Homeಮುಖಪುಟಮೂರು ದಶಕಗಳ ನಂತರ ಮರುಮದುವೆ; ಮಕ್ಕಳಿಗೆ ಆಸ್ತಿ ಉಳಿಸಲು ವಿಶೇಷ ವಿವಾಹ ಕಾಯ್ದೆಯ ಮೊರೆಹೋದ ಮುಸ್ಲಿಂ...

ಮೂರು ದಶಕಗಳ ನಂತರ ಮರುಮದುವೆ; ಮಕ್ಕಳಿಗೆ ಆಸ್ತಿ ಉಳಿಸಲು ವಿಶೇಷ ವಿವಾಹ ಕಾಯ್ದೆಯ ಮೊರೆಹೋದ ಮುಸ್ಲಿಂ ದಂಪತಿ

- Advertisement -
- Advertisement -

ಕೇರಳದ ಕಾಸರಗೋಡಿನ ಮುಸ್ಲಿಂ ದಂಪತಿಗಳು ಮೂರು ದಶಕಗಳ ನಂತರ ವಿಶೇಷ ವಿವಾಹ ಕಾಯ್ದೆಯಡಿ ಮರುಮದುವೆಗೆ ನೋಂದಣಿ ಮಾಡಿಕೊಂಡಿದ್ದು, ಇದನ್ನು ಕೆಲವು ಮುಸ್ಲಿಂ ಸಂಘಟನೆಗಳು ವಿರೋಧಿಸಿವೆ.

ಮಲಪ್ಪುರಂ ಜಿಲ್ಲೆಯ ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯದ ಅಡಿಯಲ್ಲಿನ ಫತ್ವಾ ಮತ್ತು ಸಂಶೋಧನಾ ಮಂಡಳಿಯು ಈ ನಿರ್ಧಾರವನ್ನು ಖಂಡಿಸಿದೆ.

“ಇಸ್ಲಾಮಿಕ್ ನಂಬಿಕೆಗಳನ್ನು ಅನುಸರಿಸುತ್ತಿರುವ ದಂಪತಿಗಳು ಈಗ ತಮ್ಮ ಸಂಪತ್ತಿನ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ರೂಢಿಗಳನ್ನು ಮೀರಲು ವಿವಾಹಕ್ಕೆ ಮರು-ನೋಂದಣಿ ಮಾಡಿಕೊಳ್ಳುತ್ತಿದ್ದಾರೆ” ಎಂದು ಮಂಡಳಿ ಹೇಳಿಕೆ ನೀಡಿದೆ.

“ಇಸ್ಲಾಂನಲ್ಲಿನ ಉತ್ತರಾಧಿಕಾರದ ಕಾನೂನಿನ ಪ್ರಕಾರ, ಮೃತ ತಂದೆಗೆ ಕೇವಲ ಹೆಣ್ಣು ಮಕ್ಕಳಿದ್ದರೆ, ಆಸ್ತಿಯ ಮೂರನೇ ಎರಡರಷ್ಟು ಭಾಗವನ್ನು ತಂದೆಯ ಸಹೋದರಿಯರು ಮತ್ತು ಸಹೋದರರ ನಡುವೆ ಹಂಚಬೇಕು. ತಮ್ಮ ಆಸ್ತಿಯಲ್ಲಿ ಒಡಹುಟ್ಟಿದವರಿಗೆ ಯಾವುದೇ ಭಾಗ ಸಿಗಬಾರದು ಎಂಬ ಸಂಕುಚಿತ ಮನೋಭಾವದಿಂದ ವಕೀಲ ಶುಕ್ಕೂರ್ ಅವರು ಮರುಮದುವೆಯಾಗುತ್ತಿದ್ದಾರೆ” ಎಂದಿದೆ.

ವಕೀಲ ಮತ್ತು ಹಕ್ಕುಗಳ ಹೋರಾಟಗಾರ ಸಿ ಶುಕ್ಕೂರ್ ಮತ್ತು ಅವರ ಪತ್ನಿ ಶೀನಾ ಶುಕ್ಕೂರ್ ಅವರು ತಮ್ಮ ಮೂವರು ಪುತ್ರಿಯರ ಸಮ್ಮುಖದಲ್ಲಿ ಕಾಸರಗೋಡಿನಲ್ಲಿ ಬುಧವಾರ ಮರುವಿವಾಹದ ನೋಂದಣಿ ಮಾಡಿಕೊಂಡರು.

ಹೆಣ್ಣುಮಕ್ಕಳಿಗೆ ಪೋಷಕರ ಸಂಪತ್ತಿನ ಮೂರನೇ ಎರಡರಷ್ಟು ಪಾಲು ನೀಡುವ ಇಸ್ಲಾಮಿಕ್ ಉತ್ತರಾಧಿಕಾರದ ಮಾನದಂಡಗಳನ್ನು ತಿದ್ದುಪಡಿ ಮಾಡುವ ಅಗತ್ಯತೆಯ ಸಂದೇಶವನ್ನು ಸಾರಲು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಯ್ಕೆ ಮಾಡಿಕೊಂಡಿರುವ ಈ ದಂಪತಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆಂದು ವರದಿಯಾಗಿದೆ.

ದಂಪತಿಯು ವಿಶೇಷ ವಿವಾಹ ಕಾಯಿದೆಯಡಿ ಮರುಮದುವೆಯಾಗಿರುವುದಕ್ಕೆ ಮೂವರು ಹೆಣ್ಣುಮಕ್ಕಳು ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿರಿ: ಕುಂಕುಮ ವಿಚಾರ: ಮಹಿಳೆಯನ್ನು ನಿಂದಿಸಿದ ಮುನಿಸ್ವಾಮಿಗೆ ಜನರಿಂದ ತರಾಟೆ

ಶುಕ್ಕೂರ್ ವಕ್ಕೀಲ್ ಅವರು 2022ರ ಚಲನಚಿತ್ರ ‘ನ್ನ ಥಾನ್ ಕೇಸ್ ಕೊಡು’ನಲ್ಲಿ ನಟಿಸಿದ್ದಾರೆ. 51 ವರ್ಷದ ಡಾ ಶೀನಾ ಶುಕ್ಕೂರ್ ಅವರು ಕೊಟ್ಟಾಯಂ ಮೂಲದ ಎಂಜಿ ವಿಶ್ವವಿದ್ಯಾಲಯಕ್ಕೆ (ಎಂಜಿಯು) ಕುಲಪತಿಯಾಗಿದ್ದರು.

ಇಸ್ಲಾಮಿಕ್ ಕಾನೂನು ವ್ಯವಸ್ಥೆಯಾದ ‘ಶರಿಯಾ’ ಅಡಿಯಲ್ಲಿ ಈ ಮೊದಲು ‘ನಿಕಾಹ್’ ಆಗಿದ್ದರೆ, ಎರಡನೆಯ ಬಾರಿಗೆ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನಡೆದಿದೆ. 1954ರಲ್ಲಿ ಸಂಸತ್ತು ಅಂಗೀಕರಿಸಿದ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ವಿವಾಹವನ್ನು ನೋಂದಣಿ ಮಾಡಿಕೊಳ್ಳಲಾಗಿದೆ.

ಇಸ್ಲಾಮಿಕ್ ಕಾನೂನಿನಡಿಯಲ್ಲಿ 1994 ರಲ್ಲಿ ವಿವಾಹವಾದ ಶುಕ್ಕೂರ್ ಮತ್ತು ಶೀನಾ, ವಿಶೇಷ ವಿವಾಹ ಕಾಯ್ದೆಯಡಿ ಮಾರ್ಚ್ 8, 2023ರಂದು ತಮ್ಮ ವಿವಾಹವನ್ನು ಮತ್ತೆ ನೋಂದಾಯಿಸಿದ್ದಾರೆ. ಲಿಂಗ ತಾರತಮ್ಯದ ಬಗ್ಗೆ ಕೇರಳದಲ್ಲಿ ಹೊಸ ಚರ್ಚೆಯನ್ನು ಈ ವಿವಾಹ ಹುಟ್ಟುಹಾಕಿದೆ.

ಗಂಡು ಸಂತಾನವಿಲ್ಲದ ಕಾರಣ, ತಮ್ಮ ಮೂವರು ಹೆಣ್ಣು ಮಕ್ಕಳಿಗೆ ಉತ್ತರಾಧಿಕಾರದ ಕಾನೂನಿನ ಅಡಚಣೆಯನ್ನು ನಿವಾರಿಸಲು ದಂಪತಿಗಳು ಮರುಮದುವೆಗೆ ನಿರ್ಧರಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...