Homeಕರ್ನಾಟಕ'ಯಾರ ಅನ್ನದ ತಟ್ಟೆಗೂ ಕೈ ಹಾಕಬಾರದು..'; ಕುರುಬ ಸಮುದಾಯದ ಎಸ್‌ಟಿ ಬೇಡಿಕೆ ಕುರಿತು ಸಿಎಂ ಸಿದ್ದರಾಮಯ್ಯ...

‘ಯಾರ ಅನ್ನದ ತಟ್ಟೆಗೂ ಕೈ ಹಾಕಬಾರದು..’; ಕುರುಬ ಸಮುದಾಯದ ಎಸ್‌ಟಿ ಬೇಡಿಕೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

- Advertisement -
- Advertisement -

ಕುರುಬರನ್ನು ಪರಿಶಿಷ್ಟ ಜಾತಿ (ಎಸ್‌ಟಿ) ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು ಬೊಮ್ಮಾಯಿ ಸರ್ಕಾರ, ಆ ಶಿಫಾರಸ್ಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಸರ್ಕಾರ ಕೇಳಿದ್ದು ಅದಷ್ಟೇ ನಮ್ಮೆದುರಿಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, “ಅಧಿಕಾರದಲ್ಲಿದ್ದಾಗ ನಿಮ್ಮ ಪರವಾಗಿ ಕೆಲಸ ಮಾಡಿ, ನಿಮ್ಮ ಸಮುದಾಯದ ಬದುಕಿನ ಅವಕಾಶಗಳನ್ನು ಹೆಚ್ಚಿಸಿದವರ ಪರವಾಗಿ ನೀವು ಗಟ್ಟಿಯಾಗಿ ನಿಲ್ಲಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಸಮುದಾಯಕ್ಕೆ ಕರೆ ನೀಡಿದರು.

ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ಜನಸಂಖ್ಯೆ ಪ್ರಮಾಣದಷ್ಟೇ ಅಭಿವೃದ್ಧಿಗೆ ಬಜೆಟ್‌ನಲ್ಲೂ ಹಣ ಮೀಸಲಿಡಲು ಕಾಯ್ದೆ ಮಾಡಿದ್ದು ಇದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ಹೋಬಳಿಗೊಂದರಂತೆ ವಸತಿ ಶಾಲೆ, ಮೊರಾರ್ಜಿ ಶಾಲೆಗಳನ್ನು ಮಾಡಿದ್ದು ಇದೇ ಸಿದ್ದರಾಮಯ್ಯ. ಹೀಗಾಗಿ ಈ ಇತಿಹಾಸವನ್ನೆಲ್ಲಾ ಚೆನ್ನಾಗಿ ತಿಳಿದುಕೊಳ್ಳಿ. ಅಧಿಕಾರದಲ್ಲಿದ್ದಾಗ ಯಾರು ನಿಮ್ಮ ಪರವಾಗಿ ಇದ್ದಾರೋ ಅವರ ಪರವಾಗಿ ವಾಲ್ಮೀಕಿ ಸಮುದಾಯ ನಿಲ್ಲಬೇಕು” ಎಂದರು.

“ವಾಲ್ಮೀಕಿ ಮತ್ತು ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ನಾನು ಮತ್ತು ಉಗ್ರಪ್ಪ ಅವರು ರಾಮಕೃಷ್ಣ ಹೆಗಡೆಯವರಿಗೆ ಮನವಿ ಮಾಡಿದ್ದೆವು. ಹೆಗಡೆಯವರು ನಮ್ಮ ಮನವಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೂ ಆಗ ಸೇರಿಸಲು ಆಗಲಿಲ್ಲ. ಆದರೆ, ಉಗ್ರಪ್ಪ ಅವರು ಸುಮ್ಮನೆ ಕೂರಲಿಲ್ಲ. ಉಗ್ರಪ್ಪ ಮತ್ತು ದೇವೇಗೌಡರ ನಡುವಿನ‌ ಒಡನಾಟ ಆಗಲೂ ಚೆನ್ನಾಗಿತ್ತು; ಈಗಲೂ ಚನ್ನಾಗಿದೆ. ದೇವೇಗೌಡರು ಮತ್ತು ಚಂದ್ರಶೇಖರ್ ಅವರ ಒಡನಾಡ ಚನ್ನಾಗಿತ್ತು. ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದಾಗ ಅವರನ್ನು ದೇವೇಗೌಡರ ಮೂಲಕ ಒಪ್ಪಿಸಿ ವಾಲ್ಮೀಕಿ ಸಮುದಾಯವನ್ನು ಎಸ್‌ಟಿಗೆ ಸೇರಿಸಿದರು. ವಾಲ್ಮೀಕಿ, ಬೇಡ ಮತ್ತು ನಾಯಕ‌ ಸಮುದಾಯಕ್ಕೆ ಮೀಸಲಾತಿ ದೊರಕಲು ಉಗ್ರಪ್ಪನವರೇ ಕಾರಣ ಎನ್ನುವುದನ್ನು ಮರೆಯಬಾರದು” ಎಂದರು.

“ಈಗ ಕುರುಬರನ್ನು ಎಸ್‌ಟಿಗೆ ಸೇರಿಸಲು ಹೋರಾಟ ಮಾಡಿದವರು ನಾವಲ್ಲ. ಬಿಜೆಪಿಯ ಈಶ್ವರಪ್ಪ ಹೋರಾಟ ಮಾಡಿದರು. ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ ಅವರು ಈಶ್ವರಪ್ಪ ಅವರ ಮನವಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಆ ಶಿಫಾರಸ್ಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಸರ್ಕಾರ ಕೇಳಿದೆ. ಅದಷ್ಟೇ ನಮ್ಮೆದುರಿಗಿದೆ’ ಎಂದು ಸ್ಪಷ್ಟಪಡಿಸಿದರು.

ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು: ಸಿಎಂ

“ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಎನ್ನುವುದಕ್ಕೆ ನನ್ನ ಬೆಂಬಲ, ಸಹಮತವೂ ಇದೆ. ಯಾರೂ ಯಾರ ಅನ್ನದ ತಟ್ಟೆಗೆ ಕೈ ಹಾಕಬಾರದು. ಯಾರೂ ಯಾರ ಅವಕಾಶಗಳನ್ನೂ ಕಿತ್ತುಕೊಳ್ಳಬಾರದು ಎನ್ನುವುದು ನನ್ನ ಬದ್ಧತೆ” ಎಂದು ಸ್ಪಷ್ಟಪಡಿಸಿದರು.

“ಜೆ.ಹೆಚ್.ಪಟೇಲರು ಸಿಎಂ ಆಗಿದ್ದಾಗ ಬೆಸ್ತರು ಸೇರಿ ಹಲವು ಸಮುದಾಯಗಳನ್ನು ಎಸ್‌ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಹೋಗಿದೆ. ಇವತ್ತಿನವರೆಗೂ ಇದು ಸಾಧ್ಯವಾಗಿಲ್ಲ” ಎಂದರು.

“ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ವಾಲ್ಮೀಕಿ ಸಮುದಾಯದ ವಾಲ್ಮೀಕಿ ಅವರು ವಿಶ್ವ ಮಾನವರಾಗಿ ಶ್ರೇಷ್ಠವಾದ ರಾಮಾಯಣ ಮಹಾ ಕಾವ್ಯವನ್ನು ರಚಿಸಿದರು. ಹೀಗಾಗಿ ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣವನ್ನು ಆದ್ಯತೆಯಾಗಿ ಪರಿಗಣಿಸಬೇಕು” ಎಂದು ಕಿವಿಮಾತು ಹೇಳಿದರು.

“ಸಮುದಾಯಕ್ಕೆ ಬೇಕಾದ ಹಕ್ಕು, ಅವಕಾಶಗಳನ್ನು ಸಂಘಟನೆ, ಹೋರಾಟದ ಮೂಲಕ ಪಡೆದುಕೊಳ್ಳುವುದು ತಪ್ಪಲ್ಲ. ಹೋರಾಟ ಮಾಡಲೇಬೇಕು.‌ ಇದನ್ನೇ ಅಂಬೇಡ್ಕರ್, ಬುದ್ದ, ಬಸವಣ್ಣ ಕೂಡ ಹೇಳಿದ್ದಾರೆ. ವಾಲ್ಮೀಕಿ ಅವರ ಬಗ್ಗೆ ಮತ್ತು ರಾಮಾಯಣವನ್ನು ಪಠ್ಯದಲ್ಲಿ ಸೇರಿಸಬೇಕು ಎನ್ನುವ ಉಗ್ರಪ್ಪ ಅವರ ಬೇಡಿಕೆ ಬಗ್ಗೆಯೂ ಸಕಾರಾತ್ಮಕವಾಗಿ ಪರಿಗಣಿಸಲಾಗುವುದು” ಎಂದು ಭರವಸೆ ನೀಡಿದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಅ.18ರವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ವಿಸ್ತರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ ಹಾಡಿದ ಪ್ರಕರಣ : ತನಿಖೆಗೆ ಆದೇಶಿಸಿದ ಸರ್ಕಾರ

ಹೊಸದಾಗಿ ಚಾಲನೆ ನೀಡಲಾದ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ಸಂಚಾರದ ವೇಳೆ ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ (ಗಾನ ಗೀತಂ) ಹಾಡಿದ ಬಗ್ಗೆ ತನಿಖೆಗೆ ಕೇರಳದ ಪ್ರಾಥಮಿಕ ಶಿಕ್ಷಣ ಸಚಿವ...

ಬಿಹಾರ ಚುನಾವಣೆ | ಎಲ್‌ಜೆಪಿ ಸಂಸದೆಯ ಎರಡೂ ಕೈಗಳಲ್ಲಿ ಮತದಾನದ ಶಾಯಿ ಗುರುತು; ಮತಗಳ್ಳತನ ಆರೋಪ

ಬಿಹಾರದಲ್ಲಿ ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಎನ್‌ಡಿಎ ಭಾಗವಾಗಿರುವ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಸಂಸದೆ ಶಾಂಭವಿ ಚೌಧರಿ ಅವರ ಎರಡೂ ಕೈಗಳಲ್ಲಿ ಮತದಾನದ ಗುರುತಿನ ಶಾಯಿ ಕಂಡುಬಂದಿದೆ. ಈ...

ಗೋಲ್ಪಾರದಲ್ಲಿ ತೆರವು ಕಾರ್ಯಾಚರಣೆ ಪುನರಾರಂಭಿಸಿದ ಅಸ್ಸಾಂ ಸರ್ಕಾರ : ನೆಲೆ ಕಳೆದುಕೊಳ್ಳಲಿರುವ 600 ಕುಟುಂಬಗಳು

ದಹಿಕಾಟಾ ಮೀಸಲು ಅರಣ್ಯದೊಳಗಿನ 1,140 ಬಿಘಾ (376 ಎಕರೆಗೂ ಹೆಚ್ಚು) ಅರಣ್ಯ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲು ಅಸ್ಸಾಂ ಸರ್ಕಾರ ಭಾನುವಾರ (ನ.9) ಗೋಲ್ಪಾರ ಜಿಲ್ಲೆಯಲ್ಲಿ ತನ್ನ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಇದರಿಂದ...

ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಆರೋಪ : ತನಿಖೆಗೆ ಆದೇಶಿಸಿದ ಸರ್ಕಾರ

ತಿರುವನಂತಪುರದ ಕೇರಳ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪದ ಕುರಿತ ತನಿಖೆಗೆ ಉನ್ನತ ಶಿಕ್ಷಣ ಸಚಿವೆ ಆರ್‌.ಬಿಂದು ಶನಿವಾರ (ನ.8) ಆದೇಶಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ...

ಅಂಡಮಾನ್, ನಿಕೋಬಾರ್ ದ್ವೀಪಗಳಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು (ನ.9, 2025) ಮಧ್ಯಾಹ್ನ 12:06ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಭೂಮಿಯ 90 ಕಿಲೋ ಮೀಟರ್ ಆಳದಲ್ಲಿ...

ತರಬೇತಿ ನಿರತ ಪೊಲೀಸರಿಗೆ ಭಗವದ್ಗೀತೆ ಪಠಿಸಲು ಆದೇಶ : ಇಲಾಖೆಯ ಕೇಸರೀಕರಣ ಎಂದ ಕಾಂಗ್ರೆಸ್

ಎಂಟು ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಮಧ್ಯಪ್ರದೇಶದ ಸುಮಾರು 4,000 ಹೊಸದಾಗಿ ನೇಮಕಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಿಂದೂ ಮಾಸದ ಮಾರ್ಗಶಿರದಲ್ಲಿ ಪ್ರತಿದಿನ ಸಂಜೆ 'ಭಗವದ್ಗೀತೆ'ಯ ಅಧ್ಯಾಯಗಳನ್ನು ಓದಲು ನಿರ್ದೇಶಿಸಲಾಗಿದೆ. ತರಬೇತಿಯಲ್ಲಿರುವ ಕಾನ್‌ಸ್ಟೆಬಲ್‌ಗಳಿಗೆ ನೀತಿವಂತ ಮತ್ತು ಶಿಸ್ತಿನ...

ಪಶ್ಚಿಮ ಬಂಗಾಳ : ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ

ನಾಲ್ಕು ವರ್ಷ ವಯಸ್ಸಿನ ಹೆಣ್ಣು ಮಗುವನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಶುಕ್ರವಾರ (ನ.7) ರಾತ್ರಿ ಈ ಘಟನೆ ನಡೆದಿದೆ. ಅಪರಿಚಿತರು ದುಷ್ಕೃತ್ಯವೆಸಗಿದ್ದಾರೆ. ಮಗುವಿನ...

ವಂದೇ ಭಾರತ್‌ ರೈಲಿನಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಮಕ್ಕಳು, ವಿಡಿಯೋ ಹಂಚಿಕೊಂಡ ರೈಲ್ವೆ : ತೀವ್ರ ವಿರೋಧ

ಶನಿವಾರ (ನ.8) ಎರ್ನಾಕುಲಂ-ಬೆಂಗಳೂರು ನಡುವಿನ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಆರ್‌ಎಸ್‌ಎಸ್‌ ಗೀತೆ ಹಾಡಿರುವ ವಿಡಿಯೋವನ್ನು ದಕ್ಷಿಣ ರೈಲ್ವೆ ಹಂಚಿಕೊಂಡಿದ್ದು, ಕೇರಳದಲ್ಲಿ ತೀವ್ರ ಆಕ್ಷೇಪ...

ಶಾಲಾ ಮಕ್ಕಳಿಗೆ ನ್ಯೂಸ್ ಪೇಪರ್‌ನಲ್ಲಿ ಬಿಸಿಯೂಟ ಬಡಿಸಿದ ವಿಡಿಯೋ ವೈರಲ್ : ಪ್ರಧಾನಿ, ಸಿಎಂಗೆ ನಾಚಿಕೆಯಾಗ್ಬೇಕು ಎಂದ ರಾಹುಲ್ ಗಾಂಧಿ

ಮಧ್ಯಪ್ರದೇಶದ ಶಾಲೆಯೊಂದರ ಮಕ್ಕಳು ನ್ಯೂಸ್‌ ಪೇಪರ್‌ನಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, "ಇಂತಹ ದಯನೀಯ ಸ್ಥಿತಿಯಲ್ಲಿ ಭಾರತದ ಭವಿಷ್ಯ ಬೆಳಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮೋಹನ್...

ಬಿಹಾರ ಚುನಾವಣೆ : ರಸ್ತೆ ಬದಿ ಪತ್ತೆಯಾದ ವಿವಿಪ್ಯಾಟ್‌ ಸ್ಲಿಪ್‌ಗಳು

ಬಿಹಾರದ ಸಮಸ್ತಿಪುರ ಜಿಲ್ಲೆಯ ಶೀತಲ್‌ಪಟ್ಟಿ ಗ್ರಾಮದ ಎಸ್‌ಆರ್ ಕಾಲೇಜು ಬಳಿ ಭಾರೀ ಸಂಖ್ಯೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್‌) ಸ್ಲಿಪ್‌ಗಳು ಪತ್ತೆಯಾಗಿದ್ದು, ಭಾರತೀಯ ಚುನಾವಣಾ ಆಯೋಗ (ಇಸಿಐ) ಶನಿವಾರ...