಿಸಾ ಅವರಲ್ಲಿ ಸ್ವಲ್ಪಮಟ್ಟಿನ ಅಭದ್ರತೆಯ ಭಾವಕ್ಕೆ ಕಾರಣವಾಗಿತ್ತು. ಇದು ಅವರ ವ್ಯಕ್ತಿಗತ ಸಮಸ್ಯೆಯಾಗಿರಲಿಲ್ಲ; ಸಾಮಾಜಿಕ ಬದಲಾವಣೆಗಾಗಿ ನಡೆಯುವ ರಾಜಿರಹಿತ ಹೋರಾಟಕ್ಕೂ ಕುಟುಂಬ ಸಂಬಂಧಗಳಿಗೂ ನಡುವೆ ಸದಾಕಾಲ ತಿಕ್ಕಾಟ ಇದ್ದೇ ಇರುತ್ತದೆ. ಇಂಥಾ ಸಾಮಾಜಿಕ ವ್ಯವಸ್ಥಾಗತ ಸಮಸ್ಯೆಗಳನ್ನು ಒಂದಲ್ಲಾ ಒಂದು ಕುಟುಂಬ ಎದುರಿಸಲೇಬೇಕಾಗುತ್ತೆ. ಕೈರುನ್ನಿಸಾ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಲೇ ನಮ್ಮೆಲ್ಲರನ್ನೂ ಗೌರವಿಸುತ್ತಿದ್ದರು. ಆಂಧ್ರದ ಪ್ರಸಿದ್ಧ ಮಾನವಹಕ್ಕು ಹೋರಾಟಗಾರ ಪ್ರೊ.ಬಾಲಗೋಪಾಲ್ ಕಾನೂನು ಶಿಕ್ಷಣವನ್ನು ಈ ಮನೆಯಲ್ಲಿದ್ದುಕೊಂಡೇ ಪಡೆದುಕೊಂಡರು. ಹಾಗೆ ನೋಡಿದರೆ ತೆಲುಗುನಾಡಿನ ಬಹುತೇಕ ಖ್ಯಾತನಾಮರಿಗೆ, ಅವರ ಕುಟುಂಬಗಳಿಗೆ ಈ ಮನೆ ಆತ್ಮೀಯ ತಾಣವಾಗಿತ್ತು.
ಅವರ ಮೂರೂ ಮಕ್ಕಳು ಇಂದು ಉನ್ನತ ವಿದ್ಯಾಭ್ಯಾಸ ಮಾಡಿ, ಘನತೆಯ ಜೀವನವನ್ನು ರೂಪಿಸಿಕೊಳ್ಳುವುದರಲ್ಲಿ ಕೈರುನ್ನಿಸಾ ಅವರ ಅಪಾರ ಶ್ರಮವಿದೆ. ಹಿರಿ ಮಗಳು ಪ್ರಣವ ದೆಹಲಿಯಲ್ಲಿ ಅಧ್ಯಾಪಕಿಯಾಗಿದ್ದಾಳೆ, ಕಿರಿ ಮಗಳು ಜಗತಿ ವೈದ್ಯೆಯಾಗಿದ್ದು ಹೈದರಾಬಾದ್‍ನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿರುವ ಮಗ ಭಾನುತೇಜ್ ಪತ್ರಕರ್ತರಾಗಿ ಹೆಸರು ಗಳಿಸಿದ್ದಾರೆ. ಇಲ್ಲಿ ಒಂದು ವಿಶೇಷವನ್ನು ಹೇಳಲೇಬೇಕು. ಈ ಮೂವರೂ ಮಕ್ಕಳು ಅಂತರ್‍ಜಾತೀಯ ಮದುವೆಯಾಗಿದ್ದಾರೆ. ಹೀಗೆ ಈ ಕುಟುಂಬ ನಮ್ಮನ್ನು ಆವರಿಸಿರುವ ಜಾತಿ ಧರ್ಮಗಳ ಗೋಡೆಯನ್ನು ಕೆಡವಿಹಾಕಿದೆ.
ಕೈರುನ್ನಿಸಾ ಸೆಕ್ಯುಲರ್ ದೃಷ್ಟಿಕೋನದ ಕಾರಣಕ್ಕಾಗಿಯೇ ಇರಬಹುದು, ತಮ್ಮ ಮಗ ಮತ್ತು ಹೆಣ್ಣು ಮಕ್ಕಳಲ್ಲಿ ಯಾವುದೇ ಬೇಧವಿಲ್ಲದಂತೆ ಸಮಾನವಾಗಿ ನೋಡಿಕೊಂಡರು. ತನ್ನ ಉಳಿತಾಯದ ಹಣವನ್ನು ಮೂವರಿಗೂ ಸಮಾನವಾಗಿ ಹಂಚಿದ್ದರು. ‘ಅಣ್ಣಾ, ನನಗೆ ಹೆಣ್ಣು ಮಕ್ಕಳಾದರೂ, ಗಂಡು ಮಕ್ಕಳಾದರೂ ಒಂದೇ, ಅದಕ್ಕೆ ಎಲ್ಲರಿಗೂ ಸಮಾನವಾಗಿ ಹಂಚಿದ್ದೇನೆ’ ಅಂತ ಬಹಳ ಹೆಮ್ಮೆಯಿಂದ ಹೇಳಿದ್ದರು. ಆಕೆಯ ಕೊನೆಗಾಲದಲ್ಲಿ ಉಳಿದ ಆಸ್ತಿಪಾಸ್ತಿಯನ್ನು ತಮ್ಮ ಮೊಮ್ಮಕ್ಕಳಿಗೆ ಹಂಚಬೇಕೆಂದು ತೀರ್ಮಾನಿಸಿದ್ದರು. ಇದು ಅವರ ದೂರದೃಷ್ಟಿ ಕೂಡ.
ಕೈರುನ್ನಿಸಾ ಜಾತಿ ಮತ ಬೇಧಗಳನ್ನು ವಿರೋಧಿಸಿದ್ದರೆಂಬುದು ಮಾತ್ರವಲ್ಲ; ಲಿಂಗ ತಾರತಮ್ಯವನ್ನೂ ವಿರೋಧಿಸುತ್ತಿದ್ದರು. ಅದು ಬಾಯಿಮಾತಿನಲ್ಲಿ ಮಾತ್ರವಲ್ಲ. ತಮ್ಮ ನಿಜ ಜೀವನದ ಉದಾಹರಣೆ ಮೂಲಕ. ಮನುಷ್ಯರು ಮನುಷ್ಯರಾಗಿ ಬದಲಾದರೆ ಎಷ್ಟೋ ಸಂಕುಚಿತ ಸಂಬಂಧಗಳನ್ನು ಮೀರಬಹುದೆಂಬ ಸತ್ಯವನ್ನು ಕೈರುನ್ನಿಸಾ ನೋಡಿ ಕಲಿಯಬಹುದು. ತನ್ನ ಅಂತ್ಯಸಂಸ್ಕಾರದ ಬಗ್ಗೆ ಆಕೆ ಕೈಗೊಂಡ ತೀರ್ಮಾನ ಇವೆಲ್ಲವನ್ನೂ ಮೀರಿದ್ದು. ಅವರು ಸ್ವಲ್ಪವೂ ಹಿಂಜರಿಕೆಯಿಲ್ಲದೆ, ತನ್ನ ದೇಹವನ್ನು ತನ್ನದೇ ವೃತ್ತಿಯಾದ ವೈದ್ಯಕೀಯ ಸಂಶೋಧನೆಗಾಗಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದರು. ಇದು ಆಕೆಯ ಸೆಕ್ಯುಲರ್ ಪ್ರಪಂಚ ದೃಷ್ಟಿಯ ಪರಾಕಾಷ್ಠೆ.
ಬಾಬಯ್ಯ ಕೈರುನ್ನಿಸಾ ಕುಟಂಬ ಇಂದಿನ ಕೋಮುವಾದಿ ಕಲುಷಿತ ವಾತಾವರಣಕ್ಕೆ ಒಂದು ದಿಟ್ಟ ಪರಿಹಾರ. ಆನರೇ ಚರಿತ್ರೆಯ ನಿರ್ಮಾಪಕರು ಎಂದು ಮಾಕ್ರ್ಸ್ ಹೇಳಿದಂತೆ, ಚರಿತ್ರೆ ನಿರ್ಮಾಣದಲ್ಲಿ ಯಾವುದೇ ಅಬ್ಬರವಿಲ್ಲದೆ, ಪ್ರಚಾರವಿಲ್ಲದೆ ಪಾಲಿಸುವ ಜೀವನದ ಆಚರಣೆಗಳೇ ಸಾಮಾಜಿಕ ಬದಲಾವಣೆಗೆ ಮಾರ್ಗದರ್ಶಿ ಸೂತ್ರಗಳಂತೆ ಕೆಲಸ ಮಾಡುತ್ತವೆ. ಸಾಮಾನ್ಯ ಮನುಷ್ಯರಲ್ಲಿ ಕೆಲವರು ಅಸಾಮಾನ್ಯವಾಗಿ ಜೀವಿಸುತ್ತಾರೆ ಎಂದರೆ ಇದೇ ಅನಿಸುತ್ತೆ.

– ಪ್ರೊ.ಹರಗೋಪಾಲ್
ಕನ್ನಡಕ್ಕೆ : ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...