Homeಮುಖಪುಟಬೆಳಗಾವಿಯಲ್ಲಿ ಜೀವ ತೆಗೆಯುತ್ತಿರುವ ಗಾಳಿಪಟ ಮಾಂಜಾ ದಾರ: ಎರಡೇ ದಿನಗಳಲ್ಲಿ ಇಬ್ಬರು ಬಲಿ

ಬೆಳಗಾವಿಯಲ್ಲಿ ಜೀವ ತೆಗೆಯುತ್ತಿರುವ ಗಾಳಿಪಟ ಮಾಂಜಾ ದಾರ: ಎರಡೇ ದಿನಗಳಲ್ಲಿ ಇಬ್ಬರು ಬಲಿ

- Advertisement -
- Advertisement -

ಗಾಳಿಪಟ ಹಾರಿಸುವ ಸಂಭ್ರಮವು ಬೆಳಗಾವಿ ನಗರದಲ್ಲಿ ಸಾರ್ವಜನಿಕರ ಜೀವಕ್ಕೆ ಭಾರಿ ಕಂಟಕವಾಗಿ ಪರಿಣಮಿಸಿದೆ. ನಗರದಲ್ಲಿ ಅಪಾಯಕಾರಿ ಮಾಂಜಾ ದಾರ ಮತ್ತು ಗಾಳಿಪಟದ ಹುಚ್ಚಾಟಕ್ಕೆ ಕೇವಲ ಎರಡೇ ದಿನಗಳಲ್ಲಿ ಇಬ್ಬರು ಪ್ರಾಣ ಕಳೆದುಕೊಂಡ ಭೀಕರ ದುರಂತಗಳು ಸಂಭವಿಸಿವೆ. ವಡಗಾವಿಯ ನಿಜಾಮಿಯಾನಗರದಲ್ಲಿ ಗಾಳಿಪಟ ಹಿಡಿಯಲು ಯತ್ನಿಸುವಾಗ ಎರಡನೇ ಮಹಡಿಯ ಟೆರೇಸ್‌ನಿಂದ ಬಿದ್ದು 9 ವರ್ಷದ ಬಾಲಕ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಗಾಂಧೀನಗರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನೊಬ್ಬ ಮಾಂಜಾ ದಾರಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾನೆ.

ಮಾಂಜಾ ದಾರದ ದುರಂತಕ್ಕೆ ಬಲಿಯಾದ ಯುವಕನನ್ನು ಮಹಾಂತೇಶನಗರದ ನಿವಾಸಿ ಧ್ರುವ ಸಂತೋಷ ಕರಜಗಿ (19) ಎಂದು ಗುರುತಿಸಲಾಗಿದೆ. ಧ್ರುವ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ, ಗಾಂಧೀನಗರ ಪ್ರದೇಶದ ಬಳಿ ಏಕಾಏಕಿ ಗಾಳಿಪಟದ ಹರಿತವಾದ ಮಾಂಜಾ ದಾರ ಆತನ ಕುತ್ತಿಗೆಗೆ ಸಿಲುಕಿಕೊಂಡಿದೆ. ಮಾಂಜಾ ದಾರವು ಕುತ್ತಿಗೆಗೆ ಆಳವಾಗಿ ಕೊಯ್ದ ಪರಿಣಾಮ ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡಿದ್ದ ಧ್ರುವ ಅವರನ್ನು ತಕ್ಷಣವೇ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳಗಾವಿ ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಸಂಭವಿಸಿದ ಗಾಂಧೀನಗರ ಪ್ರದೇಶವು ಮಾಳಮಾರುತಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವುದರಿಂದ, ಪ್ರಸ್ತುತ ಮಾಳಮಾರುತಿ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಿಷೇಧಿತ ಹಾಗೂ ಮಾರಣಾಂತಿಕ ಮಾಂಜಾ ದಾರಗಳ ಮಾರಾಟ ಮತ್ತು ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಂಧಿ ಜಯಂತಿಯಂದೇ ಗಾಂಧಿ ಹತ್ಯೆ ಸಂಭ್ರಮಿಸುವ ವಿಕೃತ ವಿಡಿಯೋ ಪೋಸ್ಟ್ ಮಾಡಿದ ಹಿಂದುತ್ವ ವೇದಿಕೆ  ‘ದಿ ಜೈಪುರ ಡೈಲಾಗ್ಸ್’

ನವದೆಹಲಿ: ಗಾಂಧಿ ಜಯಂತಿಯಂದೇ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಸಂಭ್ರಮಿಸುವ ರೀತಿಯ ವೀಡಿಯೊವೊಂದನ್ನು ಹಂಚಿಕೊಂಡಿರುವ ಆರೋಪಕ್ಕೆ ಹಿಂದುತ್ವಕ್ಕೆ ಸಂಬಂಧಿಸಿದ ಡಿಜಿಟಲ್ ವೇದಿಕೆ ‘ದಿ ಜೈಪುರ ಡೈಲಾಗ್ಸ್’ ತೀವ್ರ ಟೀಕೆಗೆ ಗುರಿಯಾಗಿದೆ. ಅಕ್ಟೋಬರ್ 2ರಂದು ಗಾಂಧಿ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ; ಮುಂಬೈನ ಶಿವಾಜಿ ಪಾರ್ಕ್‌ಗೆ ಹರಿದುಬಂದ ಪ್ರತಿಭಟನಾಕಾರರು

ಮುಂಬೈನಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರೂ ಸಹ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರಾಚ್ ಜನತಾ ಪಾರ್ಟಿ' (ಸಿಜೆಪಿ) ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಶುಕ್ರವಾರ (ಅ.2)...

ಫೇಸ್‌ಬುಕ್ ಪೋಸ್ಟ್ ವಿವಾದ: ಉದ್ಯಮಿ ದೂರು ಆಧರಿಸಿ ‘ಮೊಹಮ್ಮದ್’ ದೀಪಕ್ ಬಂಧನ; ಕೋಟ್‌ದ್ವಾರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

ಉತ್ತರಾಖಂಡದ ಕೋಟ್‌ದ್ವಾರದಲ್ಲಿ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಸ್ಥಳೀಯ ಉದ್ಯಮಿ ಸಂಜೀವ್ ಟೋಂಕ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದೀಪಕ್ ಕುಮಾರ್ ಅವರನ್ನು ಅಕ್ಟೋಬರ್ 1ರಂದು ಬಂಧಿಸಿದ್ದಾರೆ.  ಜನವರಿ 26ರಂದು ಮುಸ್ಲಿಂ...

ದಾಖಲೆ ಇಲ್ಲದ ಮಾತ್ರಕ್ಕೆ ಜಾನುವಾರು ಸಾಗಾಟ ‘ವಧೆಗಾಗಿ’ ಎಂದು ಊಹಿಸಲಾಗದು: ಸುಪ್ರೀಂ ಕೋರ್ಟ್

ಜಾನುವಾರುಗಳನ್ನು ಸಾಗಿಸುವಾಗ ಸೂಕ್ತ ದಾಖಲೆಗಳು ಇಲ್ಲ ಎಂಬ ಏಕೈಕ ಕಾರಣಕ್ಕಾಗಿ ಅವುಗಳನ್ನು ವಧೆಯ ಉದ್ದೇಶಕ್ಕಾಗಿಯೇ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. 32 ಎತ್ತುಗಳನ್ನು ವಧೆಗಾಗಿ...

ಗ್ಯಾನೇಶ್ ಕುಮಾರ್ ವಿರುದ್ಧದ ಹಳೆಯ ಭ್ರಷ್ಟಾಚಾರದ ಕಡತ ತರಿಸಿಕೊಂಡ ಕೇರಳಂ ಸರ್ಕಾರ

ದೇಶಾದ್ಯಂತ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ 'ಇಂಡಿಯಾ' (INDIA) ಒಕ್ಕೂಟವು ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್...

‘ಬಿರಿಯಾನಿ ತಿನ್ನಲು ಹುಟ್ಟಿದವರು ಪ್ರಾಣಿಗಳು..’; ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

"ಬಿರಿಯಾನಿ ತಿನ್ನಲು ಹುಟ್ಟಿದವರು ಪ್ರಾಣಿಗಳು," ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಗುರುವಾರ ಹೇಳಿದ್ದಾರೆ. ಭಗವಂತ ತಮ್ಮನ್ನು ಈ ಜಗತ್ತಿಗೆ ಈ ಖಾದ್ಯವನ್ನು ಸವಿಯಲು ಕಳುಹಿಸಿದ್ದಾನೆ ಎಂಬ ಕಾಂಗ್ರೆಸ್ ಸಂಸದ ರಕೀಬುಲ್...

ಹೈದರಾಬಾದ್‌ ಎಸ್‌ಐಆರ್ ಪ್ರಕ್ರಿಯೆ; ಸುಮಾರು 5,000 ‘ಫಾರ್ಮ್- 7’ ಅರ್ಜಿ ಸಲ್ಲಿಕೆ

ತೆಲಂಗಾಣ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್), ಹೈದರಾಬಾದ್‌ನಲ್ಲಿ ಸುಮಾರು 5,000 ‘ಫಾರ್ಮ್ 7’ ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ ಇದು ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ. ಮಾಧ್ಯಮ ವರದಿಗಳ...

ಎಸ್‌ಐಆರ್ ಅಕ್ರಮ ವಿರೋಧಿ ಪ್ರತಿಭಟನೆಗೆ ಪೊಲೀಸ್ ತಡೆ: ನವದೆಹಲಿಯಲ್ಲಿ ಸೆಕ್ಷನ್ 163 ಜಾರಿ, 11 ಮೆಟ್ರೋ ನಿಲ್ದಾಣ ಬಂದ್!

ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಗಾಂಧಿ ಜಯಂತಿಯ ದಿನವಾದ ಇಂದು (ಅಕ್ಟೋಬರ್...

ಮತಹಕ್ಕು ನಿರಾಕರಣೆಗೆ 1924ರಲ್ಲೇ ಮಹಾತ್ಮ ಗಾಂಧೀಜಿ ನೀಡಿದ್ದ ಪ್ರತಿಕ್ರಿಯೆ ಇಂದಿಗೂ ಪ್ರಸ್ತುತ

ಭಾರತವು ತನ್ನ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಮೌಲ್ಯಗಳನ್ನು ಹಾಗೂ ತನ್ನ ಶ್ರೇಷ್ಠ ನಾಯಕರು ಎತ್ತಿಹಿಡಿದ ತತ್ವಗಳನ್ನು ಕಳೆದುಕೊಳ್ಳುವ ಅಂಚಿನಲ್ಲಿದೆ. ನಮ್ಮ ಸಾಮೂಹಿಕ ಜೀವನದಲ್ಲಿ ಅವುಗಳನ್ನು ತಕ್ಷಣವೇ ರಕ್ಷಿಸಿ ಮರುಸ್ಥಾಪಿಸಬೇಕಾಗಿದೆ. ಗಾಂಧೀಜಿಯವರು ನಮಗೆ ಕೇವಲ...

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು: ಎಸ್‌ಐಆರ್ ಅಕ್ರಮ ಖಂಡಿಸಿ ‘ಇಂಡಿಯಾ’ ಮೈತ್ರಿಕೂಟದಿಂದ ಇಂದಿನಿಂದ ರಾಷ್ಟ್ರವ್ಯಾಪಿ ‘ಪ್ರಜಾಪ್ರಭುತ್ವ ರಕ್ಷಿಸಿ’ ಅಭಿಯಾನ!

ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಅಕ್ರಮಗಳು ಹಾಗೂ ಮತದಾರರ ಪಟ್ಟಿಯಿಂದ ಅರ್ಹ ನಾಗರಿಕರ ಹೆಸರು ರದ್ದುಗೊಳಿಸಿರುವುದನ್ನು ಖಂಡಿಸಿ 'ಇಂಡಿಯಾ' ಮೈತ್ರಿಕೂಟ ಮತ್ತು ವಿವಿಧ ಪ್ರಜಾಸತ್ತಾತ್ಮಕ ಸಂಘಟನೆಗಳು ಗಾಂಧಿ ಜಯಂತಿಯಾದ...