Homeಕರ್ನಾಟಕಕುಂಕುಮ ವಿಚಾರ: ಮಹಿಳೆಯನ್ನು ನಿಂದಿಸಿದ ಮುನಿಸ್ವಾಮಿಗೆ ಜನರಿಂದ ತರಾಟೆ

ಕುಂಕುಮ ವಿಚಾರ: ಮಹಿಳೆಯನ್ನು ನಿಂದಿಸಿದ ಮುನಿಸ್ವಾಮಿಗೆ ಜನರಿಂದ ತರಾಟೆ

- Advertisement -
- Advertisement -

”ಏನಮ್ಮ ನಿನ್ನ ಹೆಸರು, ಹಣೆಗೆ ಯಾಕೆ ಕುಂಕುಮ ಹಾಕಿಲ್ಲ? ಹಣ ಕೊಟ್ಟು ಬಲವಂತವಾಗಿ ಮತಾಂತರ ಮಾಡಿದ್ದಾರೆ ಅಲ್ಲವಾ? ವೈಷ್ಣವಿ ಎಂಬುದಾಗಿ ಅಂಗಡಿ ಹೆಸರನ್ನು ಯಾಕೆ ಇಟ್ಟುಕೊಂಡಿದ್ದೀಯಾ? ಯಾರೊ ಕಾಸು ಕೊಡುತ್ತಾರೆ ಅಂತ ಸುಜಾತ ಅಂತ ಹೆಸರು ಇಟ್ಟುಕೊಂಡಿದ್ದೀಯಾ? ಗಂಡ ಬದುಕಿದ್ದಾನೆ ತಾನೇ? ನಿನಗೆ ಕಾಮನ್ ಸೆನ್ಸ್ ಇಲ್ಲ. ತಂದೆ ಹೆಸರು ಬದಲಾಯಿಸುತ್ತೀಯಾ ನೀನು? ಅದನ್ನೆಲ್ಲ ಇಟ್ಟುಕೊಳ್ಳುವುದಕ್ಕೆ ಯೋಗ್ಯತೆ ಇಲ್ಲ ನಿನಗೆ..”- ಹೀಗೆ ಕೋಲಾರ ಸಂಸದ ಮುನಿಸ್ವಾಮಿಯವರು ದುಡಿಯುವ ಮಹಿಳೆಯೊಬ್ಬರನ್ನು ನಿಂದಿಸಿದ್ದಾರೆ.

ಸಾಂವಿಧಾನಿಕ ಮೌಲ್ಯಗಳನ್ನು ಮರೆತು ಮುನಿಸ್ವಾಮಿ ವರ್ತಿಸಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಮುನಿಸ್ವಾಮಿಯವರ ಹೇಳಿಕೆಯನ್ನು ಹಂಚಿಕೊಂಡು ಬುದ್ಧಿಮಾತು ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಈ ಘಟನೆ ನಡೆದಿರುವುದನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಕೀಲರಾದ ಅಖಿಲಾ ವಿದ್ಯಾಸಂದ್ರ ಈ ಕುರಿತು ಪೋಸ್ಟ್ ಮಾಡಿದ್ದು, “ಇಂತಹ ಅಧಿಕ ಪ್ರಸಂಗ ಮೆರೆಯಲು ಈ ಸಂಸದನಿಗೆ ಅಧಿಕಾರ ಕೊಟ್ಟವರು ಯಾರು? ಪ್ರತಿಸಲ ಮುಖ ತೊಳೆದಾಗ ಹರಿದು ಚರಂಡಿನೀರಿನೊಂದಿಗೆ ಮಿಳಿತವಾಗುವ ಕುಂಕುಮದಲ್ಲಿದೆಯೇ ಆಕೆಯ ಗಂಡನ ಜೀವ? ತಲೆಯೊಳಗೆ ಮತಿಯಿಲ್ಲದ ಕೂಪಮಂಡೂಕಗಳಿವು. ಆ ಸ್ವಾವಲಂಬಿ ಮಹಿಳೆಯರನ್ನು ಅವಮಾನಗೊಳಿಸಲೆಂದೇ ಅಂತಾರಾಷ್ಟ್ರೀಯ ಮಹಿಳಾ ದಿನದ ಆ ಕಾರ್ಯಕ್ರಮಕ್ಕೆ ಹೋಗಿದ್ದೇನು ಈ ‘ಮನು’ಜ? ಛೀ ಧಿಕ್ಕಾರವಿರಲಿ ಈತನ ವ್ಯಕ್ತಿತ್ವಕ್ಕೆ” ಎಂದಿದ್ದಾರೆ.

ಲೇಖಕಿ ಮಮತಾ ಅರಸೀಕೆರೆ ಪ್ರತಿಕ್ರಿಯಿಸಿ, “ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲ ಎಂದು ಸಂಸದರೊಬ್ಬರು ಮಹಿಳೆಯರೊಬ್ಬರನ್ನು ದಬಾಯಿಸಿದ್ದಾರೆ. ನಿನ್ನ ಗಂಡ ಬದುಕಿದ್ದಾನೆ ತಾನೆ ಕುಂಕುಮ ಇಟ್ಟುಕೊ ಅಂದಿದ್ದಾರೆ. ಈ ಅಂಶಗಳೆಲ್ಲ ವೈಯಕ್ತಿಕ ವಿಷಯಗಳು. ಭಾರತೀಯ ಸಂಸ್ಕೃತಿ ಹೆಸರಲ್ಲಿ ಹೇರುವ ಪ್ರವೃತ್ತಿ ಸಲ್ಲದು. ಅದರಲ್ಲೂ ಹೆಣ್ಣುಮಕ್ಕಳೆಂದರೆ ಸಾಕು ಅವರನ್ನೇ ಸತತ ಗಮನಿಸುವ, ಕಾಯ್ದುಕೊಂಡಿದ್ದು ಯಾವುದಾದರೂ ವಿಷಯವನ್ನೆತ್ತಿ ತಿವಿಯುವ ಈ ಪುರುಷರ ಮನಃಸ್ಥಿತಿ ಅದ್ಯಾವಾಗ ಬದಲಾಗುವುದೊ ತಿಳಿಯದು. ಬಾಹ್ಯ ಲಕ್ಷಣಗಳು , ಸಂಕೇತಗಳ ಮೂಲಕ ಮಹಿಳೆಯರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ನಡೆಗಳನ್ನು ಯಾವತ್ತೂ ವಿರೋಧಿಸಬೇಕು” ಎಂದು ತಿಳಿಸಿದ್ದಾರೆ.

ಮುಂದುವರಿದು, “ಸಂಸ್ಕೃತಿ ಹೆಸರಲ್ಲಿ ಮಾಡುವ ಅನಾಚಾರಗಳನ್ನು ಮೊದಲು ಬದಲಾಯಿಸಲಿ. ಅಷ್ಟಕ್ಕೂ ಸಂಸ್ಕೃತಿ ಉಳಿಸುವ ಜವಾಬುದಾರಿಕೆಯನ್ನು ಯಾರು ಯಾರಿಗೂ ಕೊಟ್ಟಿಲ್ಲ. ದಬಾಯಿಸುವ ಹಕ್ಕು ಯಾರಿಗೂ ಇಲ್ಲ. ದಬಾಯಿಸಲು, ಬದಲಾಯಿಸಲು, ಬೇಕಾದಷ್ಟು ಸಮಾಜ ಬಾಹಿರ ಅಪಸವ್ಯಗಳಿವೆ. ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳ ಬಗ್ಗೆ ಖಂಡತುಂಡವಾಗಿ ಮಾತನಾಡಲಿ ನೋಡುವ. ಅಂತಹ ಕಡೆಯೆಲ್ಲಾ ಈ ಜೋರು ಮನೋಭಾವ ಮಾಡಿ ತೋರಿಸಲಿ. ಹೊರಗೊಂದು ಒಳಗೊಂದು ಪ್ರವೃತ್ತಿಯನ್ನು ಬಿಟ್ಟು ನಡೆ ನುಡಿ ಸಮತೋಲದಲ್ಲಿಟ್ಟುಕೊಂಡಿರಲಿ ಸಾಕು ಈ ಪುರುಷವರ್ಗಗಳೆಲ್ಲ” ಎಂದಿದ್ದಾರೆ.

ಅಸ್ತಿತ್ವ ಲೀಗಲ್ ಟ್ರಸ್ಟ್ ಸಂಸ್ಥಾಪಕರು ಹಾಗೂ ವಕೀಲರಾದ ಅಂಜಲಿ ರಾಮಣ್ಣ ಪ್ರತಿಕ್ರಿಯಿಸಿ, “ಸಿರಿವಂತರು ಅವರ ಧಿರಿಸಿಗೆ match ಆಗಲ್ಲ ಅಂತ ಕುಂಕುಮ ಇಟ್ಟುಕೊಂಡಿರಲ್ಲ. ಮಧ್ಯಮದವರು matching ಬೊಟ್ಟು ಇಟ್ಟುಕೊಂಡಿರುತ್ತಾರೆ. ದುಡಿಯುವ ಮಹಿಳೆಯರು ಕುಂಕುಮ, ಬಳೆ ಏನೂ ತೊಟ್ಟಿರುವುದಿಲ್ಲ, ಅವರ ಕೈ ಬಿರುಕುಗಳಿಂದ, ಹಣೆ ಧೂಳಿನಿಂದ, ಕೂದಲು ಬಿಸಿಲಿನಿಂದ ತುಂಬಿರುತ್ತದೆ. ಇವರೆಲ್ಲರ ಗಂಡಂದಿರು ಪೂರ್ತಿ ಆಯುಷ್ಯ ಬದುಕಿದವರನ್ನು ಕಂಡಿದ್ದೇನೆ. ಸಂಸದ ಮುನಿಸ್ವಾಮಿ ಮಹಾಶಯರು ಚಿತ್ರಗುಪ್ತನ ಕೆಲಸ ಬಿಟ್ಟು ಜನರ ಜವಾಬ್ದಾರಿ ನೋಡುವುದು ಒಳಿತು” ಎಂದು ಬುದ್ಧಿ ಹೇಳಿದ್ದಾರೆ.

ಲೇಖಕಿ ಭಾರತಿ ಹೆಗಡೆಯವರು ಪ್ರತಿಕ್ರಿಯಿಸಿ, “ಪರವಾಗಿಲ್ಲ ಸಂಸದರೇ‌. ಇದು ಬಹಳ ಬೇಗ ಕಣ್ಣಿಗೆ ಬೀಳತ್ತೆ. ಹಾಸಿ ಹೊದೆಯಷ್ಟಿರುವ ಬಡತನ, ನೀರಿನ ಸಮಸ್ಯೆ, ಹೆಚ್ಚುತ್ತಾ ಇರೋ ಹೆಣ್ಣಿನ ಮೇಲಿನ ದೌರ್ಜನ್ಯ ಅತ್ಯಾಚಾರಗಳು, ಇದ್ಯಾವುದೂ ತಮ್ಮ ಗಮನಕ್ಕೆ ಬರೋದಿಲ್ಲ. ಕುಂಕುಮ ಇಟ್ಗೊಳೋದು ಬಿಡೋದು ಅವರವರ ವೈಯಕ್ತಿಕ ನಿಲುವು. ಅದಕ್ಕಾಗಿ ಸರ್ವಾಜನಿಕವಾಗಿ ಒಬ್ಬ ಮಹಿಳೆಯನ್ನು ನಿಂದಿಸಿದ ತಮ್ಮ ಕುರಿತು ಏನೆನ್ನಬೇಕು?” ಎಂದು ಪ್ರಶ್ನಿಸಿದ್ದಾರೆ.

ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಘಟನೆಯನ್ನು ಖಂಡಿಸಿದ್ದು, “ಈ ಮನಃಸ್ಥಿತಿಗೆ ಧಿಕ್ಕಾರ ಹೇಳುತ್ತಲೇ. ಇದರ ಮೂಲ ಹುಡುಕಿ ಅದನ್ನು ಸಂಪೂರ್ಣ ತೊಲಗಿಸುವ ಪ್ರಯತ್ನ ಮಾಡದೇ ಹೋದರೆ ಇಂಥ ಮನಃಸ್ಥಿತಿಗಳು ಮತ್ತೆ ಮತ್ತೆ ಎದ್ದು ನಮಗೆ ಜಾಡಿಸುವ ಸಂಭವ ಸೃಷ್ಟಿಯಾಗುತ್ತಲೇ ಇರುತ್ತದೆ. ಇದು ನನ್ನ ಪ್ರಕಾರ ಈ ಮಹನೀಯರ ಹೆಗಲ ಮೇಲಿಟ್ಟು ಬೇರೆಯವರು ಗುರಿ ಇಟ್ಟು ಹೊಡೆದ ಪಿಸ್ತೂಲ್. ಹೆಗಲು ಕೊಟ್ಟವರನ್ನು ಧಿಕ್ಕರಿಸುತ್ತಲೇ , ಬೇರೆಯವರ ಹೆಗಲ ಮೇಲೆ ತಮ್ಮ ಸಿದ್ಧಾಂತದ ಗುರಿಯನ್ನು ಇಟ್ಟು ಹೊಡೆವ ಮನಸ್ಥಿತಿಯನ್ನು ಸಂಪೂರ್ಣ ಧಿಕ್ಕರಿಸಬೇಕಾಗಿದೆ. ಮಹಿಳೆಯರ ಸ್ವಯಂ ಅಸ್ಮಿತೆಯನ್ನು ಒಪ್ಪದ ಎಲ್ಲ ಜಾತಿ ಧರ್ಮದ ಮೂಲಭೂತವಾದಿ ಮನಃಸ್ಥಿತಿಗಳಿಗೆ ಧಿಕ್ಕಾರ ಹೇಳಬೇಕಾಗಿದೆ” ಎಂದಿದ್ದಾರೆ.

ಪ್ರೊ.ಪುರುಷೋತ್ತಮ ಬಿಳಿಮಲೆಯವರು ಹೀಗೆ ಪೋಸ್ಟ್ ಮಾಡಿದ್ದಾರೆ:

ಅಯ್ಯಾ ಮುನಿಸ್ವಾಮೀ,
ಬಡ ಮಹಿಳೆಯರ ಕುಂಕುಮ ಬೆವರಲ್ಲಿ ಕರಗಿ ಹೋಗುತ್ತೆ.
ಕುಂಕುಮ ತರಲು ಮತ್ತೆ ಗಂಡನಿಗೆ ಹೇಳಬೇಕು,
ನಿನ್ನ ಕುಂಕುಮ ನಿನ್ನ ಹಣೆಯಲಿ ಭದ್ರವಾಗಿರಲಿ
ಕಂಡ ಕಂಡವರಿಗೆಲ್ಲ ನಾಮ ಹಾಕಲು ಬೇಕಾಗಬಹುದು ನಿನಗೆ
ದುಡಿವ ಮಹಿಳೆಯ ಬಳೆಗಳು ಕೆಲಸದ ನಡುವೆ ಒಡೆದು ಚೂರಾಗುತ್ತವೆ.
ಮತ್ತೆ ಕೊಳ್ಳಲು ಊರ ಜಾತ್ರೆಗೆ ಕಾಯಬೇಕು.
ಹಬ್ಬದಲಿ ಬಳೆಮಾರುವನಿಗೆ ತಡೆ ಒಡ್ಡಲಾಗಿದೆಯಂತೆ
ಈಗ ನಿನ್ನ ಬಳೆಗಳ ನೀನೇ ಇಟ್ಟುಕೋ
ಜಾತಿ ಮತಗಳ ಹೆಸರಿನಲಿ ಜನಗಳಿಗೆ ತೊಡಿಸಲು ಬೇಕಾಗಬಹುದು ನಿನಗೆ
ತಾಯಂದಿರ ಹೊಟ್ಟೆ ಬೆನ್ನಿಗಂಟಿದ್ದು ನಿನಗೆ ಕಾಣಲಿಲ್ಲ
ಎಣ್ಣೆಯಿಲ್ಲದೆ ಅವರ ನೆತ್ತಿ ಒಣಗಿದ್ದು ನಿನಗೆ ಗೊತ್ತಿಲ್ಲ
ಗುಡಿಸಲುಗಳು ಸೋರುತ್ತಿರುವುದ ನೀನು ನೋಡಲಿಲ್ಲ,
ಮಕ್ಕಳು ಶಾಲೆಕಾಣದ ಬಗೆಗೆ ನಿನಗೆ ಅರಿವು ಮೂಡಲಿಲ್ಲ.
ವಯಸಾದರೂ ನಿನಗೆ ತಾಯಿಯ ಮುಖ ದರ್ಶನವಾಗಲೇ ಇಲ್ಲ.

ಕವಿತಾ ಕವಿ ಎಂಬವರು ಪ್ರತಿಕ್ರಿಯಿಸಿ, “ನನ್ನಂಥವರನ್ನು ಕೇಳಬೇಕಿತ್ತು. ಗ್ರಹಚಾರ ಬಿಡಿಸ್ತಿದ್ದೆ. ಜನಪ್ರತಿನಿಧಿಯಾಗಿರುವುದು ಜನಸೇವೆ ಮಾಡಲೆಂದೇ ಹೊರತು ದಬ್ಬಾಳಿಕೆ ನಡೆಸಲು ಅಲ್ಲ. ಮೊದಲು ನಿಮ್ಮನ್ನು ಗಾದಿಗೇರಿಸಿದ ಸಂವಿಧಾನ ಓದಿ. ನಂತರ ಮತ ಕೇಳಲು ಬನ್ನಿ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...