Homeಕರ್ನಾಟಕರೈತ ಹೋರಾಟದ ಕುರಿತ 'ಹೊನ್ನಾರು ಒಕ್ಕಲು', ‘ಕದನ ಕಣ’ ಪುಸ್ತಕಗಳ ಬಿಡುಗಡೆ

ರೈತ ಹೋರಾಟದ ಕುರಿತ ‘ಹೊನ್ನಾರು ಒಕ್ಕಲು’, ‘ಕದನ ಕಣ’ ಪುಸ್ತಕಗಳ ಬಿಡುಗಡೆ

- Advertisement -
- Advertisement -

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಲಕ್ಷಾಂತರ ರೈತರು ಕಳೆದ 87 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ರೈತ ಹೋರಾಟವನ್ನು ಕೋಟ್ಯಂತರ ಜನರು ತಮ್ಮದೇ ಆದ ರೀತಿಯಲ್ಲಿ ಬೆಂಬಲಿಸುತ್ತಿದ್ದಾರೆ. ಭಾರತ ಹಿಂದೆಂದೂ ಕಂಡು ಕೇಳರಿಯದ ಐತಿಹಾಸಿಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಸೃಜನಶೀಲ ಕೆಲಸಗಳು ಹೊರಬರುತ್ತಿವೆ. ಇದರ ಭಾಗವಾಗಿ ರೈತ ಹೋರಾಟದ ಸುತ್ತಲಿನ ವಿದ್ಯಮಾನಗಳ ಕುರಿತ 2 ಪುಸ್ತಕಗಳು ಫೆ. 20 ರಂದು ಬಿಡುಗಡೆಯಾಗುತ್ತಿದೆ.

ರೈತ ಚಳುವಳಿಯ ಕುರಿತು ಎರಡು ಪುಸ್ತಕಗಳ ಬಿಡುಗಡೆ ಮತ್ತು “ದೆಹಲಿ ಗಡಿಯ ರೈತರೊಂದಿಗೆ ಕನ್ನಡ ಮನಸ್ಸುಗಳು” ಕುರಿತು ‘ಪುಸ್ತಕ ಪ್ರೀತಿ ತಿಂಗಳ ಮಾತುಕತೆ’ ಕಾರ್ಯಕ್ರಮವು ಫೆ. 20 ರಂದು ನಡೆಯಲಿದೆ ಎಂದು ಕ್ರಿಯಾ ಮಾಧ್ಯಮ ತಿಳಿಸಿದೆ.

ದೇಶದಲ್ಲಿ ಜನತಾಂತ್ರಿಕ ನೆಲೆಗಳು ದುರ್ಬಲಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಹೋರಾಟ ನಡೆಸಿರುವ ಅನ್ನದಾತರು ಪ್ರಜಾಪ್ರಭುತ್ವದ ಎಳೆಗಳನ್ನು ಗಟ್ಟಿಗೊಳಿಸುವ ಮಹತ್ವದ ಚಳುವಳಿಯನ್ನು ರೂಪಿಸುತ್ತಿದ್ದಾರೆ. ಇದನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಕಳೆದ ಎರಡೂವರೆ ತಿಂಗಳಿಂದಲೂ ರೈತ ಹೋರಾಟ ದೆಹಲಿಯ ಗಡಿಗಳಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ದಿಶಾ ಬಂಧನ ಕಾನೂನುಪಾಲನೆಯ ಲೋಪದೋಷ ಅಷ್ಟೇ ಅಲ್ಲ; ಪ್ರಜಾಪ್ರಭುತ್ವದ ಅಣಕು ಕೂಡ

ಸರ್ಕಾರವನ್ನೇ ಬೆಚ್ಚಿ ಬೀಳಿಸುವಂತಹ ಮಟ್ಟದಲ್ಲಿ ರೈತರಿಗೆ ಬೆಂಬಲ ವ್ಯಕ್ತವಾಗಿದೆ. 2021ರ ಗಣರಾಜ್ಯೋತ್ಸವ ‘ರೈತಗಣರಾಜ್ಯೋತ್ಸವ’ವಾಗಿ ಮಾರ್ಪಟ್ಟಿತು. ಇದೇ ಸಂದರ್ಭದಲ್ಲಿ ಬರಹಗಾರರು, ಕಲಾವಿದರು, ಸಾಹಿತಿಗಳು ತಮ್ಮ ಕಾಳಜಿಯನ್ನು ಬರಹದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವದೆಲ್ಲೆಡೆಗಳಿಂದ ರೈತರ ಹೋರಾಟವನ್ನು ಬೆಂಬಲಿಸಿ ಪ್ರತಿಭಟನೆಗಳು ನಡೆಯುತ್ತಿವೆ. ರೈತರ ಕುರಿತು ಸಾವಿರಾರು ಬರಹಗಾರರು ಕವಿತೆ, ಕತೆ, ಲೇಖನ, ಹಾಡು, ನಾಟಕಗಳ ಮೂಲಕ ಸ್ಪಂದಿಸುತ್ತಿದ್ದಾರೆ.

‘ಹೊನ್ನಾರು ಒಕ್ಕಲು’ (ರೈತ ಆಂದೋಲನದ ಕವಿತೆಗಳು)

ಈ ಹೋರಾಟಕ್ಕೆ ಸ್ಪಂದಿಸಿದ ಕನ್ನಡದ ಕವಿಗಳಿಂದ ರೈತರ ಆಂದೋಲನ ಕುರಿತ ಕವನಗಳನ್ನು ತರಿಸಿ, ‘ಹೊನ್ನಾರು ಒಕ್ಕಲು’ (ರೈತ ಆಂದೋಲನದ ಕವಿತೆಗಳು) ಎಂಬ ಹೆಸರಿನ ಕವನ ಸಂಕಲನವನ್ನು ರೂಪಿಸಲಾಗಿದೆ. 64 ಹಿರಿಯ ಕಿರಿಯ ಕವಿಗಳ ಕವಿತೆಗಳು ಇಲ್ಲಿವೆ. ಈ ಸಂಕಲನವನ್ನು ಡಾ. ಕೆ ಷರೀಫಾ ಮತ್ತು ಯಮುನಾ ಗಾಂವ್ಕರ್ ಸಂಪಾದಿಸಿದ್ದಾರೆ. ಈ ಸಂಕಲನದಲ್ಲಿ ರೈತ ಚಳುವಳಿಗೆ ಬೆಂಬಲವಾಗಿ ಕಲಾವಿದರು ಬರೆದ ಕಲಾತ್ಮಕ ಪೋಸ್ಟರುಗಳು, ಕಲಾಕೃತಿಗಳ ಚಿತ್ರಗಳನ್ನು ಕವಿತೆಗಳ ಜತೆ ಕೊಡಲಾಗಿದೆ.

‘ಕದನ ಕಣ’

ರೈತ ಚಳುವಳಿ ತೀವ್ರವಾಗುತ್ತಿದ್ದಾಗ ಜನವರಿಯ ಎರಡನೇ ವಾರದಲ್ಲಿ ದೆಹಲಿ ರೈತರ ಚಳುವಳಿಗೆ ಕರ್ನಾಟಕ ರೈತರ ಸೌಹಾರ್ದ ಬೆಂಬಲ ಕೊಡಲು ಮತ್ತು ಆ ಚಾರಿತ್ರಿಕ ಚಳುವಳಿಯ ಪ್ರತ್ಯಕ್ಷ ಅನುಭವ ಪಡೆಯಲು ಕರ್ನಾಟಕ ಪ್ರಾಂತ ರೈತ ಸಂಘ ಅದರ ರಾಜ್ಯ ನಾಯಕರುಗಳಾದ ಎಚ್.ಆರ್. ನವೀನ್ ಕುಮಾರ್ ಮತ್ತು ಜಗದೀಶ ಸೂರ್ಯ ಅವರನ್ನು ದೆಹಲಿಗೆ ಕಳಿಸಿತು. ಅವರು 10 ದಿನಗಳ ಪ್ರವಾಸದ ಅವಧಿಯಲ್ಲಿ ತಮ್ಮ ಶ್ರೀಮಂತ ಅನುಭವವನ್ನು ಬರಹ, ಫೊಟೊ, ಲೈವ್ ವಿಡಿಯೊ ಗಳ ಮೂಲಕ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.

ದೆಹಲಿಯ ರೈತ ಹೋರಾಟವನ್ನು ಜಾಣ ಮೌನ, ಸುಳ್ಳು ಸುದ್ದಿ, ಪೊಳ್ಳು ಆಪಾದನೆಗಳ ಮೂಲಕ ನಿರ್ಲಕ್ಷ, ಅವಹೇಳನಕ್ಕೆ ಗುರಿ ಮಾಡಿರುವ “ಗೋದಿ ಮೀಡಿಯಾ”ದ ಅಸಹ್ಯ ವರ್ತನೆಯ ಸಂದರ್ಭದಲ್ಲಿ ಇವು ಬಹಳ ಜನಪ್ರಿಯವಾದವು. ಈ ಚಾರಿತ್ರಿಕ ಚಳುವಳಿಯ ಅಮೂಲ್ಯ ಅನುಭವಗಳ ಕುರಿತ ಚಾರಿತ್ರಿಕ ಬರಹಗಳನ್ನು ಫೊಟೊಗಳನ್ನು ಇನ್ನಷ್ಟು ಸೇರಿಸಿ, ಪರಿಷ್ಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು ಎಂಬ ಒತ್ತಾಯದ ಮೇರೆಗೆ ಸ್ವತಃ ಉತ್ತಮ ಪತ್ರಕರ್ತ, ಫೊಟೊಗ್ರಾಫರ್ ಆಗಿರುವ ಎಚ್.ಆರ್. ನವೀನ್ ಕುಮಾರ್ ಅದನ್ನು ಪುಸ್ತಕದ ರೂಪದಲ್ಲಿ ಬರೆದಿದ್ದಾರೆ. ಅದರಲ್ಲಿ ತಾವೇ ತೆಗೆದ ಉತ್ತಮ ಪೋಟೊಗಳನ್ನು ಸೇರಿಸಿದ್ದಾರೆ. ಇದಕ್ಕೆ ‘ಕದನ ಕಣ’ ಎಂದು ಹೆಸರಿಟ್ಟಿದ್ದಾರೆ.

ಇದನ್ನೂ ಓದಿ: ಸಚಿನ್ ಮಗನನ್ನು ಖರೀದಿಸಿದ ಮುಂಬೈ ಇಂಡಿಯನ್ಸ್: ಮ್ಯಾನೇಜ್‌ಮೆಂಟ್ ಕೋಟಾ ಎಂದ ನೆಟ್ಟಿಗರು!

ಈ ಎರಡೂ ಪುಸ್ತಕಗಳನ್ನು ಕ್ರಿಯಾ ಮಾಧ್ಯಮ ಪ್ರಕಟಿಸುತ್ತಿದ್ದು, ಇವುಗಳೆರಡಕ್ಕೂ ದೆಹಲಿಯಲ್ಲಿ ವಾಸವಿದ್ದು ರೈತರ ಚಳುವಳಿಯ ನೇರ ಸಂಪರ್ಕ ಇಟ್ಟುಕೊಂಡಿರುವ ಅದರ ಆಳವಾದ ತಿಳುವಳಿಕೆ ಇರುವ ಡಾ. ಪುರುಷೋತ್ತಮ ಬಿಳಿಮಲೆ ಅವರು ಮುನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ದೆಹಲಿ ರೈತರ ಚಳುವಳಿಯ ಕುರಿತಾದ ‘ಹೊನ್ನಾರು ಒಕ್ಕಲು’ ಮತ್ತು ‘ಕದನ ಕಣ’ ಎಂಬ ಈ ಎರಡು ಪುಸ್ತಕಗಳನ್ನು ಫೆಬ್ರುವರಿ 20ರಂದು ನಡೆಯುವ ಆನ್ ಲೈನ್ ಸಭೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ.

ದೆಹಲಿಗೆ ಎರಡು ಬಾರಿ ಭೇಟಿಯಿತ್ತು ದೆಹಲಿ ರೈತರ ಚಳುವಳಿಯ ಕುರಿತು ಸಾಕ್ಷ್ಯ ಚಿತ್ರ ತಯಾರಿಸುತ್ತಿರುವ ಕೇಸರಿ ಹರವು, ಚಳುವಳಿಯ ನಾಯಕತ್ವ ವಹಿಸುತ್ತಿರುವ ರೈತ ಸಂಘಟನೆಗಳಲ್ಲಿ ಒಂದಾದ ಅಖಿಲ ಭಾರತ ಕಿಸಾನ ಸಭಾದ ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್ ಮತ್ತು ಡಾ. ಪುರುಷೋತ್ತಮ ಬಿಳಿಮಲೆ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎರಡೂ ಪುಸ್ತಕಗಳ ಲೇಖಕರು, ಕವಿಗಳು, ಸಂಪಾದಕರು ಭಾಗವಹಿಸಲಿದ್ದಾರೆ ಎಂದು ಕ್ರಿಯಾ ಮಾಧ್ಯಮ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮವು ಆನ್‌ಲೈನ್‌ನಲ್ಲಿ ನಡೆಯಲಿದ್ದು ಈ ಕೆಳಗಿನ ಜೂಮ್ ಕೊಂಡಿಯನ್ನು ಬಳಸಿ ಭಾಗವಹಿಸಬಹುದಾಗಿದೆ. ಕಾರ್ಯಕ್ರಮದ ನೇರ ಪ್ರಸಾರವು ಜನಶಕ್ತಿ ಮೀಡಿಯಾ ಫೆಸ್ಬುಕ್ ನಲ್ಲಿ ಪ್ರಸಾರವಾಗಲಿದೆ.

“ಪುಸ್ತಕ ಪ್ರೀತಿ ತಿಂಗಳ ಮಾತುಕತೆ”
ಕದನ ಕಣ & ಹೊನ್ನಾರು ಒಕ್ಕಲು ಪುಸ್ತಕ ಬಿಡುಗಡೆ
Time: Feb 20, 2021 05:00 PM 

ಈ ಲಿಂಕ್ ಕ್ಲಿಕ್ ಮಾಡಿ : “ಪುಸ್ತಕ ಪ್ರೀತಿ ತಿಂಗಳ ಮಾತುಕತೆ” ಕದನ ಕಣ & ಹೊನ್ನಾರು ಒಕ್ಕಲು ಪುಸ್ತಕ ಬಿಡುಗಡೆ

Meeting ID: 876 7557 0684
Passcode: 655960


ಇದನ್ನೂ ಓದಿ: ‘2014 ರಲ್ಲಿ ನಿಮ್ಮನ್ನು ನಾನೂ ನಂಬಿದ್ದೆ, ಆದರೆ…!’ – ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...