Homeಮುಖಪುಟಮುಸ್ಲಿಮರ ಮನೆ, ಪ್ರಾರ್ಥನಾ ಸ್ಥಳಗಳ 'ಕಾನೂನುಬಾಹಿರ ಧ್ವಂಸ'ವನ್ನು ತಕ್ಷಣ ನಿಲ್ಲಿಸಿ: ಅಮ್ನೆಸ್ಟಿ ಇಂಟರ್‌ನ್ಯಾಶನಲ್

ಮುಸ್ಲಿಮರ ಮನೆ, ಪ್ರಾರ್ಥನಾ ಸ್ಥಳಗಳ ‘ಕಾನೂನುಬಾಹಿರ ಧ್ವಂಸ’ವನ್ನು ತಕ್ಷಣ ನಿಲ್ಲಿಸಿ: ಅಮ್ನೆಸ್ಟಿ ಇಂಟರ್‌ನ್ಯಾಶನಲ್

- Advertisement -
- Advertisement -

ಮುಸ್ಲಿಮರ ಮನೆಗಳು, ವ್ಯಾಪಾರ ಕೇಂದ್ರಗಳು ಮತ್ತು ಪ್ರಾರ್ಥನಾ ಸ್ಥಳಗಳ ‘ಕಾನೂನುಬಾಹಿರ ಧ್ವಂಸ’ವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮಾನವ ಹಕ್ಕುಗಳ ಸಂಘಟನೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಭಾರತ ಸರಕಾರಕ್ಕೆ ಆಗ್ರಹಿಸಿದೆ.

ನೀವು ಮಾತನಾಡಿದರೆ, ನಿಮ್ಮ ಮನೆಯನ್ನು ಕೆಡವಲಾಗುತ್ತದೆ: ಭಾರತದಲ್ಲಿ ಬುಲ್ಡೋಜರ್ ಅನ್ಯಾಯ ಮತ್ತು ಹೊಣೆಗಾರಿಕೆಯನ್ನು ಬೆಳಕಿಗೆ ತರುವುದು ಹಾಗೂ ಭಾರತದಲ್ಲಿ ಬುಲ್ಡೋಜರ್ ಅನ್ಯಾಯದಲ್ಲಿ ಜೆಸಿಬಿ ಪಾತ್ರ ಮತ್ತು ಜವಾಬ್ದಾರಿ ಎನ್ನುವ ಎರಡು ವರದಿಗಳನ್ನು ಆಮ್ನೆಸ್ಟಿ ಪ್ರಕಟಿಸಿದೆ.

ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷದ ಪ್ರಚಾರದ ಭಾಗವಾಗಿ ಭಾರತದ ಕನಿಷ್ಠ 5 ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಜೆಸಿಬಿ, ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ. ಕಾನೂನು ಬಾಹಿರವಾಗಿ ಜನರ ಮನೆಗಳ ಕೆಡವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದ್ದು, ಬಲವಂತದ ಒಕ್ಕಲೆಬ್ಬಿಸುವುವಿಕೆಯಿಂದ ಯಾರನ್ನೂ ನಿರಾಶ್ರಿತರನ್ನಾಗಿ ಮಾಡಬಾರದು, ಈ ರೀತಿ ಕಾನೂನು ಬಾಹಿರವಾಗಿ ಧ್ವಂಸ ಮಾಡಿರುವ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ಸರಿಯಾದ ಪರಿಹಾರವನ್ನು ನೀಡಬೇಕು. ಈ ಕಾನೂನು ಉಲ್ಲಂಘನೆಗೆ ಕಾರಣರಾದವರನ್ನು ಜವಾಬ್ದಾರರನ್ನಾಗಿ ಮಾಡಬೇಕು ಎಂದು ಆಮ್ನೆಸ್ಟಿ ಆಗ್ರಹಿಸಿದೆ.

ರಾಜಕೀಯ ನಾಯಕರು ಮತ್ತು ಮಾಧ್ಯಮಗಳಿಂದ ‘ಬುಲ್ಡೋಜರ್ ನ್ಯಾಯ’ ಎಂದು ಬಿಂಬಿತವಾಗಿದೆ.  ಅಧಿಕಾರಿಗಳು ಮುಸ್ಲಿಂ ಸಮುದಾಯದ ಜನರ ಆಸ್ತಿಗಳನ್ನು ಕಾನೂನುಬಾಹಿರವಾಗಿ ಕೆಡವಿರುವುದು ಕ್ರೂರ ಮತ್ತು ಭಯಾನಕವಾಗಿದೆ. ಅಂತಹ ಸ್ಥಳಾಂತರ ಮತ್ತು ವಿಲೇವಾರಿಯು ಬಲವಾದ ಅನ್ಯಾಯವಾಗಿದೆ, ಕಾನೂನುಬಾಹಿರ ಮತ್ತು ತಾರತಮ್ಯವಾಗಿದೆ. ಇದರಿಂದ ಸಂತ್ರಸ್ತ ಕುಟುಂಬಗಳು ನಾಶವಾಗುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಪ್ರಧಾನ ಕಾರ್ಯದರ್ಶಿ ಆಗ್ನೆಸ್ ಕ್ಯಾಲಮರ್ಡ್ ಹೇಳಿದ್ದಾರೆ.

ಇತ್ತೀಚಿನ ನಿದರ್ಶನದಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ‘ಅಕ್ರಮ ಕಟ್ಟಡ’ ಎಂದು ಇತಿಹಾಸ ಪ್ರಸಿದ್ಧ ಅಖೂಂಡ್ಜಿ ಮಸೀದಿ ಮತ್ತು ಮದರಸಾವನ್ನು ಧ್ವಂಸಗೊಳಿಸಿದೆ. ಆದರೆ ASI ದಾಖಲೆಗಳು ಮಸೀದಿ 700ವರ್ಷಗಳಷ್ಟು ಹಳೆಯದು ಎನ್ನುವುದನ್ನು ಬಹಿರಂಗಗೊಳಿಸುತ್ತದೆ ಎಂಬುವುದನ್ನು ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಆಮ್ನೆಸ್ಟಿಯ ಸಂಶೋಧನಾ ವರದಿಯ ಪ್ರಕಾರ, ಏಪ್ರಿಲ್ ಮತ್ತು ಜೂನ್ 2022ರ ನಡುವೆ ಬಿಜೆಪಿ ಆಡಳಿತವಿರುವ ಅಸ್ಸಾಂ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಆಡಳಿತದ ದೆಹಲಿ ರಾಜ್ಯ ಸೇರಿದಂತೆ ಐದು ರಾಜ್ಯಗಳಲ್ಲಿ ಅಧಿಕಾರಿಗಳು ಧ್ವಂಸ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ.

128 ದಾಖಲಿತ ಪ್ರಕರಣಗಳಲ್ಲಿ 63 ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಪುರುಷರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಕನಿಷ್ಠ 617 ಜನರು ನಿರಾಶ್ರಿತರಾಗಿದ್ದಾರೆ ಎಂದು ತನಿಖೆ ದೃಢಪಡಿಸುತ್ತದೆ. ಅಕ್ರಮ ನಿರ್ಮಾಣ ಮತ್ತು ಅತಿಕ್ರಮಣ ನೆಪದಲ್ಲಿ ಹೆಚ್ಚಿನ ಒತ್ತುವರಿ ತೆರವು ಮತ್ತು ಧ್ವಂಸ ಕಾರ್ಯಾಚರಣೆ ನಡೆದಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ ಕಂಡುಕೊಂಡಿದೆ.

ಇದನ್ನು ಓದಿ: “10 ಸಾಲ್‌ ಅನ್ಯಾಯ್‌ ಕಾಲ್”: ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್‌ ಬಿಡುಗಡೆ ಮಾಡಿದ ‘ಕಪ್ಪುಪತ್ರ’ದಲ್ಲಿ ಏನಿದೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...