Homeಮುಖಪುಟ'ನಲ್ಸಾರ್' ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಅಡ್ಡಬಂದ BCI ನಡೆಗೆ CJI ಗರಂ

‘ನಲ್ಸಾರ್’ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಅಡ್ಡಬಂದ BCI ನಡೆಗೆ CJI ಗರಂ

- Advertisement -
- Advertisement -

ಹೈದರಾಬಾದ್‌ನ ‘ನಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದ ಪದವೀಧರರ ಸನ್ನದು (ಎನ್‌ರೋಲ್‌ಮೆಂಟ್) ನೋಂದಣಿಯನ್ನು ಅಮಾನತಿನಲ್ಲಿಡುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ನೀಡಿದ್ದ ವಿವಾದಾತ್ಮಕ ನಿರ್ದೇಶನದ ವಿರುದ್ಧ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಜೊತೆಗೆ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಶಿಸ್ತು ಅಥವಾ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ಸ್ಪಷ್ಟ ಆದೇಶ ನೀಡಿದೆ.

ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಆಹ್ವಾನಿಸುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಇ-ಮೇಲ್ ಚಳವಳಿ ನಡೆಸಿದ್ದರು. ಇದರಿಂದ ಕೆರಳಿದ್ದ ಬಿ‌ಸಿಐ, ನಲ್ಸಾರ್ ಪದವೀಧರರ ಎನ್‌ರೋಲ್‌ಮೆಂಟ್ ತಡೆಹಿಡಿಯುವಂತೆ ಬುಧವಾರ ತನ್ನ ಎಲ್ಲಾ ರಾಜ್ಯ ಘಟಕಗಳಿಗೆ ಆದೇಶಿಸಿತ್ತು. ಆದರೆ, ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿ‌ಸಿಐ ತನ್ನ ಆದೇಶವನ್ನು ಹಿಂಪಡೆದುಕೊಂಡಿದೆ.

“ಅವರ ಪ್ರತಿಭಟನೆಯನ್ನು ತಡೆಯಲು ಬಿ‌ಸಿಐ ಯಾರು?”: ಸಿಜೆಐ ಅಸಮಾಧಾನ

ಹಿರಿಯ ವಕೀಲ ಕೆ. ಪರಮೇಶ್ವರ್ ಅವರು ಸಲ್ಲಿಸಿದ ಅರ್ಜಿಯನ್ನು ಉಲ್ಲೇಖಿಸಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ಬಿ‌ಸಿಐ ಅನಗತ್ಯವಾಗಿ ಈ ವಿಷಯದಲ್ಲಿ ಮಧ್ಯಪ್ರವೇಶಿಸುತ್ತಿದೆ. ಶಾಂತಿಯುತವಾಗಿ ಪ್ರತಿಭಟಿಸುವ ಸಂಪೂರ್ಣ ಹಕ್ಕು ವಿದ್ಯಾರ್ಥಿಗಳಿಗಿದೆ. ಯುವ ವಯಸ್ಸಿನಲ್ಲಿ ಯಾರಾದರೂ ವ್ಯತ್ಯಾಸದ ಮಾತುಗಳನ್ನಾಡಿದರೆ, ಆಡಲಿ ಬಿಡಿ. ವಕೀಲರ ಪರಿಷತ್ತಿಗೆ ಇದರಲ್ಲಿ ಏನು ಕೆಲಸ? ಎಂದು ಕಟುವಾಗಿ ಪ್ರಶ್ನಿಸಿದರು.

ತಮ್ಮ ವಿದ್ಯಾರ್ಥಿ ದೆಸೆಯ ದಿನಗಳನ್ನು ನೆನಪಿಸಿಕೊಂಡ ಸಿಜೆಐ, ನಾನೂ ಕೂಡ ವಿದ್ಯಾರ್ಥಿ ದೆಸೆಯಲ್ಲಿ ಚಳವಳಿಗಳಲ್ಲಿ ಭಾಗವಹಿಸಿದ್ದೆ. ವಿದ್ಯಾರ್ಥಿಗಳು ಶಾಂತಿಯುತವಾಗಿ ಧ್ವನಿ ಎತ್ತುತ್ತಿರುವಾಗ ಅವರನ್ನು ತಡೆಯಲು ಯಾರಿಗೂ ಹಕ್ಕಿಲ್ಲ. ಈ ವಿದ್ಯಾರ್ಥಿಗಳಿಗೆ ತಕ್ಷಣವೇ ವಕೀಲ ವೃತ್ತಿ ಸನ್ನದು ಸಿಗುವಂತೆ ನೋಡಿ. ಅವರು ಸುಪ್ರೀಂ ಕೋರ್ಟ್‌ಗೆ ಬರಲಿ, ಕಾನೂನು ನೆರವು (Legal Aid) ಪ್ರಕರಣಗಳಲ್ಲಿ ಅವರಿಗೆ ಅವಕಾಶ ನೀಡೋಣ. ಅವರ ವೃತ್ತಿಜೀವನಕ್ಕೆ ಅಡ್ಡಿಪಡಿಸಿದವರಿಗೆ ಇದೇ ಸೂಕ್ತ ಉತ್ತರ ಎಂದು ಮಾರ್ಮಿಕವಾಗಿ ಹೇಳಿದರು.

ಹಳೆಯ ವಿದ್ಯಾರ್ಥಿಗಳಿಂದಲೇ ಬಿ‌ಸಿಐ ವಿರುದ್ಧ ಅರ್ಜಿ

ನಲ್ಸಾರ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ವಕೀಲರಾದ ಮಿಹಿರಾ ಸೂದ್ ಮತ್ತು ಅಭಿಷೇಕ್ ತಿವಾರಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಈ ಅರ್ಜಿ ಸಲ್ಲಿಸಿದ್ದರು. ಬಿ‌ಸಿಐ ಹೊರಡಿಸಿದ್ದ ಆದೇಶವು ಯಾವುದೇ ಶಾಸನಬದ್ಧ ಆಧಾರವಿಲ್ಲದ್ದು ಹಾಗೂ ಸಂವಿಧಾನಬಾಹಿರವಾದುದು ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು.

ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿ‌ಸಿಐ ಅಧ್ಯಕ್ಷ ಮನನ್ ಮಿಶ್ರಾ ಅವರು ಶುಕ್ರವಾರ ಮುಂಜಾನೆ ‘ಎಕ್ಸ್’ (ಟ್ವಿಟರ್) ಮೂಲಕ ಪ್ರಕಟಣೆ ಹೊರಡಿಸಿ, ನಲ್ಸಾರ್ ವಿದ್ಯಾರ್ಥಿಗಳ ವಿರುದ್ಧದ ವಿಚಾರಣೆಯನ್ನು ಸಂಪೂರ್ಣವಾಗಿ ಕೈಬಿಡಲಾಗಿದ್ದು, ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿವಾದದ ಹಿನ್ನೆಲೆ ಏನು?

ಜುಲೈ 20ರಂದು ದೆಹಲಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರ ದೌರ್ಜನ್ಯ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸಿಜೆಐ ನಿರಾಕರಿಸಿದ್ದರು. ಇದನ್ನು ವಿರೋಧಿಸಿ ನಲ್ಸಾರ್ ವಿಶ್ವವಿದ್ಯಾಲಯದ ಸುಮಾರು 450 ಪದವಿ ವಿದ್ಯಾರ್ಥಿಗಳು, ತಮ್ಮ ಘಟಿಕೋತ್ಸವಕ್ಕೆ ಸಿಜೆಐ ಸೂರ್ಯ ಕಾಂತ್ ಅವರನ್ನು ಆಹ್ವಾನಿಸದಂತೆ ಕುಲಪತಿಗಳಿಗೆ ಇ-ಮೇಲ್ ಮೂಲಕ ಮನವಿ ಮಾಡಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಬಿ‌ಸಿಐ ವಿದ್ಯಾರ್ಥಿಗಳ ಎನ್‌ರೋಲ್‌ಮೆಂಟ್‌ಗೆ ತಡೆ ನೀಡಲು ಹೊರಟಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ‘ಫಾರ್ಮ್ 6’ ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ!

ಹೊಸ ಮತದಾರರ ನೋಂದಣಿಗೆ ಕಾಗದಪತ್ರಗಳ ಅಡೆತಡೆ ಒಡ್ಡುತ್ತಿದ್ದ ತನ್ಮೂಲಕ ಹಕ್ಕು ವಂಚಿತಗೊಳಿಸುತ್ತಿದ್ದ ಆರೋಪ ಎದುರಿಸುತ್ತಿದ್ದ ಕೇಂದ್ರ ಚುನಾವಣಾ ಆಯೋಗವು ಸಾರ್ವಜನಿಕ ಮತ್ತು ಕಾನೂನಾತ್ಮಕ ಒತ್ತಡದ ಹಿನ್ನೆಲೆಯಲ್ಲಿ ಭಾಗಶಃ ಹಿಂದೆ ಸರಿದಿದೆ. 'ವಿಶೇಷ ತೀವ್ರ...

ಹೈದರಾಬಾದ್ ವಿವಿ ವಿದ್ಯಾರ್ಥಿ ಸಂಘದ ಚುನಾವಣೆ : ABVPಗೆ ಸೋಲು; ಅಧ್ಯಕ್ಷೆಯಾಗಿ SFIನ ದಿಲ್ಶಾದಾ ರೈಹಾನ್ ಆಯ್ಕೆ

ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA), ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ASA), ದಲಿತ ಸ್ಟೂಡೆಂಟ್ಸ್ ಯೂನಿಯನ್ (DSU), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಮತ್ತು ಟ್ರೈಬಲ್ ಸ್ಟೂಡೆಂಟ್ಸ್ ಫೋರಂ (TSF) ಒಳಗೊಂಡ...

CWC ಸಭೆಯಲ್ಲಿ ನಿತೀಶ್ ಕುಮಾರ್ ವಿಚಾರ ಪ್ರಸ್ತಾಪ: ಸೋನಿಯಾ ಗಾಂಧಿ ಮತ್ತು ದಿಗ್ವಿಜಯ್ ಸಿಂಗ್ ನಡುವೆ ಭಿನ್ನಾಭಿಪ್ರಾಯ

ಜೆಡಿಯು ನಾಯಕ ನಿತೀಶ್ ಕುಮಾರ್ 2024ರಲ್ಲಿ 'ಇಂಡಿಯಾ' (INDIA) ಮೈತ್ರಿಕೂಟದಿಂದ ಹೊರಬಂದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆಂತರಿಕ ಸಭೆಯಲ್ಲಿ ನಾಯಕರ ನಡುವೆ ಗಂಭೀರ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ...

‘ಇಸಿಐನೆಟ್’ ಸಾಫ್ಟ್‌ವೇರ್ ಲೋಪ: ಸ್ಥಳೀಯ ಅಧಿಕಾರಿಗಳ ಶಾಸನಬದ್ಧ ಅಧಿಕಾರ ಹರಣ ಆರೋಪಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಮಹಾರಾಷ್ಟ್ರ ಸಿಇಒ ಸುದೀರ್ಘ ಪತ್ರ!

ಕೇಂದ್ರ ಚುನಾವಣಾ ಆಯೋಗವು ದೇಶಾದ್ಯಂತ ಜಾರಿಗೆ ತಂದಿರುವ 'ಇಸಿಐನೆಟ್' (ECINet) ಕೇಂದ್ರೀಕೃತ ಸಾಫ್ಟ್‌ವೇರ್, ಕಾನೂನುಬದ್ಧವಾಗಿ ಸ್ಥಳೀಯ ಮತದಾರ ನೋಂದಣಿ ಅಧಿಕಾರಿಗಳಿಗೆ (ERO) ನೀಡಲಾಗಿರುವ ಶಾಸನಬದ್ಧ ಅಧಿಕಾರಗಳನ್ನು ಕಸಿಯುತ್ತಿದೆ ಎಂಬ ಗಂಭೀರ ಆರೋಪ ಎದುರಾಗಿದೆ....

ಸಂಭಾಲ್ ಹಿಂಸಾಚಾರ ಪ್ರಕರಣ: ಮುಸ್ಲಿಂ ವ್ಯಕ್ತಿಯ NSA ಬಂಧನ ರದ್ದುಪಡಿಸಿದ ಸುಪ್ರೀಂ ಕೋರ್ಟ್; ಯುಪಿ ಸರ್ಕಾರಕ್ಕೆ ₹10 ಲಕ್ಷ ದಂಡ

ನವದೆಹಲಿ: ಸಂಭಾಲ್‌ನಲ್ಲಿ 2024ರ ನವೆಂಬರ್‌ನಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಲಾ ಅಫ್ರೋಜ್ ಎಂಬುವರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ತಡೆಗಟ್ಟುವ...

ಸಂಭಾಲ್ ಹಿಂಸಾಚಾರ | ಮುಲ್ಲಾ ಅಫ್ರೋಝ್ ಎನ್‌ಎಸ್‌ಎ ಬಂಧನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ; ಯುಪಿ ಸರ್ಕಾರಕ್ಕೆ 10 ಲಕ್ಷ ರೂ. ದಂಡ

2024ರ ಸಂಭಾಲ್ ಹಿಂಸಾಚಾರದ ರೂವಾರಿ ಎಂದು ಆರೋಪಿಸಲಾದ ಮುಲ್ಲಾ ಅಫ್ರೋಝ್ ಅವರನ್ನು 'ರಾಷ್ಟ್ರೀಯ ಭದ್ರತಾ ಕಾಯ್ದೆ, 1980'ರ ಅಡಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು (ಸೆಪ್ಟೆಂಬರ್ 29) ರದ್ದುಗೊಳಿಸಿದೆ....

ಔಷಧ ಬೆಲೆಗಳ ಹೆಸರಲ್ಲಿ ನಡೆಯುತ್ತಿದೆ ಲೂಟಿ: ಆಸ್ಪತ್ರೆ-ಮೆಡಿಕಲ್‌ಗಳ ವಿರುದ್ಧ ಸುಪ್ರೀಂ ಕೋರ್ಟ್ ಗರಂ

ದೇಶದಲ್ಲಿ ಗರಿಷ್ಠ ಚಿಲ್ಲರೆ ಬೆಲೆ (MRP) ಹೆಸರಿನಲ್ಲಿ ಔಷಧಗಳ ಬೆಲೆಯನ್ನು ಮನಬಂದಂತೆ ಹೆಚ್ಚಿಸಿ ಸಾಮಾನ್ಯ ರೋಗಿಗಳನ್ನು ಸುಲಿಗೆ ಮಾಡುತ್ತಿರುವುದನ್ನು ಸುಪ್ರೀಂ ಕೋರ್ಟ್ 'ಅಮಾನವೀಯ ಲೂಟಿ' ಎಂದು ತೀವ್ರವಾಗಿ ಖಂಡಿಸಿದೆ. ಔಷಧಗಳ ನೈಜ ಖರೀದಿ...

ಬಂಗಾಳ ಎಸ್‌ಐಆರ್‌ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ನಕಾರ; ‘ಇವು ಕೇವಲ ಉಪಚುನಾವಣೆಗಳು’ ಎಂದ ಸಿಜೆಐ ಸೂರ್ಯಕಾಂತ್ ವಿರುದ್ಧ ಜನಾಕ್ರೋಶ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಹೊರಗಿಡಲಾದ ಮತದಾರರಿಗೆ ಸಂಬಂಧಿಸಿದ ಅರ್ಜಿಗಳ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಅರ್ಜಿದಾರರು ಅಕ್ಟೋಬರ್...

CWC Meeting : ಮೋದಿ, ಗ್ಯಾನೇಶ್ ಕುಮಾರ್ ರಾಜೀನಾಮೆ ಸೇರಿದಂತೆ 5 ಬೇಡಿಕೆಗಳನ್ನು ಮುಂದಿಟ್ಟ ಕಾಂಗ್ರೆಸ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ನೋಂದಣಿ ನಿಯಮಗಳಿಗೆ ಬದಲಾವಣೆಗಳ ಮೂಲಕ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ರಾಜಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ಸಿಇಸಿ ಗ್ಯಾನೇಶ್ ಕುಮಾರ್ ಅಮಾನತು ಕೋರಿದ ಅರ್ಜಿ: ಶೀಘ್ರ ವಿಚಾರಣೆಗೆ ಸಮ್ಮತಿಸಿದ ಸುಪ್ರೀಂ ಕೋರ್ಟ್!

ಭಾರತೀಯ ಚುನಾವಣಾ ಆಯೋಗದ ಸಾಂವಿಧಾನಿಕ ಅಧಿಕಾರಗಳನ್ನು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಅವರನ್ನು ಹುದ್ದೆಯಿಂದ ಮಧ್ಯಂತರ ಅಮಾನತುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ತುರ್ತು...