Homeಮುಖಪುಟನರೇಂದ್ರ ಮೋದಿ ಟ್ವಿಟರ್‌‌ ಖಾತೆ ಹ್ಯಾಕ್‌: ಬಿಟ್‌ ಕಾಯಿನ್‌ ಕುರಿತು ನಕಲಿ ಪೋಸ್ಟ್‌

ನರೇಂದ್ರ ಮೋದಿ ಟ್ವಿಟರ್‌‌ ಖಾತೆ ಹ್ಯಾಕ್‌: ಬಿಟ್‌ ಕಾಯಿನ್‌ ಕುರಿತು ನಕಲಿ ಪೋಸ್ಟ್‌

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಟ್ವಿಟರ್‌ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್‌ ಮಾಡಿ, ಬಿಟ್‌ ಕಾಯಿನ್ ಲೀಗಲ್ ಟೆಂಡರ್‌ ಮಾಡಲಾಗಿದೆ ಎಂದು ಪೋಸ್ಟ್‌ ಮಾಡಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಬಿಟ್‌ ಕಾಯಿನ್‌ ಸಂಬಂಧಿಸಿದಂತೆ ಪೋಸ್ಟ್‌ ಹರಿದಾಡಿದ ಬಳಿಕ ‘ಪ್ರೈಮ್‌ ಮಿನಿಸ್ಟರ್‌ ಆಫ್ ಇಂಡಿಯಾ’ (PMO India) ಟ್ವಿಟರ್‌ ಖಾತೆಯ ಮೂಲಕ ‘NarendraModi’ ಟ್ವಿಟ್ಟರ್ ಖಾತೆಯ ಕುರಿತು ಸ್ಪಷ್ಟನೆ ನೀಡಲಾಗಿದೆ.

“ಪ್ರಧಾನಿ @narendramodi ಅವರ ಟ್ವಿಟರ್ ಖಾತೆ ಕೆಲವು ಸಮಯ (briefly compromised) ರಾಜಿಯಾಗಿದೆ (ದುರ್ಬಳಕೆಯಾಗಿದೆ). ಈ ವಿಷಯವನ್ನು ಟ್ವಿಟರ್‌ಗೆ ತಿಳಿಸಲಾಯಿತು. ಖಾತೆಯನ್ನು ತಕ್ಷಣವೇ ಸುರಕ್ಷಿತಗೊಳಿಸಲಾಗಿದೆ. ಖಾತೆಯ ದುರ್ಬಳಕೆಯಾದ ಅಲ್ಪಾವಧಿಯಲ್ಲಿ, ಯಾವುದೇ ಟ್ವೀಟ್ ಹಂಚಿಕೊಂಡಿದ್ದರೆ ಅದನ್ನು ನಿರ್ಲಕ್ಷಿಸಬೇಕು” ಎಂದು PMO India ಖಾತೆಯ ಮೂಲಕ ಟ್ವೀಟ್ ಮಾಡಲಾಗಿದೆ.

ಖಾತೆಯನ್ನು ಈಗ ಮರುಸ್ಥಾಪಿಸಲಾಗಿದೆ ಮತ್ತು ದುರುದ್ದೇಶಪೂರಿತ ಟ್ವೀಟ್‌ಗಳನ್ನು ಅಳಿಸಲಾಗಿದೆ.

ಹಲವಾರು ಬಳಕೆದಾರರು Twitterನಲ್ಲಿ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ (@narendramodi) ಖಾತೆಯಿಂದ ಹಾಕಲಾದ ಟ್ವೀಟ್‌ಗಳು ಚರ್ಚೆಗೆ ಗ್ರಾಸವಾಗಿವೆ.

“ಭಾರತವು ಅಧಿಕೃತವಾಗಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧ ಟೆಂಡರ್ ಎಂದು ಸ್ವೀಕರಿಸಿದೆ. ಸರ್ಕಾರವು ಅಧಿಕೃತವಾಗಿ 500 BTC ಅನ್ನು ಖರೀದಿಸಿದೆ ಮತ್ತು ಅವುಗಳನ್ನು ದೇಶದ ಎಲ್ಲಾ ನಿವಾಸಿಗಳಿಗೆ ವಿತರಿಸುತ್ತಿದೆ” ಎಂದು ಟ್ವೀಟ್ ಮಾಡಲಾಗಿತ್ತು. ಜೊತೆಗೆ, ಸಂಭವನೀಯ ಹಗರಣದ ಲಿಂಕ್ ಅನ್ನು ಸಹ ಲಗತ್ತಿಸಲಾಗಿತ್ತು.

ಟ್ವೀಟ್ ಅನ್ನು ಶೀಘ್ರದಲ್ಲೇ ಅಳಿಸಲಾಗಿದ್ದರೂ #Hacked ಹ್ಯಾಷ್‌ಟ್ಯಾಗ್‌ ತಕ್ಷಣವೇ ಟ್ರೆಂಡ್ ಆಗಿತ್ತು. ಬಳಕೆದಾರರು ಈಗ ಅಳಿಸಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್‌ನೊಂದಿಗೆ ಟ್ವೀಟ್ ಮಾಡುತ್ತಿದ್ದಾರೆ. “ಗುಡ್ ಮಾರ್ನಿಂಗ್ ಮೋದಿ ಜಿ, ಸಬ್ ಚಂಗಾ ಸಿ?” ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಟ್ವೀಟ್ ಮಾಡಿದ್ದಾರೆ.

ರಾಜಕೀಯ ಕಾರ್ಯಕರ್ತ ತೆಹಸೀನ್ ಪೂನವಾಲಾ ಟ್ವೀಟ್ ಮಾಡಿ, “ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿದೆಯೇ?” ಎಂದು ಕೇಳಿದ್ದಾರೆ.

ಮತ್ತೊಬ್ಬ ಟ್ವಿಟರ್ ಬಳಕೆದಾರರು, “#PMmodi #modi ಖಾತೆ #ಹ್ಯಾಕ್ ಮಾಡಲಾಗಿದೆ, ದಯವಿಟ್ಟು ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಇದು ಒಂದು ಹಗರಣ. PM ಖಾತೆ ಕೂಡ ಸುರಕ್ಷಿತವಾಗಿಲ್ಲ” ಎಂದಿದ್ದಾರೆ.


ಇದನ್ನೂ ಓದಿರಿ: ಬಿಎಸ್‌ಎಫ್‌ ಅಧಿಕಾರ ವ್ಯಾಪ್ತಿ ವಿಸ್ತರಣೆ ವಿರುದ್ಧ ಸುಪ್ರಿಂ ಮೆಟ್ಟಿಲೇರಿದ ಪಂಜಾಬ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಪಹರಣ ಆರೋಪಕ್ಕೆ ಪುರಾವೆಯಿಲ್ಲ, ರಾಜಕೀಯದ ಷಡ್ಯಂತ್ರದಿಂದ ಬಂಧನ: ಹೆಚ್.ಡಿ ರೇವಣ್ಣ

0
ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಸ್‌ಐಟಿಯಿಂದ ಬಂಧಿತರಾದ ಬಳಿಕ ಮೊದಲ ಬಾರಿಗೆ ಶಾಸಕ ಹೆಚ್‌.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ...