“ವಿಶ್ವ ನಾಯಕ ಎನಿಸಿಕೊಳ್ಳಲು ತನ್ನ ಜನರನ್ನು ಲಸಿಕೆ ನೀಡದೆ ಬಲಿ ಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಭಾರತದ ಇತಿಹಾಸದಲ್ಲಿ ಕರಾಳ ವ್ಯಕ್ತಿಯಾಗಿ ದಾಖಲಾಗುತ್ತಾರೆ! ಜನತೆ ಕೇಳುತ್ತಿದ್ದಾರೆ, ಎಲ್ಲಿ ನಮ್ಮ ಲಸಿಕೆ! #ಲಸಿಕೆಯಲ್ಲೂಮೋಸ #DoubleEngineMosa”.. ಇದು ಮೋದಿ ಸರ್ಕಾರದ ವಿರುದ್ಧ ಪಲ್ಲವಿ ಚಿದಂಬರ್ ಎಂಬುವವರು ಟ್ವಿಟರ್‌ನಲ್ಲಿ ದಾಖಲಿಸಿದ ಆಕ್ರೋಶದ ನುಡಿ..
ಖಾಸಗಿ ಆಸ್ಪತ್ರೆಗಳ ವ್ಯಾಕ್ಸಿನ್ ಮಾರಾಟ ದಂಧೆಗೆ ಸಂಸದ ತೇಜಸ್ವಿ ಸೂರ್ಯನೇ ಬ್ರಾಂಡ್ ಅಂಬಾಸಿಡರ್. ಶಾಸಕ ರವಿ ಸುಬ್ರಹ್ಮಣ್ಯ ಕಮೀಷನ್ ಏಜೆಂಟ್. ಮಾವ ಅಳಿಯನ ಕಳ್ಳಾಟದಲ್ಲಿ ಬಿಜೆಪಿ ಸರ್ಕಾರಕ್ಕೆ ಪಾಲೆಷ್ಟು? ಲಸಿಕೆ ಹಂಚಿಕೆಯಲ್ಲಿ ಕಮೀಷನ್ ದಂಧೆ ನಡೆದಿಲ್ಲ ಎಂಬುದಾದರೆ ರಾಜ್ಯ ಸರ್ಕಾರ ಈ ಕೂಡಲೇ ಈ ಹಗರಣದ ಬಗ್ಗೆ ಕೇಸು ದಾಖಲಿಸಿ, ಸೂಕ್ತ ತನಿಖೆಗೆ ಒಪ್ಪಿಸಬೇಕು. ಇಲ್ಲವಾದರೆ ಕಮೀಷನ್ ದಂಧೆಯಲ್ಲಿ ಸರ್ಕಾರದ್ದೂ ಪಾಲಿದೆ ಎಂದು ಒಪ್ಪಿಕೊಂಡಂತೆ ಎಂಬ ತೀಕ್ಷ್ಣ ಪ್ರತಿಕ್ರಿಯೆಗಳು ಕರ್ನಾಟಕ ರಕ್ಷಣಾ ವೇದಿಕೆ ಕರೆ ನೀಡಿದ್ದ #ಲಸಿಕೆಯಲ್ಲೂಮೋಸ ಟ್ವಿಟರ್ ಅಭಿಯಾನದಲ್ಲಿ ಕೇಳಿಬಂದಿವೆ.
ಆಕ್ಸಿಜನ್ ಕೊಡಲಿಲ್ಲ, ರೆಮ್ಡಿಸಿವಿರ್ ಕೊಡಲಿಲ್ಲ, ಆಂಫೋಟೆರಿಸಿನ್ ಕೊಡಲಿಲ್ಲ. ಈಗ ಲಸಿಕೆಯೂ ಇಲ್ಲ. ಇಂಥ ಜನವಿರೋಧಿ ಒಕ್ಕೂಟ ಸರ್ಕಾರ ಹಿಂದೆಂದೂ ಇರಲಿಲ್ಲ ಎಂದು ಆರೋಪಿಸಿ ಇಂದು ಟ್ವಿಟರ್ ಅಭಿಯಾನಕ್ಕೆ ಕರೆ ನೀಡಿತ್ತು. ಈ ಕರೆಗೆ ಸಾವಿರಾರು ಜನರು ಕೈಜೋಡಿಸಿದ್ದು ಕೇಂದ್ರ ಸರ್ಕಾರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. #ಲಸಿಕೆಯಲ್ಲೂಮೋಸ ಹ್ಯಾಷ್‌ಟ್ಯಾಗ್ ಬೆಂಗಳೂರಿನಲ್ಲಿ ನಂಬರ್ ಒನ್ ಸ್ಥಾನದಲ್ಲಿ ಟ್ರೆಂಡ್ ಆಗುವುದಲ್ಲದೇ ಕೇವಲ 45 ನಿಮಿಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳನ್ನು ದಾಖಲಿಸಿತ್ತು.
ಇಷ್ಟು ದಿನ ಕೇಂದ್ರದಿಂದ ಕರ್ನಾಟಕಕ್ಕೆ ನಿರಂತರವಾಗಿ ನಡೆಯುತ್ತಿರುವ ಎಲ್ಲಾ ಬಗೆಯ ತಾರತಮ್ಯಗಳನ್ನು ಪ್ರಶ್ನಿಸದೇ ಇದ್ದುದ್ದಕ್ಕೆ ಇಂದು ನಮಗೆ ಜೀವ ಉಳಿಸೋ ಲಸಿಕೆಯಲ್ಲೂ ಮೋಸ ನಡೆದಿದೆ. ಈಗಲೂ ಪ್ರಶ್ನಿಸದೆ ಇದ್ದರೆ ನಮ್ಮ ಅಳಿವು ಖಂಡಿತ ಎಂದು ರಾಮಚಂದ್ರ ಎಮ್ ಎಂಬುವವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೋವಿಡ್‍ನಿಂದ ಈಗಾಗಲೇ ಆರ್ಥಿಕತೆ ತತ್ತರಿಸಿದೆ. ಸರಿಯಾದ ಸಮಯಕ್ಕೆ ಲಸಿಕೆ ನೀಡದಿದ್ದರೆ ಲಾಕ್ಡೌನುಗಳು ಹೆಚ್ಚಾಗುತ್ತವೆ. ಹೆಚ್ಚಿದ ಆರ್ಥಿಕ ಹೊರೆ ನಾಗರಿಕರ ಮೇಲೆಯೇ.ಹಸಿವು-ನೋವುಗಳು ಹೆಚ್ಚುತ್ತವೆ. ಈಗಾಗಲೇ ಹೊಡೆತ ಬಿದ್ದಿರುವ ಆರ್ಥಿಕತೆಯಿಂದ ಮೇಲೇಳುವುದು ಸಾಹಸವೇ. ಒಕ್ಕೂಟ ಮತ್ತು ರಾಜ್ಯ ಸರಕಾರಗಳು ಬೇಗನೆ ಲಸಿಕೆ ಒದಗಿಸಬೇಕು ಎಂದು ಶ್ರುತಿ ಎಚ್.ಎಂ ಒತ್ತಾಯಿಸಿದ್ದಾರೆ.
ಹಾಸಿಗೆ ಬ್ಲಾಕಿಂಗ್ ದಂಧೆಯಲ್ಲಿ ಹೀರೋ ಆಗಲು ಹೊರಟಿದ್ದ ಸಂಸದ ತೇಜಸ್ವಿ ಸೂರ್ಯ ಈ ಕಡೆ ಲಸಿಕೆ ಹಂಚಿಕೆಯ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಉಚಿತವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಲಸಿಕೆ 900 ರೂಪಾಯಿಗೆ ಬಿಕರಿಯಾಗುತ್ತಿದೆ. ಸಂಸದ ತೇಜಸ್ವಿ ಸೂರ್ಯನಿಂದ #ಲಸಿಕೆಯಲ್ಲೂಮೋಸ ನಡೆದಿದೆ. ಎಂದು ಸರೋವರ್ ಬೆಂಕಿಕೆರೆ ಆರೋಪಿಸಿದ್ದಾರೆ.
#ಲಸಿಕೆಯಲ್ಲೂಮೋಸ pic.twitter.com/0XJcIMuhnQ
— Dinesh Kumar Dinoo (@dinoosacham) May 30, 2021
State wise vaccine doses available as of May 1st.
➡️Karnataka- 1.91 lakh
➡️UP- 15.61 lakh
➡️Bihar- 10.2 lakh
➡️MP- 8.57 lakh
➡️Gujarat- 3.47 lakh↘️Southern States- 7.3 lakh
(2,433 doses/ million)
↗️Rest of India- 89 lakh
(8,900 doses/ million)#ಲಸಿಕೆಯಲ್ಲೂಮೋಸ pic.twitter.com/MTgPzgNZDx— Navaneeth H K | ನವನೀತ್ ಹೆಚ್. ಕೆ (@NavaneethGowda1) May 30, 2021
ಬಹಳ ದೇಶಗಳಲ್ಲಿ ನಾಗರೀಕರಿಗೆ ಲಸಿಕೆ ನೀಡುವ ಮೂಲಕ ಪರಿಸ್ಥಿತಿಯನ್ನು normal ಮಾಡಲು ಪ್ರಯತ್ನ ನಡೆಸಲಾಗುತ್ತಿದೆ. ಶಾಲಾ ಕಾಲೇಜು ಪ್ರಾರಂಭ ಮಾಡಲಾಗಿದೆ, ವ್ಯಾಪಾರ ವಹಿವಾಟುಗಳು ಮತ್ತೆ ಹಿಂದಿನ ಸ್ತಿತಿಗೆ ಮರಳಲು ಬೇಕಾದ ಕ್ರಮ ಕೈಗೊಳ್ಳುತ್ತಿದ್ದಾರೆ. ನಾವು ಭಾರತ ಸರಕಾರದ ಅಧಿಕಾರ ಹಪಹಪಿಗೆ ಸಿಲುಕಿ ಒದ್ದಾಡುತ್ತಿದ್ದೇವೆ #ಲಸಿಕೆಯಲ್ಲೂಮೋಸ ಎಂದು ಅರುಣ್ ಜಾವಗಲ್ ಟ್ವೀಟ್ ಮಾಡಿದ್ದಾರೆ.
ಒಂದು ಕಡೆ ನಮಗ್ಯಾಕೆ ಲಸಿಕೆ ಸಿಗುತ್ತಿಲ್ಲ, ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕಕ್ಕೆ ಅನ್ಯಾಯ ಎಂದು ಕನ್ನಡಿಗರು ಪ್ರಶ್ನಿಸಿದರೆ, ಅದೇ ಸಮಯದಲ್ಲಿ ಇನ್ನೊಂದು ಕಡೆ ಕರ್ನಾಟಕದ ಆರೋಗ್ಯ ಸಚಿವ ಸುಧಾಕರ್ “ಲಸಿಕಾ ಅಭಿಯಾನದಲ್ಲಿ ಕರ್ನಾಟಕ ದಕ್ಷಿಣ ಭಾರತದ ನಂ .1 ರಾಜ್ಯವಾಗಿದೆ. ಕೇಂದ್ರದಿಂದ ಲಸಿಕೆ ಪೂರೈಕೆ ಚುರುಕುಗೊಳ್ಳುತ್ತಿರುವುದರಿಂದ, ಲಸಿಕಾ ಅಭಿಯಾನ ಇನ್ನಷ್ಟು ಬೇಗ ಮುನ್ನಡೆಯಲಿದೆ. ರಾಜ್ಯಕ್ಕೆ ನಿನ್ನೆ 80,000 ಡೋಸ್ ಕೋವಾಕ್ಸಿನ್ ಹಾಗೂ 2,17,310 ಡೋಸ್ ಕೊವಿಶೀಲ್ಡ್ ಪೂರೈಸಿದ ಕೇಂದ್ರಕ್ಕೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.
ಲಸಿಕಾ ಅಭಿಯಾನದಲ್ಲಿ ಕರ್ನಾಟಕ ದಕ್ಷಿಣ ಭಾರತದ ನಂ .1 ರಾಜ್ಯವಾಗಿದೆ. ಕೇಂದ್ರದಿಂದ ಲಸಿಕೆ ಪೂರೈಕೆ ಚುರುಕುಗೊಳ್ಳುತ್ತಿರುವುದರಿಂದ, ಲಸಿಕಾ ಅಭಿಯಾನ ಇನ್ನಷ್ಟು ಬೇಗ ಮುನ್ನಡೆಯಲಿದೆ. ರಾಜ್ಯಕ್ಕೆ ನಿನ್ನೆ 80,000 ಡೋಸ್ ಕೋವಾಕ್ಸಿನ್ ಹಾಗೂ 2,17,310 ಡೋಸ್ ಕೊವಿಶೀಲ್ಡ್ ಪೂರೈಸಿದ ಕೇಂದ್ರಕ್ಕೆ ಧನ್ಯವಾದಗಳು.
— Dr Sudhakar K (@mla_sudhakar) May 30, 2021
ಇದನ್ನೂ ಓದಿ: ಮಾನ್ಯ ಪ್ರಧಾನಿಗಳೇ ಕೊರೋನಾ ಲಸಿಕೆಗಳೆಲ್ಲಿ? ಎಲ್ಲಿ ನೀವು ಹೇಳಿದ ಕೊರೋನಾ ವಿರುದ್ಧದ ಜಯ?



Dear readers we are very sorry to say that the development it reveals in all state almost all similar the central government decided to administer the vaccine very long back but due to lack of awareness and also so the confusion of many doctors who are not ready to take shots there why I people refuse to at same time same time government of India produced whose number of vials but people rejected and misunderstanding the the information to take revenge government did not pay any attention towards taking necessary action to control the spreading of this virus and automatically e the vaccine demand increased the pharmaceutical company also artificially created shortage therefore death increased this is nothing but a revenge what I feel it is my personal opinion about the notion about the vaccination thank you very much.
Ravi Kumar.