Homeಮುಖಪುಟವಿಶ್ಲೇಷಣೆ: ಆದಿತ್ಯನಾಥ್‌ ವಿರುದ್ಧ ರಾವಣ್ ಸ್ಪರ್ಧೆಯ ಲೆಕ್ಕಾಚಾರಗಳೇನು?

ವಿಶ್ಲೇಷಣೆ: ಆದಿತ್ಯನಾಥ್‌ ವಿರುದ್ಧ ರಾವಣ್ ಸ್ಪರ್ಧೆಯ ಲೆಕ್ಕಾಚಾರಗಳೇನು?

- Advertisement -
- Advertisement -

ಆಜಾದ್ ಸಮಾಜ ಪಕ್ಷದ (ಎಎಸ್‌ಪಿ) ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ್‌ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ನೆಲದಲ್ಲಿ ಸವಾಲು ಹಾಕಿದ್ದಾರೆ. ಆದಿತ್ಯನಾಥ್ ಅವರ ವಿರುದ್ಧ ಸ್ಪರ್ಧಿಸಿರುವ ರಾವಣ್ ಅವರಿಗೆ ಯಶಸ್ಸು ಸಾಧ್ಯವೆ ಎಂಬ ವಿಶ್ಲೇಷಣೆಯನ್ನು ‘ದಿ ಕ್ವಿಂಟ್‌’ ಜಾಲತಾಣ ಮಾಡಿದೆ.

ರಾವಣ್‌ ಅವರು ಯೋಗಿ ವಿರುದ್ಧ ಗೋರಖ್‌ಪುರ ನಗರ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗಿನ ಮೈತ್ರಿಯ ಬಗ್ಗೆ ಮಾತನಾಡುವಾಗ ಚಂದ್ರಶೇಖರ್‌ ಈ ಹಿಂದೆ ಈ ವಿಚಾರವಾಗಿಯೇ ಪ್ರಸ್ತಾಪಿಸಿದ್ದರು. ಆದರೆ ಆ ಮಾತುಕತೆ ಯಶಸ್ಸು ಕಾಣಲಿಲ್ಲ. “ಅಖಿಲೇಶ್ ಅವರು ನನ್ನನ್ನು ಕೇಳಿದರೆ, ನಾನು ಯೋಗಿ ವಿರುದ್ಧ ಚುನಾವಣೆ ಎದುರಿಸಲು ಸಿದ್ಧ” ಎಂದು ರಾವಣ್‌ ಘೋಷಿಸಿದ್ದರು.

ರಾವಣ್‌ ಈಗ ಯೋಗಿ ಆದಿತ್ಯನಾಥ್ ವಿರುದ್ಧ ಕಣಕ್ಕಿಳಿದಿದ್ದಾರೆ. ಗೋರಖ್‌ಪುರ ಕ್ಷೇತ್ರದಲ್ಲಿ ಕೇಸರಿ ರಾಜಕಾರಣಿಯನ್ನು ಸೋಲಿಸಲು ಸಾಧ್ಯವಾಗುತ್ತದೆಯೇ? ಇದರಾಚೆಗೆ ಚಂದ್ರಶೇಖರ್‌ ಆಜಾದ್ ಯಾವುದಾದರೂ ವಿಷಯದ ಮೇಲೆ ಕಣ್ಣಿಟ್ಟಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಶೋಧಿಸುವ ಯತ್ನವನ್ನು ದಿ ಕ್ವಿಂಟ್ ಮಾಡಿದೆ.

ಗೋರಖನಾಥ ನಾಡಿನಲ್ಲಿ ದಲಿತ ಶಕ್ತಿ

ಕಳೆದ ಕೆಲವು ಚುನಾವಣೆಗಳಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಾಧನೆಯು ಗೋರಖ್‌ಪುರ ನಗರ ಕ್ಷೇತ್ರದಲ್ಲಿ ದಲಿತ ಮತಗಳ ರಾಜಕೀಯ ಬಲವನ್ನು ಸೂಚಿಸುತ್ತದೆ. ಕುತೂಹಲಕಾರಿಯಾಗಿ, ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಬಿಎಸ್‌ಪಿ ಎರಡನೇ ರನ್ನರ್‌ ಅಪ್‌ ಆಗುತ್ತಿರುವುದನ್ನು ಗಮನಿಸಬಹುದು.

2017ರಲ್ಲಿ ಬಿಎಸ್‌ಪಿಯ ಜನಾರ್ದನ್ ಚೌಧರಿ ಶೇ.11ರಷ್ಟು ಮತಗಳನ್ನು ಪಡೆದಿದ್ದರೆ, 2012ರಲ್ಲಿ ದೇವೇಂದ್ರ ಚಂದ್ರ ಶ್ರೀವಾಸ್ತವ ಶೇ.14ರಷ್ಟು ಮತಗಳನ್ನು ಗಳಿಸಿ 23,000 ಮತಗಳನ್ನು ಪಡೆದಿದ್ದರು. 2007 ರಲ್ಲಿ, ವಿನೋದ್ ಕುಮಾರ್ ಉಪಾಧ್ಯಾಯ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದರು. ಕೇವಲ 5,000 ಮತಗಳನ್ನು ಪಡೆದಿದ್ದರು.

ಬಿಎಸ್‌ಪಿಯ ವೋಟ್ ಬ್ಯಾಂಕ್‌ನ ಮೇಲೆ ಚಂದ್ರಶೇಖರ್‌ ಆಜಾದ್ ಕಣ್ಣಿಟ್ಟಿದ್ದಾರೆ. ಹಾಗಾಗಿ, ಬಿಎಸ್‌ಪಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಿದರೆ, ದಲಿತ ಮತಗಳು ವಿಭಜನೆಯಾಗುವುದು ಖಚಿತ ಎನ್ನಲಾಗಿದೆ.

ಆದಿತ್ಯನಾಥ್‌ಗೆ ಸವಾಲೆಸೆಯುವ ಅಗಾಧ ಶಕ್ತಿ ರಾವಣ್‌‌ ಅವರಿಗೆ ಇಲ್ಲವೆಂದಾದರೆ, ಆದಿತ್ಯನಾಥ್‌ ಅವರನ್ನು ಏಕೆ ಎದುರಿಸಲು ನಿಂತಿದ್ದಾರೆ ಎಂಬುದು ರಾಜಕೀಯ ಪಂಡಿತರಿಗೆ ಕುತೂಹಲದ ಸಂಗತಿಯಾಗಿದೆ.

ಗೋರಖ್‌ಪುರ ಗ್ರಾಮಾಂತರ ಕ್ಷೇತ್ರದಲ್ಲಿ ದಲಿತ, ಒಬಿಸಿ ಮತ್ತು ಅಲ್ಪಸಂಖ್ಯಾತ ಮತದಾರರನ್ನು ಒಳಗೊಂಡಿರುವ ದೊಡ್ಡ ಪ್ರಮಾಣದ ಪ್ರದೇಶಗಳನ್ನು ಸೇರಿಸಿದ ಕಾರಣ ದಲಿತ ಮತ್ತು ಅಲ್ಪಸಂಖ್ಯಾತ ಮತದಾರರ ಶಕ್ತಿ ಬದಲಾಗಿದೆ. ಮುಖ್ಯವಾಗಿ ವೈಶ್ಯ, ಕಾಯಸ್ಥ, ರಜಪೂತ ಮತ್ತು ಬ್ರಾಹ್ಮಣ ಮತಗಳೊಂದಿಗೆ ಬಿಜೆಪಿ ಅಭ್ಯರ್ಥಿಗೆ ಅನುಕೂಲಕರ ವಾತಾವರಣವಿದೆ.

ಅಖಿಲೇಶ್ ಯಾದವ್ ಅವರೊಂದಿಗಿನ ಮೈತ್ರಿ ಮುರಿದುಬಿದ್ದ ನಂತರ ರಾವಣ್‌ ಮತ್ತು ಯೋಗಿ ನಡುವಿನ ಸಂಭಾವ್ಯ ರಹಸ್ಯ ಒಪ್ಪಂದದ ಬಗ್ಗೆ ವದಂತಿಗಳು ಹರಡಿಕೊಂಡಿವೆ ಎಂದು ಗೋರಖ್‌ಪುರ ಮೂಲದ ಹಿರಿಯ ಪತ್ರಕರ್ತ ಮನೋಜ್ ಕುಮಾರ್ ಸಿಂಗ್ ಹೇಳುತ್ತಾರೆ.

ಚುನಾವಣೆಯ ಹೋರಾಟವು ಆ ಆರೋಪದಿಂದ ಅವರನ್ನು ಮುಕ್ತಗೊಳಿಸಬಹುದು. ಆದರೆ ಇತರ ಪಕ್ಷಗಳಾದ ಎಸ್‌ಪಿ ಅಥವಾ ಕಾಂಗ್ರೆಸ್ – ರಾವಣ್ ಅವರನ್ನು ಬೆಂಬಲಿಸಿದರೆ ಮಾತ್ರ ಅವರ ರಾವಣ್‌ ಅವರಿಗೆ ಹೆಚ್ಚಿನ ಅವಕಾಶ ದೊರಕಬಹುದು.

ಮೇಲಾಗಿ, ಯೋಗಿ ಅವರು ದಲಿತ ಮತಗಳ ಕಡೆಗೂ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ. ಬಲಪಂಥೀಯ ಅಂಗಸಂಸ್ಥೆಯಾದ ಯುವ ವಾಹಿನಿಗೆ ಸ್ಲಂಗಳಲ್ಲಿ ಅನೇಕ ದಲಿತ ಯುವಕರು ಸೇರಿಕೊಂಡಿದ್ದಾರೆ. ಸ್ಲಂ ನಿವಾಸಿಗಳನ್ನು ನಿಯಮಿತವಾಗಿ ಯೋಗಿ ಆದಿತ್ಯನಾಥ್‌ ಅವರ ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ. ಈ ಚುನಾವಣೆಯಲ್ಲಿ ದಲಿತ ಮತದಾರರ ನಿರ್ಧಾರ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮಾಯಾವತಿಯವರ ಪ್ರಾಬಲ್ಯ?

ಚಂದ್ರಶೇಖರ್ ಆಜಾದ್ ರಾವಣ್‌ ಅವರ ಪ್ರಯತ್ನಗಳು ದಲಿತ ರಾಜಕಾರಣದಲ್ಲಿ ಮಾಯಾವತಿಗೆ ಪರ್ಯಾಯವಾಗಲು ಯತ್ನಿಸಿವೆ. ಇತ್ತ ರಾವಣ್‌ ಅವರಿಗೆ ದಲಿತ ಯುವಕರಲ್ಲಿ ಸಾಕಷ್ಟು ಅನುಯಾಯಿಗಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ, ಮಾಯಾವತಿಯವರು ಸಾರ್ವಜನಿಕವಾಗಿ ಮಾತನಾಡುತ್ತಿರುವುದು ಕಡಿಮೆಯಾದಂತೆ ಚಂದ್ರಶೇಖರ್‌ ಆಜಾದ್‌ ಅವರೇ ದಲಿತ ಸಮಸ್ಯೆಗಳನ್ನು ಉತ್ಸಾಹದಿಂದ ಕೈಗೆತ್ತಿಕೊಂಡು ಬೀದಿಗಿಳಿದಿದ್ದಾರೆ. ಪ್ರಭಾವಿ ಆದಿತ್ಯನಾಥ್‌ ವಿರುದ್ಧ ಸ್ಪರ್ಧಿಸಿರುವುದು ಆಜಾ‌ದ್ ಅವರನ್ನು ದೊಡ್ಡ ಮಟ್ಟದಲ್ಲಿ ಗುರುತಿಸಲಿದೆ.

ಗೋರಖ್‌ಪುರ ನಗರ ಕ್ಷೇತ್ರದಿಂದ ಬಿಎಸ್‌ಪಿ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಆದರೆ ರಾವಣ್‌ ಹೆಚ್ಚು ಮತಗಳನ್ನು ಪಡೆಯಲು ಯಶಸ್ವಿಯಾದರೆ, ಇಲ್ಲಿಯವರೆಗೆ ಬಹುತೇಕ ಅವಿರೋಧವಾಗಿ ದಲಿತ ಇಮೇಜ್‌ ಆಗಿ ಉಳಿದಿರುವ ‘ಬೆಹೆನ್‌ಜಿ’ ಚಿತ್ರಣ ಬದಲಾಗಬಹುದು ಎನ್ನಲಾಗುತ್ತಿದೆ.

ಆದರೆ, ಮಾಯಾವತಿ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಚಂದ್ರಶೇಖರ್ ಆಜಾದ್ ಎಚ್ಚರಿಕೆ ವಹಿಸಿದ್ದಾರೆ. ದಲಿತ ಮತಗಳ ಮೇಲಿನ ಮಾಯಾವತಿಯವರ ‘ಅಧಿಪತ್ಯ’ದ ವಿರುದ್ಧ ಅವರು ಯಾವುದೇ ಕಹಳೆ ಊದುತ್ತಿಲ್ಲ. ಚಂದ್ರಶೇಖರ್‌‌ ನಡೆಗಳು ದಲಿತ ಮತದಾರರನ್ನು ಬಿಎಸ್‌ಪಿಯಿಂದ ಹೊರತರುವ ಯತ್ನಗಳಂತೆ ಭಾಸವಾಗುತ್ತಿವೆ.

ಗೋರಖ್‌ಪುರ ನಗರ ಕ್ಷೇತ್ರದಿಂದ ಚಂದ್ರಶೇಖರ್ ಆಜಾದ್ ರಾವಣ ಗೆಲ್ಲಬಹುದು ಅಥವಾ ಗೆಲ್ಲದೇ ಇರಬಹುದು. ಆದರೆ ಆದಿತ್ಯನಾಥ್‌ ತವರು ನೆಲದಲ್ಲಿ ಅವರ ವಿರುದ್ಧ ಹೋರಾಡುವ ಮೂಲಕ ಲಾಭ ಪಡೆಯಲು ಸಿದ್ಧರಾಗಿದ್ದಾರೆ ಎಂದು ಕ್ವಿಂಟ್ ವರದಿ ಹೇಳುತ್ತದೆ


ಇದನ್ನೂ ಓದಿರಿ: ಭಾರತದ ‘ಅತ್ಯಂತ ಎತ್ತರದ ವ್ಯಕ್ತಿ’ ಸಮಾಜವಾದಿ ಪಾರ್ಟಿಗೆ ಸೇರ್ಪಡೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....