Homeಮುಖಪುಟಮನೆಗೆ ಬರುವ ಸಂದರ್ಶಕರೊಂದಿಗೆ ಪಿಎಸ್‌ಐ 'ಅಸಭ್ಯ' ವರ್ತನೆ; ಆಕ್ರೋಶ ವ್ಯಕ್ತಪಡಿಸಿದ ಅಭಿಜೀತ್ ದಿಪ್ಕೆ

ಮನೆಗೆ ಬರುವ ಸಂದರ್ಶಕರೊಂದಿಗೆ ಪಿಎಸ್‌ಐ ‘ಅಸಭ್ಯ’ ವರ್ತನೆ; ಆಕ್ರೋಶ ವ್ಯಕ್ತಪಡಿಸಿದ ಅಭಿಜೀತ್ ದಿಪ್ಕೆ

- Advertisement -
- Advertisement -

ಛತ್ರಪತಿ ಸಂಭಾಜಿನಗರದಲ್ಲಿರುವ ತಮ್ಮ ಮನೆಯಲ್ಲಿ ಭದ್ರತಾ ಪಡೆಯ ಭಾಗವಾಗಿ ನಿಯೋಜಿಸಲಾದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ಅವರು, ಜನರು ನಮ್ಮನ್ನು ಭೇಟಿಯಾಗದಂತೆ ತಡೆಯುತ್ತಿದ್ದಾರೆ ಎಂದು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜೀತ್ ದಿಪ್ಕೆ ಆರೋಪ ಮಾಡಿದ್ದು, ಅವರನ್ನು ಕರ್ತವ್ಯದಿಂದ ತೆಗೆದುಹಾಕುವಂತೆ ಒತ್ತಾಯಿಸಿದರು.

ಭದ್ರತಾ ಅಧಿಕಾರಿಯು ಮನೆಗೆ ಭೇಟಿ ನೀಡುವವರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ, ಮಧ್ಯ ಮಹಾರಾಷ್ಟ್ರ ನಗರದ ವಾಲುಜ್ ಎಂಐಡಿಸಿ ಪ್ರದೇಶದಲ್ಲಿ ತಮ್ಮ ನಿವಾಸಕ್ಕೆ ಪ್ರವೇಶಿಸುವ ಜನರನ್ನು ನಿರ್ಬಂಧಿಸುವ ಜೊತೆಗೆ ಮೇಲ್ವಿಚಾರಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

“ರಾಜ್ಯ ಸಿಐಡಿ ಸಿಬ್ಬಂದಿ ತಮ್ಮ ನಿವಾಸದ ಬಳಿ ಸಾಮಾನ್ಯ ಉಡುಪಿನಲ್ಲಿ ಸುತ್ತಾಡುತ್ತಿದ್ದಾರೆ, ಬಳಿಕ ಅವರು ‘ಹಿಟ್ ಸ್ಪ್ರೇ’ ಎಂಬ ಸಾಮಾಜಿಕ ಮಾಧ್ಯಮ ಗುಂಪಿನಲ್ಲಿ ವರದಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಹಿರಿಯ ಪೊಲೀಸ್ ಅಧಿಕಾರಿ ಮತ್ತು ಅವರ ನಿವಾಸದಲ್ಲಿ ಪಿಎಸ್‌ಐ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಿರುವ ವೀಡಿಯೊಗಳು ಶುಕ್ರವಾರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ.

ಸಂಭಾಷಣೆಯ ಸಮಯದಲ್ಲಿ, ದೀಪ್ಕೆ ಪಿಎಸ್ಐಗೆ ಗದರಿದ್ದಾರೆ. ತಮ್ಮ ಮನೆಗೆ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ತಂಡದಿಂದ ಅಧಿಕಾರಿಯನ್ನು ಕೂಡಲೇ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.

“ನಾನೇ ಜನರನ್ನು ಒಳಗೆ ಬರಲು ಹೇಳಿದ ಮೇಲೆ ಅವರನ್ನು ಮನೆಗೆ ಬರಲು ಬಿಡುವುದರಲ್ಲಿ ಸಮಸ್ಯೆ ಏನು? ನೀವು ದೆಹಲಿ ಪೊಲೀಸರಂತೆ ಏಕೆ ವರ್ತಿಸುತ್ತಿದ್ದೀರಿ? ಇಂದಿನವರೆಗೆ ಯಾವುದೇ ಸಮಸ್ಯೆ ಬಂದಿಲ್ಲ. ನಾನು ನಿಮ್ಮನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ. ನಾನು ಯಾರನ್ನು ಭೇಟಿಯಾಗಬೇಕು, ಯಾರನ್ನು ಭೇಟಿಯಾಗಬಾರದು ಎಂದು ನೀವು ನನಗೆ ಹೇಳುವುದಕ್ಕೆ ಸಾಧ್ಯವಿಲ್ಲ” ಎಂದು ದೀಪ್ಕೆ ವೀಡಿಯೊ ಒಂದರಲ್ಲಿ ಸಿವಿಲ್ ಡ್ರೆಸ್‌ನಲ್ಲಿರುವ ಪಿಎಸ್‌ಐಗೆ ಹೇಳಿದ್ದಾರೆ.

“ದಯವಿಟ್ಟು ಹೊರಗೆ ಹೋಗಿ, ನೀವು ನನ್ನ ಮನೆಯಲ್ಲಿ ಇರಬಾರದು” ಎಂದು ಅವರು ಪಿಎಸ್‌ಐಗೆ ಹೇಳಿದ್ದಾರೆ.

ಎರಡನೇ ವೀಡಿಯೊದಲ್ಲಿ, ದೀಪ್ಕೆ ಅವರು ಪಿಎಸ್‌ಐ ಬಗ್ಗೆ ದೂರವಾಣಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗೆ ದೂರು ನೀಡುತ್ತಿರುವುದು ರೆಕಾರ್ಡ್ ಆಗಿದೆ.

“ಸುರೇಶ್ ಎಂಬ ಪಿಎಸ್ಐ ಇಲ್ಲಿಗೆ ಬಂದಿದ್ದಾರೆ, ಅವರು ನನ್ನನ್ನು ಭೇಟಿಯಾಗಲು ಬರುವ ಜನರೊಂದಿಗೆ ತುಂಬಾ ಅಸಭ್ಯವಾಗಿ ವರ್ತಿಸುತ್ತಾರೆ. ಅವರು ಜನರನ್ನು ಹೊರಗೆ ಹೋಗುವಂತೆ ಹೇಳುತ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆಯೇ? ನನಗೆ ಅವರು ಬೇಡ; ಅವರನ್ನು ಇಲ್ಲಿಂದ ತೆಗೆದುಹಾಕಿ” ಎಂದು ಅಭಿಜೀತ್ ಪೊಲೀಸ್ ಅಧಿಕಾರಿಗೆ ಹೇಳಿದ್ದಾರೆ.

ಅದೇ ಕರೆಯಲ್ಲಿ, ರಾಜ್ಯ ಸಿಐಡಿ ಸಿಬ್ಬಂದಿ ತಮ್ಮ ಮನೆಯ ಸುತ್ತಲೂ ಓಡಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

“ಕೆಲವು ಸಿಐಡಿ ಜನರು ನನ್ನ ಮನೆಯ ಬಳಿ ಕಾಣಿಸಿಕೊಂಡಿದ್ದಾರೆ ಎಂದು ವರದಿಗಾರರೊಬ್ಬರು ನನಗೆ ಹೇಳಿದರು. ಪೊಲೀಸರು ಅವರನ್ನು ಅಲ್ಲಿಂದ ಕಳಿಸಲು ಪ್ರಯತ್ನಿಸಿದಾಗ, ಅವರು ಸಿಐಡಿಯವರು ಎಂದು ಬಹಿರಂಗಪಡಿಸಿದರು. ಸಿಐಡಿ ಸಿಬ್ಬಂದಿಗಳಲ್ಲಿ ಒಬ್ಬರ ಫೋನ್‌ನಲ್ಲಿ ವಾಟ್ಸಾಪ್ ಗುಂಪು ಮಾಡಿರುವುದನ್ನು ವರದಿಗಾರ ನೋಡಿದ್ದಾರೆ. ‘ಹಿಟ್ ಸ್ಪ್ರೇ’ ಎಂದು ಆ ಗುಂಪಿಗೆ ಹೆಸರಿಡಲಾಗಿದೆ. ಅವರು ತಮ್ಮ ವರದಿಗಳನ್ನು ಆ ಗುಂಪಿನ ಮೂಲಕ ಕಳುಹಿಸುತ್ತಿದ್ದಾರೆ ಎಂದು ವರದಿಗಾರ ನನಗೆ ಹೇಳಿದರು” ಎಂದು ದಿಪ್ಕೆ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಯಚೂರು ದಲಿತ ದೌರ್ಜನ್ಯ: ಪ್ರಕರಣಗಳನ್ನು CIDಗೆ ಒಪ್ಪಿಸುವಂತೆ ಆಗ್ರಹಿಸಿ ಗೃಹ ಸಚಿವರನ್ನು ಭೇಟಿಯಾದ ನಿಯೋಗ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ದಲಿತರ ಮೇಲೆ ಸಾಲು ಸಾಲು ದೌರ್ಜನ್ಯ, ಕೊಲೆ ಹಾಗೂ ಅತ್ಯಾಚಾರದಂತಹ ಭೀಕರ ಕೃತ್ಯಗಳು ಹೆಚ್ಚಾಗುತ್ತಿರುವುದನ್ನು ತೀವ್ರವಾಗಿ ಖಂಡಿಸಿ, ದಲಿತ ಹಕ್ಕುಗಳ ಹೋರಾಟಗಾರರ ಹಾಗೂ ಪ್ರಮುಖ ಮುಖಂಡರ ನಿಯೋಗವು ಗೃಹ...

ಶಾರ್ಜೀಲ್ ಇಮಾಮ್‌ಗೆ 7 ದಿನಗಳ ಮಧ್ಯಂತರ ಜಾಮೀನು ಮಂಜೂರು

ವಿದ್ಯಾರ್ಥಿ ಹೋರಾಟಗಾರ ಶಾರ್ಜೀಲ್ ಇಮಾಮ್‌ಗೆ ಅವರ ಸೋದರಸಂಬಂಧಿಯ ಮದುವೆಯಲ್ಲಿ ಪಾಲ್ಗೊಳ್ಳಲು ದೆಹಲಿ ನ್ಯಾಯಾಲಯವು ಏಳು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಜಾಮೀನು ಅಕ್ಟೋಬರ್ 4 ರಿಂದ ಅಕ್ಟೋಬರ್ 10 ರವರೆಗೆ ಇರಲಿದೆ...

ಎಬಿವಿಪಿ ಒತ್ತಡಕ್ಕೆ ಮುಸ್ಲಿಂ ಪ್ರಾಧ್ಯಾಪಕಿ ರಾಜೀನಾಮೆ; ಕಾಲೇಜು ಆವರಣ ‘ಶುದ್ಧೀಕರಣ’ ಮಾಡಿದ ಬಲಪಂಥೀಯ ಗುಂಪು

ಕೋಲ್ಕತ್ತಾದ ಸುರೇಂದ್ರನಾಥ ಕಾಲೇಜಿನ ಮುಸ್ಲಿಂ ಪ್ರಾಧ್ಯಾಪಕಿ ಮೊಹಮ್ಮದಿ ತರನ್ನುಮ್ ಅವರನ್ನು ಹಾಜರಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 11ರಂದು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ. ಇದಾದ ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು...

SIR ಪರಿಶೋಧ ಹಾಗೂ ಪ್ರತಿರೋಧ ಪ್ರವಾಸಕ್ಕೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಚಾಲನೆ: ಸಿಪಿಐ(ಎಂ) ಬೆಂಬಲ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 'SIR ವಿರೋಧಿ ಕರ್ನಾಟಕ', ನಾಗರಿಕ ಮತಕಾವಲು ಸಮಿತಿ, ಜಾತ್ಯತೀತ ಪಕ್ಷಗಳು ಹಾಗೂ ವಿವಿಧ ನಾಗರಿಕ ಸಂಘಟನೆಗಳ...

ಪಶ್ಚಿಮ ಬಂಗಾಳ: ಸರ್ಕಾರದ ಜೊತೆ ಇರಬೇಕಾದರೆ ಎಲೆಕ್ಷನ್ ‘ಟೆಸ್ಟ್’ನಲ್ಲಿ ಗೆಲ್ಲಿ, ಮುಸ್ಲಿಮರಿಗೆ ಸುವೇಂದು ಅಧಿಕಾರಿ ಎಚ್ಚರಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಮತ್ತು ರೆಜಿನಗರ ಕ್ಷೇತ್ರಗಳ ಮುಂಬರುವ ಉಪಚುನಾವಣೆಯನ್ನು ಅಲ್ಪಸಂಖ್ಯಾತರಿಗೆ ಒಂದು ‘ಪರೀಕ್ಷೆ’ ಎಂದು ಕರೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ವಿವಾದ ಹಾಗೂ ಕಳವಳಕ್ಕೆ ಕಾರಣವಾಗಿದೆ....

ಮಹಿಳೆಯರ ಮೇಲಿನ ದಾಳಿಗಳು ಮತ್ತಷ್ಟು ಹಿಂಸಾತ್ಮಕವಾಗುತ್ತಿವೆ: ಪ್ರಿಯಾಂಕಾ ಗಾಂಧಿ

ದೆಹಲಿ ಮತ್ತು ಬಿಹಾರದಲ್ಲಿ ಮಹಿಳೆಯರ ಮೇಲೆ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಳವಳ ವ್ಯಕ್ತಪಡಿಸಿದ್ದು, ಇಂತಹ ದಾಳಿಗಳು ಹೆಚ್ಚಾಗುತ್ತಿರುವುದು ಮಾತ್ರವಲ್ಲದೆ ಇನ್ನಷ್ಟು ಹಿಂಸಾತ್ಮಕವಾಗುತ್ತಿವೆ...

ಜಮುಯಿ ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣ: ಎನ್‌ಕೌಂಟರ್ ಬಳಿಕ ಪ್ರಮುಖ ಆರೋಪಿ ನಂದನ್ ಯಾದವ್ ಬಂಧನ; 7 ಮಂದಿಯಲ್ಲಿ 5 ಮಂದಿ ವಶಕ್ಕೆ

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಕೋಚಿಂಗ್‌ ತರಗತಿಯಿಂದ ಮನೆಗೆ ಮರಳುತ್ತಿದ್ದ ಅಪ್ರಾಪ್ತ ಬಾಲಕಿ ಮತ್ತು ಬಾಲಕನನ್ನು ತಡೆದು ಹಲ್ಲೆ ಮಾಡಿ, ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ....

ಬಿಹಾರ|ಸಭ್ಯ ರೀತಿಯಲ್ಲಿ ಅನೈತಿಕ ಪೊಲೀಸ್‌ಗಿರಿ ಮಾಡಿ: ಬಿಜೆಪಿ ಸಚಿವೆ ಶ್ರೇಯಸಿ ಸಿಂಗ್

ಬಿಹಾರದ ಜಮುಯಿ ಜಿಲ್ಲೆಯಲ್ಲಿ ಯುವಕ ಮತ್ತು ಯುವತಿಗೆ ಗುಂಪೊಂದು ಸಾರ್ವಜನಿಕವಾಗಿ ಕಿರುಕುಳ ನೀಡಿದ ಘಟನೆಯನ್ನು ಖಂಡಿಸುವ ಭರದಲ್ಲಿ, ‘ಅನೈತಿಕ ಪೊಲೀಸ್‌ಗಿರಿಯನ್ನು ಹೆಚ್ಚು ಸಭ್ಯ ಮತ್ತು ಘನತೆಯುತ ರೀತಿಯಲ್ಲಿ ಮಾಡಬಹುದು’ ಎಂದು ಬಿಹಾರದ ಬಿಜೆಪಿ...

ಭೋಪಾಲ್: ಮಕ್ಕಳ ಸಾವಿನ ಬಗ್ಗೆ ವರದಿ ಮಾಡುತ್ತಿದ್ದಾಗ ಪೊಲೀಸರು ಹೋಟೆಲ್‌ಗಳಿಂದ ಹೊರಹಾಕಿದರು ಎಂದು ಖ್ಯಾತ ಯೂಟ್ಯೂಬರ್ ಕಾವ್ಯ ಕರ್ನಾಟಕ್ ಆರೋಪ

ಭೋಪಾಲ್: ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಮಕ್ಕಳ ಸಾವಿನ ಕುರಿತು ವರದಿ ಮಾಡಲು ತೆರಳಿದ್ದ ತಮ್ಮ ತಂಡವನ್ನು ಎರಡು ಹೋಟೆಲ್‌ಗಳಿಂದ ಹೊರಹೋಗುವಂತೆ ಒತ್ತಾಯಿಸಲಾಯಿತು. ಪೊಲೀಸರು ಹೋಟೆಲ್‌ಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ದೆಹಲಿಯಿಂದ ಬಂದ ಪತ್ರಕರ್ತರನ್ನು ಅಲ್ಲಿಂದ...

DELHI SIR |’ನೋಟಿಸ್‌ಗಳನ್ನು ಯಾಂತ್ರಿಕವಾಗಿ ನೀಡಿದಂತಿದೆ, ಲಾಜಿಕಲ್ ಡಿಸ್ಕ್ರಿಪೆನ್ಸಿ ಬಗ್ಗೆ ಸ್ಪಷ್ಟನೆ ಅಗತ್ಯ : ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಮಯದಲ್ಲಿ ಮತದಾರರಿಗೆ ನೀಡಲಾದ ನೋಟಿಸ್‌ಗಳು 'ಬಹುತೇಕ ಯಾಂತ್ರಿಕವಾಗಿ' ಜಾರಿಯಾದಂತೆ ಕಂಡುಬರುತ್ತಿವೆ ಮತ್ತು 'ತಾರ್ಕಿಕ ವ್ಯತ್ಯಾಸ'ವನ್ನು ಗುರುತಿಸಲು ಬಳಸಲಾದ ಆಧಾರದ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದೆ...