Homeಮುಖಪುಟಅನುಮಾನದ ರೋಗ: ಹೆಣ್ಣುಮಕ್ಕಳ ಫೋಟೋ ಎಫ್‌ಬಿಯಲ್ಲಿ ಪೋಸ್ಟ್‌ ಮಾಡಿ ವಿಕೃತಿ

ಅನುಮಾನದ ರೋಗ: ಹೆಣ್ಣುಮಕ್ಕಳ ಫೋಟೋ ಎಫ್‌ಬಿಯಲ್ಲಿ ಪೋಸ್ಟ್‌ ಮಾಡಿ ವಿಕೃತಿ

- Advertisement -
- Advertisement -

ಕೆಲವು ಹಣವಂತರ ಅಹಂಕಾರ ಹೇಗೆಲ್ಲ ಪ್ರದರ್ಶನವಾಗುತ್ತದೆ, ಮಾನವ ಹಕ್ಕುಗಳು ಹೇಗೆಲ್ಲ ಉಲ್ಲಂಘನೆಯಾಗುತ್ತವೆ ಎಂಬುದಕ್ಕೆ ತಾಜಾ ನಿದರ್ಶನವಾಗಿ ‘ಹೆಲ್ಪ್‌ಚೆಕ್ಕರ್‌ ಹೆಲ್ಪಿಂಗ್ ಟ್ರೀ’ ಎಂಬ ಫೇಸ್‌ಬುಕ್‌ ಗ್ರೂಪ್‌ನ ಚಟುವಟಿಕೆಗಳು ಕಾಣಿಸಿಕೊಂಡಿವೆ.

ಪ್ರೈವೇಟ್‌ ಗ್ರೂಪ್ ಆಗಿರುವ ‘HelpChecker – Helping Tree’ ಮನೆಗೆಲಸದ ಹೆಣ್ಣುಮಕ್ಕಳ ಫೋಟೋಗಳನ್ನು ಹಾಕಿ ವಿಕೃತಿ ಮೆರೆಯುತ್ತಿದೆ. 13,227 ಸದಸ್ಯರನ್ನು ಹೊಂದಿರುವ ಈ ಗ್ರೂಪ್‌ 2015ರಿಂದಲೂ ಚಾಲ್ತಿಯಲ್ಲಿದೆ. ಏಪ್ರಿಲ್‌ 15, 2015ರಂದು ಗ್ರೂಪ್‌ ರಚನೆಯಾಗಿದೆ. ಕಾಲಕಾಲಕ್ಕೆ ಹೆಸರನ್ನು ಬದಲಾಯಿಸಲಾಗಿದೆ.

HELPCHECKER- MOMS & DADS WATCH OUT FOR THESE, MOMS & DADS WATCH OUT FOR THESE- HELPCHECKER, HELPCHECKER – Domestic Diaries ಹೀಗೆ ಆಗಾಗ್ಗೆ ಹೆಸರುಗಳನ್ನು ಬದಲಾಯಿಸಲಾಗಿದೆ. ಈಗ ಹೆಲ್ಪ್‌ಚೆಕ್ಕರ್‌- ಹೆಲ್ಪಿಂಗ್ ಟ್ರೀ ಎಂಬ ಅಂದದ ಹೆಸರನ್ನು ಇಟ್ಟುಕೊಂಡಿದ್ದು, ಮಾಡುತ್ತಿರುವ ಪೋಸ್ಟ್‌ಗಳು ಮಾತ್ರ ಆಘಾತಕಾರಿಯಾಗಿವೆ. ರುತ್ವಿಕ್‌ ಚಟರ್ಜಿ ಮತ್ತು ರಾಚೆಲ್‌ ಫರ್ನಾಂಡೀಸ್‌ ಚಟರ್ಜಿ ಎಂಬವರು ಈ ಗ್ರೂಪ್‌ನ ಅಡ್ಮಿನ್‌ ಆಗಿದ್ದಾರೆ. ರುತ್ವಿಕ್‌ ಅವರು ಆಸ್ಟ್ರೇಲಿಯಾದ ಮೊನಷ ವಿವಿಯಲ್ಲಿ ಓದಿದವರೆಂದು ಪ್ರೊಫೈಲ್‌ ಹೇಳುತ್ತದೆ. ರಾಚೆಲ್ ಅವರು ಮುಂಬೈ ಮೂಲದವರಾಗಿದ್ದಾರೆ.

“ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಸಹಾಯವು ಎಲ್ಲಾ ರೂಪಗಳಲ್ಲಿ ಬರಲಿದೆ. ಈ ಸಮುದಾಯವು ನಿಮಗೆ ಸರಿಯಾದ ಸಹಾಯವನ್ನು ನೀಡುತ್ತದೆ” ಎಂದು ಗ್ರೂಪ್‌‌ನ ಅಡ್ಮಿನ್ ಬರೆದುಕೊಂಡಿದ್ದಾರೆ.

“ಒಂದೆರಡು ವರ್ಷಗಳ ಹಿಂದೆ ನಾನು ತುಂಬಾ ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಎಂದು ತೋರುವ ದಾದಿಯನ್ನು ನೇಮಿಸಿಕೊಂಡಾಗ ಕೆಟ್ಟ ಅನುಭವವಾಯಿತು. ಆಕೆ ಕೋಪಗೊಳ್ಳುತ್ತಿದ್ದಳು, ನನ್ನ ಮಗನನ್ನು ಹಿಂಸಿಸಿದಳು. ಆಗ ನಾನು ಅರಿತುಕೊಂಡೆ, ನಮ್ಮ ಮನೆಗಳಿಗೆ ಯಾರನ್ನಾದರೂ ಕರೆತರುವ ಮೊದಲು ಅವರ ಎಲ್ಲ ಪೂರ್ವಪರವನ್ನು ತಿಳಿಯಬೇಕು ಎಂದು.”

ಇದನ್ನೂ ಓದಿರಿ: ಲಂಡನ್‌ನಲ್ಲಿ 300 ಎಕರೆ ಎಸ್ಟೇಟ್ ಖರೀದಿಸಿದ ಅಂಬಾನಿ: ಭಾರತ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ

“ಅವರು ನಮ್ಮ ಮನೆಗಳನ್ನು ಸ್ವಚ್ಛವಾಗಿಡುತ್ತಾರೆ, ಅವರು ನಮ್ಮ ಮೇಜಿನ ಮೇಲೆ ಬಿಸಿಬಿಸಿ ಊಟವಿಡುತ್ತಾರೆ, ನಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಾರೆ, ನಮ್ಮ ಕಾರುಗಳನ್ನು ಓಡಿಸುತ್ತಾರೆ, ನಮ್ಮ ಕೆಲಸಗಳನ್ನು ಮಾಡುತ್ತಾರೆ, ಕಚೇರಿಗಳಲ್ಲಿ ಸಹಾಯ ಮಾಡುತ್ತಾರೆ ಮತ್ತು ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುತ್ತಾರೆ. ನಾವು ಅವರಿಲ್ಲದೆ ಬದುಕಲು ಸಾಧ್ಯವಿಲ್ಲ. ನಾವು ಯಾವಾಗಲೂ ಅವರಿಗೆ ಕೃತಜ್ಞರಾಗಿರುತ್ತೇವೆ. ಆದರೆ ಪ್ರತಿ ನಾಣ್ಯಕ್ಕೂ ಯಾವಾಗಲೂ ಎರಡು ಮುಖಗಳಿರುತ್ತವೆ. ಆದ್ದರಿಂದ ನಾವು ಯಾರನ್ನು ನೇಮಿಸಿಕೊಳ್ಳುತ್ತಿದ್ದೇವೆ, ಯಾರನ್ನು ನಮ್ಮ ಮನೆಗೆ ಬಿಡುತ್ತಿದ್ದೇವೆ ಎಂಬುದು ನಮಗೆ ತಿಳಿದಿರುವುದು ಬಹಳ ಮುಖ್ಯ” ಎಂದು ಅಡ್ಮಿನ್ ಹೇಳಿಕೊಂಡಿದ್ದಾರೆ.

“ಮನೆ ನಮ್ಮ ವೈಯಕ್ತಿಕ ಜಾಗ. ಕಳ್ಳತನ ಮಾಡಿದವರು, ಯಾರೊಬ್ಬರ ಮಗುವನ್ನು ಹೊಡೆದವರು, ವೃದ್ಧ ದಂಪತಿಯನ್ನು ಕೊಂದವರು, ಜೈಲಿನಿಂದ ಹೊರಬಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಕೆಲಸಕ್ಕೆ ತೆಗೆದುಕೊಳ್ಳುವ ಮುನ್ನ ಈ ಹಿಂದೆ ಇವರು ಎಲ್ಲಿ ಕೆಲಸ ಮಾಡುತ್ತಿದ್ದರೆಂದು ತಿಳಿದು, ಅಲ್ಲಿನ ಮಾಲೀಕರಿಂದ ಪ್ರತಿಕ್ರಿಯೆ ಪಡೆಯಬೇಕು…”

– ಹೀಗೆ ಗ್ರೂಪ್‌ನ ಉದ್ದೇಶವನ್ನು ಅಡ್ಮಿನ್‌ ಬರೆದುಕೊಂಡಿದ್ದಾರೆ. ನಿತ್ಯವೂ ಒಂದಲ್ಲ ಒಂದು ಹೆಣ್ಣುಮಕ್ಕಳ ಫೋಟೋ ಹಾಕಿ ಅಭಿಪ್ರಾಯ ಕೇಳಲಾಗುತ್ತಿದೆ. ಎಲ್ಲೋ ಒಂದು ಕಡೆ ಆಗಿದ್ದನ್ನು ನೆಪವಾಗಿಟ್ಟುಕೊಂಡು ಮನೆಗೆಲಸಕ್ಕೆ ಸೇರುವ ಎಲ್ಲ ಹೆಣ್ಣು ಮಕ್ಕಳ ಮೇಲೆ ಅನುಮಾನಪಡುವುದು ಎಷ್ಟು ಸರಿ? ಅವರ ಫೋಟೋಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಹಾಕಿ ಅಭಿಪ್ರಾಯ ಕೇಳುವುದು ವಿಕೃತಿಯಲ್ಲವೇ?

ಈ ಖಾಸಗಿ ಗ್ರೂಪ್‌ನಲ್ಲಿದ್ದ ಒಬ್ಬರು ‘ನಾನುಗೌರಿ.ಕಾಂ’ಗೆ ಮಾಹಿತಿ ನೀಡಿದ್ದಾರೆ. ಗ್ರೂಪ್‌ನಲ್ಲಿ ಹಾಕಿರುವ ಫೋಟೋಗಳ ಸ್ಕ್ರೀನ್‌ಶಾಟ್‌ಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಮನೆಗೆಲಸದವರ ಖಾಸಗಿತನ ಹಾಗೂ ಮಾನವ ಹಕ್ಕುಗಳಿಗೆ ಈ ಗ್ರೂಪ್‌ನಲ್ಲಿ ಬೆಲೆ ಇಲ್ಲವಾಗಿದೆ ಎಂದು ವಿಷಾದಿಸಿದ್ದಾರೆ.

ಕೆಲವು ಹೆಣ್ಣು ಮಕ್ಕಳ ಫೋಟೋವನ್ನು ಹಾಕಿ, ಇವರನ್ನು ಯಾರೂ ಕೆಲಸಕ್ಕೆ ತೆಗೆದುಕೊಳ್ಳಬೇಡಿ, ನಾವು ಬ್ಲಾಕ್‌ಲಿಸ್ಟ್‌ಗೆ ಹಾಕಿದ್ದೇವೆ ಎಂದು ಪೋಸ್ಟ್‌ ಮಾಡಲಾಗಿದೆ. ಇದನ್ನು ಪ್ರಶ್ನಿಸಿದವರನ್ನು ಗ್ರೂಪ್‌ನಿಂದ ಹೊರಹಾಕುವ ಕೆಲಸವೂ ನಡೆಯುತ್ತಿದೆ. ಹೆಚ್ಚಿನ ವಿವರ ಪಡೆಯಲು ನಾನುಗೌರಿ.ಕಾಂ ತಂಡವು ಗ್ರೂಪ್‌ಗೆ ಪ್ರವೇಶಿಸಲು ಯತ್ನಿಸಿತು. ಅಡ್ಮಿನ್‌ ಅವಕಾಶ ನೀಡದ ಕಾರಣ, ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಬದುಕಿನ ಅನಿವಾರ್ಯತೆಗೆ ಸಿಲುಕಿ ಮನೆಗೆಲಸಕ್ಕೆ ಹೋಗುವ ಹೆಣ್ಣುಮಕ್ಕಳ ಮೇಲೆ ಈ ರೀತಿಯ ಅಮಾನುಷವಾಗಿ ವರ್ತಿಸುವುದು ಜಗತ್ತಿನ ಯಾವ ಮೂಲೆಯಲ್ಲಿ ನಡೆದರೂ ಖಂಡನೀಯ. ಇದೇ ರೀತಿಯ ಖಾಸಗಿ ಗ್ರೂಪ್‌ಗಳು ಬೆಂಗಳೂರಿನಲ್ಲಿಯೂ ಇರಬಹುದು.

ಮಹಿಳೆಯರ ಹಕ್ಕುಗಳ ಪರವಾಗಿ ದನಿ ಜೋರಾಗುತ್ತಿರುವ ಈ ಹೊತ್ತಿನಲ್ಲಿ ಇಂತಹ ವಿದ್ಯಮಾನಗಳು ಬೆಳಕಿಗೆ ಬರುವುದು ಆತಂಕಕಾರಿ. ಈ ರೀತಿ ಪ್ರಕರಣಗಳು ಕಂಡು ಬಂದಲ್ಲಿ ಪ್ರಜ್ಞಾವಂತರು ರಿಪೋರ್ಟ್ ಮಾಡಬೇಕಾಗಿ ವಿನಂತಿ. ಸಾಮಾಜಿಕ ಮಾಧ್ಯಮಗಳು ಹೀಗೆಲ್ಲ ದುರ್ಬಳಕೆ ಆಗುವುದು ತಪ್ಪಬೇಕಿದೆ.

ಯಾವುದೇ ಜೀವನ ಭದ್ರತೆ ಇಲ್ಲದೆ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಮನೆಗೆಲಸದ ಹೆಣ್ಣು ಮಕ್ಕಳನ್ನು ಇಷ್ಟು ಕ್ರೂರವಾಗಿ ನಡೆಸಿಕೊಳ್ಳುವುದು ದುರಾದೃಷ್ಟಕರ. ಆಧುನಿಕವಾಗಿ ಮುಂದುವರಿಯುತ್ತಿರುವ ಸಮಾಜವು ಇವುಗಳ ವಿರುದ್ಧ ದನಿ ಎತ್ತಬೇಕಿದೆ.


ಇದನ್ನೂ ಓದಿರಿ: ಇನ್ನೆಂದೂ ಆಗಿರದಷ್ಟು ಬಡತನ ಕಳೆದ 8 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳ: ಅಧ್ಯಯನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

PTCL ಕಾಯ್ದೆ ಅನುಷ್ಠಾನ ವೈಫಲ್ಯ: ನ್ಯಾಯಾಂಗ ಹಾಗೂ ಸರ್ಕಾರದ ಧೋರಣೆ ಖಂಡಿಸಿ ಜ್ಯೂರಿ ವರದಿ ಬಿಡುಗಡೆ

ದಲಿತ ಸಮುದಾಯಗಳಿಗೆ ಮಂಜೂರಾದ ಭೂಮಿ ಅನ್ಯಯವಾಗುವುದನ್ನು ತಡೆಯುವಲ್ಲಿ ಹಾಗೂ ಪಿಟಿಸಿಎಲ್ (PTCL) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ನ್ಯಾಯಾಂಗ ಮತ್ತು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಜ್ಯೂರಿ ವರದಿಯು ತೀವ್ರವಾಗಿ ಅತೃಪ್ತಿ ವ್ಯಕ್ತಪಡಿಸಿದೆ. ಪಿಟಿಸಿಎಲ್...

SIR ಪ್ರಕ್ರಿಯೆಗೆ 6 ತಿಂಗಳ ಕಾಲಾವಕಾಶ ನೀಡಿ: ಸೆಪ್ಟೆಂಬರ್ 1 ರಂದು ‘ಎಲೆಕ್ಷನ್ ಕಮಿಷನ್ ಚಲೋ’ ಗೆ ಒಕ್ಕೂಟ ಕರೆ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅವೈಜ್ಞಾನಿಕ ಧೋರಣೆ ಹಾಗೂ ಗೊಂದಲಮಯ ಕ್ರಮಗಳನ್ನು ತೀವ್ರವಾಗಿ ಖಂಡಿಸಿರುವ 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ', ಮತದಾರರ ಹಕ್ಕುಗಳನ್ನು...

ನೇಪಾಳದಲ್ಲಿ ದಿಢೀರ್ ಪ್ರವಾಹ : 105 ಭಾರತೀಯರು ಸೇರಿದಂತೆ 384 ಮಂದಿ ನಾಪತ್ತೆ

ನೇಪಾಳ ಪ್ರವಾಸೋದ್ಯಮ ಮಂಡಳಿಯ ಮಾಹಿತಿ ಪ್ರಕಾರ, ಬುಧವಾರ (ಆ.26) ಬೆಳಿಗ್ಗೆ ನೇಪಾಳದ ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ 105 ಭಾರತೀಯ ಪ್ರಜೆಗಳು ಸೇರಿದಂತೆ ಕನಿಷ್ಠ 384...

ರಾಜ್ಯದಲ್ಲಿ 102 ತಾಲೂಕುಗಳಲ್ಲಿ ಬರ: ಡಿಸಿಎಂ ಪರಮೇಶ್ವರ್

ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, 102 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದೆ. ಕೇಂದ್ರ ಸರ್ಕಾರದ ಮಾನದಂಡಗಳನ್ವಯ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಧಿಕೃತವಾಗಿ ಬರ ಘೋಷಿಸಲಾಗುವುದು ಹಾಗೂ ಪ್ರತಿ ವಾರವೂ...

ಪ. ಬಂಗಾಳ SIR : ನ್ಯಾಯಮಂಡಳಿಗಳಿಂದ ಇದುವರೆಗೆ ಕೇವಲ 2.17% ಮೇಲ್ಮನವಿಗಳ ಇತ್ಯರ್ಥ; ಇನ್ನು 37 ಲಕ್ಷಕ್ಕೂ ಹೆಚ್ಚು ಬಾಕಿ!

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಭಗವಾಂಗೋಲಾದ ನಿವಾಸಿಯಾದ ಮೊಹಮ್ಮದ್ ದುವಾಲ್ ಅಲಿ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಕರ್ತವ್ಯದ ಅವಧಿಯಲ್ಲಿ ಗುಂಡೇಟಿಗೆ ಒಳಗಾಗಿದ್ದರು. ಪ್ರಾಣಾಪಾಯದಿಂದ ಬದುಕುಳಿದ ಅವರು ನಂತರ ಭಾರತೀಯ ರೈಲ್ವೆಯಲ್ಲಿ ಕೆಲಸ...

ಬಂಡಾಯ ಸಂಸದರಿಗೆ ಸಂಕಷ್ಟ: 7 ದಿನಗಳಲ್ಲಿ ಉತ್ತರಿಸಲು ಲೋಕಸಭೆ ಸಚಿವಾಲಯ ತಾಕೀತು

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 20 ಬಂಡಾಯ ಸಂಸದರಿಗೆ ಲೋಕಸಭಾ ಸಚಿವಾಲಯವು ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳ ಒಳಗಾಗಿ ಸೂಕ್ತ ಉತ್ತರ ನೀಡುವಂತೆ ಸೂಚಿಸಿದೆ. ಪಕ್ಷಾಂತರ ಕಾಯ್ದೆಯಡಿ ಸಂಸದರ ಅನರ್ಹತೆ ಪ್ರಕ್ರಿಯೆಗಳನ್ನು...

ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ನ್ಯೂಯಾರ್ಕ್ ಮೇಯರ್ ವಿರೋಧ: ಸಂಘದ ‘ಹೊರಗಿಡುವ ದೃಷ್ಟಿಕೋನ’ ಖಂಡಿಸಿದ ಮಮ್ದಾನಿ

ಅಮೆರಿಕದ ನ್ಯೂಯಾರ್ಕ್ ನಗರದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿರುವ ಬೃಹತ್ ಭಾರತೀಯ ಮೂಲದವರ ಸಮಾವೇಶವು...

ಕರ್ನಾಟಕದಲ್ಲಿ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಕರ್ನಾಟಕದಲ್ಲಿ ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇಂಡಿಯಾ ಟುಡೇ ರೌಂಡ್‌ಟೇಬಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ...

ಬೀದಿ ಬದಿ ವ್ಯಾಪಾರಿಗಳ ತೆರವು ಅಕ್ರಮ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ

ಮಂಗಳೂರಿನ ಟೌನ್ ಹಾಲ್ ಸಮೀಪ ನಡೆಯುವ ಸಂಡೇ ಬಜಾರ್‌ನಲ್ಲಿ ಪಾದಚಾರಿ ಮಾರ್ಗದ ಬಳಿ ಇದ್ದ ಬೀದಿ ವ್ಯಾಪಾರಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಲು ಮುಂದಾಗಿದ್ದರು. ಇದನ್ನು ದಕ್ಷಿಣ ಕನ್ನಡ ಜಿಲ್ಲಾ...

ತೆಲಂಗಾಂಣ | ಹೈದರಾಬಾದ್‌-ವಿಜಯವಾಡ ಹೆದ್ದಾರಿಯಲ್ಲಿ ಭೀಕರ ಅಪಘಾತ: 6 ಮಂದಿ ಸಾವು; ಹಲವರಿಗೆ ಗಾಯ

ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ಬುಧವಾರ (ಆ.26) ಮುಂಜಾನೆ ಖಾಸಗಿ ಎಲೆಕ್ಟ್ರಿಕ್ ಬಸ್‌ವೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 12 ಜನರು ಗಾಯಗೊಂಡಿದ್ದಾರೆ...