Homeಮುಖಪುಟಅಜೇಯ ಎನ್ನುವ ಇಮೇಜ್ ಶಿಥಿಲವಾಗುತ್ತಿದೆ; ಸೇಡಿನ ಬದಲು ಬೆಂಕಿ ಆರಿಸುವ ಕೆಲಸ ಆಗಬೇಕಿದೆ ಈಗ..

ಅಜೇಯ ಎನ್ನುವ ಇಮೇಜ್ ಶಿಥಿಲವಾಗುತ್ತಿದೆ; ಸೇಡಿನ ಬದಲು ಬೆಂಕಿ ಆರಿಸುವ ಕೆಲಸ ಆಗಬೇಕಿದೆ ಈಗ..

- Advertisement -
- Advertisement -

ನರೇಂದ್ರ ಮೋದಿಯವರ ಆಡಳಿತವನ್ನು ಎರಡು ವರ್ಷ national public broadcasterನ ಮುಖ್ಯಸ್ಥನಾಗಿ ಹತ್ತಿರದಿಂದ ನೋಡುವ ಅವಕಾಶ ನನಗೆ ಬಂದಿತ್ತು.  ಇನ್ನು ಸಾಧ್ಯವೇ ಇಲ್ಲ ಅನ್ನಿಸಿ ರಾಜೀನಾಮೆ ಕೊಟ್ಟೆ. ಇಡೀ ಆಡಳಿತ ಯಂತ್ರವೇ ಶಿಥಿಲವಾಗಿ ಕುಸಿದು ಈಗ ಕಾಣುತ್ತಿರುವಂಥಾ ವಿಪತ್ತಿಗೆ ಆಹ್ವಾನ ನೀಡುವ ಪರಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ.

ಪರಿಕಲ್ಪನೆಯ ಮಟ್ಟದಲ್ಲಿ ವ್ಯಕ್ತಿಗತ ನಿರ್ವಹಣೆಯ ಮೊಹರುಳ್ಳ ಅಮೆರಿಕ ಅಧ್ಯಕ್ಷೀಯ ಮಾದರಿಯನ್ನು ಬ್ರಿಟಿಶ್‌ ಮಾದರಿ ಇರುವ ನಮ್ಮಲ್ಲಿ  ಹೇರಲಾಯಿತು. ಅಗಾಧ ವೈವಿಧ್ಯತೆಯುಳ್ಳ ಈ ದೇಶವನ್ನು ಫೆಡರಲ್‌ ಸಮತೋಲನದ ಮೂಲಕವಷ್ಟೇ ನಿರ್ವಹಿಸಬಹುದು ಎಂಬುದನ್ನು ಅರಿಯಲು ಬಹಳ ಐಕ್ಯೂ ಬೇಡ. ಅದು ಬಿಟ್ಟು ಏಕವ್ಯಕ್ತಿ ಶೈಲಿಯನ್ನು ಹೇರಿದರೆ ಅಧಿಕಾರ-ಜವಾಬ್ದಾರಿಯ ಉತ್ತರದಾಯಿತ್ವದ ಮಾದರಿ ಕುಸಿದು ಬೀಳುತ್ತದೆ.

ಪೇಲವ ಸರಕಾರ ಕಂಡು ಬೇಜಾರಾಗಿದ್ದ ಜನರು  ನಿರ್ಧಾರ ತೆಗೆದುಕೊಳ್ಳುವ ನಾಯಕತ್ವ ಕಂಡು ಉತ್ಸಾಹ ಪಟ್ಟಿದ್ದಾದ ಬಳಿಕ ಇನ್ನೊಂದು ವಾಸ್ತವ ತಲೆ ಎತ್ತಿತು. ಮೋದಿ ತಾವು ಸಂಶಯಿಸುವ ಎಲ್ಲಾ ಅಧಿಕಾರವನ್ನೂ ಕೇಂದ್ರೀಕರಿಸುವ ಮತ್ತು ಬೇಷರತ್ತು ವಿಧೇಯತೆಯನ್ನು ಬೇಡುವ ಪ್ರವೃತ್ತಿಯನ್ನು  ತ್ಯಜಿಸಿಯಾರು ಎಂಬ ಆಶಾ ಭಾವನೆಯಲ್ಲಿ ಹಿರಿಯ ಅಧಿಕಾರಿಗಳಿದ್ದರು. ಅಂತರ್‌ ಸಚಿವಾಲಯಗಳ ಕ್ಯಾತೆ ಜಗಳಕ್ಕೆ ಅವರು ಅಂತ್ಯ ಹಾಡಿದರೂ ಮೂಲ ಪ್ರವೃತ್ತಿಗಳೇನೂ ಬದಲಾಗಲಿಲ್ಲ. ಯಾವುದೇ ಮಾಹಿತಿಯನ್ನು ಸಾದರಪಡಿಸಲು ಅವರು ಕಾರ್ಯದರ್ಶಿಗಳನ್ನು ಕರೆಸುವ ತೀವ್ರತೆ ತೀರಾ ವಿಚಿತ್ರವಾಗಿತ್ತು. ಯಾವ ಪ್ರಧಾನಿಯೂ ಈ ರೀತಿಯ ಮೈಕ್ರೋ ಮ್ಯಾನೇಜ್‌ ಮೆಂಟ್‌ ಮಾಡಿರಲಿಲ್ಲ.

ತನ್ನ ಸಚಿವರನ್ನು ನಿರ್ಲಕ್ಷಿಸಿ ಎಲ್ಲವನ್ನೂ ನಿಯಂತ್ರಿಸುವ ಅವರ ಚಟ ಜಾಹೀರಾಗಿತ್ತು. ಸದಾ ಕೆಕ್ಕರಗಣ್ಣಿಂದ ತನ್ನ ಕಾರ್ಯದರ್ಶಿಗಳನ್ನು ನೋಡುವ ಪರಿಪಾಠದಿಂದಾಗಿ ಅಧಿಕಾರಿಗಳು ಭೀತರಾಗತೊಡಗಿದರು. ಇದರೊಂದಿಗೇ ತನ್ನ ಪ್ರಿಯ ಅಧಿಕಾರಿಗಳ ಮೂಲಕ ಆಡಳಿತ ನಿರ್ವಹಿಸತೊಡಗಿದರು. ಇದು ಇತರ ದಕ್ಷ ಪ್ರತಿಭಾವಂತ  ಅಧಿಕಾರಿಗಳ ಮನೋಬಲವನ್ನೇ ಕುಗ್ಗಿಸಿತು. ಇಂಥಾ ಅಧಿಕಾರಿಗಳು ತೆವಳಿ ಹತ್ತಿರವಾಗುವ ಕೆಲಸ ಮಾಡಲಿಲ್ಲ. ಮಿಂಚಿನ ವರ್ಗಾವಣೆಗಳು ನಿತ್ಯದ ಸಂಗತಿಗಳಾದವು. ಪ್ರಧಾನ ಮಂತ್ರಿಗಳ ಕಾರ್ಯಾಲಯವು ಎಲ್ಲಾ ನೇಮಕಾತಿಗಳ ನಿಯಂತ್ರಣ ಹೊಂದಿತ್ತು. ಆರೆಸ್ಸೆಸ್ಸಿನಿಂದ ಮಾಹಿತಿ ಪಡೆದರೂ ರಾಷ್ಟ್ರೀಯ ಭದ್ರತಾ ಸಂಸ್ಥೆಯ  ಮುಖ್ಯಸ್ಥರೇ ಹೆಚ್ಚು ಪ್ರಭಾವಿಯಾದರು. ಎಷ್ಟೋ ಸಂಸ್ಥೆಗಳು  ವರ್ಷಗಟ್ಟಲೆ ನೇಮಕಾತಿ ಇಲ್ಲದೇ  ಒದ್ದಾಡಿದವು. ಅಧಿಕಾರಿಗಳು, ಉದ್ಯಮಪತಿಗಳು ನಕಲಿ ವಿಧೇಯತೆ ಕಲಿತರು. ಸಂಘಿಗಳಿಗೆ ಹತ್ತಿರವಾಗುವುದನ್ನೂ ಕಲಿತರು.

ಆದರೆ ಯಾವ ಸರಕಾರಕ್ಕೂ ತನ್ನ ಆಯ್ಕೆಯ ಬೆರಳೆಣಿಕೆಯ ಮಂದಿಯ ಮೂಲಕ ಆಡಳಿತ ನಡೆಸುವುದು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳು  ಭಯಭೀತರಾಗಿ ತಮ್ಮ ಜೀವಮಾನದ ಅನುಭವಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದರು. ದಕ್ಷ ಸಚಿವರನ್ನು ತಿರಸ್ಕಾರದಿಂದ ನೋಡುವ ಪರಿಪಾಠ ಆರಂಭವಾಯಿತು. ಪರಿಣಾಮವಾಗಿ  ಭಾರತದ ಮಟ್ಟ ಅಂತಾರಾಷ್ಟ್ರೀಯವಾಗಿ ಎಲ್ಲಾ ಮಾನದಂಡಗಳಲ್ಲೂ ಕುಸಿಯಲಾರಂಭಿಸಿತು. ಅಂಕಿ-ಸಂಖ್ಯೆಗಳನ್ನು ತಿರುಚುವುದು ಶುರುವಾಯಿತು. ಅಧಿಕಾರಿಗಳಿಗೆ ತಿರುಳಿನ ಬದಲು ಪ್ರದರ್ಶನವೇ ಮುಖ್ಯ ಎಂದು ಗೊತ್ತಾಯಿತು!

ಅಸ್ತಿತ್ವದಲ್ಲಿದ್ದ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳನ್ನು  ಪ್ರಧಾನ ಮಂತ್ರಿ ಯೋಜನೆ ಎಂದು ಪುನರ್‍ನಾಮಕರಣಗೊಳಿಸಲಾಯಿತು. ದುಬಾರಿ ಜಾಹೀರಾತು ಮಂದಿ ಗಮನ ಸೆಳೆಯುವ ಸಂಕ್ಷಿಪ್ತಾಕ್ಷರಗಳ ಹೆಸರು ನೀಡಿದರು. ಪ್ರಧಾನಿಯೂ ಈ ರೀತಿಯ ಅಕ್ಷರಗಳ ಜೊತೆ ಆಟವಾಡುವುದನ್ನು ಇಷ್ಟಪಟ್ಟರು. ಕೆಲಸವಾಗಲಿಲ್ಲವೆಂದಲ್ಲ. ಆದರೆ ಕಹಿಸತ್ಯವನ್ನು ವರದಿಮಾಡುವುದು ಆತ್ಮಹತ್ಯಾಕಾರಿಯಾಗಿತ್ತು. ನೋಟು ಅಮಾನ್ಯದಂಥಾ ನಿರ್ಧಾರಗಳನ್ನು ಗುಪ್ತವಾಗಿ ನಿರ್ಧರಿಸಿದ್ದಾಯಿತು. ಇದಕ್ಕೆ ಯಾರೂ ತಯಾರಿರಲಿಲ್ಲ. ಯಾವ ಚರ್ಚೆಯೂ ನಡೆದಿರಲಿಲ್ಲ. ನಾಯಕನೋ ನಾಟಕೀಯ ಘೋಷಣೆಗಳ ಮೂಲಕ ದೇಶವನ್ನು ಸ್ತಂಭೀಭೂತಗೊಳಿಸುವ ಖಯಾಲಿಗೆ ಬಿದ್ದಿದ್ದು ಸ್ಪಷ್ಟವಿತ್ತು.

ಆದ್ದರಿಂದಲೇ ಕಳೆದ ವರ್ಷ ಕೋವಿಡ್ ಸ್ಫೋಟವಾದಾಗ ಇವೆಂಟ್‌ ಮ್ಯಾನೆಜ್‌ ಮೆಂಟ್‌ ಮತ್ತು ಇಮೇಜ್‌ ವರ್ಧನೆ ಮೊದಲ ಆದ್ಯತೆಯಾಗಿತ್ತು. ತಜ್ಞರ ಸಲಹೆ, ಉಳಿದವರ ಅನುಭವ ಪಡೆಯುವುದು, ಪ್ಲಾನಿಂಗ್‌, ಅಗತ್ಯ ವಸ್ತುಗಳ ವ್ಯವಸ್ಥೆಗಳೆಲ್ಲಾ ಅಮುಖ್ಯವೆನಿಸಿತು. ವಿಪರೀತ ಅಧಿಕಾರ ಕೇಂದ್ರೀಕರಣದಿಂದಾಗಿ ಮಾಸ್ಕ್‌ , ಪಿಪಿಇ ಕಿಟ್‌ ಉತ್ಪಾದನೆಯೂ ಪ್ರಧಾನಿಯೇ ನಿರ್ಧರಿಸುವಂತಾಯಿತು. ಕೋವಿಡ್‌ ಪ್ರಕರಣಗಳು ತೀರಾ ಕಡಿಮೆ ಇದ್ದಾಗ  ನಾಟಕೀಯವಾಗಿ ದಿಢೀರನೆ ಲಾಕ್‌ ಡೌನ್ ಹೇರಿದ್ದು ಅನಗತ್ಯವಾಗಿತ್ತು. ಆದರೆ ಅದು ಅಧಿಕಾರದ  ಮಟ್ಟವನ್ನು ತೋರಿಸಿಕೊಟ್ಟಿತ್ತು.

ಆಗಲೇ ಬಾಗಿದ್ದ ದೇಶದ ಆರ್ಥಿಕತೆಯ ಬೆನ್ನೆಲುಬನ್ನೇ ಇದು ಮುರಿಯಿತು. ಗೃಹ ಮಂತ್ರಿ ಮೋದಿಯ ಅತ್ಯಂತ ನಂಬಿಕಸ್ಥ ಬಂಟ ಆಗಿದ್ದರೂ ಅವರ ಸಾಮರ್ಥ್ಯಕ್ಕೆ ಮೀರಿದ ನಿರ್ಧಾರಗಳನ್ನೂ ಗೃಹ ಸಚಿವಾಲಯವೇ ತೆಗೆದುಕೊಂಡಿತು. ಆರೋಗ್ಯ ಸಚಿವಾಲಯ ಅಲ್ಲ! ಯಾವುದೇ ಸಮಾಲೋಚನೆ ಇಲ್ಲದೇ ರೆಗ್ಯುಲರ್‌ ಆಗಿ ಫರ್ಮಾನುಗಳನ್ನು ಹೊರಡಿಸಲಾಯಿತು. ಪರಿಹಾರ ಕಾರ್ಯ ಎಂಬುದು ಭಾರತದ ಆಡಳಿತದ ಅವಿಭಾಜ್ಯ ಅಂಗ.  ಆದರೆ ಈ  ಇಬ್ಬರು ನಾಯಕರು ಸ್ಮಶಾನ ಮೌನ ವಹಿಸಿದ ಕಾರಣ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಯಾವ ಪರಿಹಾರವೂ ಸರಿಯಾಗಿ ದೊರಕಲಿಲ್ಲ.

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಕೊರೊನಾ ಔಷಧಿಯ ತುರ್ತು ಬಳಕೆಗೆ ಅನುಮೋದಿಸಿದ ಡಿಸಿಜಿಐ! | NaanuGauri

ವಿವೇಕವಿರುವ ಎಲ್ಲಾ ದೇಶಗಳೂ ಲಸಿಕೆ ಮತ್ತು ಆಮ್ಲಜನಕದ ಅಗತ್ಯವನ್ನು ಲೆಕ್ಕ ಹಾಕಿ ಅದರ ಉತ್ಪಾದನೆ, ಆಮದು, ಹಂಚಿಕೆ  ಕುರಿತ ಎಲ್ಲವನ್ನೂ ಹಲವಾರು ತಿಂಗಳ ಮೊದಲೇ ಯೋಜನೆ ಸಿದ್ಧಪಡಿಸಿಕೊಂಡಿದ್ದವು.  ಆದರೆ ನಮ್ಮ ಸರಕಾರ ಬೆಲೆ ನಿಗದಿ, ಪೂರೈಕೆ, ಅಂತಾರಾಷ್ಟ್ರೀಯ  ಜವಾಬ್ದಾರಿ ಇತ್ಯಾದಿ  ಬಗ್ಗೆ ಈಗ್ಗೆ ಒಂದೆರಡು ತಿಂಗಳ ಹಿಂದೆ ಎಚ್ಚರವಾಗಿದ್ದು. ಬೇಡಿಕೆ-ಪೂರೈಕೆಯಂಥಾ ಸರಳ ಲೆಕ್ಕಾಚಾರವೂ ಅರ್ಥವಾಗದ ಸ್ಥಿತಿಯಲ್ಲಿ ಆಡಳಿತವಿತ್ತು.  ತಜ್ಞರ ಸಲಹೆಗಳಿಗೆ ಕಡಿಮೆ ಆದ್ಯತೆ ನೀಡಲಾಯಿತು. ಭಾರತ ಕೋವಿಡ್‌ ಯುದ್ಧ ಗೆದ್ದಿದೆ, ಇದೀಗ ಭಾರತ  ಜಗತ್ತಿನ ಫಾರ್ಮಸಿಯಾಗಿದೆ ಎಂದು ಬೀಗಿದರು.

ಅಮೂಲ್ಯ ಲಸಿಕೆ ಮತ್ತು ಆಕ್ಸಿಜನ್‍ಅನ್ನು ರಫ್ತು ಮಾಡಲಾಯಿತು. ಕೊನೆಗೆ ಕೋಟಿಗಟ್ಟಲೆ ಮಂದಿ ಭಾಗವಹಿಸಲು ಬಿಟ್ಟ ಕುಂಭ ಮೇಳವೇ ದೇವರ ಆಗ್ರಹಕ್ಕೆ ಕಾರಣವಾಯಿತು. ಎರಡನೇ ಅಲೆ ನಮ್ಮನ್ನು ಅಪ್ಪಳಿಸಲು ಕಾಯುತ್ತಿದ್ದರೆ ಮೋದಿ ಮತ್ತು ಶಾ ಇದಕ್ಕೆ ಗಂಭೀರವಾಗಿ ಪ್ರತಿಕ್ರಿಯಿಸಲು ಸಾಧ್ಯವೇ ಇಲ್ಲದಂತೆ ಚುನಾವಣಾ ರ್ಯಾಲಿಗಳಲ್ಲಿ ಬಿಜಿಯಾಗಿದ್ದರು. ಕಪಿಮುಷ್ಠಿಯ ಕೇಂದ್ರೀಕೃತ ಸರಕಾರ ಕುಸಿಯಿತು. ಜವಾಬ್ದಾರಿ ಹೊರಬೇಕಾದವರು ತಲೆ ತಪ್ಪಿಸಿಕೊಂಡರು. ಅಭೂತಪೂರ್ವ ಅರಾಜಕತೆ ತಾಂಡವವಾಡುತ್ತಿದೆ.  ಸಾವು ಮತ್ತು ದುರಂತದ ಚಿತ್ರಗಳನ್ನು ಪ್ರಕಟಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ಮೋದಿಯನ್ನು ಹುರಿದು ಮುಕ್ಕುತ್ತಿವೆ.

ಅಜೇಯ ಎನ್ನುವ ಇಮೇಜ್‌ ಶಿಥಿಲವಾಗುತ್ತಿದೆ. ಆದರೆ ಈಗ ಸೇಡಿನ ಬದಲು ಬೆಂಕಿ ಆರಿಸುವ ಕೆಲಸ ಆಗಬೇಕಿದೆ.

  • ಜವಹರ್‌ ಸರಕಾರ್

‌ ಸಂಸ್ಕೃತಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಮತ್ತು ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ

(ಕನ್ನಡಕ್ಕೆ): ಕೆ ಪಿ ಸುರೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...