Homeಮುಖಪುಟಮಾನವ ಕಳ್ಳ ಸಾಗಾಣಿಕೆ ಶಂಕೆ: 300 ಭಾರತೀಯರಿದ್ದ ವಿಮಾನ ವಶಕ್ಕೆ ಪಡೆದ ಫ್ರಾನ್ಸ್

ಮಾನವ ಕಳ್ಳ ಸಾಗಾಣಿಕೆ ಶಂಕೆ: 300 ಭಾರತೀಯರಿದ್ದ ವಿಮಾನ ವಶಕ್ಕೆ ಪಡೆದ ಫ್ರಾನ್ಸ್

- Advertisement -
- Advertisement -

ಮಾನವ ಕಳ್ಳಸಾಗಣಿಕೆ ಶಂಕೆಯ ಮೇರೆಗೆ 303 ಭಾರತೀಯರನ್ನು ಹೊತ್ತು ನಿಕರಾಗುವಾಕ್ಕೆ ತೆರಳುತ್ತಿದ್ದ ವಿಮಾನವನ್ನು ಫ್ರಾನ್ಸ್ ತಡೆದಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

ರೊಮೇನಿಯಾದ ಸಣ್ಣ ವಿಮಾನಯಾನ ಕಂಪನಿ ಲೆಜೆಂಡ್ ಏರ್‌ಲೈನ್ಸ್‌ಗೆ ಸೇರಿದ ಎ340 ವಿಮಾನ ಯನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ) ಯಿಂದ ಸೆಂಟ್ರಲ್ ಅಮೆರಿಕಾದ ನಿಕರಾಗುವಾ ದೇಶಕ್ಕೆ ತೆರಳುತ್ತಿತ್ತು. ಇದನ್ನು ಪ್ಯಾರಿಸ್‌ನ ಪೂರ್ವದ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಲು ನಿಲ್ಲಿಸಿದ್ದಾಗ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ರೊಮೇನಿಯಾ ಮೂಲದ ಸಣ್ಣ ಚಾರ್ಟರ್ ಕಂಪನಿ ಲೆಜೆಂಡ್ ಏರ್‌ಲೈನ್ಸ್ ನಿರ್ವಹಿಸುತ್ತಿರುವ ವಿಮಾನವು ಮಾನವ ಕಳ್ಳಸಾಗಣೆಗೆ ಬಲಿಯಾಗಬಹುದಾದ ಜನರನ್ನು ಹೊತ್ತೊಯ್ಯುತ್ತಿದೆ ಎಂಬ ಅನಾಮಧೇಯ ಮೂಲಗಳ ಮಾಹಿತಿ ಆಧರಿಸಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರುವಾರ ರಾತ್ರಿ ವಿಮಾನವನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಗುರುವಾರ ರಾತ್ರಿಯಿಡೀ ಪ್ರಯಾಣಿಕರು ವಿಮಾನದೊಳಗಡೆಯೇ ಇದ್ದರು. ಶುಕ್ರವಾರ ಅವರನ್ನು ವಿಮಾನ ನಿಲ್ದಾಣದ ಮುಖ್ಯ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮರ್ನೆ ಪ್ರಾದೇಶಿಕ ಆಡಳಿತದ ಅಧಿಕಾರಿ ತಿಳಿಸಿದ್ದಾರೆ.

ವಿಶೇಷ ಫ್ರೆಂಚ್ ಸಂಘಟಿತ ಅಪರಾಧ ಘಟಕದ ತನಿಖಾಧಿಕಾರಿಗಳು, ಗಡಿ ಪೊಲೀಸ್ ಮತ್ತು ವಾಯುಯಾನ ಅಧಿಕಾರಿಗಳು ಪ್ರಯಾಣಿಕರು ಮತ್ತು ವಿಮಾನದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ನಾವು ಭಾರತೀಯರ ಸಹಾಯಕ್ಕೆ ಧಾವಿಸಿದ್ದೇವೆ. ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ಪ್ರಯಾಣಿಕರ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.

ಈ ಬಗ್ಗೆ ಮಾಹಿತಿ ಪಡೆಯಲು ವಿಮಾನಯಾನ ಸಂಸ್ಥೆ ಲೆಜೆಂಡ್ ಏರ್‌ಲೈನ್ಸ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಎಬಿಸಿ ನ್ಯೂಸ್ ತಿಳಿಸಿದೆ.

ಇದನ್ನೂ ಓದಿ: ಗಾಝಾಗೆ ಮಾನವೀಯ ನೆರವು ಮಾತ್ರ, ಕದನ ವಿರಾಮವಿಲ್ಲ: ಯುಎಸ್‌ಗೆ ಬೆದರಿತಾ ವಿಶ್ವಸಂಸ್ಥೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕೇರಳದ ಕಾಂಗ್ರೆಸ್ ನಾಯಕ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ರಾ?

0
ಕೇರಳದ ಕಾಂಗ್ರೆಸ್ ನಾಯಕ ಪಿ.ಸಿ ಜಾರ್ಜ್ ಮುಸ್ಲಿಮರ ವಿರುದ್ದ ದ್ವೇಷ ಭಾಷಣ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಲ ಪಂಥೀಯ ಎಕ್ಸ್ ಬಳಕೆದಾರ 'ಜಿತೇಂದ್ರ ಪ್ರತಾಪ್ ಸಿಂಗ್' ವಿಡಿಯೋ ಹಂಚಿಕೊಂಡಿದ್ದು, "...