ಆಸ್ಕರ್ ನಲ್ಲಿಯೂ ‘ಅಪ್ನಾ ಟೈಮ್ ಆಯೇಗ’ ಎನ್ನುತ್ತಿರುವ ಗಲ್ಲಿಬಾಯ್ ಚಿತ್ರ

0

ಜೋಯಾ ಅಖ್ತರ್ ಅವರ ಗಲ್ಲಿ ಬಾಯ್ ಹಿಂದಿ ಚಲನಚಿತ್ರವು ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಪ್ರವೇಶವಾಗಿದೆ.

ಜೋಯಾ ಅವರ ಸಹೋದರ ಚಲನಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಈ ದೊಡ್ಡ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ.

“92 ನೇ ಆಸ್ಕರ್ ಪ್ರಶಸ್ತಿಗಳಿಗೆ ಭಾರತದ ಅಧಿಕೃತ ಪ್ರವೇಶವಾಗಿ ಗಲ್ಲಿಬಾಯ್ ಆಯ್ಕೆಯಾಗಿದೆ #Apnatimeaayega” ಅಪ್ನಾ ಟೈಮ್ ಆಯೇಗ, (ನಮಗೂ ಸಮಯ ಬರುತ್ತೆ)  ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ ಈ ಚಿತ್ರವು ಆಯುಷ್ಮಾನ್ ಖುರಾನಾ ಅಭಿನಯದ ಬದಾಯಿ ಹೋ ಮತ್ತು ಅಂಧಾದುನ್ ಚಿತ್ರಗಳ ಜೊತೆಗೆ ನಿಕಟ ಸ್ಪರ್ದೇಯ ನಂತರ ಆಸ್ಕರ್ ಗೆ ಪ್ರವೇಶಿಸಿದೆ ಎಂದು ಹೇಳಲಾಗುತ್ತಿದೆ.

ಗಲ್ಲಿ ಬಾಯ್ ರಾಪರ್ ನೇಜಿಯವರ ಜೀವನವನ್ನು ಆಧರಿಸಿದ ಕಥೆಯಾಗಿದ್ದು ಮುಂಬೈನ ಬೀದಿ ರಾಪ್ಪರ್‌ಗಳ ಕಥೆಯನ್ನು ಮನೋಜ್ಞವಾಗಿ ಹೇಳಲಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ದೇಶಾದ್ಯಂತ ಬಿಡುಗಡೆಯಾದ ಈ ಚಿತ್ರದಲ್ಲಿ ಆಲಿಯಾ ಭಟ್, ವಿಜಯ್ ರಾಜ್, ಕಲ್ಕಿ ಕೋಚ್ಲಿನ್, ಸಿದ್ಧಾಂತ್ ಚತುರ್ವೇದಿ, ವಿಜಯ್ ವರ್ಮಾ ಮತ್ತು ಅಮೃತ ಸುಭಾಷ್ ಕೂಡ ನಟಿಸಿದ್ದಾರೆ.

ಖ್ಯಾತ ನಟ-ಚಲನಚಿತ್ರ ನಿರ್ಮಾಪಕ ಅಪರ್ಣಾ ಸೇನ್ ಈ ವರ್ಷದ ಆಯ್ಕೆ ಸಮಿತಿಯ ತೀರ್ಪುಗಾರರ ಮುಖ್ಯಸ್ಥರಾಗಿದ್ದರು. ಈ ಚಿತ್ರವು 92 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.

ಇದನ್ನೂ ಓದಿ: ಗಲ್ಲಿಯಲ್ಲಿ ಬೆಳೆದು ದಿಲ್ಲಿಯವರೆಗೂ ಸದ್ದು ಮಾಡಿದ ಹುಡುಗನ ಕಥೆಯೇ ಗಲ್ಲಿಬಾಯ್

ಇದುವರೆಗೂ ಯಾವುದೇ ಭಾರತೀಯ ಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿಲ್ಲ. ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗದ ಪಟ್ಟಿಯಲ್ಲಿ ಅಂತಿಮ ಐದನೇ ಸ್ಥಾನ ಪಡೆದ ಕೊನೆಯ ಭಾರತೀಯ ಚಿತ್ರ 2001 ರಲ್ಲಿ ಅಶುತೋಷ್ ಗೋವಾರಿಕರ್ ಅವರ ಲಗಾನ್. ಮದರ್ ಇಂಡಿಯಾ (1958) ಮತ್ತು ಸಲಾಮ್ ಬಾಂಬೆ (1989) ಮೊದಲ ಐದು ಸ್ಥಾನಗಳಲ್ಲಿ ಸ್ಥಾನ ಪಡೆದ ಇತರ ಎರಡು ಭಾರತೀಯ ಚಲನಚಿತ್ರಗಳಾಗಿವೆ. ರಿಮಾ ದಾಸ್ ನಿರ್ದೇಶನದ ಅಸ್ಸಾಮೀಸ್ ಚಿತ್ರ ವಿಲೇಜ್ ರಾಕ್‌ಸ್ಟಾರ್ಸ್, ಕಳೆದ ವರ್ಷ ಆಸ್ಕರ್‌ಗೆ ಭಾರತದ ಅಧಿಕೃತ ಸಲ್ಲಿಕೆಯಾಗಿತ್ತು.

92 ನೇ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭವು ಫೆಬ್ರವರಿ 9, 2020 ರಂದು ಅಮೆರಿಕದ ಲಾಸ್ ಏಂಜಲೀಸ್ ನ ಡಾಲ್ಬಿ ಥಿಯೇಟರ್ ನಲ್ಲಿ ನಡೆಯಲಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here