Homeಕರ್ನಾಟಕ’ತಮ್ಮ ಮನೆಗಳಲ್ಲಿ ಯಾರು ಸುರಕ್ಷಿತರಿಲ್ಲವೋ ಅವರು ಹಿಜಾಬ್ ಧರಿಸುತ್ತಾರೆ’: ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ...

’ತಮ್ಮ ಮನೆಗಳಲ್ಲಿ ಯಾರು ಸುರಕ್ಷಿತರಿಲ್ಲವೋ ಅವರು ಹಿಜಾಬ್ ಧರಿಸುತ್ತಾರೆ’: ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಠಾಕೂರ್

- Advertisement -
- Advertisement -

ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿರುವ ವಿರುದ್ಧದ ಆಕ್ರೋಶದ ನಡುವೆ, ವಿವಾದಿತ ಬಿಜೆಪಿ ಸಂಸದೆ, ಮಾಲೆಗಾಂವ್ ಸ್ಫೋಟ ಭಯೋತ್ಪಾದನಾ ಪ್ರಕರಣದ ಪ್ರಮುಖ ಆರೋಪಿ ಪ್ರಜ್ಞಾ ಠಾಕೂರ್ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಸಾರ್ವಜನಿಕವಾಗಿ ಹಿಜಾಬ್ ಧರಿಸುವುದನ್ನು ಸಹಿಸಲಾಗದು ಎಂದಿರುವ ಅವರು ಮನೆಯಿಂದ ಹೊರ ಬರುವಾಗ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸದಂತೆ ಎಚ್ಚರಿಕೆ ನೀಡಿದ್ದಾರೆ. ಮಾಲೆಗಾಂವ್ ಸ್ಫೋಟ ಭಯೋತ್ಪಾದನಾ ಪ್ರಕರಣದ ಪ್ರಮುಖ ಆರೋಪಿ ಪ್ರಜ್ಞಾ ಠಾಕೂರ್ ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಯಾವಾಗಲೂ ವಿವಾದಿತ ಹೇಳಿಕೆಗಳಿಮದಲೇ ಸುದ್ದಿಯಾಗುವ ಪ್ರಜ್ಞಾ ಠಾಕೂರ್, “ಇದು ಹಿಂದೂಗಳ ದೇಶವಾಗಿದ್ದು, ಹಿಂದೂಗಳು ಮಹಿಳೆಯರನ್ನು ಪೂಜಿಸುತ್ತಾರೆ. ಹೀಗಾಗಿ ದೇಶದಲ್ಲಿ ಹಿಜಾಬ್ ಧರಿಸುವ ಅಗತ್ಯವಿಲ್ಲ. ತಾವು ಸುರಕ್ಷಿತರಲ್ಲ ಎಂದು ಭಾವಿಸುವವರು ಮನೆಗಳಲ್ಲಿ ಹಿಜಾಬ್ ಧರಿಸಬೇಕು” ಎಂದು ಮಧ್ಯಪ್ರದೇಶದ ಭೋಪಾಲ್‌ನ ದೇವಸ್ಥಾನವೊಂದರಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ -2022: ಬಿಜೆಪಿ ಸೋಲಿನ ಭವಿಷ್ಯ ನುಡಿದ ನಾಯಕರು

“ಎಲ್ಲಿಯೂ ಹಿಜಾಬ್ ಧರಿಸುವ ಅಗತ್ಯವಿಲ್ಲ, ಅವರ ಮನೆಯಲ್ಲಿ ಸುರಕ್ಷಿತವಾಗಿಲ್ಲದ ಮಹಿಳೆಯರು ಹಿಜಾಬ್ ಧರಿಸುತ್ತಾರೆ, ನಿಮಗೆ ಮದರಸಾ ಇದೆ, ಅಲ್ಲಿ ನೀವು ಹಿಜಾಬ್ ಧರಿಸಿದರೆ ನಮಗೆ ಏನೂ ತೊಂದರೆಯಿಲ್ಲ. ಆದರೆ, ಸಾರ್ವಜನಿಕವಾಗಿ ಎಲ್ಲಿ ‘ಹಿಂದೂ ಸಮಾಜ’ ಇದೆಯೋ ಅಲ್ಲಿ ಹಿಜಾಬ್ ಅಗತ್ಯವಿಲ್ಲ. ಅದನ್ನು ನಾವು ಸಹಿಸುವುದಿಲ್ಲ” ಎಂದಿದ್ದಾರೆ.

“ಹಿಜಾಬ್ ಎಂದರೆ ಪರ್ದಾ. ಅದನ್ನು ನಿಮ್ಮನ್ನು ಕೆಟ್ಟ ಕಣ್ಣುಗಳಿಂದ ನೋಡುವವರ ವಿರುದ್ಧ ಬಳಸಬೇಕು. ಆದರೆ ಹಿಂದೂಗಳು ಮಹಿಳೆಯರನ್ನು ಪೂಜಿಸುವುದರಿಂದ ಅವರನ್ನು (ಮಹಿಳೆಯರನ್ನು) ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ. ನೀವು ನಿಮ್ಮ ಮನೆಗಳಲ್ಲಿ ಹಿಜಾಬ್ ಧರಿಸಬೇಕು” ಎಂದು ಹೇಳಿದ್ದಾರೆ.

ಪತ್ರಕರ್ತೆ ರಾಣಾ ಆಯೂಬ್ ಸೇರಿದಂತೆ ಹಲವು ಮಂದಿ ಪ್ರಜ್ಞಾ ಠಾಕೂರ್‌ ಹೇಳಿಕೆಯನ್ನು ಖಂಡಿಸಿದ್ದಾರೆ.

“ಮಾಲೆಗಾಂವ್ ಸ್ಫೋಟದ ಆರೋಪಿ ಬಲಪಂಥೀಯ ಹಿಂದೂ ಭಯೋತ್ಪಾದಕಿ, ಎಟಿಎಸ್ ತನಿಖೆಯ ಪ್ರಕಾರ 10 ಕ್ಕೂ ಹೆಚ್ಚು ಮುಸ್ಲಿಮರನ್ನು ಹತ್ಯೆಗೈದ ಮಾಲೆಗಾಂವ್ ಸ್ಫೋಟದ ಸಂಚು ಮತ್ತು ಜವಾಬ್ದಾರಿಯನ್ನು ಹೊತ್ತಿರುವವರು ಈಗ ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಕುರಿತು ಉಪದೇಶ ನೀಡುತ್ತಾರೆ. ಇದು ನವ ಭಾರತ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಡಿಸೆಂಬರ್‌ನಲ್ಲಿ ಉಡುಪಿಯಲ್ಲಿ ಹಿಜಾಬ್ ಧರಿಸಿ ಬಂದಿದ್ದ ಆರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದನ್ನು ವಿರೋಧಿಸಿ ವಿದ್ಯಾರ್ಥಿನಿಯರು ಎರಡು ವಾರಕ್ಕೂ ಹೆಚ್ಚು ದಿನ ಪ್ರತಿಭಟನೆ ನಡೆಸುತ್ತಿದ್ದರು. ಬಳಿಕ ಇದು ಹಿಜಾಬ್- ಕೇಸರಿ ಶಾಲು ವಿವಾದವಾಗಿ ಕುಂದಾಪುರದ ಕಾಲೇಜಿಗೆ ಹಬ್ಬಿತು. ಅಲ್ಲಿಂದ ರಾಜ್ಯದ ಇತರ ಕಾಲೇಜುಗಳಿಗೆ ಹರಡಿ ದೊಡ್ಡ ವಿವಾದವಾಗಿದೆ.


ಇದನ್ನೂ ಓದಿ: ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಶಾಲೆಯಲ್ಲಿ ಹಿಜಾಬ್ ಯಾಕಿರಬಾರದು: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...