Homeಮುಖಪುಟಇಂದು ಚಂದ್ರಗ್ರಹಣ 2019: ತಿಳಿಯಬೇಕಾದ ವಿಷಯಗಳು

ಇಂದು ಚಂದ್ರಗ್ರಹಣ 2019: ತಿಳಿಯಬೇಕಾದ ವಿಷಯಗಳು

- Advertisement -
- Advertisement -

ಇಂದು ರಾತ್ರಿ ಸಂಭವಿಸಲಿರುವ ಖಂಡಗ್ರಾಸ, ಅಂದರೆ, ಭಾಗಶಃ ಚಂದ್ರಗ್ರಹಣ ಉತ್ತರ ಅಮೆರಿಕವನ್ನು ಹೊರತುಪಡಿಸಿ ಬಹುತೇಕ ಎಲ್ಲಾ ದೇಶಗಳಲ್ಲಿ ಗೋಚರಿಸಲಿದೆ. ಇಲ್ಲಿ ನೀವು 2019ರ ಚಂದ್ರಗಹಣದ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಅತ್ಯಗತ್ಯ ಅಂಶಗಳಿವೆ.

ಇಂದಿನ ಚಂದ್ರಗ್ರಹಣವನ್ನು ಮೋಡಗಳು ಅವಕಾಶ ಕೊಟ್ಟರೆ ಭಾರತದಾದ್ಯಂತ ಕಾಣಬಹುದು. ಇದು ಭಾರತದಲ್ಲಿ 2019ರ ಕೊನೆಯ ಚಂದ್ರಗಹಣ. ಇದು ಮಧ್ಯರಾತ್ರಿ ಕಳೆದ ಸ್ವಲ್ಪವೇ ಹೊತ್ತಿನಲ್ಲಿ ಆರಂಭವಾಗಿ, ಬೆಳಗ್ಗಿನ ಜಾವದ ತನಕ ಮುಂದುವರಿಯಲಿದೆ.

ಚಂದ್ರಗ್ರಹಣದ ಸಮಯ

ಜುಲೈ 17, 2017ರ ರಾತ್ರಿ 12.13ಕ್ಕೆ ಗ್ರಹಣದ ಆರಂಭ. 3.00 ಗಂಟೆಯ ಹೊತ್ತಿಗೆ ಗರಿಷ್ಟ ಪ್ರಮಾಣವನ್ನು ತಲುಪಲಿದೆ. 1.31ರ ಹೊತ್ತಿಗೆ ಅದು ಹಿಂದೆ ಸರಿಯಲು ಆರಂಭವಾಗಿ  ಖಂಡ ಅಥವಾ ಭಾಗಶಃ (Partial) ಗ್ರಹಣವಾಗಲಿದೆ. ಆ ಬಳಿಕ  ಅದು 4.29ರ ತನಕ ಹಿಂದೆ ಸರಿಯುತ್ತಾ ನಂತರ  Penumbra ಎಂದು ಕರೆಯಲ್ಪಡುವ ಹಂತಕ್ಕೆ ತಲಪುತ್ತದೆ. ಅದು ಅಂತಿಮವಾಗಿ 5.47ಕ್ಕೆ ಕೊನೆಗೊಳ್ಳುತ್ತದೆ. ಇಡೀ ಗ್ರಹಣವು 5 ಗಂಟೆ 34 ನಿಮಿಷಗಳ ಕಾಲ ಇದ್ದು, ಭಾಗಶಃ ಗ್ರಹಣವು 2 ಗಂಟೆ 58 ನಿಮಿಷಗಳ ಕಾಲ ಇರಲಿದೆ.

149 ವರ್ಷಗಳ ನಂತರದ ಕಾಕತಾಳೀಯ

ಈ ಚಂದ್ರಗ್ರಹಣ ಕೆಲವರಿಗೆ ಮಹತ್ವದ್ದು ಏಕೆಂದರೆ, 149 ವರ್ಷಗಳ ನಂತರ ಅದು ಕೆಲವು ಭಾರತೀಯರು ಮಹತ್ವದ್ದೆಂದು ನಂಬುವ ಗುರು ಪೂರ್ಣಿಮಾದ ದಿನ ಬರುತ್ತದೆ. ಚಂದ್ರಗ್ರಹಣವು ಗರಿಷ್ಟ ಪ್ರಮಾಣ ತಲಪಿದಾಗ, ಭೂಮಿಯ ನೆರಳು ಅರ್ಧ ಭಾಗದಷ್ಟು ಚಂದ್ರನನ್ನು ಆವರಿಸಲಿದೆ. ಇದು ಈ ವರ್ಷ ಭಾರತದಲ್ಲಿ ಕೊನೆಯ ಚಂದ್ರಗ್ರಹಣವಾಗಿದೆ. ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಗ್ರಹಣವನ್ನು ಪೂರ್ಣಾಣಾವಧಿ ಅಂದರೆ, ಆರಂಭದಿಂದ ಅಂತ್ಯದ ವರೆಗೆ ಕಾಣಬಹುದು.

ಚಂದ್ರಗ್ರಹಣವನ್ನು ನೋಡುವುದು ಹೇಗೆ?

ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲಿಯೇ ನೋಡಬಹುದು. ಆದರೆ, ಸೂರ್ಯಗ್ರಹಣವನ್ನು ಬರಿಗಣ್ಣಿನಲ್ಲಿಯೇ ನೋಡುವುದು ಕುರುಡುತನಕ್ಕೆ ಕಾರಣವಾಗುತ್ತದೆ. ಚಂದ್ರಗ್ರಹಣ ನೋಡಲು ಯಾವುದೇ ಭಯ ಅಗತ್ಯವಿಲ್ಲ.

ಮೂಢನಂಬಿಕೆ ಬೇಡ!

ಚಂದ್ರ, ಭೂಮಿ, ಸೂರ್ಯ ಹೆಚ್ಚು ಕಡಿಮೆ ಎಂದೇ ರೇಖೆಗೆ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬರುವುದರಿಂದ ಭೂಮಿಯ ನೆರಳು ಚಂದ್ರನ ಮೇಲೆ ಹಾದುಹೋಗುತ್ತದೆ. ಈ ಕಾರಣದಿಂದಲೇ ಚಂದ್ರಗ್ರಹಣ ಹುಣ್ಣಿಮೆ ದಿನ ಮತ್ತು ಸೂರ್ಯಗ್ರಹಣ ಅಮವಾಸ್ಯೆಯ ದಿನ ಮಾತ್ರ ಸಂಭವಿಸುತ್ತದೆ. ಅದೇ ರೀತಿಯಲ್ಲಿ ಸೂರ್ಯ ಮತ್ತು ಭೂಮಿಯ ನಡುವೆ ಒಂದೇ ರೇಖೆಯಲ್ಲಿ ಚಂದ್ರ ಹಾದುಹೋದರೆ, ಅದು ಸೂರ್ಯನನ್ನು ಮರೆಮಾಚಿ ಸೂರ್ಯಗ್ರಹಣ ಸಂಭವಿಸುತ್ತದೆ. ಮೂರೂ ನಿಖರವಾಗಿ ಒಂದೇ ರೇಖೆಯಲ್ಲಿದ್ದರೆ ಖಗ್ರಾಸ ಅಥವಾ ಸಂಪೂರ್ಣ ಗ್ರಹಣಗಳೂ, ಸ್ವಲ್ಪ ವ್ಯತ್ಯಾಸವಿದ್ದರೆ ಖಂಡ ಅಥವಾ ಭಾಗಶಃ ಗ್ರಹಣಗಳು ಸಂಭವಿಸುತ್ತವೆ. ಚಂದ್ರಗ್ರಹಣವು ಒಂದು ಸಾಮಾನ್ಯ ಖಗೋಳ ಪ್ರಕ್ರಿಯೆಯಾಗಿದ್ದು, ಅದನ್ನು ನೋಡುವುದರಿಂದಲಾಗಲೀ ಆ ಹೊತ್ತಿಗೆ ಆಹಾರ ಸೇವಿಸುವುದರಿಂದಲಾಗಲೀ ಯಾವುದೇ ಹಾನಿ ಇಲ್ಲ ಎಂದು ವಿಜ್ಞಾನಿಗಳು ಖಚಿತಪಡಿಸುತ್ತಾರೆ.

ಇದೇ ವೇಳೆ ಇಂದು ಗ್ರಹಣದ ಕುರಿತು ಇರುವ ಮೂಢನಂಬಿಕೆಯನ್ನು ಹೋಗಲಾಡಿಸಲು ಮಾನವ ಬಂಧುತ್ವ ವೇದಿಕೆಯು ‘ಗ್ರಹಣ ಸಂಭ್ರಮ’ ಹೆಸರಿನಲ್ಲಿ ಹಲವು ಜಿಲ್ಲೆಗಳಲ್ಲಿ ಸಾಮೂಹಿಕ ಭೋಜನ ಮತ್ತು ಇತರ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಮುಂದಿನ ಗ್ರಹಣ

ಮುಂದಿನ ಕಿರು ಗ್ರಹಣವು ಜನವರಿ 10, 2020ರಂದು ನಡೆಯಲಿದೆ. ಅದೇ ವರ್ಷ ಕೆಲವು ಚಿಕ್ಕ ಗ್ರಹಣಗಳು ನಡೆಯಲಿದ್ದು, ಭಾರತದಲ್ಲಿ ಗೋಚರವಾಗವು. ಮುಂದಿನ ಭಾಗಶಃ (ಖಂಡಗ್ರಾಸ) ಚಂದ್ರಗ್ರಹಣವು ನವೆಂಬರ್ 19, 2021ರಲ್ಲಿ, ಮತ್ತು ಖಗ್ರಾಸ ಅಂದರೆ, ಪೂರ್ಣ ಚಂದ್ರಗ್ರಹಣವು ಮೇ 26, 2021ರಂದು ಸಂಭವಿಸಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...