Homeಅಂಕಣಗಳುಶುರುವಾದ ಮಹೇಶ ಜೋಶಿ ಮಂತ್ರಗಳು!

ಶುರುವಾದ ಮಹೇಶ ಜೋಶಿ ಮಂತ್ರಗಳು!

- Advertisement -
- Advertisement -

ಈ ನಾಡಿನ ಸಂಸ್ಕೃತಿಯ ಪ್ರತೀಕವಾದ ಸಾಹಿತ್ಯ ಪರಿಷತ್‌ಗೆ ಛದ್ಮವೇಶದವರ ಅವಿರತ ಶ್ರಮದಿಂದ ಆರಿಸಿಬಂದ ಜೋಶಿ ತಮ್ಮ ಜೋಳಿಗೆಯಿಂದ ಒಂದೊಂದೇ ಅಸ್ತ್ರವನ್ನ ತೆಗೆಯತೊಡಗಿದ್ದಾರಲ್ಲ! ಈತ ಆರಿಸಿ ಬಂದ ಆರಂಭದಲ್ಲಿ ಶುದ್ಧ ಕನ್ನಡ ಮಾತಾಡಲು ಕರೆಕೊಟ್ಟರು. ಶುದ್ಧ ಕನ್ನಡ ಎಂದರೆ ಯಾವುದು? ಈ ನಾಡಿನ ಮೂವತ್ತು ಜಿಲ್ಲೆಗಳಲ್ಲೂ ಮೂವ್ವತ್ತು ವರಸೆಯಲ್ಲಿ ಕನ್ನಡ ಮಾತನಾಡುತ್ತಾರೆ ಎಂದಾಗ ಈತನ ಪ್ರೌಢಿಮೆ ಬಾಯಿ ಮುಚ್ಚಿಕೊಂಡಿತು. ತುಂಬ ಪ್ರಜಾಸತ್ತಾತ್ಮಕವಾಗಿ ನಡೆದುಕೊಂಡು ಬರುತ್ತಿದ್ದ ಸಾಹಿತ್ಯ ಪರಿಷತ್‌ನ ಆಡಳಿತವನ್ನು ಕೇಂದ್ರಿಕರಿಸಲು ಹೊರಟಿರುವ ಈತ ಸಾಹಿತ್ಯ ಪರಿಷತ್ ಸದಸ್ಯರಿಗೆ ಎಸೆಸೆಲ್ಸಿ ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ಶಾಲೆಗೆ ಹೋಗದೆ ಸಾವಿರಾರು ಜಾನಪದ ಹಾಡು ಹೇಳುವ, ಕತೆ ಹೇಳುವ, ಜಾನಪದ ಕುಣಿತಗಳನ್ನು ಪ್ರದರ್ಶಿಸುವ ಮತ್ತು ಡೊಳ್ಳುಬಡಿಯುವವರು ಜೋಶಿಗೆ ಭೂತ ಬಿಡಿಸಬೇಕಷ್ಟೇ. ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ಸಾಹಿತ್ಯ ಪರಿಷತ್ ಕಾರ್ಯಾಲಯವು ಪೂರ್ಣವಾಗಿ ಕೇಶವಕೃಪವಾಗುದರಲ್ಲಿ ಸಂಶಯವಿಲ್ಲವಂತಲ್ಲಾ ಥೂತ್ತೆರಿ.

****

ನಮ್ಮ ಪ್ರಖರ ವಿಮರ್ಶಕ ಮತ್ತು ಸಂಸ್ಕೃತಿ ಚಿಂತಕ ಡಿ.ಎಸ್ ನಾಗಭೂಷಣ ತರುತ್ತಿದ್ದ ಹೊಸ ಮನುಷ್ಯ ಎಂಬ ಮಾಸಪತ್ರಿಕೆ ನಿಲ್ಲಿಸುವುದಾಗಿ ಹೇಳಿದ್ದಾರಲ್ಲಾ! ಸದ್ಯ ಗರಹೊಡೆದ ಸ್ಥಿತಿಯಲ್ಲಿ ಪ್ರಜ್ಞಾವಂತರನ್ನು ಎಚ್ಚರಿಸುತ್ತಿದ್ದ ಹೊಸ ಮನುಷ್ಯ ಒಂದು ದಶಕವಾದರೂ ಹಳೆ ಮನುಷ್ಯನಾಗಿ ಉಳಿದಿದ್ದು ಹಳೆ ವಿಷಯ. ಆದರೆ ಹೊಸ ಮನುಷ್ಯನ ಒಗರು ದನಿ ಇರಬೇಕಿತ್ತು. ಅವನ್ನ ಹೊರತರಲು ಹಣಕಾಸಿನ ಸಮಸ್ಯೆಯಿಲ್ಲವಂತೆ, ಆದರೆ ಸಂಪಾದಕರ ಆರೋಗ್ಯ ಸಹಕರಿಸುತ್ತಿಲ್ಲವಂತೆ. ಸಮಾಜವಾದಿಗಳ ಅನಾರೋಗ್ಯದಿಂದ ಈ ಸಮಾಜಕ್ಕೆ ನಷ್ಟ. ಆಳುವ ಸರಕಾರಕ್ಕೆ ಅನಧಿಕೃತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದ ಹೊಸ ಮನುಷ್ಯ ಪ್ರತಿ ತಿಂಗಳೂ ಸಿದ್ದರಾಮಯ್ಯನ ಸರಕಾರಕ್ಕೆ ಭೂತ ಬಿಡಿಸುತ್ತಿದ್ದು ಒಂದು ವಿಶೇಷ. ಆದರೆ ಕುಮಾರಣ್ಣ ಮತ್ತು ಎಡೂರಪ್ಪನ ಸರಕಾರಕ್ಕೆ ಛಾಟಿ ಬೀಸುವ ಬದಲು ಸಪ್ಪಗಾದದ್ದೂ ಒಂದು ವಿಶೇಷ. ಪ್ರಖರ ಚಿಂತನೆಯ ನಿಷ್ಠುರ ವಿಮರ್ಶೆಯ ಮತ್ತು ನಾಡಿನ ಸಂಸ್ಕೃತಿ ಚಿಂತಕರಿಗೆ, ಬೌದ್ಧಿಕವಾಗಿ ಕೆಲಸ ಕೊಡುತ್ತಿದ್ದ ಹೊಸ ಮನುಷ್ಯ ನಿಲ್ಲಬಾರದಿತ್ತು, ಯಾರಾದರೂ ನಡೆಸಿಕೊಂಡು ಹೋಗಲು ಅನುವುಮಾಡಿಕೊಡಬೇಕಿತ್ತು. ಆದರೆ ಅಂತ ತೀರ್ಮಾನ ಇಂತವರಿಂದ ಸಾಧ್ಯವಿಲ್ಲವಂತಲ್ಲಾ ಥೂತ್ತೆರಿ.

****

ನಮ್ಮ ಜನಪ್ರಿಯ ಪ್ರಧಾನಿ ಯಾಕೋ ಈಶ್ವರಪ್ಪನಂತೆ ಮಾತನಾಡತೊಡಗಿದ್ದಾರಲ್ಲಾ ಕುಮಾರಣ್ಣ ಮತ್ತು ದೇವೇಗೌಡರ ಕೃಪಾಕಟಾಕ್ಷದಿಂದ ಮಂತ್ರಿಯಾದ ಅಮಲಿನಲ್ಲಿ ಈಶ್ವರಪ್ಪ ಇನ್ನೂ ಹದಿನೈದು ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದುಬಿಟ್ಟರು. ಈ ಬಗ್ಗೆ ಯಾರೂ ಅವರನ್ನ ವಿವರ ಕೇಳಲಿಲ್ಲ. ಆದರೇನು, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದುದಲ್ಲದೆ ಅವರ ಬಂಧುಬಾಂಧವರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಇದೀಗ ಮೋದಿಯವರು ಕಾಂಗ್ರೆಸ್ ಇನ್ನ ನೂರು ವರ್ಷಗಳವರೆಗೆ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ. ಈ ಕಾಲಜ್ಞಾನಿಯ ಮಾತನ್ನು ನೆನೆಸಿಕೊಂಡು ಸ್ಮರಿಸಲು ಯಾರಿರುತ್ತಾರೆ? ಅದಿರಲಿ, ಜಗತ್ತಿನ ತಾಪಮಾನ ಕುರಿತು ನಮ್ಮ ವಿಜ್ಞಾನಿಗಳು ಎಚ್ಚರಿಸುವ ಮಾತಿನ ಪ್ರಕಾರ, ಇನ್ನ ಹದಿನೈದು ವರ್ಷದಲ್ಲಿ ಏನಾಗುತ್ತದೊ ಏನೋ! ಅಂಥಾದ್ದರಲ್ಲಿ ನೂರುವರ್ಷದ ಭವಿಷ್ಯ ಹೇಳಿರುವ ಕಾಲಜ್ಞಾನಿ ಪ್ರಧಾನಿ ಈವರೆಗೆ ಬೀದಿಯಲ್ಲಾಡುತ್ತಿದ್ದ ಮಾತನ್ನ ಲೋಕಸಭೆಯಲ್ಲಾಡುತ್ತಾರೆ, ಲೋಕಸಭೆಯ ಮಾತನ್ನು ಅಮೆರಿಕದಲ್ಲಿ ಬಿತ್ತರಿಸುತ್ತಾರೆ. ಇದನ್ನೆಲ್ಲಾ ಗಮನಿಸಿದರೆ ನಮ್ಮ ಈಶ್ವರಪ್ಪನ ಜೊತೆ ಸ್ಪರ್ಧೆಗಿಳಿದಂತಿದ್ದಾರಲ್ಲಾ ಥೂತ್ತೆರಿ.

****

ಮತೀಯವಾಗಿ ಜೋರುಗಂಟಲಿನಿಂದ ಕೂಗಿದವರ ಕಡೆ ಬಿಜೆಪಿ ಪಕ್ಷದ ದೃಷ್ಟಿ ಬೇಗ ಬೀಳುತ್ತದೆ ಮತ್ತು ಅಂಥವರು ಮಾತ್ರ ನಮ್ಮ ಪಾರ್ಟಿ ಉಳಿಸಿ ಬೆಳೆಸಬಲ್ಲ ಎಂಬ ಮೂಢನಂಬಿಕೆಗೆ ತುತ್ತಾದ ಹಲವರು ಗಂಟಲು ಹರಿದುಕೊಳ್ಳುವ ಕೂಗುಮಾರಿಗಳಾಗಿದ್ದಾರಂತಲ್ಲಾ. ಈ ಪೈಕಿ ಬಸನಗೌಡ ಪಾಟೀಲ ಯತ್ನಾಳ, ಮೈಸೂರಿನ ಪ್ರತಾಪಸಿಮ್ಮ ಹಾಗೂ ಶಿವಮೊಗ್ಗದ ಈಶ್ವರಪ್ಪ ಹಳೆಯಗಂಟಲು. ಅವರದ್ದು ನೈನ್‌ಟೀನ್ ಫಾರ್ಟಿ ಸೆವೆನ್ ಮಾಡೆಲಿನ ಗಾಡಿಯ ಸೈಲೆನ್ಸರ್ ಪೈಪು. ಅದು ಶಬ್ದ ಮಾಡಿದರೆ ಉಳಿದ ಯಾವುದೇ ಶಬ್ದ ಕೇಳುವುದಿಲ್ಲ. ಅಂತಹ ಗಂಟಲಿನಲ್ಲಿ ದೇಶದ ಬಾವುಟ ಹಾರಾಡುವ ಧ್ವಜಸ್ತಂಭದಿಂದ ರಾಷ್ಟ್ರಧ್ವಜ ಇಳಿಸಿ ಭಗವಾಧ್ವಜವನ್ನ ಹಾರಿಸುತ್ತೇವೆ, ಜೊತೆಗೆ ಕೆಂಪುಕೋಟೆಯ ಮೇಲೂ ಹಾರಿಸುತ್ತೇವೆ ಎಂದು ಅಬ್ಬರಿಸಿದ್ದಾರಲ್ಲಾ. ಈ ಅಬ್ಬರವು ಅಭದ್ರತೆಯ ಮೂಲದ್ದು. ಎಡೂರಪ್ಪನ ನಂತರ ಈಶ್ವರಪ್ಪ ನಿವೃತ್ತಿಯ ಸಾಲಿನಲ್ಲಿ ನಿಂತಿರುವಾಗ ನನ್ನಂತವನು ನಿವೃತ್ತಿಗೆ ಯೋಗ್ಯನಲ್ಲ ಪಾರ್ಟಿಗೆ ಅನಿವಾರ್ಯ ಎಂಬುದು ಭಗವಾಧ್ವಜದ ದನಿಯಲ್ಲಿದೆಯಂತಲ್ಲಾ. ಅದೇನಾದರಾಗಲಿ ಎಡೂರಪ್ಪನವರ ನಿರ್ಗಮನದ ನಂತರ ಈಶ್ವರಪ್ಪ ಅನಿವಾರ್ಯವಾಗಿ ಆಕಡೆ ಸರಿದು ನಿಲ್ಲಬೇಕಿದೆ. ಏಕೆಂದರೆ ಎಡೂರಪ್ಪನ ಮುಖ ನೋಡಿ ಈಶ್ವರಪ್ಪನಿಗೆ ಓಟು ಮಾಡುತ್ತಿದ್ದ ಶಿವಮೊಗ್ಗದ ಲಿಂಗಾಯಿತರಿಗೆ ಪುನಹ ಈಶ್ವರಪ್ಪನಿಗೆ ಓಟು ಮಾಡುವ ಅಗತ್ಯ ಕಾಣುತ್ತಿಲ್ಲವಂತಲ್ಲಾ

ಥೂತ್ತೆರಿ.


ಇದನ್ನೂ ಓದಿ: ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...