- Advertisement -
- Advertisement -
ಮಾ-ಲೆ ಪ್ರಕಾಶನ ಮತ್ತು ಸಮಕಾಲಿನ ಸಾಮಾಜಿಕ ಸಾಂಸ್ಕೃತಿಕ ವೇದಿಕೆಯ ವತಿಯಿಂದ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಸ್ಮಾರಕ ಉಪನ್ಯಾಸವನ್ನು ಜುಲೈ 31 ರ ಭಾನುವಾರದಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವೂ ನಗರದ ಎನ್.ಆರ್. ಕಾಲೋನಿಯ 3 ನೇ ಮುಖ್ಯರಸ್ತೆಯಲ್ಲಿರುವ ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ಬೆಳಿಗ್ಗೆ 10:45ಕ್ಕೆ ನಡೆಯಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿಶ್ವಸಂಸ್ಥೆಯ ಮಾಜಿ ಸಲಹೆಗಾರ, ಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿರುವ ಪ್ರೊಫೆಸರ್ ವೆಂಕಟೇಶ್ ಬಿ.ಆತ್ರೇಯ ಅವರು ‘ಸ್ವತಂತ್ರ ಭಾರತ 75-ಇಂದಿನ ಭಾರತದ ರಾಜಕೀಯ ಅರ್ಥಶಾಸ್ತ್ರ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದ ಪ್ರಸ್ತಾವನೆಯನ್ನು ಹಿರಿಯ ಸಾಹಿತಿ ಡಾ.ಜಿ.ರಾಮಕೃಷ್ಣ ಅವರು ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ಪಾರ್ಥಸಾರಥಿ ಅವರು ವಹಿಸಲಿದ್ದಾರೆ.