Homeಕರ್ನಾಟಕರಾಜ್ಯೋತ್ಸವ ಪ್ರಶಸ್ತಿ ಮೊತ್ತ 5 ಲಕ್ಷ ರೂ.ಗಳಿಗೆ ಹೆಚ್ಚಳ: ಬೊಮ್ಮಾಯಿ ಘೋಷಣೆ

ರಾಜ್ಯೋತ್ಸವ ಪ್ರಶಸ್ತಿ ಮೊತ್ತ 5 ಲಕ್ಷ ರೂ.ಗಳಿಗೆ ಹೆಚ್ಚಳ: ಬೊಮ್ಮಾಯಿ ಘೋಷಣೆ

- Advertisement -
- Advertisement -

ಬೆಂಗಳೂರು: ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಜಿ ಪಡೆದು ನೀಡಲಾಗುವುದಿಲ್ಲ. ಜೊತೆಗೆ ರಾಜ್ಯೋತ್ಸವ ಪ್ರಶಸ್ತಿಯ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಅವರು ಸೋಮವಾರ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ – 2021ದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಈ ಘೋಷಣೆ ಮಾಡಿದ್ದಾರೆ.

ರಾಜ್ಯೋತ್ಸವ ಈ ಪ್ರಶಸ್ತಿಯ ಮೌಲ್ಯ ಹೆಚ್ಚಬೇಕು. ಹಣದ ಮೊತ್ತ ಇಲ್ಲಿ ಮಹತ್ವದ್ದಲ್ಲ. ಆದರೆ ಸರ್ಕಾರವೇ ಪ್ರಶಸ್ತಿಗೆ ಅರ್ಹರನ್ನು ಗುರುತಿಸುತ್ತದೆ. ಎರಡು ತಿಂಗಳಿಗಿಂತ ಮುಂಚಿತವಾಗಿ ಆಯ್ಕೆ ಸಮಿತಿ ಸಾಧಕರನ್ನು ಪಟ್ಟಿ ಮಾಡುತ್ತದೆ. ನಂತರ ಸರ್ಕಾರವೇ ಸಾಧಕರನ್ನು ಅಯ್ಕೆ ಮಾಡಿ ಪ್ರಶಸ್ತಿ ನೀಡುತ್ತದೆ. ಇಂಥ ವ್ಯವಸ್ಥೆ ಜಾರಿಗೆ ಬರಲಿದೆ ಎಂದಿದ್ದಾರೆ.

ಸರ್ಕಾರವೇ ಅರ್ಹರನ್ನು ಗುರುತಿಸಿದಾಗ ಪ್ರಶಸ್ತಿಯ ಮೌಲ್ಯ ನೂರು ಪಟ್ಟು ಹೆಚ್ಚುತ್ತದೆ. ಪ್ರಶಸ್ತಿ ಪಡೆಯುವವರ ನೋವು, ಅದರ ಹಿಂದಿರುವ ಕಠಿಣ ಪರಿಶ್ರಮವನ್ನು ಗುರುತಿಸಿ, ಸಮಾಜದಲ್ಲಿ ಸಾಧಕರಿಗೆ ಯಾವುದೇ ಕಷ್ಟವಾಗಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಮುಂದೆ ಯಾರೂ ಬಯೋ ಡೇಟಾ ತಯಾರು ಮಾಡಬೇಕಾದ, ಪತ್ರಿಕಾ ತುಣುಕುಗಳನ್ನು ಜೋಡಿಸಿತಟ್ಟು ತೋರಿಸುವ ಅಗತ್ಯವಿಲ್ಲ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಹಳ ಪ್ರತಿಷ್ಠಿತವಾದ್ದದ್ದು. ಇದರ ಮೌಲ್ಯ ಹೆಚ್ಚಾಗಬೇಕಾದರೆ ಆಯ್ಕೆ ಪ್ರಕ್ರಿಯೆ ಬದಲಾಗಬೇಕು. ಮಾಡದಂಡಗಳ ಪರಿಷ್ಕರಣೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: 66ನೇ ಕನ್ನಡ ರಾಜ್ಯೋತ್ಸವ; ಹಿಂದೆಂದೂ ಕಾಣದ ದೆಹಲಿ ದಾಸ್ಯದ ಸುಳಿಯಲ್ಲಿ ಕರ್ನಾಟಕ!

ಒಳ್ಳೆತನಕ್ಕೆ ಶಿಕ್ಷಣ ಬೇಕಾಗಿಲ್ಲ ಮನಸ್ಸು ಒಳ್ಳೆಯದಿರಬೇಕು. ಪೌರಕಾರ್ಮಿಕರಿಗೆ ದೊಡ್ಡ ಪ್ರಶಸ್ತಿ ನೀಡಿದರೆ ಇನ್ನೂ ಹೆಚ್ಚು ಕೆಲಸ ಮಾಡುತ್ತಾರೆ. ಆಯ್ಕೆ ಶೋಧನೆಯಿಂದಾಗಬೇಕು ಹೊರತಾಗಿ ಅರ್ಜಿಗಳಿಂದ ಅಲ್ಲ ಎಂದಿದ್ದಾರೆ.

ಪ್ರತಿಭೆಗೆ ವಯಸ್ಸಿನ ಗಡಿ ಮಿತಿಗಳಿಲ್ಲ: 60 ವರ್ಷದ ಮೇಲ್ಪಟ್ಟವರಿಗೆ ಪ್ರಶಸ್ತಿ ನೀಡಬೇಕೆಂದು ಹಿಂದೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಪ್ರತಿಭೆ ಎನ್ನುವುದು ವಯಸ್ಸಿಗೆ ಸಂಬಂಧಿಸಿದ್ದಲ್ಲ. ತಂತ್ರಜ್ಞಾನದ ಕಾಲದಲ್ಲಿ ಅದೇಷ್ಟೋ ಮಕ್ಕಳು ಹಲವು ಕ್ಷೇತ್ರಗಳಲ್ಲಿ ಪ್ರತಿಭಾವಂತರಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ನೀರಜ್ ಛೋಪ್ರಾ ಅವರಿಗೆ ಒಲಂಪಿಕ್ಸ್ ಚಿನ್ನದ ಪದಕ ದೊರೆತಿರುವುದು ಇಡೀ ದೇಶಕ್ಕೆ ಸ್ಫೂರ್ತಿ ದೊರೆತಿದೆ ಎಂದಿರುವ ಅವರು ವಯಸ್ಸನ್ನು ಕಡಿಮೆ ಮಾಡುವ ಕುರಿತು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿ ಅನುಮತಿ ಪಡೆಯುವ ಕೆಲಸವನ್ನು ಮುಂದಿನ ವರ್ಷ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಕಂದಾಯ ಸಚಿವ ಆರ್ ಅಶೋಕ್, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಮತ್ತು ಇತರರು ಸಮಾರಂಭದಲ್ಲಿ ಹಾಜರಿದ್ದರು.

66 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 10 ಸಂಘಸಂಸ್ಥೆಗಳಿಗೆ ಅಮೃತ ಮಹೋತ್ಸವ ಪ್ರಶಸ್ತಿ, 66 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಅಮೃತ ಮಹೋತ್ಸವ ಪ್ರಶಸ್ತಿಗೆ ಭಾಜನವಾದ ಸಂಸ್ಥೆಗಳು

ಶ್ರೀ ವೀರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ- ಗದಗ

ಕರ್ನಾಟಕ ಹಿಮೊಫಿಲಿಯಾ ಸೊಸೈಟಿ- ದಾವಣಗೆರೆ

ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ- ಕಲಬುರಗಿ

ಶ್ರೀ ರಾಮಕೃಷ್ಣ ಆಶ್ರಮ, ಮಂಗಳೂರು- ದಕ್ಷಿಣ ಕನ್ನಡ

ಆಲ್‌ ಇಂಡಿಯಾ ಜೈನ್‌ ಯೂತ್‌ ಫೆಡರೇಷನ್‌‌- ಹುಬ್ಬಳ್ಳಿ

ಅನುಗ್ರಹ ಕಣ್ಣಿನ ಆಸ್ಪತ್ರೆ- ವಿಜಯಪುರ

ಉತ್ಸವ ರಾಕ್‌ ಗಾರ್ಡ‌ನ್‌- ಹಾವೇರಿ

ಅದಮ್ಯ ಚೇತನ- ಬೆಂಗಳೂರು

ಸ್ಟೆಪ್‌‌ ಒನ್‌- ಬೆಂಗಳೂರು

ಬನಶಂಕರಿ ಮಹಿಳಾ ಸಮಾಜ- ಬೆಂಗಳೂರು

ಇದನ್ನೂ ಓದಿರಿ: ಕನ್ನಡವೆಂದರೆ ನಮ್ಮ ದೇವ ಭಾಷೆ; ‘ಅಪ್ಪು’ ನೆನೆದು ಎಚ್‌ಡಿಕೆ ಸರಣಿ ಟ್ವೀಟ್‌

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರು

ಸಾಹಿತ್ಯ ಕ್ಷೇತ್ರ: ಮಹಾದೇವ ಶಂಕನಪುರ (ಚಾಮರಾಜನಗರ), ಪ್ರೊ.ಡಿ.ಟಿ.ರಂಗಸ್ವಾಮಿ (ಚಿತ್ರದುರ್ಗ), ಜಯಲಕ್ಷ್ಮಿ ಮಂಗಳಮೂರ್ತಿ (ರಾಯಚೂರು), ಅಜ್ಜಂಪುರ ಮಂಜುನಾಥ್‌ (ಚಿಕ್ಕಮಗಳೂರು), ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ (ವಿಜಯಪುರ), ಸಿದ್ದಪ್ಪ ಬಿದರಿ (ಬಾಗಲಕೋಟೆ).

ರಂಗಭೂಮಿ: ಫಕೀರಪ್ಪ ರಾಮಪ್ಪ ಕೊಡಾಯಿ (ಹಾವೇರಿ), ಪ್ರಕಾಶ್‌ ಬೆಳವಾಡಿ (ಚಿಕ್ಕಮಗಳೂರು), ರಮೇಶ್‌ಗೌಡ ಪಾಟೀಲ (ಬಳ್ಳಾರಿ), ಮಲ್ಲೇಶಯ್ಯ ಎನ್‌. (ರಾಮನಗರ), ಸಾವಿತ್ರಿ ಗೌಡರ್‌ (ಗದಗ)

ಜಾನಪದ: ಆರ್‌.ಬಿ.ನಾಯಕ (ವಿಜಯಪುರ), ಗೌರಮ್ಮ ಹುಚ್ಚಪ್ಪ ಮಾಸ್ತರ್‌ (ಶಿವಮೊಗ್ಗ), ದುರ್ಗಪ್ಪ ಚೆನ್ನದಾಸರ (ಬಳ್ಳಾರಿ), ಬನ್ನಂಜೆ ಬಾಬು ಅಮೀನ್‌ (ಉಡುಪಿ), ಮಲ್ಲಿಕಾರ್ಜುನ ರಾಚಪ್ಪ ಮುದಕವಿ (ಬಾಗಲಕೋಟೆ), ವೆಂಕಪ್ಪ ಗೋವಿಂದಪ್ಪ ಭಜಂತ್ರಿ (ಧಾರಾವಾಡ), ಮಹಾರುದ್ರಪ್ಪ ವೀರಪ್ಪ ಇಟಗಿ (ಹಾವೇರಿ).

ಸಂಗೀತ: ತ್ಯಾಗರಾಜು ಸಿ (ನಾದಸ್ವರ)- ಕೋಲಾರ, ಹೆರಾಲ್ಡ್‌ ಸಿರಿಲ್‌ ಡಿಸೋಜಾ (ದಕ್ಷಿಣ ಕನ್ನಡ).

ಶಿಲ್ಪಕಲೆ: ಡಾ.ಜಿ.ಜ್ಞಾನಾನಂದ (ಚಿಕ್ಕಬಳ್ಳಾಪುರ), ವೆಂಕಣ್ಣ ಚಿತ್ರಗಾರ (ಕೊಪ್ಪಳ).

ಸಮಾಜಸೇವೆ: ಸೂಲಗಿತ್ತಿ ಯುಮುನವ್ವ (ಸಾಲಮಂಟಪಿ- ಬಾಗಲಕೋಟೆ), ಮದಲಿ ಮಾದಯ್ಯ (ಮೈಸೂರು), ಮುನಿಯಪ್ಪ ದೊಮ್ಮಲೂರು (ಬೆಂಗಳೂರು ನಗರ), ಬಿ.ಎಲ್‌.ಪಾಟೀಲ್‌, ಅಥಣಿ (ಬೆಳಗಾವಿ), ಡಾ.ಜೆ.ಎನ್‌.ರಾಮಕೃಷ್ಣೇಗೌಡ (ಮಂಡ್ಯ).

ವೈದ್ಯಕೀಯ: ಡಾ.ಸುಲ್ತಾನ್‌ ಬಿ.ಜಗಳೂರು (ದಾವಣಗೆರೆ), ಡಾ.ವ್ಯಾಸ ದೇಶಪಾಂಡೆ (ವೇದವ್ಯಾಸ- ಧಾರವಾಡ), ಡಾ.ಎ.ಆರ್‌.ಪ್ರದೀಪ್‌ (ದಂತ ವೈದ್ಯಕೀಯ- ಬೆಂಗಳೂರು ನಗರ), ಡಾ.ಸುರೇಶ್‌ ರಾವ್‌ (ದಕ್ಷಿಣ ಕನ್ನಡ), ಡಾ.ಸುದರ್ಶನ್‌ (ಬೆಂಗಳೂರು), ಡಾ.ಶಿವನಗೌಡ ರುದ್ರಗೌಡ ರಾಮನಗೌಡರ್‌ (ಧಾರವಾಡ).

ಕ್ರೀಡೆ: ರೋಹನ ಬೊಪ್ಪಣ್ಣ (ಕೊಡಗು), ಕೆ.ಗೋಪಿನಾಥ್‌ (ವಿಶೇಷ ಚೇತನ, ಬೆಂಗಳೂರು ನಗರ), ರೋಹಿತ್‌ ಕುಮಾರ್‌ ಕಟೀಲ್‌ (ಉಡುಪಿ), ಎ.ನಾಗರಾಜ್‌ (ಕಬ್ಬಡ್ಡಿ, ಬೆಂಗಳೂರು ನಗರ).

ಸಿನಿಮಾ: ದೇವರಾಜ್‌ (ಬೆಂಗಳೂರು ನಗರ)

ಶಿಕ್ಷಣ: ಸ್ವಾಮಿ ಲಿಂಗಪ್ಪ (ಮೈಸೂರು), ಶ್ರೀಧರ್‌ ಚಕ್ರವರ್ತಿ (ಧಾರವಾಡ), ಪ್ರೊ.ಪಿ.ವಿ.ಕೃಷ್ಣ ಭಟ್‌ (ಶಿವಮೊಗ್ಗ)

ಸಂಕೀರ್ಣ: ಡಾ.ಬಿ.ಅಂಬಣ್ಣ (ವಿಜಯನಗರ), ಕ್ಯಾಪ್ಟನ್‌ ರಾಜಾರಾಮ್‌‌ (ಬಳ್ಳಾರಿ), ಗಂಗಾವತಿ ಪ್ರಾಣೇಶ್‌ (ಕೊಪ್ಪಳ)

ವಿಜ್ಞಾನ, ತಂತ್ರಜ್ಞಾನ: ಡಾ.ಎಚ್‌.ಎಸ್.ಸಾವಿತ್ರಿ (ಬೆಂಗಳೂರು ನಗರ), ಪ್ರೊ.ಜಿ.ಯು.ಕುಲ್ಕರ್ಣಿ (ಬೆಂಗಳೂರು)

ಕೃಷಿ: ಡಾ.ಸಿ.ನಾಗರಾಜ್‌ (ಬೆಂಗಳೂರು ಗ್ರಾಮಾಂತರ), ಗುರುಲಿಂಗಪ್ಪ ಮೇಲ್ಡೊಡ್ಡಿ (ಬೀದರ್‌), ಶಂಕರಪ್ಪ ಅಮ್ಮನಘಟ್ಟ (ತುಮಕೂರು)

ಪರಿಸರ: ಡಾ.ಸಿ.ನಾಗರಾಜ್‌ (ಬೆಂಗಳೂರು ಗ್ರಾಮಾಂತರ), ಮಹಾದೇವ ವೇಳಿಪಾ (ಉತ್ತರ ಕನ್ನಡ), ಬೈಕಂಪಾಡಿ ರಾಮಚಂದ್ರ (ದಕ್ಷಿಣ ಕನ್ನಡ)

ಪತ್ರಿಕೋದ್ಯಮ: ಪಟ್ನಂ ಅನಂತ ಪದ್ಮನಾಭ (ಮೈಸೂರು), ಯು.ಬಿ.ರಾಜಲಕ್ಷ್ಮಿ (ಉಡುಪಿ)

ನ್ಯಾಯಾಂಗ: ಸಿ.ವಿ.ಕೇಶವಮೂರ್ತಿ – ಮೈಸೂರು

ಆಡಳಿತ: ಎಚ್‌.ಆರ್‌.ಕಸ್ತೂರಿ ರಂಗನ್‌ – ಹಾಸನ

ಸೈನಿಕ: ನವೀನ್‌ ನಾಗಪ್ಪ – ಹಾವೇರಿ

ಯಕ್ಷಗಾನ: ಗೋಪಾಲಚಾರ್ಯ (ಗೋಪಾಲ ಆಚಾರ್ಯ, ಶಿವಮೊಗ್ಗ)

ಹೊರನಾಡು ಕನ್ನಡಿಗ: ಡಾ.ಸುನೀತಾ ಶೆಟ್ಟಿ (ಮುಂಬೈ), ಚಂದ್ರಶೇರ್ ಪಾಲ್ತಾಡಿ (ಮುಂಬೈ), ಡಾ.ಸಿದ್ದರಾಮೇಶ್ವರ ಕಂಟಿಕರ್‌, ಪ್ರವೀಣ್‌ ಶೆಟ್ಟಿ (ದುಬೈ)

ಪೌರ ಕಾರ್ಮಿಕ: ರತ್ನಮ್ಮ ಶಿವಪ್ಪ ಬಬಲಾದ (ರತ್ನಮ್ಮ, ಯಾದಗಿರಿ)

ಹೈದ್ರಾಬಾದ್‌-ಕರ್ನಾಟಕ ಏಕೀಕರಣ ಹೋರಾಟಗಾರರು: ಮಹದೇವಪ್ಪ ಕಡೆಚೂರು – ಕಲಬುರಗಿ

ಯೋಗ: ಭ.ಮ.ಶ್ರೀಕಂಠ (ಶಿವಮೊಗ್ಗ), ಡಾ.ರಾಘವೇಂದ್ರ ಶೆಣೈ (ಬೆಂಗಳೂರು)

ಉದ್ಯಮ: ಶ್ಯಾಮರಾಜ (ಬೆಂಗಳೂರು)


ಇದನ್ನೂ ಓದಿರಿ: ಕರ್ನಾಟಕ ರಾಜ್ಯೋತ್ಸವ | ‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...