Homeಕರ್ನಾಟಕತುಮಕೂರು: ಮಾರ್ಚ್ 7ಕ್ಕೆ ಕೆ.ಬಿ.ಸಿದ್ದಯ್ಯ ಪರಿಕಲ್ಪನೆಯ ದರೈಸ್ತ್ರೀ ಪ್ರಶಸ್ತಿ ಪ್ರದಾನ

ತುಮಕೂರು: ಮಾರ್ಚ್ 7ಕ್ಕೆ ಕೆ.ಬಿ.ಸಿದ್ದಯ್ಯ ಪರಿಕಲ್ಪನೆಯ ದರೈಸ್ತ್ರೀ ಪ್ರಶಸ್ತಿ ಪ್ರದಾನ

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ ದಾಸ್, ಹೋರಾಟಗಾರ್ತಿ ಕೆ. ನೀಲಾರನ್ನು ‘ದರೈಸ್ತ್ರೀ ಪ್ರಶಸ್ತಿಗೆ, ಕವಿ ವಿಲ್ಸನ್ ಕಟೀಲ್‌ರನ್ನು ‘ಕೆ.ಬಿ ಕಾವ್ಯ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

- Advertisement -
- Advertisement -

ಹೋರಾಟಗಾರ, ಸಾಂಸ್ಕೃತಿಕ ಚಿಂತಕ, ಕವಿ ಕೆ.ಬಿ.ಸಿದ್ದಯ್ಯ ಅವರ ದರೈಸ್ತ್ರೀ (ದಲಿತ, ರೈತ, ಸ್ತ್ರೀ) ಪರಿಕಲ್ಪನೆ ಮತ್ತು ಸಾಂಸ್ಕೃತಿಕ ಆಶಯವನ್ನು ಮುಂದುವರೆಸಿಕೊಂಡು ಹೋಗಲು ತುಮಕೂರಿನಲ್ಲಿ ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಆರಂಭವಾಗಿದ್ದು, ಇಬ್ಬರಿಗೆ ದರೈಸ್ತ್ರೀ ಪ್ರಶಸ್ತಿ ಮತ್ತೊಬ್ಬರಿಗೆ ಕೆ.ಬಿ.ಕಾವ್ಯ ಪ್ರಶಸ್ತಿ ನೀಡಲಾಗುತ್ತಿದೆ.

ಮಾರ್ಚ್ 7 ರ ಭಾನುವಾರ ತುಮಕೂರಿನ ಎಂ.ಜಿ.ರಸ್ತೆಯಲ್ಲಿರುವ ಬಾಲಭವನಲ್ಲಿ ಮಧ್ಯಾಹ್ನ 3.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಟ್ರಸ್ಟ್ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.

ದಲಿತ ಚಳುವಳಿ ಮತ್ತು ರೈತ ಚಳುವಳಿಯನ್ನು ತಾತ್ವಿಕವಾಗಿ, ಸಂಘಟನಾತ್ಮಕವಾಗಿ, ಭಾವನಾತ್ಮಕವಾಗಿ ಬೆಸೆಯುವ ತಾತ್ವಿಕ ಚಿಂತನೆಯ ಭಾಗವಾಗಿ ದೇಶದಲ್ಲೇ ಮೊದಲ ಬಾರಿಗೆ ದಲಿತ, ರೈತ, ಸ್ತ್ರೀ ಹೋರಾಟಗಾರರ ಹೆಸರಿನಲ್ಲಿ ಸಾಂಸ್ಕೃತಿಕ ಪ್ರಶಸ್ತಿ ನೀಡುವುದನ್ನು 2005ರಲ್ಲಿ ಕೆ.ಬಿ.ಸಿದ್ದಯ್ಯ ಅವರು ಆರಂಭಿಸಿದ್ದರು.

ಇದನ್ನೂ ಓದಿ: ಪಂಚ ರಾಜ್ಯ ಚುನಾವಣೆ ಕುರಿತು ಎಬಿಪಿ-ಸಿ- ಓಟರ್ ಸಮೀಕ್ಷೆ ಹೇಳಿದ್ದೇನು…ಇಲ್ಲಿದೆ ವಿವರ

ಕೆ.ಬಿ.ಸಿದ್ದಯ್ಯ ಅವರ ಈ ಪರಿಕಲ್ಪನೆಯನ್ನು ಮುಂದುವರೆಸಿಕೊಂಡು ಹೋಗುವ ಉದ್ದೇಶವನ್ನು ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಹೊಂದಿದ್ದು, ಈ ಬಾರಿ ವಿವಿಧ ವಿಭಾಗಗಳ ಮೂವರು ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಬಾರಿ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ ದಾಸ್, ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ ಅವರನ್ನು ‘ದರೈಸ್ತ್ರೀ’ (ದಲಿತ, ರೈತ, ಸ್ತ್ರೀ) ಪ್ರಶಸ್ತಿಗೆ ಹಾಗೂ ಕವಿ ವಿಲ್ಸನ್ ಕಟೀಲ್ ಅವರನ್ನು ‘ಕೆ.ಬಿ ಕಾವ್ಯ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೂರು ಪ್ರಶಸ್ತಿಗಳು ‌‌ತಲಾ 10 ಸಾವಿರ ರೂ. ನಗದು ಹಾಗೂ ಫಲಕಗಳನ್ನು ಒಳಗೊಂಡಿದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಮಾರ್ಚ್‌ 7ರಂದು ತುಮಕೂರು ನಗರದ ಬಾಲಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ಕುರಿ, ಮೇಕೆಗಳು ಸತ್ತರೆ ಪರಿಹಾರ ನೀಡುವ ‘ಅನುಗ್ರಹ’ ಯೋಜನೆ ಮರುಜಾರಿಗೊಳಿಸಿ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಅವರ ಪ್ರಶ್ನಾತೀತ ಪ್ರಾಮಾಣಿಕತೆಯೇ ಕಾರಣ: ಸೋನಿಯಾ ಗಾಂಧಿ

2004ರಲ್ಲಿ ದೇಶದ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರನ್ನು ಆಯ್ಕೆ ಮಾಡಲು ಅವರ ‘ಪ್ರಶ್ನಾತೀತ ಪ್ರಾಮಾಣಿಕತೆ’ ಮತ್ತು ಆಡಳಿತದ ಕುರಿತಾದ ಆಳವಾದ ತಿಳುವಳಿಕೆಯೇ ಪ್ರಮುಖ ಕಾರಣವಾಗಿತ್ತು ಎಂದು ಅಂದಿನ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ...

ಕರ್ನಾಟಕದ ಎಥನಾಲ್ ವಿವಾದದ ಬೆನ್ನಲ್ಲೇ ಎಚ್ಚೆತ್ತ ಕೇರಳ: 4 ಜಿಲ್ಲೆಗಳ 9 ಬಂಕ್‌ಗಳಿಂದ ಸ್ಯಾಂಪಲ್ ಸಂಗ್ರಹ, ಲ್ಯಾಬ್‌ಗೆ ರವಾನೆ!

ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ನಿಗದಿತ ಶೇ. 20ರ ಮಿತಿಗಿಂತಲೂ ಅಧಿಕ (ಶೇ. 31.2 ರಷ್ಟು) ಎಥನಾಲ್ ಬೆರೆಸಲಾಗುತ್ತಿದೆ ಎನ್ನುವ ಸಚಿವ ರಿಜ್ವಾನ್ ಆರ್ಷದ್ ಅವರ ಆರೋಪಗಳ ಬೆನ್ನಲ್ಲೇ, ನೆರೆಯ ಕೇರಳ ಸರ್ಕಾರವೂ ಪೆಟ್ರೋಲ್...

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವಿಡಿಯೋ ವಿವಾದ: ಸಿಸಿಬಿ ವಿಚಾರಣೆಗೆ ಹಾಜರಾದ ಉಚ್ಚಾಟಿತ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದೆ ಎನ್ನಲಾದ ಸ್ಟಿಂಗ್ ವಿಡಿಯೋ ವಿವಾದದ ತನಿಖೆ ಚುರುಕುಗೊಂಡಿದ್ದು, ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿರುವ ನಾಯಕಿ ಕೃಪಾ ಆಳ್ವ ಅವರನ್ನು ಸೋಮವಾರ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸೈಬರ್ ಅಪರಾಧ...

ಮೂರನೇ ಪತ್ನಿಗೂ ವಿಚ್ಛೇದನ: ರಷ್ಯಾದ ಅನ್ನಾ ಲೆಜ್ನೆವಾ ಜೊತೆಗಿನ 12 ವರ್ಷಗಳ ದಾಂಪತ್ಯ ಅಂತ್ಯಗೊಳಿಸಿದ ಪವನ್ ಕಲ್ಯಾಣ್

ಹೈದರಾಬಾದ್: ತೆಲುಗು ಚಿತ್ರರಂಗದ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಮೂರನೇ ದಾಂಪತ್ಯವೂ ಮುರಿದುಬಿದ್ದಿದೆ. ರಷ್ಯಾದ ಮಾಡೆಲ್ ಮತ್ತು ನಟಿ ಅನ್ನಾ ಲೆಜ್ನೆವಾ ಅವರೊಂದಿಗಿನ 12...

ಬ್ರಿಟಿಷ್ ಲೇಖಕ ಎಂ. ಜಾನ್ ಹ್ಯಾರಿಸನ್‌ಗೆ 2026ರ ಬೂಕರ್ ಪ್ರಶಸ್ತಿ : ‘ದಿ ಎಂಡ್ ಆಫ್ ಎವೆರಿಥಿಂಗ್’ ವೈಜ್ಞಾನಿಕ ಕಾದಂಬರಿಗೆ ಜಾಗತಿಕ ಮನ್ನಣೆ

ಬ್ರಿಟಿಷ್ ಮೂಲದ ಪ್ರಸಿದ್ಧ ಲೇಖಕ ಎಂ. ಜಾನ್ ಹ್ಯಾರಿಸನ್ ಅವರು ತಮ್ಮ ವೈಜ್ಞಾನಿಕ ಹಾಗೂ ಡಿಸ್ಟೋಪಿಯನ್ ವಿಡಂಬನಾತ್ಮಕ ಕಾದಂಬರಿ 'ದಿ ಎಂಡ್ ಆಫ್ ಎವೆರಿಥಿಂಗ್' ಕೃತಿಗೆ 2026ರ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.  ಲಂಡನ್‌ನ...

ಅತ್ಯಾಚಾರದ ಬೆದರಿಕೆ, ಆಹಾರ ನಿರಾಕರಣೆ: ಇಸ್ರೇಲ್ ಬಂಧನದಲ್ಲಿರುವ 380 ಮಕ್ಕಳು ಸೇರಿದಂತೆ 9,200 ಪ್ಯಾಲೆಸ್ಟೀನಿಯನ್ನರ ಜೀವಕ್ಕೆ ಅಪಾಯ: ವರದಿ

ಗಾಜಾ ಮೇಲಿನ ಇಸ್ರೇಲ್‌ನ ನರಮೇಧದ ದಾಳಿ ಮುಂದುವರಿದಿರುವ ಬೆನ್ನಲ್ಲೇ, ಪ್ಯಾಲೆಸ್ಟೀನಿಯನ್ನರ ಮೇಲಿನ ದೌರ್ಜನ್ಯಗಳು ಜೈಲುಗಳ ಒಳಗೂ ಭೀಕರ ಸ್ವರೂಪ ಪಡೆದುಕೊಂಡಿವೆ. ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯದ ಬೆದರಿಕೆ, ಆಹಾರದ ಕೊರತೆ, ವೈದ್ಯಕೀಯ ಚಿಕಿತ್ಸೆಯ ನಿರಾಕರಣೆ,...

ದಾಖಲೆಯ 89 ದಿನಗಳು ಕಳೆದರೂ ಅಧಿಕೃತವಾಗಿ ಮುಕ್ತಾಯಗೊಳ್ಳದ ಸಂಸತ್ತಿನ ಮುಂಗಾರು ಅಧಿವೇಶನ!

ಸಂಸತ್ತಿನ ಮುಂಗಾರು ಅಧಿವೇಶನವು ಇತಿಹಾಸದಲ್ಲೇ ಅತ್ಯಂತ ಸುದೀರ್ಘವಾದ 'ಸೈನ್ ಡೈ' (ನಿರ್ದಿಷ್ಟ ದಿನಾಂಕ ನಿಗದಿಪಡಿಸದೆ ಮುಂದೂಡುವುದು) ಮುಂದೂಡಿಕೆಯನ್ನು ದಾಖಲಿಸಿದೆ. ಬರೋಬ್ಬರಿ 89 ದಿನಗಳು ಕಳೆದರೂ ಅಧಿವೇಶನವನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸುವ 'ಪ್ರೊರೋಗ್' (ಅಧಿವೇಶನದ ಮುಕ್ತಾಯ...

ಗೋಹತ್ಯೆ ಶಂಕೆಯ ಮೇಲಷ್ಟೇ ವಾಹನ ಜಪ್ತಿ ಮಾಡುವಂತಿಲ್ಲ: ಸಂತ್ರಸ್ತನಿಗೆ 15 ಲಕ್ಷ ರೂ. ಪರಿಹಾರ ನೀಡಲು ಅಲಹಾಬಾದ್ ಹೈಕೋರ್ಟ್ ಆದೇಶ

ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ಗೋಹತ್ಯೆಯ ಶಂಕೆಯ ಆಧಾರದ ಮೇಲೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸಂಪೂರ್ಣ ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿಯಮಬಾಹಿರವಾಗಿ ವಾಹನ ಜಪ್ತಿ ಮಾಡಿ ಸಂತ್ರಸ್ತನಿಗೆ ನಷ್ಟ...

ಕ್ಯಾಬ್ ಚಾಲಕನಿಂದ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ: ಎಲ್ಲ ಮೃತದೇಹಗಳೂ ಪತ್ತೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವ ಆರೋಪದ ಪ್ರಕರಣದಲ್ಲಿ, ನವೆಂಬರ್ 9ರ ಸೋಮವಾರ ಕೊನೆಯ ಎರಡೂ ಮೃತದೇಹಗಳನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. ಶಿರಾಡಿ ಘಾಟ್‌ನ ಅರಣ್ಯ...

ಪೆಟ್ರೋಲ್‌ನಲ್ಲಿ ನಿಗದಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಆರೋಪಕ್ಕೆ ಕರ್ನಾಟಕ ಸರ್ಕಾರ ಬದ್ಧ: ಸಚಿವ ರಿಜ್ವಾನ್ ಅರ್ಷದ್

ಪೆಟ್ರೋಲ್‌ನಲ್ಲಿ ನಿಗದಿಪಡಿಸಿರುವ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ತನ್ನ ವರದಿಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ...