Homeಚಳವಳಿಭೀಮಾ ಕೋರೆಗಾಂವ್ ಪ್ರಕರಣ: ಹೋರಾಟಗಾರ ಗೌತಮ್ ನವಲಖಾ ಗೃಹಬಂಧನದ ಮನವಿ ಪುರಸ್ಕರಿಸಿದ ಸುಪ್ರೀಂಕೋರ್ಟ್‌

ಭೀಮಾ ಕೋರೆಗಾಂವ್ ಪ್ರಕರಣ: ಹೋರಾಟಗಾರ ಗೌತಮ್ ನವಲಖಾ ಗೃಹಬಂಧನದ ಮನವಿ ಪುರಸ್ಕರಿಸಿದ ಸುಪ್ರೀಂಕೋರ್ಟ್‌

- Advertisement -
- Advertisement -

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನದಲ್ಲಿರುವ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವಲಖ ಅವರನ್ನು ಗೃಹಬಂಧನಕ್ಕೆ ವರ್ಗಾಯಿಸಲು ಸುಪ್ರೀಂಕೋರ್ಟ್‌ ಗುರುವಾರ ಆದೇಶಿಸಿದೆ. ಗೃಹಬಂಧನಕ್ಕೆ ವರ್ಗಾಯಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯ ಆಕ್ಷೇಪಣೆಗಳ ಹೊರತಾಗಿಯೂ ನವಲಖ ಅವರ ಮನವಿಗೆ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.

ನವಲಖ ಅವರ ವಯಸ್ಸು, ಆರೋಗ್ಯ ಸ್ಥಿತಿ, ಅವರು 2020 ರಿಂದ ಜೈಲಿನಲ್ಲಿದ್ದಾರೆ ಎಂಬ ಅಂಶ, ಜೊತೆಗೆ ಈ ಪ್ರಕರಣದಲ್ಲಿ ಆರೋಪಿಯಾಗಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ ಹಾಗೂ ಮುಂದಿನ ದಿನಗಳಲ್ಲಿ ವಿಚಾರಣೆ ಪ್ರಗತಿ ಕಾಣುವ ಸಾಧ್ಯತೆಯಿಲ್ಲ ಎಂಬ ಅಂಶಗಳನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. 48 ಗಂಟೆಗಳ ಒಳಗೆ ಆದೇಶವನ್ನು ಜಾರಿಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರ ಪೀಠವು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆರಂಭದಲ್ಲಿ ಅವರು ತಿಂಗಳ ಕಾಲ ಗೃಹಬಂಧನದಲ್ಲಿರುತ್ತದೆ, ನಂತರ ಅದನ್ನು ನ್ಯಾಯಾಲಯವು ಪರಿಶೀಲಿಸುತ್ತದೆ ಎಂದು ಪೀಠವು ಹೇಳಿದೆ. ಪೀಠವು ಮುಂಬೈನಲ್ಲಿ ಅವರೊಂದಿಗೆ ವಾಸಿಸಲು ಅನುಮತಿ ನೀಡಿದ ಅವರ ಸಂಗಾತಿ ಸಭಾ ಹುಸೈನ್‌‌ ಅವರಿಗೂ ಕಠಿಣ ಷರತ್ತುಗಳನ್ನು ವಿಧಿಸಿದ್ದು, ಈ ಷರತ್ತುಗಳಲ್ಲಿ ಫೋನ್ ಬಳಕೆಯ ಮೇಲಿನ ನಿರ್ಬಂಧಗಳು ಕೂಡಾ ಒಳಗೊಂಡಿವೆ.

ಇದನ್ನೂ ಓದಿ: ಅವರ ಹಾಡಿನೊಂದಿಗೇ ಅವರನ್ನು ಮೆಲ್ಲನೆ ಮುಗಿಸುವುದು; ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಶೋಕಗೀತೆ

ನವಲಖಾ ಅವರನ್ನು ಗೃಹ ಬಂಧನಕ್ಕೆ ವರ್ಗಾವಣೆ ಮಾಡುವ ಮೊದಲು ಅವರು ಉಳಿಯಲು ಇರುವ “ಆವರಣದ ಅಗತ್ಯ ಮೌಲ್ಯಮಾಪನವನ್ನು ಕೈಗೊಳ್ಳಲು” ಎನ್ಐಎಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಗೃಹಬಂಧನದ ಯಾವುದೇ ದುರುಪಯೋಗ ನಡೆಯದಂತೆ ಮೇಲ್ವಿಚಾರಣೆ ಮಾಡಲು ಮತ್ತು ತಡೆಯಲು ಸಂಸ್ಥೆಯು “ಸೂಕ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಸ್ವತಂತ್ರವಾಗಿದೆ” ಎಂದು ಸುಪ್ರೀಂಕೋರ್ಟ್‌ ಆದೇಶವು ಹೇಳಿದ್ದು, ಅವರ ಭದ್ರತೆಗೆ ತಗಲುವ ವೆಚ್ಚ 2.4 ಲಕ್ಷ ರೂ. ಗಳನ್ನು ಠೇವಣಿ ಇಡುವಂತೆ ಕೇಳಿದೆ.

“ಅವರು ಉಳಿಯುವ ಮನೆಯ ಪ್ರವೇಶದ್ವಾರದಲ್ಲಿ ಅವರದೇ ವೆಚ್ಚದಲ್ಲಿ ಸಿಸಿಟಿವಿ ಅಳವಡಿಸಬೇಕು. ಸಿಸಿಟಿವಿ ಕೊಠಡಿಗಳ ಹೊರಗೆ, ಪ್ರವೇಶ, ನಿರ್ಗಮನ ಧ್ವಾರದ ಹೊರಗೆ ಇರಬೇಕು. ಸಿಸಿಟಿವಿಯು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು. ಅವರನ್ನು ಮನೆಗೆ ವರ್ಗಾಯಿಸುವ ಮೊದಲು ಮನೆಯನ್ನು ಪರೀಕ್ಷಿಸಲಾಗುವುದು” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

ಗೃಹಬಂಧನದಲ್ಲಿರುವಾಗ ಯಾವುದೇ ಮೊಬೈಲ್ ಫೋನ್, ಇಂಟರ್ನೆಟ್, ಲ್ಯಾಪ್‌ಟಾಪ್ ಅಥವಾ ಯಾವುದೇ ಸಂವಹನ ಸಾಧನವನ್ನು ಬಳಸದಂತೆ ಸುಪ್ರಿಂಕೋರ್ಟ್‌ ನವಲಾಖಾ ಅವರನ್ನು ಕೇಳಿದ್ದು, ಆದರೆ ದಿನಕ್ಕೊಮ್ಮೆ 10 ನಿಮಿಷಗಳ ಕಾಲ ಪೊಲೀಸ್ ಸಿಬ್ಬಂದಿ ಒದಗಿಸುವ ಮೊಬೈಲ್‌ ಬಳಸಲು ಅವರಿಗೆ ಅನುಮತಿ ನೀಡಿದೆ.

ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ: ಸಾಕ್ಷ್ಯ ಸಂಗ್ರಹಿಸಲು ಹೆಣಗುತ್ತಿರುವ NIA!

“ನವಲಖ ಅವರು ಮುಂಬೈನಿಂದ ಹೊರ ಹೋಗುವಂತಿಲ್ಲ, ಆದರೆ ವಾರಕ್ಕೊಮ್ಮೆ ಮೂರು ಗಂಟೆಗಳ ಕಾಲ ಇಬ್ಬರು ಕುಟುಂಬ ಸದಸ್ಯರನ್ನು ಭೇಟಿ ಮಾಡಬಹುದು” ಎಂದು ಸುಪ್ರೀಂಕೋರ್ಟ್‌ ಹೇಳಿದ್ದು, ಹೆಚ್ಚುವರಿಯಾಗಿ, ಪ್ರಕರಣದಲ್ಲಿ ಯಾವುದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಯನ್ನು ಮಾಡದಂತೆ ಕೇಳಿದೆ.

ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ನಡೆಯಲು ಅವರಿಗೆ ಅನುಮತಿ ನೀಡಲಾಗಿದ್ದರೂ ಯಾರೊಂದಿಗೂ ಯಾವುದೇ ಸಂಭಾಷಣೆಯಲ್ಲಿ ತೊಡಬಾರದು ಎಂದು ಹೇಳಿದೆ. “ಅವರಿಗೆ ವಕೀಲರೊಂದಿಗೆ ಸಂವಹನ ನಡೆಸಲು ಅನುಮತಿ ನೀಡಲಾಗುತ್ತದೆ ಮತ್ತು ಅವರು ವಕೀಲರ ಹೆಸರನ್ನು ನೀಡಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.

ಫೋನ್ ಕರೆಗಳನ್ನು ಮಾಡುವ ಸೌಲಭ್ಯವನ್ನು ಹೊಂದಿರುವ ಮೊಬೈಲ್ ಫೋನ್ ಅನ್ನು ಬಳಸಲು ನ್ಯಾಯಾಲಯವು ಅವರನ್ನು ನೋಡಿಕೊಳ್ಳುವ ಅವರ ಸಂಗಾತಿಗೆ ಅನುಮತಿ ನೀಡಿದ್ದು, ಆದರೆ ಅವರು ಮಾಡಿದ ಫೋನ್ ಕರೆಗಳ ಕಣ್ಗಾವಲು ಮತ್ತು ರೆಕಾರ್ಡ್‌ ಮಾಡಲು ಸುಪ್ರೀಂಕೋರ್ಟ್‌ ತನಿಖಾ ಸಂಸ್ಥೆಗೆ ಸ್ವಾತಂತ್ರ್ಯ ನೀಡಿದೆ. “ಸಹಚರನೂ ಫೋನ್ ಕರೆ ಅಥವಾ ಸಂದೇಶದ ವಿವರಗಳನ್ನು ಅಳಿಸಬಾರದು” ಎಂದು ನ್ಯಾಯಾಲಯವು ಹೇಳಿದೆ.

ಇದನ್ನೂ ಓದಿ: ‘ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಾಶ ಮಾಡುವ ನಡೆ’: NHRC ಅಧ್ಯಕ್ಷರಾಗಿ ಅರುಣ್ ಮಿಶ್ರಾ ಆಯ್ಕೆಗೆ PUCL ಖಂಡನೆ

ತನ್ನನ್ನು ಗೃಹಬಂಧನಕ್ಕೆ ವರ್ಗಾಯಿಸಲು ನಿರಾಕರಿಸಿದ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನವಲಖಾ ಅವರು ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಿ ಆದೇಶ ನೀಡಿದೆ. ನವಲಖಾ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಅರ್ಜಿದಾರರು 70 ವರ್ಷ ವಯಸ್ಸಿನವರಾಗಿದ್ದು, ಅನೇಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ ಎಂದು ವಾದಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸದ್ಯಕ್ಕೆ ಇದೊಂದು ಸಮಾದಾನಕರ ಸಂಗತಿ. ಯು.ಎ.ಪಿ.ಎ. ಎಂಬ ಕರಾಳ ಕಾನೂನು ರದ್ದಾಗಬೇಕು.

LEAVE A REPLY

Please enter your comment!
Please enter your name here

- Advertisment -

‘ವೋಟ್ ಚೋರಿ ಆಗುತ್ತಿದೆ ಎಂಬುದಕ್ಕೆ ಮೂರು ಸಾಕ್ಷಿಗಳಿವೆ; ಮೋದಿ-ಶಾ ಉತ್ತರಿಸಲಿ’: ಬೆಂಗಳೂರಿನಲ್ಲಿ ಧ್ರುವ್ ರಾಠೀ ಆಗ್ರಹ 

ಬೆಂಗಳೂರು: “ವೋಟ್ ಚೋರಿ ಆಗುತ್ತಿದೆ ಎನ್ನುವುದಕ್ಕೆ ನಾನು ಮೂರು ಸಾಕ್ಷಿಗಳನ್ನು ನೀಡುತ್ತೇನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಉತ್ತರಿಸಬೇಕು” ಎಂದು ಜರ್ಮನಿಯಲ್ಲಿ ವಾಸವಿರುವ ಖ್ಯಾತ ಭಾರತೀಯ ಯೂಟ್ಯೂಬರ್, ವೀಡಿಯೊ...

‘ಪ್ರಜೆಗಳನ್ನು ಕೊಲ್ಲಲು ಸಾಧ್ಯವಿಲ್ಲ, ಅದಕ್ಕಾಗಿಯೇ ವೋಟುಗಳನ್ನು ತೆಗೆದಿದ್ದಾರೆ’: ಚುನಾವಣಾ ಆಯೋಗದ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ 

ಬೆಂಗಳೂರು: “ಆದಿವಾಸಿಗಳು, ಬಡವರು ಮತ್ತು ಮುಸ್ಲಿಮರ ವೋಟುಗಳನ್ನು ತೆಗೆದಿದ್ದಾರೆ. ಪ್ರಜೆಗಳನ್ನು ಕೊಲ್ಲುವುದಕ್ಕೆ ಸಾಧ್ಯವಿಲ್ಲ, ಅದಕ್ಕೇ ಅವರ ವೋಟುಗಳನ್ನು ತೆಗೆದಿದ್ದಾರೆ” ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ...

‘ಮತದಾನದ ಹಕ್ಕು ಉಳಿದರೆ ಮಾತ್ರ ದೇಶ ಉಳಿಯುತ್ತದೆ’: ಬೆಂಗಳೂರಿನಲ್ಲಿ SIR ವಿರುದ್ಧ ಅಭಿಜಿತ್ ದೀಪ್ಕೆ ವಾಗ್ದಾಳಿ

ಬೆಂಗಳೂರು: “ದೇಶ ಉಳಿಯುವುದು ವೋಟ್ ಉಳಿದರೆ ಮಾತ್ರ. ಮತ ಹೋದರೆ ಎಲ್ಲವನ್ನೂ ಮರೆತಂತೆ ಆಗುತ್ತದೆ. ನಮ್ಮ ಹೋರಾಟ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗಷ್ಟೇ ಅಲ್ಲ, SIR ಪ್ರಕ್ರಿಯೆಯನ್ನೇ ರದ್ದುಪಡಿಸುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು...

ಎಸ್ಐಆರ್ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಹಾಗೂ ‘ಜನತಾ ನ್ಯಾಯಾಲಯ’ ಸಮಾವೇಶಕ್ಕೆ ಚಾಲನೆ 

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಕ್ಟೋಬರ್ 8ರಂದು ಬೃಹತ್ ಪ್ರತಿಭಟನೆ ಹಾಗೂ ‘ಜನತಾ ನ್ಯಾಯಾಲಯ’ ಸಮಾವೇಶ ನಡೆಯಿತು. ಚುನಾವಣಾ ಆಯೋಗದ ಮುಖ್ಯ...

ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಿದರೂ ಹೋರಾಟ ನಿಲ್ಲದು: ಸಿಇಸಿ ವಿರುದ್ಧ ದೀರ್ಘ ಆಂದೋಲನದ ಎಚ್ಚರಿಕೆ; ಅ.10ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಿದರೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿ ಸಂಘಟನೆಗಳು ಹಾಗೂ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಘೋಷಿಸಿವೆ. ಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ...

ರಾಹುಲ್ ಗಾಂಧಿ ಚಿಕನ್ ರೋಲ್ ತಿಂದರೂ ಕಷ್ಟ ಈ ಬಲಪಂಥೀಯರಿಗೆ

ಹಿಂದೊಮ್ಮೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೀನು ತಿಂದು ಧರ್ಮಸ್ಥಳದ ದೇವಸ್ಥಾನ ಪ್ರವೇಶ ಮಾಡಿದ್ದರು ಎಂಬುದನ್ನು ವಿವಾದವಾಗಿ ಮಾಡಿದ್ದ ಇದೇ ಬಲಪಂಥೀಯರು, ಗೋದಿ ಮೀಡಿಯಾಗಳು, ಈಗ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ  ಚಿಕನ್ ರೋಲ್...

10 ತಿಂಗಳಲ್ಲಿ 125 ‘ಮ್ಯಾನುಯಲ್ ಸ್ಕ್ಯಾವೆಂಜರ್’ಗಳ ಸಾವು; ಕಳವಳ ಹುಟ್ಟಿಸಿದ ವರದಿ

ದಲಿತರು ಮತ್ತು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುವ 'ದಲಿತ್ ಆದಿವಾಸಿ ಶಕ್ತಿ ಅಧಿಕಾರ್ ಮಂಚ್' (ಡಿಎಎಸ್‌ಎಎಂ) ಸಂಸ್ಥೆಯ ಪ್ರಕಾರ, ಈ ವರ್ಷದ ಜನವರಿಯಿಂದ ಅಕ್ಟೋಬರ್ ನಡುವೆ ಭಾರತದಾದ್ಯಂತ ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ಗೆ (ಕೈಯಿಂದ ಮಲಹೊರುವ ಅಥವಾ...

ಗ್ಯಾನೇಶ್‌ ವಿರುದ್ಧ ಪ್ರತಿಭಟನೆಗೆ ಅವಕಾಶ ನಿರಾಕರಣೆ; ‘ನಮಗೆ ಅನುಮತಿ ನೀಡಲು ದೆಹಲಿ ಪೊಲೀಸ್ ಯಾರು’ ಎಂದ ಸಿಜೆಪಿ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಹಾಗೂ ವಕ್ತಾರ ಸೌರವ್ ದಾಸ್...

ಸುಳ್ಳು ಹೇಳಿ 1054 ಮುಸ್ಲಿಮರ ವೋಟ್ ಡಿಲೀಟ್‌ಗೆ ಯತ್ನಿಸಿದ ಶಾಸಕ ಯತ್ನಾಳ್ : ನಕಲಿ ದಾಖಲೆ ಸಲ್ಲಿಕೆ, ಅಧಿಕಾರಿಗಳೂ ಭಾಗಿಯಾಗಿರುವ ಆರೋಪ!

ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಕಲಿ ದಾಖಲೆ ಸೃಷ್ಟಿಸಿ 1054 ಮಂದಿ ಜೀವಂತವಿರುವ ಮುಸ್ಲಿಂ ಮತದಾರರ ಹೆಸರುಗಳನ್ನು 'ಮರಣ' ಹೊಂದಿದ್ದಾರೆ ಎಂದು ಸುಳ್ಳು...

ಗುಜರಾತ್: ವಿವಾಹೇತರ ಸಂಬಂಧ ಆರೋಪ: ‘ಶುದ್ಧೀಕರಣ’ದ ಹೆಸರಿನಲ್ಲಿ ಮಹಿಳೆ ಮೇಲೆ ಹಲ್ಲೆ, ಸಾಮೂಹಿಕ ಅತ್ಯಾಚಾರ; ಇಬ್ಬರು ಮಹಿಳೆಯರು ಸೇರಿ 9 ಜನರ ಬಂಧನ

ಅಹಮದಾಬಾದ್: ಗುಜರಾತ್‌ನಲ್ಲಿ ಮಹಿಳೆಯೊಬ್ಬರ ಮೇಲೆ ‘ಶುದ್ಧೀಕರಣ’ದ ಹೆಸರಿನಲ್ಲಿ ನಡೆದಿರುವ ಭೀಕರ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಹೊರಿಸಿ ಮಹಿಳೆಯನ್ನು ಅವಮಾನಿಸಿ, ಕಟ್ಟಿಹಾಕಿ ಲೈಂಗಿಕ ದೌರ್ಜನ್ಯಕ್ಕೆ...