ಚುನಾವಣೆಯಿರುವ ರಾಜ್ಯಗಳಿಂದ ಆನ್‌ಲೈನ್‌ ಶಾಪಿಂಗ್ ಮಾಡಿದ ಮೋದಿ!

ಈಗಾಗಲೇ ಪಂಚರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು ಎಲ್ಲಾ ರಾಜಕೀಯ ಪಕ್ಷಗಳು ಮತಬೇಟೆಯಲ್ಲಿ ತೊಡಗಿವೆ. ಆದರೆ ಪ್ರಧಾನ ಮಂತ್ರಿ ಚುನಾವಣೆ ಘೋಷಣೆಯಾಗಿರುವ ರಾಜ್ಯಗಳ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಶಾಂಪಿಂಗ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಾಗಾಲ್ಯಾಂಡ್ ಸೇರಿದಂತೆ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಹೀಗೆ ಚುನಾವಣೆ ಘೋಷಣೆಯಾಗಿರುವ ರಾಜ್ಯಗಳಿಂದ ಜವಳಿ ಮತ್ತು ವರ್ಣಚಿತ್ರಗಳನ್ನು ಖರೀದಿಸಿದ ಬಗ್ಗೆ ಟ್ವೀಟ್ ಮಾಡಿದ್ದಾರೆ.

“ಆತ್ಮನಿರ್ಭರ ಆಗಬೇಕೆಂಬ ಭಾರತದ ಅಭಿಯಾನದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನದಂದು, ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ನಾವು ಬದ್ಧರಾಗೋಣ. ಇಂದು ನಾನು ಮಹಿಳಾ ಉದ್ಯಮ, ಸೃಜನಶೀಲತೆ ಮತ್ತು ಭಾರತದ ಸಂಸ್ಕೃತಿಯನ್ನು ಆಚರಿಸುವ ಕೆಲವು ಉತ್ಪನ್ನಗಳನ್ನು ಖರೀದಿಸಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿಯು ತಮಿಳುನಾಡಿನಿಂದ ರಾಜ್ಯದ ತೋಡಾ ಬುಡಕಟ್ಟು ಜನಾಂಗದವರು ಕೈಯಿಂದ ಕಸೂತಿ ಮಾಡಿದ ಶಾಲು ಖರೀದಿಸಿದರು. “ತಮಿಳುನಾಡಿನ ತೋಡಾ ಬುಡಕಟ್ಟಿನ ಕುಶಲಕರ್ಮಿಗಳು ತಯಾರಿಸಿದ ಸೊಗಸಾದ ಕೈ-ಕಸೂತಿ ಶಾಲ್ ಅದ್ಭುತವಾಗಿದೆ. ನಾನು ಅಂತಹ ಒಂದು ಶಾಲು ಖರೀದಿಸಿದೆ. ಈ ಉತ್ಪನ್ನವನ್ನು ಟ್ರೈಬ್ಸ್ ಇಂಡಿಯಾ ಮಾರಾಟ ಮಾಡಿದೆ” ಎಂದು ಮೋದಿ ಆನ್‌ಲೈನ್‌ ವೆಬ್‌ಸೈಟ್ ಲಿಂಕ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘PM-CARES’ ಖಾಸಗಿ ನಿಧಿ- ದಾಖಲೆಗಳು ಬಿಚ್ಚಿಟ್ಟ ವೈರುಧ್ಯ!, ದೇಶಕ್ಕೆ ಇಷ್ಟು ದೊಡ್ಡ ಸುಳ್ಳು ಹೇಳಿದರೇ ಮೋದಿ

ಪ್ರಧಾನ ಮಂತ್ರಿ ಅದೇ ಆನ್‌ಲೈನ್‌ ಮಾರಾಟಗಾರರಿಂದ ಕರಕುಶಲ ಗೋಂಡ್ ಪೇಪರ್ ಪೇಂಟಿಂಗ್ ಖರೀದಿಸಿದ್ದಾರೆ. ನಾಗಾಲ್ಯಾಂಡ್‌ನಿಂದ ಸಾಂಪ್ರದಾಯಿಕ ಶಾಲು ಖರೀದಿಸಿ, “ಭಾರತವು ನಾಗ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತೇವೆ. ಇದು ಧೈರ್ಯ, ಸಹಾನುಭೂತಿ ಮತ್ತು ಸೃಜನಶೀಲತೆಗೆ ಸಮಾನಾರ್ಥಕವಾಗಿದೆ. ನಾಗಾಲ್ಯಾಂಡ್‌ನಿಂದ ಸಾಂಪ್ರದಾಯಿಕ ಶಾಲು ಖರೀದಿಸಿದೆ” ಎಂದು ಬರೆದಿದ್ದಾರೆ.

ಮಧುಬನಿ ವರ್ಣಚಿತ್ರಗಳುಲ್ಲ ಖಾದಿ ಹತ್ತಿ ಶಾಲನ್ನು ಖರೀದಿಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. “ಖಾದಿ ಮಹಾತ್ಮ ಗಾಂಧಿ ಮತ್ತು ಭಾರತದ ಶ್ರೀಮಂತ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿದೆ. ಖಾದಿ ಹತ್ತಿ ಮಧುಬನಿ ಪೇಂಟೆಡ್ ಸ್ಟೋಲ್ ಖರೀದಿಸಿದೆ. ಇದು ಉತ್ತಮ ಗುಣಮಟ್ಟದ ಉತ್ಪನ್ನವಾಗಿದೆ ಮತ್ತು ಇದು ನಮ್ಮ ನಾಗರಿಕರ ಸೃಜನಶೀಲತೆಗೆ ನಿಕಟ ಸಂಬಂಧ ಹೊಂದಿದೆ” ಎಂದು ಪ್ರಧಾನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಂತರಾಷ್ಟ್ರೀಯ ಪುರುಷರ ದಿನ ಆಚರಿಸಬೇಕು: ಹೇಳಿಕೆ ನೀಡಿ ಟೀಕೆಗೊಳಗಾದ ಬಿಜೆಪಿ ಸಂಸದೆ!

ಚುನಾವಣೆ ಘೋಷಣೆಯಾಗಿರುವ ಮತ್ತೊಂದು ರಾಜ್ಯ ಪಶ್ಚಿಮ ಬಂಗಾಳದಿಂದಲೂ ಪ್ರಧಾನಿ ಮೋದಿ ಶಾಪಿಂಗ್ ಮಾಡಿದ್ದಾರೆ. “ನಾನು ಖಂಡಿತವಾಗಿಯೂ ಪಶ್ಚಿಮ ಬಂಗಾಳದ ಈ ಕೈಯಿಂದ ಮಾಡಿದ ಸೆಣಬಿನ ಫೈಲ್ ಫೋಲ್ಡರ್ ಅನ್ನು ಬಳಸಲಿದ್ದೇನೆ. ಇದು ರಾಜ್ಯದ ಬುಡಕಟ್ಟು ಸಮುದಾಯಗಳಿಂದ ಮಾಡಲ್ಪಟ್ಟಿದೆ, ನೀವೆಲ್ಲರೂ ಪಶ್ಚಿಮ ಬಂಗಾಳದಿಂದ ಸೆಣಬಿನ ಉತ್ಪನ್ನವನ್ನು ನಿಮ್ಮ ಮನೆಗಳಲ್ಲಿ ಹೊಂದಿರಬೇಕು!” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆ: ಬೆಲೆ ಏರಿಕೆಗಳ ವಿರುದ್ಧ ದನಿ ಎತ್ತಿದ ಮಲ್ಲಿಕಾರ್ಜುನ ಖರ್ಗೆ

ಅಸ್ಸಾಂ ರಾಜ್ಯದಲ್ಲಿ ತಯಾರಾಗುವ ಅಸ್ಸಾಮೀಸ್ ಗಮುಸಾ ಖರೀದಿಸಿದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, “ನಾನು ಆಗಾಗ್ಗೆ ಗಮುಸಾ ಧರಿಸುವುದನ್ನು ನೀವು ನೋಡಿದ್ದೀರಿ. ಇದು ಅತ್ಯಂತ ಆರಾಮದಾಯಕವಾಗಿದೆ. ಇಂದು ನಾನು ಕಾಕತಿಪಪುಂಗ್ ಡೆವಲಪ್‌ಮೆಂಟ್ ಬ್ಲಾಕ್‌ನ ವಿವಿಧ ಸ್ವ-ಸಹಾಯ ಗುಂಪುಗಳು ತಯಾರಿಸಿದ ಗಮುಸಾವನ್ನು ಖರೀದಿಸಿದೆ” ಎಂದು ಹೇಳಿದ್ದಾದ್ದಾರೆ.

ಮುಂದಕ್ಕೆ ಚುನಾವಣೆ ಇರುವ ಮತ್ತೊಂದು ರಾಜ್ಯವಾದ ಕೇರಳದಿಂದ ಪ್ರಧಾನಿಯು ತೆಂಗಿನ ಚಿಪ್ಪಿನಿಂದ ಮಾಡಿರುವ ‘ನಿಲಾವಿಲಕ್ಕು’ ಎಂಬ ದೀಪದ ಕಂಬವನ್ನು ಖರೀದಿಸಿದ್ದಾರೆ.

“ಕೇರಳ ಮೂಲದ ಮಹಿಳೆಯರು ತಯಾರಿಸಿದ ಕ್ಲಾಸಿಕ್ ಪಾಮ್ ಕ್ರಾಫ್ಟ್ ನಿಲಾವಿಲಕ್ಕು ಸ್ವೀಕರಿಸಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ. ನಮ್ಮ ಮಹಿಳಾ ಶಕ್ತಿ ಸ್ಥಳೀಯ ಕರಕುಶಲ ವಸ್ತುಗಳು ಮತ್ತು ಉತ್ಪನ್ನಗಳನ್ನು ಹೇಗೆ ಸಂರಕ್ಷಿಸಿದೆ ಮತ್ತು ಜನಪ್ರಿಯಗೊಳಿಸಿದೆ ಎಂಬುದು ಶ್ಲಾಘನೀಯ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Karnataka Budget 2021Live | ರಾಜ್ಯ ಬಜೆಟ್ ಫೇಸ್‌‌ಬುಕ್ ಲೈವ್ ನೋಡಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here