Homeಮುಖಪುಟಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಟೀಕೆ: ‘ಜಯ್ ಶಾ ಎಷ್ಟು ಶತಕಗಳನ್ನು ಬಾರಿಸಿದ್ದಾರೆ?’ ಎಂದ DMK

ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಟೀಕೆ: ‘ಜಯ್ ಶಾ ಎಷ್ಟು ಶತಕಗಳನ್ನು ಬಾರಿಸಿದ್ದಾರೆ?’ ಎಂದ DMK

- Advertisement -
- Advertisement -

ತಮಿಳುನಾಡಿನ ಕುಟುಂಬ ರಾಜಕಾರಣದ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಆಡಳಿತರೂಢ ಡಿಎಂಕೆ ತಿರುಗೇಟು ನೀಡಿದ್ದು, “ಜಯ್ ಶಾ ಯಾರು ಮತ್ತು ಅವರು ಎಷ್ಟು ಶತಕಗಳನ್ನು ಬಾರಿಸಿದ್ದಾರೆ?” ಎಂದು ಪ್ರಶ್ನಿಸಿದೆ. ನಡ್ಡಾ ಅವರು ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಮೇಲೆ ಕಟುವಾದ ವಾಗ್ದಾಳಿ ನಡೆಸಿ, ‘‘ಕುಟುಂಬ ರಾಜಕಾರಣದ ಹಣ ಲಪಟಾಯಿಸುವ ಕಟ್ಟೆ ಪಂಚಾಯತ್‌” ಎಂದು ಕರೆದಿದ್ದರು.

ಹೊಸ ಶಿಕ್ಷಣ ನೀತಿ ಮತ್ತು ನೀಟ್‌ಗೆ ರಾಜ್ಯ ಸರ್ಕಾರ ವಿರೋಧಿಸುತ್ತಿರುವುದರ ಹಿನ್ನಲೆಯಲ್ಲಿ ಪರೋಕ್ಷವಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಟೀಕಿಸಿರುವ ನಡ್ಡಾ, “ಅಶಿಕ್ಷಿತರು ವ್ಯವಹಾರಗಳ ಚುಕ್ಕಾಣಿ ಹಿಡಿದಾಗ ಹೀಗಾಗುತ್ತದೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದಕ್ಕೆ ತಿರುಗೇಟು ನೀಡಿರುವ ಆಡಳಿತಾರೂಢ ಡಿಎಂಕೆ, “ಒಕ್ಕೂಟ ಸರ್ಕಾರದ ಅಧಿಕಾರದಲ್ಲಿರುವವರ ಶೈಕ್ಷಣಿಕ ಅರ್ಹತೆ ಕೇಳುವ ಮಟ್ಟಕ್ಕೆ ತಾನು ಇಳಿಯುವುದಿಲ್ಲ” ಎಂದು ಹೇಳಿದೆ. “ಜಯ್ ಶಾ ಯಾರು ಮತ್ತು ಅವರು ಎಷ್ಟು ಶತಕಗಳನ್ನು ಹೊಡೆದಿದ್ದಾರೆ?” ಡಿಎಂಕೆ ವಕ್ತಾರ ಎ. ಸರವಣ್ ಕೇಳಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಷಾ ಅವರು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿತಯಾದ BCCI ಯ ಗೌರವ ಕಾರ್ಯದರ್ಶಿಯಾಗಿದ್ದಾರೆ.

ಇದನ್ನೂ ಓದಿ: ಸಿನಿಮಾ ಬಿಡುಗಡೆಯಾಗಿ 3 ದಿನ ವಿಮರ್ಶಿಸಬೇಡಿ!: ತಮಿಳು ನಿರ್ಮಾಪಕರ ವಿಚಿತ್ರ ಬೇಡಿಕೆ

ಡಿಎಂಕೆಯನ್ನು ‘ದ್ವೇಷ ಮತ್ತು ವಿಭಜನೆ’ ಹರಡುವ ಪಕ್ಷ ಎಂದು ಕರೆದ ನಡ್ಡಾ, “ನಾವು ಕಾಶ್ಮೀರದಿಂದ ತಮಿಳುನಾಡಿನವರೆಗೆ ಕುಟುಂಬ ರಾಜಕಾರಣದ ಪಕ್ಷಗಳಿಗೆ ಸೀಮಿತವಾದ ಪ್ರಾದೇಶಿಕ ಪಕ್ಷಗಳ ವಿರುದ್ಧ ಹೋರಾಡುತ್ತಿದ್ದೇವೆ. ಬಿಜೆಪಿ ಮಾತ್ರ ಸಿದ್ಧಾಂತ ಆಧಾರಿತ ರಾಷ್ಟ್ರೀಯ ಪಕ್ಷವಾಗಿದೆ. ಬಿಜೆಪಿ ಪ್ರಾದೇಶಿಕ ಆಕಾಂಕ್ಷೆಗಳನ್ನು ನೋಡಿಕೊಳ್ಳುತ್ತದೆ” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಎಂಕೆ ವಕ್ತಾರ,“ಬಿಜೆಪಿಯು ದ್ವೇಷ ಮತ್ತು ವಿಭಜನೆಯ ಯಜಮಾನ. ಇದುವೆ ಅದರ ನಿಜವಾದ ಮುಖ. ಅದು ಯುವ ಜನರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ತಮಿಳುನಾಡಿನ ಜನರು ಬುದ್ಧಿವಂತರಾಗಿದ್ದು, 2024 ರಲ್ಲಿ ಅವರನ್ನು ತಿರಸ್ಕರಿಸುತ್ತಾರೆ” ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಪಕ್ಷವನ್ನು ವಿಸ್ತರಿಸುವ ಪ್ರಯತ್ನದ ಭಾಗವಾಗಿ ನಡ್ಡಾ ಅವರು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ತವರು ನೆಲವಾದ ಕಾರೈಕುಡಿಯಲ್ಲಿ ಈ ಹೇಳಿಕೆಯನ್ನು ನೀಡಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿ ತಮಿಳು ಹುಡುಗಿಯನ್ನು ಮದುವೆಯಾಗುತ್ತಾರೆ: ಭಾರತ್ ಜೋಡೋ ಯಾತ್ರೆಯಲ್ಲಿ ಮಹಿಳೆಯ ಅಭಿಲಾಷೆ

ಡಿಎಂಕೆ ಮತ್ತು ಎಐಎಡಿಎಂಕೆ ಎರಡು ಪಕ್ಷಗಳ ಪ್ರಾಬಲ್ಯವಿರುವ ತಮಿಳುನಾಡಿನಲ್ಲಿ ಬಿಜೆಪಿಗೆ ಗಟ್ಟಿಯಾದ ಅಸ್ತಿತ್ವವಿಲ್ಲ. ಅಲ್ಲಿ ಬಿಜೆಪಿಗೆ ಲೋಕಸಭಾ ಸಂಸದರಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೂ ಸೋಲನುಭವಿಸಿತ್ತು. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯ 234 ಸ್ಥಾನಗಳಲ್ಲಿ ಪಕ್ಷವು ಕೇವಲ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು ಮತ್ತು ಡಿಎಂಕೆ ಅಲ್ಲಿ ಅಧಿಕಾರಕ್ಕೆ ಬಂದಿತ್ತು.

ಪನ್ನೀರಸೆಲ್ವಂ ಮತ್ತು ಇ. ಪಳನಿಸ್ವಾಮಿ ನಡುವಿನ ಜಟಾಪಟಿಯಿಂದಾಗಿ ಬಿಜೆಪಿಯ ಮಿತ್ರಪಕ್ಷ ಎಐಎಡಿಎಂಕೆ ವಿಭಜನೆಗೊಂಡಿದ್ದು, ಇದೇ ಸಂಧಂರ್ಭವನ್ನು ಬಳಸಿಕೊಂಡು ರಾಜ್ಯದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಮಕ್ಕಳ ರಕ್ತಪಾತಕ್ಕೆ ಅಮೆರಿಕ ನೇರ ಹೊಣೆ: ಪ್ಯಾಲೆಸ್ತೀನ್

0
ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ಕಳೆದ 2 ತಿಂಗಳಿನಿಂದ ನಿರಂತರವಾಗಿ ದಾಳಿಯನ್ನು ನಡೆಸುತ್ತಿದೆ. ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುವ ಯುಎನ್ ನಿರ್ಣಯವನ್ನು ಅಮೆರಿಕ ವಿಟೊ ಅಧಿಕಾರ ಬಳಸಿ ತಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ...