PC:[email protected]

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್‌ ಝೈ  ಮಂಗಳವಾರ ಅಸರ್ ಮಲಿಕ್ ಎಂಬುವವರನ್ನು ವಿವಾಹವಾಗಿರುವುದಾಗಿ ಘೋಷಿಸಿದ್ದಾರೆ. ವಿವಾಹ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

‘ಇದು ನನ್ನ ಜೀವನದಲ್ಲಿ ಅಮೂಲ್ಯವಾದ ದಿನ. ಅಸರ್ ಮತ್ತು ನಾನು ವಿವಾಹವಾಗಿದ್ದು, ಜೀವನ ಸಂಗಾತಿಗಳಾಗಿದ್ದೇವೆ. ಬರ್ಮಿಂಗ್‌ಹ್ಯಾಂನ ನಿವಾಸದಲ್ಲಿ ನಮ್ಮ ಕುಟುಂಬದವರ ಉಪಸ್ಥಿತಿಯಲ್ಲಿ ಪುಟ್ಟ ವಿವಾಹ ಕಾರ್ಯಕ್ರಮ ನೆರವೇರಿದೆ. ನಿಮ್ಮೆಲ್ಲರ ಹಾರೈಕೆಗಳಿರಲಿ. ಮುಂದಿನ ಪ್ರಯಾಣಕ್ಕಾಗಿ ನಾವು ಒಟ್ಟಿಗೆ ಹೆಜ್ಜೆಯಿಡಲು ಉತ್ಸುಕರಾಗಿದ್ದೇವೆ’ ಎಂದು ಮಲಾಲಾ ಟ್ವೀಟ್ ಮಾಡಿದ್ದಾರೆ.

ಮಲಾಲಾ ತಮ್ಮ ವಿವಾಹದ ಸುದ್ದಿಯನ್ನು ಹಂಚಿಕೊಂಡ ನಂತರ, ನಟಿ ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಸೇರದಂತೆ ಹಲವು ನಟ, ನಟಿಯರು, ಗಣ್ಯರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜಕುಮಾರ್ ನುಡಿನಮನ; ಮುಗ್ಧ ನಗುವೊಂದರ ಕಣ್ಮರೆ

ನವ ದಂಪತಿಯ ಚಿತ್ರವನ್ನು ಪೋಸ್ಟ್ ಮಾಡಿರುವ ನಟಿ ಪ್ರಿಯಾಂಕಾ ಚೋಪ್ರಾ “ಅಭಿನಂದನೆಗಳು ಮಲಾಲಾ ನಿಮಗೆ ತುಂಬಾ ಖುಷಿ ಮತ್ತು ಸಂತೋಷ ಸಿಗಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.

ನಟಿಯರಾದ ಕತ್ರಿನಾ ಕೈಫ್, ರೀಸ್ ವಿದರ್‌ಸ್ಪೂನ್ (Reese Witherspoon) ಮತ್ತು ಯೂಟ್ಯೂಬರ್ ಲಿಲ್ಲಿ ಸಿಂಗ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಮಲಾಲಾಗೆ ಶುಭ ಹಾರೈಸಿದ್ದಾರೆ.

ಪತಿಯ ಬಗ್ಗೆ ಮಲಾಲಾ ವಿವರಗಳನ್ನು ನೀಡದಿದ್ದರೂ, ಅವರು ವಿವಾಹವಾಗಿರುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹೈ ಪರ್ಫಾರ್ಮೆನ್ಸ್ ಸೆಂಟರ್‌ನ ಜನರಲ್ ಮ್ಯಾನೇಜರ್ ‘ಅಸರ್ ಮಲಿಕ್’ ಅವರನ್ನು ಎಂದು ಮಾಧ್ಯಮಗಳು ವರದಿ ಮಾಡಿವೆ.

ವಿವಾದಿತ ಕೃಷಿ ಕಾನೂನುಗಳ ವಿರುದ್ಧ ದನಿ ಎತ್ತಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು, ಕಾರ್ಯಕರ್ತರ ಬಂಧನ ಹಾಗೂ ಪ್ರತಿಭಟನಾ ಸ್ಥಳಗಳಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಿದ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನ ಮೂಲದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಈ ಹಿಂದೆ ಮಾರ್ಚ್‌ನಲ್ಲಿ ಪ್ರಶ್ನಿಸಿದ್ದರು. ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.

 


ಇದನ್ನೂ ಓದಿ: ರೈತ ಹೋರಾಟ: ನೋಬೆಲ್ ಪುರಸ್ಕೃತೆ, ಹೋರಾಟಗಾರ್ತಿ ಮಲಾಲಾ ಯೂಸುಫ್ ಬೆಂಬಲ

1 COMMENT

LEAVE A REPLY

Please enter your comment!
Please enter your name here