Homeಮುಖಪುಟಮತ ಎಣಿಕೆ ನಡೆಯುತ್ತಿರುವಾಗ ನಿಮಗೆ ತಿಳಿದಿರಬೇಕಾದ ಸಂಗತಿಗಳು

ಮತ ಎಣಿಕೆ ನಡೆಯುತ್ತಿರುವಾಗ ನಿಮಗೆ ತಿಳಿದಿರಬೇಕಾದ ಸಂಗತಿಗಳು

ಒಟ್ಟು ರಾಜ್ಯಗಳು & ಕೇಂದ್ರಾಡಳಿತ ಪ್ರದೇಶಗಳು: 36 (29 ರಾಜ್ಯಗಳು & 7 ಕೇಂದ್ರಾಡಳಿತ ಪ್ರದೇಶಗಳು)

- Advertisement -
- Advertisement -

||ನಾನು ಗೌರಿ ಡೆಸ್ಕ್||

ಮತ ಎಣಿಕೆ ನಡೆಯುತ್ತಿರುವ ದಿನ ನಿಮಗೆ ಈ ಸಂಖ್ಯೆಗಳು ನೆರವಾಗಬಲ್ಲವು
ಒಟ್ಟು ಲೋಕಸಭಾ ಸದಸ್ಯರು: 545
ಚುನಾಯಿತರಾಗುವ ಸದಸ್ಯರು: 543
ನಾಮನಿರ್ದೇಶಿತ ಆಂಗ್ಲೋ ಇಂಡಿಯನ್ ಸದಸ್ಯರು: 2
(ಕಳೆದ ಲೋಕಸಭೆಯಲ್ಲಿ ನಾಮಕರಣಗೊಂಡ ಭಾಜಪ ಪಕ್ಷದ ಇಬ್ಬರು ಸದಸ್ಯರೆಂದರೆ ಕೇರಳದ ರಿಚರ್ಡ್ ಹೇ ಮ್ತು ಪ.ಬಂಗಾಳದ ಜಾರ್ಜ್ ಬೇಕರ್)

ಈ ಸಾರಿ ಚುನಾವಣೆ ನಡೆದದ್ದು: 542 ಕ್ಷೇತ್ರಗಳು
ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಲಾಗಿದೆ. ಡಿಎಂಕೆ ಅಭ್ಯರ್ಥಿ ಕಾತಿರ್ ಆನಂದ್ ಅವರ ಕಟ್ಟಡದಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾಯಿತು ಎನ್ನುವ ಕಾರಣಕ್ಕೆ ಚುನಾವಣಾ ಆಯೋಗವು ಈ ತೀರ್ಮಾನ ತೆಗೆದುಕೊಂಡಿದೆ. ಅಲ್ಲಿ ಏಪ್ರಿಲ್ 18ರಂದು ಮತದಾನ ನಡೆಯಬೇಕಿತ್ತು.

ಇದನ್ನೂ ಓದಿ: ಎಕ್ಸಿಟ್ ಪೋಲ್ ಕುರಿತು

ದೇಶದ ಒಟ್ಟು ಮತದಾನ ಕೇಂದ್ರಗಳು: 10.35 ಲಕ್ಷ
ಮತದಾನದ ಹಂತಗಳು: ಏಪ್ರಿಲ್ 11ರಿಂದ ಮೇ 19ರವರೆಗೆ 7 ಹಂತಗಳು
ಜೊತೆ ಜೊತೆಗೇ ಅಸೆಂಬ್ಲಿ ಚುನಾವಣೆಯೂ ನಡೆದ ರಾಜ್ಯಗಳು: ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒರಿಸ್ಸಾ ಮತ್ತು ಸಿಕ್ಕಿಂ.
(ತೆಲಂಗಾಣಕ್ಕೂ ಈಗಲೇ ನಡೆಯಬೇಕಿತ್ತು, ಆದರೆ ಅದರ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಬೇಗನೇ ಅಸೆಂಬ್ಲಿ ವಿಸರ್ಜಿಸಿದ್ದರಿಂದ 6 ತಿಂಗಳು ಮುಂಚೆಯೇ ಅಲ್ಲಿ ಚುನಾವಣೆ ನಡೆಯಿತು)
ಉಪಚುನಾವಣೆಗಳು: ಇದಲ್ಲದೇ 13 ರಾಜ್ಯಗಳ 46 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗಳೂ ನಡೆಯುತ್ತಿವೆ. ಅವುಗಳಲ್ಲಿ ಕರ್ನಾಟಕದ ಕುಂದಗೋಳ ಮತ್ತು ಕಲಬುರ್ಗಿಯ ಚಿಂಚೋಳಿ ಕ್ಷೇತ್ರಗಳೂ ಇವೆ.

2014ರಲ್ಲಿದ್ದ 9 ಲಕ್ಷ ಮತದಾನ ಕೇಂದ್ರಗಳಿಂದ 2019ರಲ್ಲಿ ಸುಮಾರು 10.35 ಲಕ್ಷ ಮತದಾನ ಕೇಂದ್ರಗಳಿಗೆ ಏರಿಕೆಯಾಗಿದೆ.
ಅದೇ ರೀತಿ 2014ರಲ್ಲಿದ್ದ 81.4 ಕೋಟಿ ಮತದಾರರ ಸಂಖ್ಯೆಯೂ 2019ರ ಹೊತ್ತಿಗೆ 90 ಕೋಟಿಗೆ ಏರಿಕೆಯಾಗಿದೆ. ಅವರಲ್ಲಿ 18ರಿಂದ 19 ವಯಸ್ಸಿನವರೇ 1.5 ಕೋಟಿ.

ಈ ಸಾರಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವ ತೃತೀಯ ಲಿಂಗಿಗಳ ಸಂಖ್ಯೆ: 38,000
ಮೊಟ್ಟ ಮೊದಲ ಬಾರಿಗೆ ದೇಶದ ಎಲ್ಲಾ ಎಲೆಕ್ಟ್ರಾನಿಕ್ ಮತ ಯಂತ್ರಗಳಿಗೆ ವಿವಿಪ್ಯಾಟ್ ಜೋಡಿಸಲಾಗಿದೆ.
ವಿವಿಪ್ಯಾಟ್ ಎಂದರೆ (Voter verified Paper Audit Trial ಮತಯಂತ್ರದಲ್ಲಿ ಮತದಾರರು ಮತ ಹಾಕಿದ ನಂತರ ಅದಕ್ಕೆ ಜೋಡಿಸಿದ ಡಬ್ಬದಲ್ಲಿ, ಅವರು ಯಾರಿಗೆ ಮತ ಹಾಕಿದ್ದಾರೋ, ಅವರಿಗೇ ಮತ ಹಾಕಲಾಗಿದೆಯಾ ಇಲ್ಲವಾ ಎಂಬುದನ್ನು ಒಂದು ಮುದ್ರಿತ ಚೀಟಿಯಲ್ಲಿ ತೋರಿಸಲಾಗುತ್ತದೆ. ಆ ಚೀಟಿಯು ಪಾರದರ್ಶಕ ಗಾಜಿನ ಒಳಗೆ 7 ಸೆಕೆಂಡುಗಳ ಕಾಲ ಇರುತ್ತದೆ.
ಈ ಸಾರಿ ಎಲ್ಲಾ ಇವಿಎಂಗಳಲ್ಲೂ ಅಭ್ಯರ್ಥಿಯ ಭಾವಚಿತ್ರವನ್ನೂ ಮುದ್ರಿಸಲಾಗಿದೆ.

ಮತ ಎಣಿಕೆ ಕೇಂದ್ರಗಳು: 542

ನೋಡಿ: ಚುನಾವಣಾ ಆಯೋಗದ ವೆಬ್ ಸೈಟ್

ಮತ ಎಣಿಕೆ ಹೇಗೆ ನಡೆಯುತ್ತದೆ?
ಸಾಮಾನ್ಯವಾಗಿ ಮೊದಲು ಅಂಚೆ ಮತಗಳ ಎಣಿಕೆ, ನಂತರ ಯಾವುದಾದರೂ ಒಂದು ಮತಯಂತ್ರದ ಮತ ಎಣಿಕೆಗೂ ವಿವಿಪ್ಯಾಟ್‍ನಲ್ಲಿನ ಮತಚೀಟಿಗಳ ಎಣಿಕೆಗೂ ತಾಳೆ ಮಾಡುವುದು, ಆ ನಂತರ ಎಲ್ಲಾ ಮತಯಂತ್ರಗಳಲ್ಲಿನ ಮತಗಳ ಎಣಿಗೆ ಮಾಡುವುದು ಹೀಗೆ ನಡೆಯುತ್ತಿತ್ತು.
ಆದರೆ, ಈ ಸಾರಿ ಆಯೋಗ ಬೇರೆ ಕ್ರಮವನ್ನು ಅನುಸರಿಸಲಿದೆ. ಅಂಚೆ ಮತಗಳ ಎಣಿಕೆಯ ಜೊತೆಗೇ ಮತಯಂತ್ರಗಳ ಎಣಿಕೆಯೂ ಆರಂಭವಾಗುತ್ತದೆ. ಇನ್ನೆರಡು ಸುತ್ತು ಮತಯಂತ್ರಗಳ ಎಣಿಕೆ ಇದೆ ಎನ್ನುವಾಗ ನಿಲ್ಲಿಸಿ, ಅಂಚೆ ಮತಗಳ ಎಣಿಕೆ ಸಂಪೂರ್ಣವಾಗಿದೆಯೇ ಪರಿಶೀಲಿಸುತ್ತಾರೆ. ಅಂಚೆ ಮತಗಳ ಎಣಿಕೆ ಮುಗಿದಿದ್ದರೆ ಉಳಿದೆರಡು ಸುತ್ತುಗಳನ್ನೂ ಮುಗಿಸಲಾಗುತ್ತದೆ. ಆ ನಂತರ ಪ್ರತಿ ಅಸೆಂಬ್ಲಿಗೆ 5 ವಿವಿಪ್ಯಾಟ್ ಮತಚೀಟಿಗಳ ಎಣಿಕೆ ಮಾಡಿ, ಆ ಮತಗಳಿಗೂ ಸಂಬಂಧಿಸಿದ ಮತಯಂತ್ರದಲ್ಲಿನ ಮತಗಳಿಗೂ ತಾಳೆಯಾಗುತ್ತದಾ ಎಂಬುದನ್ನು ಪರಿಶೀಲಿಸುತ್ತಾರೆ.
ಆ ನಂತರ ಮತ ಎಣಿಕೆ ಪ್ರಕ್ರಿಯೆಯನ್ನು ಮುಗಿಸುತ್ತಾರೆ.
ಒಂದು ವೇಳೆ ಪ್ರತಿ ಅಸೆಂಬ್ಲಿ ಕ್ಷೇತ್ರದ ತಲಾ 5 ವಿವಿಪ್ಯಾಟ್ ಮತಚೀಟಿಗಳನ್ನು ಎಣಿಸಿದಾಗ, ಯಾವುದಾದರೂ ಒಂದರಲ್ಲಿ ತಾಳೆಯಾಗದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಹಾಗಿರುವಾಗ, ಆ ಲೋಕಸಭಾ ಕ್ಷೇತ್ರದ ಎಲ್ಲಾ ವಿವಿಪ್ಯಾಟ್‍ಗಳ ಮತಚೀಟಿಗಳನ್ನೂ ಎಣಿಕೆ ಮಾಡಬೇಕು ಎಂಬ ವಿರೋಧ ಪಕ್ಷಗಳ ಮನವಿಯನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ.


ಹಾಗೆಯೇ ಮೊದಲು ವಿವಿಪ್ಯಾಟ್ ಮತಚೀಟಿಗಳ ಎಣಿಕೆ ಮುಗಿಸಿ, ನಂತರ ಮತಯಂತ್ರ (ಇವಿಎಂ)ಗಳ ಮತಗಳನ್ನು ಎಣಿಸಿಬೇಕು ಎಂಬ ಮನವಿಯನ್ನೂ ಆಯೋಗ ತಳ್ಳಿ ಹಾಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...