Homeಚಳವಳಿನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ...

ನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ…

ವರ್ನನ್ ಅವರ ಬರಹಗಳಲ್ಲಿ ಅವರ ಕಾಣ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ. ವರ್ಗ, ಜಾತಿ, ಜನಾಂಗದ ಭೇದಗಳಿಲ್ಲದ, ಲೈಂಗಿಕ ಸಮಾನತೆಯ ತತ್ವಗಳನ್ನೊಳಗೊಂಡ ಹಾಗೂ ನ್ಯಾಯಯುತವಾದ ಸಮಾಜದ ಅವರ ನೋಟ ಅವರ ಬರಹಗಳನ್ನು ಓದಿದರೆ ಸ್ಪಷ್ಟವಾಗುತ್ತದೆ.

- Advertisement -
- Advertisement -

ಯಾವಾಗಲೂ ಅರ್ಧ ತೋಳಿನ ಕಾಟನ್ ಅಂಗಿ, ದೊಗಳೆ ಪ್ಯಾಂಟು, ಕನ್ನಡಕ, ಬಗಲಿಗೆ ಒಂದು ಚೀಲ ಹಾಗೂ ಹೃದಯಪೂರ್ವಕ ನಗುವಿನೊಂದಿಗೆ ಕಾಣಿಸಿಕೊಳ್ಳುವ ವರ್ನನ್ ಗೊನ್ಸಾಲ್ವೆಸ್ ಒಬ್ಬ ಕ್ರಿಯಾಶೀಲ ಬುದ್ಧಿವಂತನಾಗಿ ಕಂಡುಬರುತ್ತಾರೆ. ಆರು ವರ್ಷದ ಮಗುವಿನಿಂದ ಹಿಡಿದು 60 ವರ್ಷದವರೊಂದಿಗೂ ಅವರು ಸಲೀಸಾಗಿ ಬೆರೆಯುತ್ತಾರೆ. ಅವರ ಬಾಹ್ಯನೋಟ ಅವರ ಹೃದಯದಲ್ಲಿ ಸದಾಕಾಲ ಹುದುಗಿರುವ ಸಂತೋಷವನ್ನು ಪ್ರತಿಫಲಿಸುತ್ತದೆ. ಅವರು ಕಾಲೇಜಿನಲ್ಲಿದ್ದಾಗ ಒಂದು ಬ್ಯಾಂಡ್ ಶುರು ಮಾಡಿದ್ದರು. ಆದರೆ ಜನಚಳವಳಿಯ ಭಾಗವಾದ ನಂತರ ಅದನ್ನು ಬಿಟ್ಟರು. ಈಗಲೂ ಅವರು ಹಾಡಿದಾಗ 70ರ ದಶಕದ ರಾಕ್ ಸಂಗೀತದ ರುಚಿಕಟ್ಟು ಅದಕ್ಕಿದೆ.

ವರ್ನನ್ ಅವರ ಬರಹಗಳಲ್ಲಿ ಅವರ ಕಾಣ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ. ವರ್ಗ, ಜಾತಿ, ಜನಾಂಗದ ಭೇದಗಳಿಲ್ಲದ, ಲೈಂಗಿಕ ಸಮಾನತೆಯ ತತ್ವಗಳನ್ನೊಳಗೊಂಡ ಹಾಗೂ ನ್ಯಾಯಯುತವಾದ ಸಮಾಜದ ಅವರ ನೋಟ ಅವರ ಬರಹಗಳನ್ನು ಓದಿದರೆ ಸ್ಪಷ್ಟವಾಗುತ್ತದೆ. ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅವರು ಕ್ಲಿಷ್ಟ ಸಾಮಾಜಿಕ, ರಾಜಕೀಯ, ಆರ್ಥಿಕ ವಿಷಯಗಳ ಬಗ್ಗೆ ಸೂಕ್ಷ್ಮ ಮತ್ತು ಸಮತೋಲನದ ವಾದಗಳನ್ನು ಮುಂದಿಸುತ್ತಾರೆ. ವರ್ನನ್ ಪ್ರಗತಿಪರ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳಲು ಸದಾ ಉತ್ಸುಕರಾಗಿರುತ್ತಾರೆ.

ಮುಂಬಯಿಯ ಭಾಯಕಲ್ಲಾದ ಒಂದು ಚಾಳನಲ್ಲಿ ಬೆಳೆದ ವರ್ನನ್ ಅವರ ತಂದೆತಾಯಿ ಮಂಗಳೂರು ಮೂಲದ ಕ್ಯಾಥೊಲಿಕ್ಕರು. ಓದಿನಲ್ಲಿ ಯಾವಾಗಲೂ ಮುಂದಿದ್ದ ವರ್ನನ್, ಮುಂಬಯಿ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಸ್ವರ್ಣ ಪದಕ ಪಡೆದವರು. ಶಿಕ್ಷಣ ಮುಗಿಸಿ, ಸೀಮೆನ್ಸ್ ಕಂಪನಿಯಲ್ಲಿ ಕೆಲ ದಿನ ಕಾರ್ಪೋರೇಟ್ ನೌಕರಿ ಮಾಡಿದರು. ನಂತರ ಮುಂಬಯಿಯ ಟ್ರೇಟ್ ಯುನಿಯನ್‌ಗಳು, ಸ್ಲಮ್‌ನಲ್ಲಿ ಇರುವುವರ ಹಾಗೂ ದುಡಿಯುವ ವರ್ಗದವರೊಂದಿಗೆ ಕೆಲಸ ಮಾಡಲು ತಮ್ಮ ನೌಕರಿಯನ್ನು ಬಿಟ್ಟರು. ಅದೇ ಸಮಯದಲ್ಲಿ ಮುಂಬಯಿಯ ಕೆಲವು ಪ್ರಮುಖ ಕಾಲೇಜುಗಳಾದ ರೂಪರೇಲ್ ಕಾಲೇಜು, ಎಚ್‌ಆರ್ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜು ಮತ್ತು ಅಕ್ಬರ್ ಪೀರ್‌ಭೋಯ್ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು.

1983ರ ಹೊತ್ತಿಗೆ ಅವರು ನಾಗಪುರ ಸಮೀಪದ ಚಂದ್ರಪುರದಲ್ಲಿ ಬಂದು ನೆಲಸಿದರು. ಅಲ್ಲಿ ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಒಳಗೊಂಡು ಇತರ ಅಸಂಘಟಿತ ವಲಯದ ಕಾರ್ಮಿಕರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. 1984ರಲ್ಲಿ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಸೂಸಾನ್ ಅಬ್ರಾಹಮ್ ಜೊತೆಗೆ ಲಗ್ನವಾದರು. ಅದು ಎರಡು ವಿಶಿಷ್ಟ ಹಾಗೂ ತೀವ್ರ ಸ್ವತಂತ್ರ ಮನಸ್ಸುಗಳ ಮಿಲನವಾಗಿತ್ತು. ಚಂದ್ರಪುರದಲ್ಲಿ ಒಂದು ದಶಕ ಕೆಲಸ ಮಾಡಿ, 1994ರಲ್ಲಿ ಮಗ ಸಾಗರ್ ಹುಟ್ಟಿದ ನಂತರ ಮುಂಬಯಿಗೆ ಮರಳಿದರು.

2007ರ ಆಗಸ್ಟ್ 19ರಂದು ಮಹಾರಾಷ್ಟ್ರ ಎಟಿಎಸ್ ವರ್ನನ್ ಅವರನ್ನು ಮುಂಬಯಿಯ ಅಂಧೇರಿಯ ಮನೆಯಿಂದ ಬಂಧಿಸಿದರು. ಆದರೆ ಅವರ ಬಂಧನವನ್ನು ಇನ್ನೊಬ್ಬ ಸಹ ಆರೋಪಿ ಎಸ್ ಶ್ರೀಧರ್ ಅವರ ಗೋವಂಡಿಯ ಮನೆಯಲ್ಲಿ ಮಾಡಲಾಯಿತು ಎಂದು ಸುಳ್ಳಾಗಿ ತೋರಿಸಲಾಯಿತು. ಅವರ ಮೇಲೆ ಸ್ಫೋಟಕ ವಸ್ತುಗಳನ್ನು ಇಟ್ಟುಕೊಂಡ ಟಾಪ್ ಲೆವೆಲ್ ನಕ್ಸಲೈಟ್ ಎಂಬ ಆಪಾದನೆಯನ್ನು ಹೊರೆಸಲಾಯಿತು. ಅದಕ್ಕೆ ಕೆಲ ತಿಂಗಳು ಮುಂಚೆ, ವರ್ನನ್ ಅವರು ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಆದಿವಾಸಿ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದರು. ಅವರ ಮೇಲೆ 20 ಪ್ರಕರಣಗಳನ್ನು ದಾಖಲಿಸಲಾಯಿತು. ವಿಚಾರಣಾಧೀನ ಕೈದಿಯಾಗಿ ಸುಮಾರು 6 ವರ್ಷ ಜೈಲಿನಲಿದ್ದರು. 20 ರಲ್ಲಿ 18 ಪ್ರಕರಣಗಳಲ್ಲಿ ನಿರ್ದೋಷಿ ಎಂದು ತೀರ್ಪು ಬಂತು. ಒಂದು ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದು, ಈಗ ನಾಗಪುರ ಹೈಕೋರ್ಟ್‌ನಲ್ಲಿ ಅದರ ವಿರುದ್ಧ ಅಪೀಲ್ ಸಲ್ಲಿಸಲಾಗಿದೆ. ಹಾಗೂ ಕೊನೆಯ ಪ್ರಕರಣದಲ್ಲಿ ಬಿಡುಗಡೆ ಮಾಡಬೇಕು ಎನ್ನುವ ಅರ್ಜಿ ಗುಜರಾತ್ ಹೈಕೋರ್ಟ್ ಮುಂದಿದೆ.

ಜೈಲಿನಲ್ಲಿ ವಿಚಾಣಾಧೀನ ಕೈದಿಯಾಗಿ ವರ್ನನ್ ತಮ್ಮ ಬಹುತೇಕ ಸಮಯವನ್ನು ಬರೆಯುವುದರಲ್ಲಿ ಕಳೆದರು. ಸದ್ಯಕ್ಕೆ ಸೆರೆವಾಸದ ಬಗ್ಗೆಯ ಬರಹಗಳ ಸಂಗ್ರಹದ ಮೇಲೆ ಕೆಲಸ ಮಾಡುತ್ತಿದ್ದಾರೆ. ಜೈಲಿನಲ್ಲಿದ್ದುಕೊಂಡೇ, ಸಣ್ಣ ಕಥೆಗಳ ಸಂಗ್ರಹವನ್ನು ಸಂಪಾದಿಸಿದರು, ಅದರಲ್ಲಿಯ ಒಂದು ಕಥೆ, ಜೈಲ್‌ಬರ್ಡ್ ಜಬ್ಬಾರ್ ಎಂಬುದನ್ನು ಪಕ್ಕಾ ಬಂಬಯ್ಯಾ ಶೈಲಿಯಲ್ಲಿ ಬರೆಯಲಾಗಿದೆ. ಅದರೊಂದಿಗೆ ಮರಾಠಿ ಲೇಖಕ ಅಣ್ಣಾಭಾವು ಸಾಠೆ ಅವರ ಕಥೆಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿದರು. ಅದನ್ನು ಅ ಕ್ಲಚ್ ಆಫ್ ಶಾರ್ಟ್ ಸ್ಟೋರೀಸ್ ಎಂಬ ಶೀರ್ಷಿಕೆಯಲ್ಲಿ ಅಲೆಫ್ ಪ್ರಕಾಶನ ಪ್ರಕಟಿಸಿತು. ಜೈಲಿನಿಂದ ಬಿಡುಗಡೆಯಾದ ನಂತರ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅದರಲ್ಲಿ ಯುಎಪಿಎ ಕಾನೂನನ್ನು ಕೊನೆಗೊಳಿಸುವುದರ ಬಗ್ಗೆ, ದಲಿತ ಮತ್ತು ಆದಿವಾಸಿ ಸಮುದಾಯ ಹಕ್ಕುಗಳು, ಪ್ರಸಕ್ತ ಕಾನೂನುಗಳು, ಅಂಚಿನಲ್ಲಿರುವ ದುರ್ಬಲ ಸಮುದಾಯಗಳ ವಿರುದ್ಧ ಸರಕಾರವು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಹೇಗೆ ದುರ್ಬಳಿಕೆ ಮಾಡುತ್ತಿದೆ, ಕಾರ್ಪೋರೆಟ್‌ಗಳು ಮತ್ತು ಸರ್ಕಾರದ ನೆಕ್ಸಸ್‌ನಿಂದ ಆಗುವ ಭೂಕಬಳಿಕೆ ಹೀಗೆ ಹಲವು ವಿಷಯಗಳ ಬಗ್ಗೆ ಬರೆದಿದ್ದಾರೆ. ಇತ್ತೀಚಿಗೆ ಪ್ರಕಟಗೊಂಡ ಹಾರ್ಷರ್ ಪನಿಷ್‌ಮೆಂಟ್ಸ್ ಆಂಡ್ ರಿಟ್ರಿಬ್ಯೂಟಿವ್ ಕ್ರಿಮಿನಲ್ ಜಸ್ಟಿಸ್ (ಕಠಿಣ ಶಿಕ್ಷೆಗಳು ಮತ್ತು ಪ್ರತೀಕಾರದ ಕ್ರಿಮಿನಲ್ ನ್ಯಾಯ) ಎಂಬ ಲೇಖನವು ಅಪರಾಧ ನಿಯಂತ್ರಣದ ಒಟ್ಟಾರೆ ಗತಿ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯ ವಿಶ್ಲೇಷಣೆಯು ಆ ವಿಷಯದಲ್ಲಿ ಒಂದು ಮೈಲಿಗಲ್ಲಾಗಿದೆ.

ವರ್ನನ್ ಅವರ ಮಗ ಸಾಗರ್, ತನ್ನ ತಂದೆಯ ಬಗ್ಗೆ ಹತ್ತಿರದ ಎಲ್ಲರೂ ಏನನ್ನುತ್ತಾರೆ ಎಂಬುದನ್ನು ಹೀಗೆ ವಿವರಿಸುತ್ತಾರೆ.

ನನ್ನ ತಂದೆಯ ಅನೇಕ ಗುಣಗಳಲ್ಲಿ ನಾನು ಮೆಚ್ಚುವುದು, ತಮ್ಮ ನಂಬಿಕೆ ಮತ್ತು ಆದರ್ಶಗಳ ಬಗ್ಗೆ ಅವರಿಗಿರುವ ಬದ್ಧತೆ. ನ್ಯಾಯದ ಕೆಲಸಕ್ಕೆ ಎದೆಯುಬ್ಬಿಸಿ ನಿಲ್ಲುವುದು ಹಾಗೂ ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾದವರ ಜೊತೆಗೆ ನಿಂತು, ಅವರಿಗೆ ಸಹಾಯ ಮಾಡುವುದು. ಇದನ್ನು ಅವರು ಮುಂಚೆಯಿಂದಲೂ ಮಾಡಿಕೊಂಡು ಬಂದಿದ್ದಾರೆ ಹಾಗೂ ಅದನ್ನೇ ಮುಂದುವರೆಸಲಿದ್ದಾರೆ. ಮುಂಚೆಯೂ ಅವರು ಧೈರ್ಯಗುಂದಲಿಲ್ಲ ಹಾಗೂ ಈಗಲೂ ಅವರು ಧೈರ್ಯಗುಂದದೆ ಮುಂದುವರೆಯುವರು. ತಮ್ಮ ನಂಬಿಕೆಗಳಿಗೆ ಎಂದಿಗೂ ಬದ್ಧರಾಗಿರುವ ಅವರ ಅನನ್ಯತೆಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ”

(ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ)

ಅನುವಾದ: ರಾಜಶೇಖರ ಅಕ್ಕಿ


ಇದನ್ನೂ ಓದಿ: ವಿದ್ಯಾರ್ಥಿಗಳ ನೆಚ್ಚಿನ, ಜನಪ್ರಿಯ ಪ್ರಾಧ್ಯಾಪಕ ಡಾ. ಹನಿ ಬಾಬು ಬಂಧನದಲ್ಲಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...