Homeಮುಖಪುಟಶ್ರೀಮಂತಿಕೆಯಲ್ಲಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ

ಶ್ರೀಮಂತಿಕೆಯಲ್ಲಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ

- Advertisement -
- Advertisement -

ಭಾರತೀಯ ಉದ್ಯಮಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ರಿಲೇಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಭಾರತದ ಅಗರ್ಭ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದಾಗಿ ಫೋರ್ಬ್ಸ್‌ ರಿಯಲ್‌ಟೈಮ್ ಬಿಲೇನಿಯರ್ಸ್ ಪತ್ರಿಕೆ ತಿಳಿಸಿದೆ.

ಫೋರ್ಬ್ಸ್‌ ಶುಕ್ರವಾರ ಬಿಡುಗಡೆ ಮಾಡಿರುವ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯಲ್ಲಿ 59 ವರ್ಷದ ಗೌತಮ್ ಅದಾನಿ ಹತ್ತನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯವು 63.7 ಕೋಟಿ ಡಾಲರ್‌ (4750 ಕೋಟಿ ರೂ.)ನಿಂದ 91.1 ಶತಕೋಟಿ ಡಾಲರ್‌ (6,99 ಲಕ್ಷ ಕೋಟಿ ರೂ.) ಗಳಿಗೆ ಏರಿದೆ.

ಮತ್ತೊಂದೆಡೆ, 64 ವರ್ಷದ ಮುಖೇಶ್ ಅಂಬಾನಿ ಆಸ್ತಿಯ ಒಟ್ಟು ಮೌಲ್ಯದ 79.4 ಕೋಟಿ ಡಾಲರ್ ನಷ್ಟ ಅನುಭವಿಸಿ 89.2 ಶತಕೋಟಿ ಡಾಲರ್‌ಗಳಿಗೆ ಕುಸಿದಿದ್ದಾರೆ. ಈ ನಷ್ಟದ ಕಾರಣದಿಂದ ಮುಖೇಶ್ ಅಂಬಾನಿ ಫೋರ್ಬ್ಸ್‌ ರಿಯಲ್-ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಕುಸಿದು, ಭಾರತದಲ್ಲೂ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ ಎಂದು ಫೋರ್ಬ್ಸ್‌ ತಿಳಿಸಿದೆ.

ಫೋರ್ಬ್ಸ್‌ ರಿಯಲ್-ಟೈಮ್ ಬಿಲಿಯನೇರ್ಸ್ ವಿಶ್ವದ ಶ್ರೀಮಂತರ ಆಸ್ತಿ ವಿವರಗಳ ದೈನಂದಿನ ಏರಿಳಿತಗಳನ್ನು ಗಮನಿಸುತ್ತಿರುತ್ತದೆ. ಎಲ್ಲಾ ಶ್ರೀಮಂತ ವ್ಯಕ್ತಿಗಳ ಸಂಪತ್ತು, ಆಸ್ತಿ ಮೌಲ್ಯ ಮತ್ತು ರ‍್ಯಾಂಕ್‌ ಕುರಿತು ಫೋರ್ಬ್ಸ್ ಬಿಲಿಯನೇರ್ ದೃಢೀಕರಿಸುತ್ತದೆ. ಶ್ರಿಮಂತ ವ್ಯಕ್ತಿಗಳ ಷೇರು ಮಾರುಕಟ್ಟೆಗಳ ಮೌಲ್ಯವನ್ನು ಪ್ರತಿ 5 ನಿಮಿಷಗಳಿಗೆ ಇದು ನವೀಕರಿಸಿ ಬಿಡುಗಡೆ ಮಾಡುತ್ತದೆ.


ಇದನ್ನೂ ಓದಿರಿ: ಮುಂಬೈನ 3% ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ!: ಮಾಜಿ ಸಿಎಂ ಪತ್ನಿ ಅಮೃತ ಫಡ್ನವಿಸ್‌‌‌ ವಿಚಿತ್ರ ಹೇಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...