Homeಮುಖಪುಟಬಲಪಂಥೀಯತೆ ಯಾಕೆ ಗೆಲ್ಲುತ್ತಿದೆ? - ಶಿವ ವಿಶ್ವನಾಥನ್

ಬಲಪಂಥೀಯತೆ ಯಾಕೆ ಗೆಲ್ಲುತ್ತಿದೆ? – ಶಿವ ವಿಶ್ವನಾಥನ್

ಸ್ಪಷ್ಟವಾಗಿ ಹೇಳಬೇಕೆಂದರೆ ಹಿಂಸೆ ಮತ್ತು ಕೇಡನ್ನು ಸೃಷ್ಟಿಸುವ ವಿಚಾರದಲ್ಲಿ ಬಲಪಂಥೀಯರು ಪರಿಣಿತರಾಗಿದ್ದರು. ಹಿಂಸೆಯನ್ನು ‘ಇತಿಹಾಸ ಸ್ವಚ್ಚಗೊಳಿಸುವ ಡಿಟರ್ಜೆಂಟ್’ ಆಗಿ ಬಳಸುವ ಬಲಪಂಥೀಯರು ಅದನ್ನು ಭೂತಗನ್ನಡಿಯ ಮೂಲಕ ಸಾದಿಸುತ್ತಾರೆ.

- Advertisement -
- Advertisement -

ಬಲಪಂಥೀಯತೆ ಯಾಕೆ ಯಶಸ್ಸು ಗಳಿಸುತ್ತಿದೆ ಎನ್ನುವ ಪ್ರಶ್ನೆಯನ್ನು ಎಡಪಂಥೀಯತೆಯ ಕುರಿತ ಪ್ರಬಂಧದ ಮೂಲಕ ಪ್ರಾರಂಬಿಸಬೇಕಾಗುತ್ತದೆ, ಆದರೆ ಗತದ ರಮ್ಯತೆಯ ಹಳಹಳಿಕೆಯಿಂದಾಗಲೀ ಅಥವಾ ಎದೆ ತಟ್ಟಿಕೊಳ್ಳುವಿಕೆಯಿಂದಾಗಲಿ ಅಲ್ಲ. ಎಡಪಂಥೀಯತೆ ಮಾಡಿಕೊಂಡ ಸ್ವಯಂ ಗಾಯಗಳ ಕಾರಣದಿಂದಾಗಿ ಬಲಪಂಥೀಯತೆ ಗಟ್ಟಿಗೊಳ್ಳುವುದಕ್ಕೆ ಸಹಕಾರಿಯಾಯಿತು ಎಂಬುದು ಸರಿಯಾದ ವಿಶ್ಲೇಷಣೆ. ತೆವಳುತ್ತಿರುವ ಸ್ಟಾಲಿನ್‍ವಾದದ ಹೆಳವಂಡದಿಂದ ಹೊರಬರಲಾರದೆ ಎಡಪಂಥವು ಇಂದಿಗೂ ಯಾತನೆ ಪಡುತ್ತಿದೆ ಮತ್ತು ಒಂದು ಕಾಲದಲ್ಲಿ ಜನಜನಿತವಾದ ತನ್ನ ಭಿನ್ನಮತೀಯ-ಪ್ರತಿರೋಧದ ಪರಿಕಲ್ಪನೆಯನ್ನು ಅದು ಹಾಳು ಮಾಡುತ್ತಿದೆ. ತನ್ನ ರಾಜಕಾರಣ ಪುನಃ ಪ್ರಾರಂಬಿಸುವುದಕ್ಕಿಂತಲೂ ಮೊದಲು ಅದರೊಳಗಿನ ಈ ಭೂತೋಚ್ಚಾಟನೆಗೆ ಒಬ್ಬ ಮಂತ್ರವಾದಿಯ ಅಗತ್ಯವಿದೆ. ಇಂತಹ ವಿಶ್ಲೇಷಕ ಮಾತ್ರ ವರ್ಗ ಎನ್ನುವ ಪ್ರವರ್ಗವು ಇಂದು ಜಡಗೊಂಡಿದೆ ಮತ್ತು ಸ್ವಯಂಕೇಂದ್ರಿತ ನಂಬಿಕೆಗಳ ಆತ್ಮರತಿಯಲ್ಲಿ ತೊಡಗಿಕೊಂಡಿದೆ ಎಂದು ಎಡಪಂಥೀಯರಿಗೆ ಹೇಳಬಲ್ಲ. ನರ್ಮದಾ ಚಳುವಳಿ ಮತ್ತು ಕೇರಳದ ಮೀನುಗಾರರ ಚಳುವಳಿಗೆ ಎಡಪಂಥೀಯರ ಪ್ರತಿಕ್ರಿಯೆ ಕಂಡಾಗ ಅವರಿಗೆ ಅಂಚಿನಲ್ಲಿರುವ, ಜೀವನೋಪಾಯದ ಸಮತೋಲನ ವೈವಸ್ಥೆಯ ಕುರಿತು ಪ್ರಜ್ಞೆಯೇ ಇಲ್ಲ ಎನ್ನುವ ಭಾವನೆ ಮೂಡುತ್ತದೆ.

ಎಡಪಂಥೀಯರು ತಮ್ಮನ್ನು ತಾವು ನಾಶಪಡಿಸಿಕೊಳ್ಳುತ್ತಿರುವಾಗ ಬಲಪಂಥೀಯರು ರಾಷ್ಟ್ರ-ಪ್ರಭುತ್ವ ಮತ್ತು ಯುವಜನತೆಯ ವಿಚಾರ ಎನ್ನುವ ಎರಡು ಮಹತ್ವಾಕಾಂಕ್ಷೆಯ ವಲಯಗಳನ್ನು ಹುಡುಕಿಕೊಂಡರು. ಸಣ್ಣ ಗ್ರಾಮಗಳಲ್ಲಿ ವಾಸಿಸುತ್ತಿರುವವರ ಕನಸುಗಳನ್ನು ಬಂಡವಾಳ ಮಾಡಿಕೊಂಡು ಚಲನಶೀಲತೆಯ ಮಿಥ್ಯೆಗಳನ್ನು ಸೃಷ್ಟಿಸಲಾಯಿತು ಮತ್ತು ಇದರ ಮುಂದೆ ‘ವರ್ಗವು ಒಂದು ಬದಲಾವಣೆಯ ಆಶಾಕಿರಣ’ ಎನ್ನುವ ಸಿದ್ದಾಂತ ಯಾವ ಕ್ಷಣಕ್ಕಾದರೂ ಕರಗಬಲ್ಲ ಹಿಮಗಡ್ಡೆಯಂತೆ ಕಂಡುಬಂದಿತು. ಇದೆ ವೇಳೆಯಲ್ಲಿ ಯುವಜನತೆಯ ಮಹತ್ವಾಕಾಂಕ್ಷೆಯ ಅಭಿಮತಕ್ಕೆ ಮಾದರಿಯೊಂದನ್ನು ಸೃಷ್ಟಿಸುತ್ತಿದ್ದೇವೆ ಎಂದು ಸೋಗುಹಾಕಿದ ಬಲಪಂಥೀಯರಿಗೆ ರಾಷ್ಟ್ರ – ಪ್ರಭುತ್ವ ನಿರೂಪಣೆಯು ಸಮವಸ್ತ್ರದಲ್ಲಿ ಕವಾಯತು ನಡೆಸುವ ರೀತಿಯ ಏಕರೂಪತೆಗೆ ಅವಕಾಶ ಮಾಡಿಕೊಟ್ಟಿತು. ಎಡಪಂಥೀಯರು ಎಂದೂ ಕಲಿಯದ ಕಪಟತನದ ಮೂಲಕ ಬಲಪಂಥೀಯರು ಒಳಗಿನಿಂದಲೇ ಕನ್ನ ಹಾಕಿ ಪ್ರಜಾಪ್ರಭುತ್ವವನ್ನು ಟೊಳ್ಳುಗೊಳಿಸಿದರು.

ಸ್ಪಷ್ಟವಾಗಿ ಹೇಳಬೇಕೆಂದರೆ ಹಿಂಸೆ ಮತ್ತು ಕೇಡನ್ನು ಸೃಷ್ಟಿಸುವ ವಿಚಾರದಲ್ಲಿ ಬಲಪಂಥೀಯರು ಪರಿಣಿತರಾಗಿದ್ದರು. ಹಿಂಸೆಯನ್ನು ‘ಇತಿಹಾಸ ಸ್ವಚ್ಚಗೊಳಿಸುವ ಡಿಟರ್ಜೆಂಟ್’ ಆಗಿ ಬಳಸುವ ಬಲಪಂಥೀಯರು ಅದನ್ನು ಭೂತಗನ್ನಡಿಯ ಮೂಲಕ ಸಾದಿಸುತ್ತಾರೆ. ಗುಂಪು ಹತ್ಯೆ (mob lynch) ತುಕಡಿ ನಡೆಸುವ ಹಿಂಸೆಯು ಬಹುಸಂಖ್ಯಾತರಿಗೆ ಇತಿಹಾಸದಲ್ಲಿ ತಮ್ಮನ್ನು ತೊಡಗಿಕೊಳ್ಳುವ ಅವಕಾಶವನ್ನು ಬಲಪಂಥ ಕಲ್ಪಿಸಿತು ಮತ್ತು ಎಡಪಂಥೀಯರು ಇದನ್ನು ಒದಗಿಸಲು ಸಾಧ್ಯವಿಲ್ಲ. ಎಡಪಂಥೀಯರು ಭವಿಷ್ಯದ ಕನಸನ್ನು ಸೃಷ್ಟಿಸಿದರು ಆದರೆ ಅದೇ ಸಮಯದಲ್ಲಿ ಬಲಪಂಥೀಯರು ಲೈವ್ ಹಿಂಸೆಯ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಗತವನ್ನು ಪುನರ್‌ ನಿರ್ಮಿಸುವ ಅವಕಾಶಗಳನ್ನು ಕಲ್ಪಿಸಿದರು. ನೀನು ಮುಸ್ಲಿಂನನ್ನು ಹತ್ಯೆ ಮಾಡುವ ಮೂಲಕ ರಾಣಾ ಪ್ರತಾಪ್ ಅಥವಾ ಪದ್ಮಿನಿಗೆ ಆದ ಅನ್ಯಾಯವನ್ನು ಸರಿಪಡಿಸಿದ್ದೀಯ ಎನ್ನುವ ಆತ್ಮಸಂತೃಪ್ತಿ ಮೂಡಿಸಲಾಯಿತು. ಬಲಪಂಥೀಯತೆಯು ಹೆಚ್ಚು ಅಮಾನುಷವಾಗಿದ್ದರೂ ಸಹ ಹಿಂಸೆಯು ಭೂತೋಚ್ಚಾಟನೆಗೆ ಸಂತೃಪ್ತಿಯ ಸಿದ್ಧಾಂತ ಎಂದು ನಂಬಿಸುವಲ್ಲಿ ಯಶಸ್ವಿಯಾಯಿತು

ಬಲಪಂಥೀಯರ ರಾಷ್ಟ್ರ-ಪ್ರಭುತ್ವದ ಆಯ್ಕೆಯು ತೋಳ್ಬಲದ ಸಾಮೂಹಿಕ ಪ್ರಜ್ಞೆ, ಸೌಂದರ್ಯಾತ್ಮಕ ಐಕ್ಯಮತ, ರೋಮಾಂಚನದ ರಮಣೀಯ ಕ್ಷಣಗಳನ್ನು ಒದಗಿಸಿತು. ಸಾಮಾಜ ಶಾಸ್ತ್ರದ ವಿಭಾಗವಾದ ವರ್ಗ ಸಿದ್ದಾಂತಗಳು ಇದನ್ನು ಒದಗಿಸಲು ಸಾಧ್ಯವಿರಲಿಲ್ಲ. ವರ್ಗ ಹೋರಾಟಕ್ಕಿಂತಲೂ ಜನಪ್ರಿಯ ರಾಜಕೀಯಕ್ಕೆ (ಪಾಪ್ಯುಲಿಸಂ) ಹೆಚ್ಚಿನ ಬೆಂಬಲ ದೊರಕಿತು. ತನ್ನೆಲ್ಲ ತಗಲೂಫಿತನಗಳೊಂದಿಗೆ ತೇಲಿ ಬಂದ ಮೋದಿಯ ‘ಚಾಯ್‍ವಾಲಾ’ ದುಡಿಯುವ ವರ್ಗದ ಘೋಷಣೆಗಿಂತಲೂ ಹೆಚ್ಚಿನ ಸಖ್ಯವನ್ನು ಬೆಸೆಯಿತು. ಈ ಜನಪ್ರಿಯ ರಾಜಕಾರಣಕ್ಕೆ ಯಾವ ಕಡೆಗಾದರೂ ಹೊರಳಿಕೊಳ್ಳುವ ನಮ್ಯತೆ ಇರುತ್ತದೆ ಮತ್ತು ಎಡಪಂಥೀಯರು ಇದನ್ನು ಅರಿಯುವಲ್ಲಿ ಸೋತರು. ಕಾರ್ಯಕತರು ಮುಖ್ಯ, ಆದರೆ ದೊಂಬಿಕೋರರಿಗೆ ಪೂರಕವಾಗಿ ಮಾತ್ರವೆಂದು ಬಲಪಂಥೀಯರು ಅರ್ಥ ಮಾಡಿಕೊಂಡಿದ್ದರು. ಬಲಪಂಥೀಯತೆಯು ‘ಗಲಭೆಕೋರರು ಮತ್ತು ಬಹುಸಂಖ್ಯಾತವಾದ’ ನಡುವೆ ಪ್ರಜಾಪ್ರಭುತ್ವವನ್ನು ಬರ್ಬರವಾಗಿ ಹತ್ತಿಕ್ಕಬಲ್ಲದು ಮತ್ತು ಎಡಪಂಥೀಯತೆ ಇದನ್ನು ಕನಸಿನಲ್ಲಿಯೂ ಊಹಿಸಲು ಸಾದ್ಯವಿಲ್ಲ. ರಾಷ್ಟ್ರ-ಪ್ರಭುತ್ವದ ಮೂಲಕ ಮತ್ತು ಜನಪ್ರಿಯ ರಾಜಕೀಯ ಬಳಸಿಕೊಂಡು ಸಾಂಕೇತಿಕವಾಗಿ ಮುನ್ನುಗ್ಗಿ ಪ್ರಚೋದಿತ ವಾತಾವರಣ ಸೃಷ್ಟಿಸಿ ಜನತೆಯ ಆಶಾಭಾವನೆಯನ್ನು ಕಬ್ಜಾ ಮಾಡಿಕೊಳ್ಳುವ ಬಲಪಂಥೀಯತೆಯ ತಂತ್ರಗಾರಿಕೆಯ ಮುಂದೆ ಎಡಪಂಥೀಯತೆ ಮಂಕು ಹಿಡಿದಂತೆ ನಿಷ್ಕ್ರಿಯವಾಗಿ ಗೋಚರಿಸುತ್ತದೆ.

ವಿಜ್ಞಾನ, ವೈಜ್ಞಾನಿಕ ಮನೋದರ್ಮ ಕುರಿತಾದ ಚರ್ಚೆ, ಸಂವಾದಗಳಲ್ಲಿ ಹಿಂದುಳಿದು ಹಳೆಯ ವಾದಗಳಿಗೆ ಹೊರಳುವ ಎಡಪಂಥೀಯತೆಯು ಬರ್ನಲ್ ಮತ್ತು ನೀಧಮ್ ಅವರನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದೆ. ಮಾಕ್ರ್ಸಿಸಂ ವೇಲ್ಸ್‍ನೊಂದಿಗೆ (ಇಂಗ್ಲೆಂಡ್‍ನ ಒಂದು ಪ್ರಾಂತ) ಸಂಭಾಷಣೆ ನಡೆಸಬೇಕೆಂದು ನೀಧಮ್ ಬಯಸುತ್ತಾನೆ. ಆತ ಪ್ರಾದೇಶಿಕತೆಯನ್ನು ಅರಿತುಕೊಂಡಷ್ಟು ಎಡಪಂಥೀಯರು ಅರಿತಿಲ್ಲ, ಮಹಾಶ್ವೇತದೇವಿಯವರನ್ನು ಹೊರತುಪಡಿಸಿ. ವಿಜ್ಞಾನ ಒಂದು ಸಿದ್ದಾಂತ ಎಂದು ಬಲಪಂಥೀಯತೆ ಯಾವತ್ತಿಗೂ ಆಸಕ್ತಿ ತೋರಲಿಲ್ಲ. ಅವರಿಗೆ ಅದೊಂದು ನಿಮಿತ್ತ ಮಾತ್ರ. ಅದು ಪ್ರಾಚೀನ ವಿಜ್ಞಾನವನ್ನು ಒಂದು ಸಾಧನವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅವರಿಗೆ ವಿಜ್ಞಾನ ಒಂದು ತಂತ್ರಜ್ಞಾನ ಮತ್ತು ತಂತ್ರಜ್ಞಾನವು ರಾಜಕೀಯಕ್ಕೆ ಬದಲಿ ವಸ್ತು ಮಾತ್ರ. ಈ ಎರಡು ಮಾರ್ಪುಗಳೊಂದಿಗೆ ಬಲಪಂಥೀಯತೆಯು ವಿಜ್ಞಾನವನ್ನು ಕಬ್ಜಾ ಮಾಡಿಕೊಂಡಿತು.

ವಿಮೋಚನೆ ಧಾರ್ಮಿಕ ಸಿದ್ಧಾಂತ ಹೊರತುಪಡಿಸಿ ಧರ್ಮದ ಕುರಿತಾಗಿ ಎಡಪಂಥೀಯತೆಯು ಅರ್ಥಶೂನ್ಯತೆಯಿಂದ ವರ್ತಿಸಿತು. ಅದರ ಸೆಕ್ಯುಲರಿಸಂ ಬರಿದಾಗಿದೆ ಮತ್ತು ಸಂವಾದ ನಡೆಸುವ ಪ್ರಜ್ಞೆ ಅದಕ್ಕಿಲ್ಲ. ಧರ್ಮವನ್ನು ಎಡಪಂಥ ಅರ್ಥಮಾಡಿಕೊಳ್ಳುವುದಕ್ಕೆ ಸೋತಿರುವುದು, ಬಹುದೊಡ್ಡ ನಾಗರಿಕತೆಯ ಪರಿಕಲ್ಪನೆಯಿಂದ ತನ್ನನ್ನು ಬೇರ್ಪಡಿಸಿಕೊಳ್ಳುವಂತೆ ಮಾಡಿದೆ. ಇದರ ಫಲವಾಗಿ ಮೌಢ್ಯದ ಕುರಿತು ಪೆದ್ದುತನ, ವಿಜ್ಞಾನದ ಕುರಿತು ಅಜ್ಞಾನ ಪ್ರದರ್ಶಿಸಿದೆ. ಧಾರ್ಮಿಕ ಚಳುವಳಿ ಮತ್ತು ಎಡಪಂಥೀಯತೆ ನಡುವಿನ ಸಂವಾದವು ಪರಿವರ್ತನಾಶೀಲ ನಡೆಯಾಗುತ್ತಿತ್ತು. ಅದು ಭಕ್ತಿ ಮತ್ತು ಮಾಕ್ರ್ಸ್‍ವಾದವನ್ನು ಬೆಸೆದಿದ್ದರೂ ಸರಿಯೆ. ಎಡಪಂಥೀಯತೆಯು ದರ್ಮದ ಕುರಿತು ಪುಕ್ಕಲುತನ ನಿಲುವು ಹೊಂದಿರುವ ಕಾರಣಕ್ಕೆ ಅದು ಬಲಪಂಥೀಯತೆಯ ಕೋಮುವಾದವನ್ನು ಅರಿತುಕೊಳ್ಳಲು ದುರ್ಬಲವಾಗಿದೆ. ಬಲಪಂಥೀಯತೆಯು ದರ್ಮ ಮತ್ತು ಆಧ್ಯಾತ್ಮವನ್ನು ಒಂದು ಸಾಧನವಾಗಿ ಬಳಸಿಕೊಂಡರೆ ಎಡಪಂಥೀಯತೆಯು ನಿಶ್ಚಲತೆಯಿಂದ ಮಂಕು ಬಡಿದಂತೆ ನಿರುಕಿಸುತ್ತಿತ್ತು. ಬಲಪಂಥೀಯತೆಯು ಇತಿಹಾಸವನ್ನು ತನಗೆ ಬೇಕಾದಂತೆ ತಿರುಚುವ ಒಂದು ಪದ್ದತಿಯನ್ನು ರೂಢಿಸಿಕೊಂಡಿತು ಮತ್ತು ಎಡಪಂಥೀಯತೆ ಇದನ್ನು ಗ್ರಹಿಸುವಲ್ಲಿಯೂ ವಿಫಲವಾಯಿತು. ಕೆವಿಐಸಿ (ಖಾದಿ ಅಂಡ್ ವಿಲೇಜ್ ಇಂಡಸ್ಟ್ರೀಸ್ ಕಮಿಶನ್) ಕ್ಯಾಲೆಂಡರ್‍ನಲ್ಲಿ ಗಾಂಧಿ ಜೊತೆಗೆ ಸಮಾನವಾಗಿ ಗುರುತಿಕೊಳ್ಳುವ ಮೋದಿಯ ಪ್ರಯತ್ನ ಮತ್ತು ಆ ನಡೆಯನ್ನು ಎಡಪಂಥೀಯತೆಯು ಊಹಿಸಲೂ ಸಾದ್ಯವಿಲ್ಲ.

ಅಂತಿಮವಾಗಿ ಇದು ಎರಡು ಸಾಧಾರಣ ಮಟ್ಟಗಳ ತಿಳುವಳಿಕೆಗಳ ನಡುವಿನ ಸಂಘರ್ಷ ಎನ್ನಬಹುದಾದರೂ, ಬಲಪಂಥೀಯತೆಯು ತನ್ನ ಎರಡನೆ ದರ್ಜೆಯ ಗುಣವನ್ನು ನಿರಂಕುಶಪ್ರಭುತ್ವ ಮತ್ತು ಪ್ರಜಾಪ್ರಭುತ್ವದೊಂದಿಗೆ ಸಂಯೋಜಿಸಬಲ್ಲದು. ಅದು ಎಡಪಂಥಕ್ಕಿಂತಲೂ ಕೇಡಿನ ಜೊತೆಗೆ ತುಂಬಾ ಸಕ್ರಿಯವಾಗಿದೆ. ಎಲ್ಲವನ್ನೂ ತನ್ನ ಅಗತ್ಯಕ್ಕೆ ಅನುಗುಣವಾಗಿ ತಿರುಚುವ ತಂತ್ರಗಾರಿಕೆ, ಜನಪ್ರಿಯತೆ ಮತ್ತು ತೋಳ್ಬಲದ ಪ್ರದರ್ಶನವು ಅವರಿಗೆ ಅಧಿಕಾರ ತಂದುಕೊಟ್ಟಿದೆ. ಅದೇ ಸಂದರ್ಭದಲ್ಲಿ ಎಡಪಂಥೀಯರು ನಿಷ್ಕ್ರಿಯರಾಗಿ ತಮ್ಮ ಸೈದ್ಧಾಂತಿಕ ತಪ್ಪುಗಳನ್ನು ಸಂಕುಚಿತ ದೃಷ್ಟಿಕೋನದ ಮೂಲಕ ವಿಮರ್ಶೆಗೆ ಒಳಪಡಿಸುವಲ್ಲಿ ನಿರತರಾಗಿದ್ದಾರೆ.

ಬಹುಶಃ ನವೀಕರಿಸಿದ ಇಪ್ಟಾ (ಇಂಡಿಯನ್ ಪೀಪಲ್ ಥಿಯೇಟರ್ ಅಸೋಸಿಯೇಶನ್) ಎಡಪಂಥೀಯತೆಯ ನಿಷ್ಕ್ರಿಯತೆಯನ್ನು ಪ್ರತಿಫಲಿಸುವ ರಂಗಕಲೆಯನ್ನು ಪ್ರದರ್ಶಿಸಬಹುದು. ಬಲಪಂಥೀಯತೆ ಗೆ ಮಾಧ್ಯಮಗಳನ್ನು ಬಳಸಿಕೊಳ್ಳುವ ಕಲೆ ಕರಗತವಾಗಿದೆ ಮತ್ತು ಎಡಪಂಥೀಯರು ಅದನ್ನು ಊಹಿಸಲೂ ಸಾದ್ಯವಿಲ್ಲ. ಮೋದಿ ಸಾಧಾರಣ ಮತ್ತು ಮೊದ್ದು ರಾಜಕಾರಣಿಯಾಗಿರಬಹುದು ಆದರೆ ಕಾರಟ್‍ರವರು ಅಪ್ರಸ್ತುತ ಪಳೆಯುಳಿಕೆ ಪ್ರಾಣಿಯ ಮಾದರಿಯಾಗಿ ಕಾಣುತ್ತಾರೆ. ಅವರು ಮೋದಿಯ ಅಸಡ್ಡಾಳತನವನ್ನು ಎಂದಿಗೂ ಸರಿಗಟ್ಟಲು ಸಾಧ್ಯವಿಲ್ಲ.

  • ಶಿವ ವಿಶ್ವನಾಥನ್ ( ಭಾರತದ ಖ್ಯಾತ ಚಿಂತಕರು. ಒ.ಪಿ ಜಿಂದಾಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಅವರು ಹಲವು ಭಾರತೀಯ ನಿಯತಕಾಲಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ)
  • ಅನುವಾದ: ಬಿ.ಶ್ರೀಪಾದ್ ಭಟ್

ಇದನ್ನು ಓದಿ: ಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...