Homeಅಂಕಣಗಳುದೇವನೂರು ಮಾತು ಕಾಲಜ್ಞಾನಿಯ ಸೂಚನೆಯಂತಲ್ಲಾ!

ದೇವನೂರು ಮಾತು ಕಾಲಜ್ಞಾನಿಯ ಸೂಚನೆಯಂತಲ್ಲಾ!

- Advertisement -
- Advertisement -

ಈ ಸರಕಾರಕ್ಕೆ ನರಬಲಿ ಬೇಕಿದೆ ಎಂದು ದೇವನೂರ ಮಹಾದೇವ ಭವಿಷ್ಯ ನುಡಿದಿದ್ದಾರಲ್ಲಾ. ಸಾಹಿತ್ಯ ಲೋಕ ಕಂಡ ಅಪರೂಪದ ಪ್ರತಿಭೆ ದೇವನೂರ. ಶತಮಾನಗಳಿಂದ ತುಳಿದವರು ಮತ್ತು ತುಳಿಸಿಕೊಂಡವರ ಮನಸ್ಥಿತಿಯನ್ನು ಬಿಚ್ಚಿ ಹರವಿ, ಇದೇ ನೋಡಿ ನಿಮ್ಮ ಹಣೆಬರಹವೆಂದು ಎತ್ತರದಲ್ಲಿ ನಿಂತು ತೋರಿದವರು.
ಅದೆಲ್ಲಕ್ಕಿಂತ ಮುಖ್ಯವಾಗಿ ಹೊಲೆ ಮಾದಿಗರು ಎಂದಕೂಡಲೇ ಸೋ ಕಾಲ್ಡ್ ಮೇಲು ಜಾತಿಗಳೆನಿಸಿಕೊಂಡವರಲ್ಲಿ ಮೂಡುವ ತಿರಸ್ಕಾರವನ್ನು ಪತ್ತೆಹಚ್ಚಿ ಹೇಳಿದವರು. ಮೇಲು ಜನರ ಈ ಕಾಯಿಲೆ ಇನ್ನು ಗುಣವಾಗಿಲ್ಲದ ಈ ಸಂದರ್ಭದಲ್ಲಿ, ಮುಸ್ಲಿಮ್ ಎಂದ ಕೂಡಲೇ ಎಲ್ಲರಿಗೂ ಅಸಹನೆ ಮೂಡುವಂತೆ ಶ್ರಮಿಸುತ್ತಿರುವವರ ವಿರುದ್ಧ ಇದೇ ಮಹಾದೇವ ತಿರುಗಿ ಬಿದಿದ್ದಾರಲ್ಲಾ. ಏಕೆಂದರೆ ಮುಸ್ಲಿಮರನ್ನ ಮುರಿದು ಮೂಟೆಕಟ್ಟಿ ಮಡಗಿದ ನಂತರ, ರಾಮಸೇನೆ ಎಂಬ ವಾನರರ ಸಮರ ದಲಿತರ ವಿರುದ್ಧ ಆರಂಭವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಏಕೆಂದರೆ ಪ್ರಪಂಚದ ಸಂವಿಧಾನಗಳನ್ನೆಲ್ಲಾ ಓದಿ ಭಾರತಕ್ಕೆಂದು ಅಪರೂಪದ ಸಂವಿಧಾನ ನೀಡಿದ ಅಂಬೇಡ್ಕರ್ ಬಗ್ಗೆ ಪುರೋಹಿತಶಾಹಿ ರಾಷ್ಟ್ರೋತ್ಥಾನ ಸಾಹಿತ್ಯದಲ್ಲಿ ನೈಜವನ್ನು ಮರೆಮಾಚಿ ಅವರಿಗೆ ಬೇಕಾದಂತೆ ಬರೆದುಕೊಂಡಿದ್ದಾರೆ. ಅಂಬೇಡ್ಕರ್ ಘನತೆ ಕಲ್ಪಿಸಿಕೊಟ್ಟ ಜನರ ಮೇಲೆ ಬೀಳಲು ಇಷ್ಟು ಸಾಕಲ್ಲವೆ ಸಂಘಿಗಳಿಗೆ. ಥೂತ್ತೇರಿ.

*****

ಮಹಿಷ ಮಂಡಲದಲ್ಲಿ ನಿಂತು ಬಿಜೆಪಿಯವರ ಮನಸ್ಥಿತಿಯನ್ನ ಅನಾವರಣ ಮಾಡಿದ ದೇವನೂರ ನಡವಳಿಕೆ ಕರ್ನಾಟಕದ ಇತರ ಸಾಹಿತಿಗಳಿಗೆ ಸ್ಪೂರ್ತಿಯುಂಟು ಮಾಡಬೇಕಿತ್ತು. ಏಕೆಂದರೆ ಬರೆಯುವ ಸಾಹಿತಿಗಳು ಏನು ಬರೆಯಬೇಕೆಂದು ಚಿಂತಿಸುವಂತಾಗಿದೆ. ತನ್ನ ಯಾವ ಪದ ಏನು ಅರ್ಥಕೊಡಬಹುದು, ಯಾವ ವಾಕ್ಯದಿಂದ ಯಾರು ಕೆರಳಬಹುದು, ನನ್ನ ಪುಸ್ತಕದಿಂದ ಯಾರಾದರೂ ರೊಚ್ಚಿಗೇಳುವರೆ ಎಂಬ ಗೊಂದಲಕ್ಕೆ ಸಿಕ್ಕಿಬಿದ್ದಿರುವಾಗ ಈ ಸಾಹಿತಿಗಳು ದೇವನೂರರಂತೆ ಬೀದಿಗೆ ಬರಬೇಕಿತ್ತು. ಒಂದು ಪ್ರೆಸ್‌ಮಿಟ್ ಮಾಡಬಹುದಿತ್ತು. ತನ್ನ ಮನೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದುಕೊಂಡು ಹೋಗಿ ಸರ್ವಜನಾಂಗದ ಮನವಿ ಕೊಡಬಹುದಿತ್ತು. ಜನರಿಗಾಗಿ ಬರೆಯುವ ಇವರು ಜನರಿಗೆ ತೊಂದರೆಯಾದಾಗ ಸುಮ್ಮನಿರಬಾರದಿತ್ತು ಎಂದು ಕರ್ನಾಟಕದ ಒಳ್ಳೆಯ ಮನಸ್ಸುಗಳು ಆಲೋಚಿಸುತ್ತಿರುವಾಗಲೇ ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿಪಡೆದಿರುವ ಧಾರವಾಡದ ನುಗ್ಗಿಕೇರಿಗೆ ನುಗ್ಗಿದ ವಾನರ ಸೇನೆ ನಬೀಸಾಬಿಯ ಕಲ್ಲಂಗಡಿ ಹಣ್ಣನ್ನು ಕಿತ್ತು ತಿಂದಿವೆಯಂತಲ್ಲಾ. ಥೂತ್ತೇರಿ.

ರಣಬಿಸಿಲ ದಾಹ ನೀಗಿಸಲೆಂದು ರೈತ ಬೆಳೆವ ಬೇಸಿಗೆ ಬೆಳೆ ಕಲ್ಲಂಗಡಿ ಹಣ್ಣು. ಬೆಳೆದವನು ಮಾರುವವನನ್ನ ಕಾಯುತ್ತಾನೆ, ಮಾರುವವನು ಕೊಂಡು ತಿನ್ನುವ ಗಿರಾಕಿಗಾಗಿ ಕಾಯುತ್ತಾನೆ, ಇದು ಒಬ್ಬರನ್ನೊಬ್ಬರು ಅವಲಂಬಿಸಿದ ಬದುಕು. ಇಂತಲ್ಲಿಗೆ ನುಗ್ಗಿದ ವಾನರ ಸೇನೆಯ ಇತಿಹಾಸ ಕೆದಕಿದರೆ ಅವು ಎಂದೂ ಭೂಮಿ ನೆಚ್ಚಿ ಬದುಕಿದವಲ್ಲ. ಭೂಮಿ ನೆಚ್ಚಿದವರನ್ನ ಗೌರವಿಸಿದ್ದು ಈ ವಾನರ ಸೇನೆಯ ಸಂಸ್ಕೃತಿಯಲ್ಲೇ ಇಲ್ಲ. ಅದು ಭೂಮಿ ನೆಚ್ಚಿ ಬದುಕಿದವನನ್ನ ಹೊಲ ಉಳುವ ಎತ್ತಿನಂತೆ ನೋಡುತ್ತಾ ಬಂದಿದೆ. ಇದನ್ನು ಕಂಡು ಕುವೆಂಪು ಉಳುವಾ ಯೋಗಿಯ ನೋಡಲ್ಲಿ ಎಂದು ತೋರಿಸಿದರು. ಅಲ್ಲಿಯವರೆಗೂ ಎತ್ತಿನ ಹಿಂದೆ ಎತ್ತಾಗಿ ತಿರುಗುವವನನ್ನು ಎತ್ತೆಂದೇ ಪರಿಗಣಿಸಿದ್ದ ಭೂಸುರೋತ್ತಮರು, ಅವನನ್ನ ಯೋಗಿ ಎಂದದ್ದು ಎಷ್ಟು ಸರಿ ಎಂದು ಕೊಂಕು ನುಡಿದಿದ್ದವು. ಸೂರ್ಯನಿಗಿಂತಲೂ ಮೊದಲೇ ತನ್ನ ಹೊಲದಲ್ಲಿ ಆರೂಡಿದ ರೈತ ಹುಕ್ಕೆ ಗೆರೆಯಲ್ಲೇ ನೇಗಿಲು ಬಿಡಬೇಕು. ಅತ್ತ ಇತ್ತ ತಿರುಗಿದರೆ ಮೊದಲ ಸೀಳಿಗೇ ನುಗ್ಗುತ್ತದೆ. ಅಂದರೆ ಉತ್ತ ಪಾತಿಯನ್ನೆ ಉಳಬೇಕಾಗುತ್ತದೆ. ಆದ್ದರಿಂದ ತಲೆ ಎತ್ತದ ರೈತ, ಹೆಂಡತಿ ರೊಟ್ಟಿ ತಂದಾಗಲೇ ತಲೆ ಎತ್ತಿ ನೋಡುತ್ತಿದ್ದುದು. ಯೋಗಿಯ ಧ್ಯಾನವಿಲ್ಲದೆ ಹೊಲ ಉಳಲಾಗುವುದಿಲ್ಲ. ಈ ಸಂಸ್ಕೃತಿಯೇ ಗೊತ್ತಿಲ್ಲದವುಗಳಿಗೆ ಭೂಮಿಯಿಂದ ಬೆಳೆದ ದವಸ ಧಾನ್ಯ ಹಣ್ಣುಗಳ ಬಗ್ಗೆ ಗೌರವವೇ ಇರುವುದಿಲ್ಲ. ಇಂತವರೇ ನಬೀಸಾಬ್ ಅಂಗಡಿಗೆ ದಾಳಿಯಿಟ್ಟವಂತಲ್ಲಾ. ಥೂತ್ತೇರಿ.

*****

ಕರ್ನಾಟಕದಲ್ಲೀಗ ರಾಜನ ಭಯ, ರಾಜನಿಲ್ಲದ ಭಯ ಎರಡೂ ಮನಸ್ಥಿತಿ ಅಮರಿಕೊಂಡಿವೆಯಂತಲ್ಲಾ. ಆಗೊಮ್ಮೆ ಗುಜರಾತಿನಲ್ಲಿ ಈ ಸ್ಥಿತಿಯುಂಟಾಗಿತ್ತು. ಅಲ್ಲಿ ಮೋದಿ ಎಂದಕೂಡಲೇ ಮುಸ್ಲಿಮರು ಬೆಚ್ಚಿ ಬೀಳುತ್ತಿದ್ದರು. ಮುಖ್ಯಮಂತ್ರಿಯ ಹುಕುಂನಂತೆಯೇ ವಿಶ್ವಹಿಂದುಗಳು ಭಜರಂಗಿಗಳು ರಾಮಸೇನೆ ವಾನರಸೇನೆಯೆಲ್ಲಾ ಸೇರಿಕೊಂಡು ಮೂರುದಿನ ಮುಸ್ಲಿಮರನ್ನ ಹುರಿದು ಮುಕ್ಕಿದ್ದರು. ಇದೀಗ ಕರ್ನಾಟಕದಲ್ಲಿ ಅಂತಹ ತಯಾರಿಯೊಂದು ನಡೆಯುತ್ತಿದೆಯಂತಲ್ಲಾ. ಪ್ರಕ್ಷುಬ್ದವಾದ ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಮಿಂಚಿನ ಕಾರ್ಯಾಚರಣೆ ನಡೆಸುವುದರ ಬದಲು ನೊಂದವರು ಬಂದು ದೂರು ಕೊಡುವುದನ್ನೆ ಕಾಯುತ್ತಿದ್ದಾರಂತಲ್ಲಾ. ಅದೇ ಬಿಜೆಪಿ ಜನರಿಗೆ ತೊಂದರೆ ಕೊಟ್ಟವರನ್ನ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವ ಪೊಲೀಸರು ಕರ್ನಾಟಕ ಈವರೆಗೆ ಕಾಣದಿದ್ದ ಹೋಂ ಮಿನಿಸ್ಟರ್ ಏನು ಹೇಳುತ್ತಿದ್ದಾರೆಂದು ಕಾಯುತ್ತಿದ್ದಾರಂತಲ್ಲಾ. ಹೋಂ ಮಿನಿಸ್ಟರ್ ಸಾಧನೆ ಯಾವುದೆಂದರೆ ಭದ್ರಾವತಿಯ ಕಾಗದ ಕಾರ್ಖಾನೆ ಉದ್ಧಾರ ಮಾಡಪ್ಪ ಎಂದು ಅಧ್ಯಕ್ಷನನ್ನಾಗಿ ಕೂರಿಸಿದರೆ ವಾರೊಪ್ಪತ್ತಿನಲ್ಲಿ ಅದನ್ನು ಹಾಳು ಮಾಡಿದ್ದೂ ಅಲ್ಲದೆ ಅದರ ಬಾಗಿಲಿಗೆ ಬೀಗ ಜಡಿದು ಅರಗದ ಕಡೆ ಹೋದದ್ದು. ಇಂತಹ ವ್ಯಕ್ತಿಯನ್ನು ಕರ್ನಾಟಕವನ್ನ ಹದ್ದುಬಸ್ತಿನಲ್ಲಿಡಬೇಕಾದ ಜವಾಬ್ದಾರಿ ಹೊರೆಸಿ ಕೂರಿಸಿದರೆ ಏನಾಗಬೇಕೋ ಅದೇ ಆಗುತ್ತಿದೆ. ಅಂದರೆ ಕೇಶವ ಕೃಪದ ಸೂಚನೆಗಳು ಜಾರಿಯಾಗುತ್ತಿವೆಯಂತಲ್ಲಾ. ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ:  ಸಿದ್ದರಾಮಯ್ಯ ರಾವಣನಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...