Homeಮುಖಪುಟನ್ಯಾಯಾಲಯದ ತ್ವರಿತ ಸಂವಹನಕ್ಕಾಗಿ ಸಾಫ್ಟ್‌ವೇರ್ ಬಿಡುಗಡೆ ಮಾಡಿದ ಮುಖ್ಯನ್ಯಾಯಮೂರ್ತಿ ಎನ್‌.ವಿ. ರಮಣ

ನ್ಯಾಯಾಲಯದ ತ್ವರಿತ ಸಂವಹನಕ್ಕಾಗಿ ಸಾಫ್ಟ್‌ವೇರ್ ಬಿಡುಗಡೆ ಮಾಡಿದ ಮುಖ್ಯನ್ಯಾಯಮೂರ್ತಿ ಎನ್‌.ವಿ. ರಮಣ

- Advertisement -
- Advertisement -

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌.ವಿ. ರಮಣ ಅವರು ಸಾಫ್ಟ್‌ವೇರ್ ಫಾಸ್ಟ್ ಮತ್ತು ಸೆಕ್ಯೂರ್ಡ್ ಟ್ರಾನ್ಸ್‌ಮಿಷನ್ ಆಫ್ ಎಲೆಕ್ಟ್ರಾನಿಕ್ ರೆಕಾರ್ಡ್ಸ್ (ಫಾಸ್ಟರ್) ಅನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ. ಹೊಸ ಸಾಫ್ಟ್‌ವೇರ್ ಸುಗಮ ಸಂವಹನ ಮತ್ತು ನ್ಯಾಯಾಲಯದ ಆದೇಶಗಳನ್ನು ತ್ವರಿತವಾಗಿ ರವಾನಿಸಲು ಅನುವು ಮಾಡಿಕೊಡುತ್ತದೆ ಎಂದು ರಮಣ ಹೇಳಿದ್ದಾರೆ.

ಹೊಸ ಸಾಫ್ಟ್‌ವೇರ್‌ ಜೈಲುಗಳು ಮತ್ತು ಅಧಿಕಾರಿಗಳ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ ಮುಖ್ಯನ್ಯಾಯಮೂರ್ತಿ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಪ್ರಸ್ತುತ ಸಾಫ್ಟ್‌ವೇರ್ ಗೌಪ್ಯತೆ ಮತ್ತು ಸುರಕ್ಷತೆಯನ್ನು ಸಹ ಖಚಿತಪಡಿಸುತ್ತದೆ ಎಂದು ಸಿಜೆಐ ರಮಣ ಹೇಳಿದ್ದು, ಪತ್ರಿಕೆಯ ಜಾಹಿರಾತೊಂದು ನ್ಯಾಯಾಲಯದ ಗಮನಕ್ಕೆ ಬಂದ ನಂತರ ಸಾಫ್ಟ್‌ವೇರ್‌ನ ಕಲ್ಪನೆ ಮೂಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಜರಂಗದಳ, VHPಯವರು ಸಮಾಜಘಾತುಕರು: ಎಚ್.ಡಿ ಕುಮಾರಸ್ವಾಮಿ

ಜಾಹೀರಾತಿನ ನಂತರ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣವನ್ನು ಕೈಗೆತ್ತಿಕೊಂಡು, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್, ಹೇಮನ್ ಗುಪ್ತಾ ಮತ್ತು ಇತರರನ್ನು ಜೊತೆಗೂಡಿಸಿತು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ನೀಡಿದ ಆದೇಶಗಳನ್ನು ಮೂರನೇ ವ್ಯಕ್ತಿಗಳ ಪಾಲ್ಗೊಳ್ಳುವಿಕೆ ಇಲ್ಲದೆ ಸುರಕ್ಷಿತವಾಗಿ ಕಳುಹಿಸಬೇಕು ಎಂದು ಸಿಜೆಐ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ನೇತೃತ್ವದ ಪೀಠವು ಜಾಮೀನು ಮಂಜೂರು ಮಾಡಿದ ನಂತರವೂ ಕೈದಿಗಳ ಬಿಡುಗಡೆ ವಿಳಂಬ ಮಾಡಿರುವ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಂಡಿತ್ತು. ಪೀಠವು ಸುಪ್ರೀಂಕೋರ್ಟ್‌ನ ಸೆಕ್ರೆಟರಿ ಜನರಲ್‌ಗೆ ಜಾಮೀನು ವೇಗವಾಗಿ ಜಾರಿಗೊಳಿಸುವ ವಿಧಾನಗಳ ಶಿಫಾರಸುಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿತ್ತು.

ತ್ವರಿತ ಅನುಷ್ಠಾನದ ಮೇಲ್ವಿಚಾರಣೆಗಾಗಿ ಹೈಕೋರ್ಟ್‌ಗಳ ಮಟ್ಟದಲ್ಲಿ 73 ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಸಿಜೆಐ ಮಾಹಿತಿ ನೀಡಿದ್ದಾರೆ. ಈ ವ್ಯವಸ್ಥೆಗಾಗಿ, 1,887 ಸುರಕ್ಷಿತ-ಪಾತ್‌ವೇ ಇಮೇಲ್ ಐಡಿಗಳೊಂದಿಗೆ ನ್ಯಾಯಾಂಗ ಸಂವಹನ ಜಾಲವನ್ನು ರಚಿಸಲಾಗಿದೆ ಮತ್ತು ವಿನಿಮಯವನ್ನು ಈ ಚಾನಲ್‌ಗಳಿಗೆ ನಿರ್ಬಂಧಿಸಲಾಗುತ್ತದೆ ಎಂದು ರಮಣ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಇದನ್ನೂ ಓದಿ: ಹಾಸನ: ಗುರಾಯಿಸಿ ನೋಡಿದ್ದಾಗಿ ಆರೋಪಿಸಿ ದಲಿತ ಯುವಕನಿಗೆ ಮಾರಣಾಂತಿಕ ಹಲ್ಲೆ ಮಾಡಿದ ಸವರ್ಣೀಯರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...