Homeಕರ್ನಾಟಕಸತ್ಯನಾರಾಯಣ್ ಆಮಿಷಕ್ಕೆ ಬಲಿಯಾಗದ ನಿಷ್ಠಾವಂತ ವ್ಯಕ್ತಿ: ಮಾಜಿ ಪ್ರಧಾನಿ ದೇವೇಗೌಡ

ಸತ್ಯನಾರಾಯಣ್ ಆಮಿಷಕ್ಕೆ ಬಲಿಯಾಗದ ನಿಷ್ಠಾವಂತ ವ್ಯಕ್ತಿ: ಮಾಜಿ ಪ್ರಧಾನಿ ದೇವೇಗೌಡ

- Advertisement -
- Advertisement -

ಹಲವು ಆಮಿಷಗಳೊಡ್ಡಿದರೂ ಅದಕ್ಕೆ ಮಾರುಹೋಗದ ಪಕ್ಷದಲ್ಲೇ ನಿಷ್ಠಾವಂತರಾಗಿ ಉಳಿದುಕೊಂಡ ವ್ಯಕ್ತಿ ಬಿ. ಸತ್ಯನಾರಾಯಣ್ ನನ್ನ ಮಗನಂತಿದ್ದರು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಬಣ್ಣಿಸಿದ್ದಾರೆ.

ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದ ಬಿ. ಸತ್ಯನಾರಾಯಣ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಅತ್ಯಂತ ಸರಳ, ಸಜ್ಜನ ವ್ಯಕ್ತಿ. ನನ್ನ ಮಗನಂತೆಯೇ ನಡೆದುಕೊಳ್ಳುತ್ತಿದ್ದ. ಪಕ್ಷಕ್ಕೆ ನಿಷ್ಠೆ ಇಟ್ಟುಕೊಂಡಿದ್ದ. ಹಾಗಾಗಿ ಎರಡು ಬಾರಿ ಸಚಿವರನ್ನಾಗಿ ಮಾಡಿದ್ದೆ. ಒಮ್ಮೆ ಕಾರ್ಮಿಕ ಸಚಿವರನ್ನಾಗಿ ಕೆಲಸ ನಿರ್ವಹಿಸಿದ್ದರು. ಸತ್ಯನಾರಾಯಣ್ ಅವರನ್ನು ಕಳೆದುಕೊಂಡಿರುವುದು ಅತೀವ ದುಃಖ ತಂದಿದೆ ಎಂದು  ಕಂಬನಿ ಮಿಡಿದರು.

ಬಿ. ಸತ್ಯನಾರಾಯಣ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಪಕ್ಷಾತೀತವಾಗಿ ಎಲ್ಲಾ ನಾಯಕರು ಆಗಮಿಸಿದ್ದರು. ಜೆಡಿಎಸ್ ಕಚೇರಿಯಲ್ಲಿ ಕೊರೊನ ಸಂದರ್ಭದಲ್ಲೂ ನೂರಾರು ಮಂದಿ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಜೆಡಿಎಸ್‌ನ ಮಾಜಿ ಸಚಿವ ಎಚ್. ಡಿ. ರೇವಣ್ಣ, ಕಾಂಗ್ರೆಸ್ ಮುಖಂಡ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಜೆಡಿಎಸ್‌ನ ಹಾಲಿ ಮತ್ತು ಮಾಜಿ ಶಾಸಕ ಮಾಜಿ ಸಚಿವ ಡಿ. ನಾಗರಾಜಯ್ಯ, ಎಸ್. ಆರ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಮುಖಂಡರಾದ ಟಿ. ಆರ್. ನಾಗರಾಜ್ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.

ಬಿಜೆಪಿಯ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಜಿ. ಬಿ. ಜ್ಯೋತಿಗಣೇಶ್, ಬಿಜೆಪಿ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್ ಸೇರಿದಂತೆ ಬಿಜೆಪಿ ಮುಖಂಡರು ಕೂಡ ಆಗಮಿಸಿದ್ದರು.

ಕಾಂಗ್ರೆಸ್‌ನ ಮಾಜಿ ಶಾಸಕ ರಫೀಕ್ ಅಹಮದ್, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿದ್ದೇಗೌಡ, ಮಾಜಿ ಶಾಸಕ ಎಂ. ಟಿ. ಕೃಷ್ಣಪ್ಪ, ಕೆ. ಎಂ. ತಿಮ್ಮರಾಯಪ್ಪ, ವೀರಭದ್ರಯ್ಯ, ಗೌರಿಶಂಕರ್ ಸೇರಿದಂತೆ ಹಲವರು ಆಗಮಿಸಿ ಪುಷ್ಪಗುಚ್ಚ ಇರಿಸಿ ಅಂತಿಮ ದರ್ಶನ ಪಡೆದರು.

ಸಂಜೆ ಭೂವನಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.


ಓದಿ: ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುವುದನ್ನು ದೇಶಕ್ಕೆ ತಿಳಿಸಿ: ಹೆಚ್‌. ಡಿ. ದೇವೇಗೌಡ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್ಐಆರ್ ಅಕ್ರಮ: ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ; ಪೊಲೀಸರಿಂದ ಹಲವೆಡೆ ಅಶ್ರುವಾಯು, ಜಲಫಿರಂಗಿ ಪ್ರಯೋಗ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದು, ಕನಿಷ್ಠ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಕ್ಷದ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಚುನಾವಣಾ...

ಶೀಘ್ರವೇ ಪೌರಕಾರ್ಮಿಕರ ಉಪಹಾರ ಭತ್ಯೆ ₹70 ಕ್ಕೆ ಹೆಚ್ಚಿಸುವೆ: ಸಿಎಂ ಡಿ.ಕೆ. ಶಿವಕುಮಾರ್

ಪೌರಕಾರ್ಮಿಕರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಪೌರಕಾರ್ಮಿಕರ ಉಪಹಾರ ಭತ್ಯೆಯನ್ನು ₹35 ರಿಂದ ₹70 ಕ್ಕೆ ಏರಿಕೆ ಮಾಡಿ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು...

ಎಸ್ಐಆರ್ ಬಡವರ ಪಾಲಿನ ಕೊಲ್ಲುವ ಕತ್ತಿಯಾಗಿದೆ : ಪ್ರಕಾಶ್ ರಾಜ್

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಬಡವರ ಪಾಲಿನ ಕೊಲ್ಲುವ ಕತ್ತಿಯಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು. ಎಸ್ಐಆರ್ ಪರಿಶೋಧನೆ ಮತ್ತು ಪ್ರತಿರೋಧ ಜಾಥಾದ ಭಾಗವಾಗಿ ಶುಕ್ರವಾರ (ಸೆ.25)...

ದಲಿತರ ಮೇಲಿನ ದೌರ್ಜನ್ಯ ಹೆಚ್ಚಳ: ದಲಿತ ಸಂಘಟನೆಗಳ ಒಕ್ಕೂಟ ಖಂಡನೆ

ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿರುವ ದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ತಡೆಯುವಲ್ಲಿ ಸರ್ಕಾರದ ವೈಫಲ್ಯವನ್ನು ಖಂಡಿಸಿ ಇಂದ ಬೆಂಗಳೂರಿನ ಪ್ರೆಸ್‌ ಕ್ಲಬ್‌ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದಲಿತ ಸಂಘಟನೆಗಳ...

ಮುರ್ಷಿದಾಬಾದ್‌: ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಸರುಗಳು ಉಳಿದರೂ ‘ಬಾಂಗ್ಲಾದೇಶಿ’ ಎಂದು ಅನುಮಾನಿಸಿ 60 ವರ್ಷದ ತಂದೆ, ಮೂವರು ಪುತ್ರರ ಗಡಿಪಾರು ಆರೋಪ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಂಗಾಳಿ ಮುಸ್ಲಿಂ ಕುಟುಂಬವೊಂದರ ನಾಲ್ವರು ಸದಸ್ಯರನ್ನು ಪೊಲೀಸರು ಮನೆಯಿಂದ ಕರೆದೊಯ್ದು, ಅವರು ಬಾಂಗ್ಲಾದೇಶಿ ಪ್ರಜೆಗಳು ಎಂದು ಆರೋಪಿಸಿ ಬಿಎಸ್‌ಎಫ್‌ಗೆ ಹಸ್ತಾಂತರಿಸಿ ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು...

ಗ್ಯಾನೇಶ್ ಕುಮಾರ್‌ನನ್ನು ಬಂಧಿಸುವಂತೆ ಬಿ.ಕೆ. ಹರಿಪ್ರಸಾದ್ ಆಗ್ರಹ: ನಾಳೆ ಕಾಂಗ್ರೆಸ್‌ನಿಂದ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಇನ್ನುಳಿದ ಇಬ್ಬರು ಆಯುಕ್ತರ ಭಿನ್ನಮತವನ್ನು ಸಂಪೂರ್ಣವಾಗಿ ತಳ್ಳಿಹಾಕಿ ಗೌಪ್ಯವಾಗಿ 'ಎಸ್‌ಐಆರ್'...

‘ಪೆನ್ಶನ್ ಹೋಗಲ್ಲ, SIR ಹೋಗುತ್ತೆ, ಹೆದರಬೇಡಿ’: ತುಮಕೂರಿನಲ್ಲಿ ಸಂತ್ರಸ್ತ ಮಹಿಳೆಗೆ ಪ್ರಕಾಶ್ ರಾಜ್ ಭರವಸೆ

ತುಮಕೂರು: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ನೋಟಿಸ್‌ಗಳಿಂದ ಆತಂಕಕ್ಕೊಳಗಾಗಿರುವ ತುಮಕೂರಿನ ಎನ್‌ಆರ್ ಕಾಲೊನಿಯ ನಿವಾಸಿಗಳ ಮನೆಗಳಿಗೆ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಭೇಟಿ ನೀಡಿ, ಅವರ ಸಮಸ್ಯೆಗಳನ್ನು...

SIR ಅಕ್ರಮ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL

ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಶಿಸ್ತು ಹಾಗೂ...

ಜೆನ್ ಝಿ ಮತದಾರರ ನೋಂದಣಿ ಸ್ಥಗಿತದ ಹಿಂದೆ ಮೋದಿ-ಸಿಇಸಿ ಸಂಚು: ಕಾಂಗ್ರೆಸ್ ಆರೋಪ

18 ವರ್ಷ ತುಂಬಿದ ಯುವಜನರನ್ನು (Gen Z) ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ 'ವಿಶೇಷ ಸಂಕ್ಷಿಪ್ತ ಪರಿಷ್ಕರಣೆ' (SSR) ಪ್ರಕ್ರಿಯೆಯು 2024 ರಿಂದ ತಡೆಹಿಡಿಯಲ್ಪಟ್ಟಿರುವುದು ಹಾಗೂ ಈ ವಿಷಯವಾಗಿ ಕೇಂದ್ರ ಚುನಾವಣಾ ಆಯೋಗದಲ್ಲಿ (ECI)...

ತುಮಕೂರಿನ ಎನ್.ಆರ್. ಕಾಲೋನಿ ಕೋತಿ ತೋಪಿನಲ್ಲಿ ಎಸ್ಐಆರ್ ಪರಿಶೋಧನೆ: ಸಂತ್ರಸ್ತರ ಅಹವಾಲು ಆಲಿಸಿದ ಪ್ರಕಾಶ್ ರಾಜ್: ಸೆ.26ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆ

ತುಮಕೂರು: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಗಳನ್ನು ನೇರವಾಗಿ ಪರಿಶೀಲಿಸುವ ಉದ್ದೇಶದಿಂದ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಅವರು ತುಮಕೂರು ನಗರದ ಎನ್‌ಆರ್‌ ಕಾಲೊನಿ...