Homeಕರ್ನಾಟಕಅಧಿವೇಶನ ಮುಗಿಯುವವರೆಗೆ ಪ್ರಾರ್ಥನಾ ಸಭೆ ನಡೆಸದಂತೆ ಬೆಳಗಾವಿ ಕ್ರಿಶ್ಚಿಯನ್ನರಿಗೆ ಪೊಲೀಸರ ‘ಸ್ನೇಹಪೂರ್ವಕ’ ಎಚ್ಚರಿಕೆ!

ಅಧಿವೇಶನ ಮುಗಿಯುವವರೆಗೆ ಪ್ರಾರ್ಥನಾ ಸಭೆ ನಡೆಸದಂತೆ ಬೆಳಗಾವಿ ಕ್ರಿಶ್ಚಿಯನ್ನರಿಗೆ ಪೊಲೀಸರ ‘ಸ್ನೇಹಪೂರ್ವಕ’ ಎಚ್ಚರಿಕೆ!

ಬಲಪಂಥೀಯ ಗುಂಪುಗಳು ದಾಳಿ ಮಾಡಬಹುದಾಗಿದ್ದು, ನಮಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ದೂರಲಾಗಿದೆ

- Advertisement -
- Advertisement -

ರಾಜ್ಯದ ಚಳಿಗಾಲದ ವಿಧಾನಮಂಡಲ ಅಧಿವೇಶನ ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯಲಿದೆ. ಈ ಅಧಿವೇಶನ ಮುಗಿಯುವವರೆಗೆ ಪ್ರಾರ್ಥನಾ ಸಭೆಗಳನ್ನು ನಡೆಸದಂತೆ ಬೆಳಗಾವಿ ಜಿಲ್ಲೆಯ ಕ್ರೈಸ್ತರಿಗೆ ಪೊಲೀಸರು ‘ಸ್ನೇಹಪೂರ್ವಕ ಎಚ್ಚರಿಕೆ'(ಪ್ರೆಂಡ್‌ಲಿ ವಾರ್ನಿಂಗ್) ನೀಡಿದ್ದಾರೆ ಎಂದು ದಿ ನ್ಯೂಸ್ ಮಿನಿಟ್‌ ವರದಿ ಮಾಡಿದೆ. ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಬಿಜೆಪಿ ಸರ್ಕಾರವು ವಿವಾದಾತ್ಮಕ ‘ಮತಾಂತರ ವಿರೋಧಿ ಮಸೂದೆ’ಯನ್ನು ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

“ಬಲಪಂಥೀಯ ಗುಂಪುಗಳು ಕ್ರಿಶ್ಚಿಯನ್ನರ ಮೇಲೆ ದಾಳಿ ಮಾಡಬಹುದಾಗಿದ್ದು, ಪೊಲೀಸರು ರಕ್ಷಣೆ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಾರ್ಥನಾ ಸಭೆಗಳನ್ನು ಮಾಡದಂತೆ, ಕೆಲವು ಪಾದ್ರಿಗಳನ್ನು ಕರೆಸಿ ಕೇಳಲಾಗಿದೆ. ಪೊಲೀಸರು ಲಿಖಿತವಾಗಿ ಏನನ್ನೂ ನೀಡಿಲ್ಲ, ಆದರೆ ಇದು ಕೋಮು ಸೌಹಾರ್ದತೆಯನ್ನು ಕಾಪಾಡಲು ಬೇಕಾಗಿ ಎಂದು ಹೇಳುತ್ತಾರೆ” ಎಂದು ಪಾದ್ರಿ ಥಾಮಸ್ ಜಾನ್ಸನ್ ನ್ಯೂಸ್‌ ಮಿನಿ‌ಟ್‌‌ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಕ್ರಿಶ್ಚಿಯನ್ನರ ವಿರುದ್ಧ 50 ದಾಳಿಗಳು ಇತ್ತೀಚೆಗೆ ನಡೆದಿದೆ: ವರದಿ

“ಪಾದ್ರಿ ಚೆರಿಯನ್ ಮೇಲೆ ಹಲ್ಲೆ ನಡೆದ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ನಿಮ್ಮ ಸ್ವಂತ ಚರ್ಚ್ ಕಟ್ಟಡಗಳಿದ್ದರೆ, ನೀವು ಪ್ರಾರ್ಥನೆ ಸಭೆಗಳನ್ನು ನಡೆಸಬಹುದು. ಆದರೆ ಬಾಡಿಗೆ ಕಟ್ಟಡಗಳಲ್ಲಿ ಅಥವಾ ಖಾಸಗಿ ಮನೆಗಳಲ್ಲಿ ನಡೆಸಬೇಡಿ ಎಂದು ಪೊಲೀಸರು ಪಾದ್ರಿಗಳಿಗೆ ಹೇಳಿದ್ದಾರೆ” ಎಂದು ಅವರು ಹೇಳಿದ್ದಾರೆ.

ವಿಶೇಷವೇನೆಂದರೆ, ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯದ ವಿಧಾನಸಭೆಯ ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಪ್ರಾರ್ಥನಾ ಸಭೆಗಳನ್ನು ತಪ್ಪಿಸುವಂತೆ ಕ್ರೈಸ್ತರಿಗೆ ತಿಳಿಸಲಾಗಿದೆ. ಡಿಸೆಂಬರ್ 13 ರಿಂದ 24 ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ವಿವಾದಾತ್ಮಕ ಮತಾಂತರ ವಿರೋಧಿ ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ. ಜಿಲ್ಲೆಯ 25 ಕ್ಕೂ ಹೆಚ್ಚು ಪಾದ್ರಿಗಳನ್ನು ಪೊಲೀಸರು ಸಂಪರ್ಕಿಸಿದ್ದು, ಪ್ರಾರ್ಥನಾ ಸಭೆಗಳನ್ನು ನಡೆಸದಂತೆ ಕೇಳಿಕೊಂಡಿದ್ದಾರೆ ಎಂದು ನ್ಯೂಸ್‌ ಮಿನಿಟ್‌ ದೃಡಪಡಿಸಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ ಜಾರಿಯಿಂದ ಜನರ ಜೀವನೋಪಾಯಕ್ಕೆ ಧಕ್ಕೆ, ಗೂಂಡಾಗಿರಿ ಹೆಚ್ಚಳ: ಅಧ್ಯಯನ ವರದಿ

“ಬಲಪಂಥೀಯರು ಚರ್ಚ್‌ಗಳಿಗೆ ನುಗ್ಗಿ, ವಸ್ತುಗಳನ್ನು ಒಡೆಯುತ್ತಾರೆ, ಜನರ ಮೇಲೆ ದಾಳಿ ಮಾಡುತ್ತಾರೆ. ಆದರೆ ಅಂತಿಮವಾಗಿ ಪಾದ್ರಿಗಳ ವಿರುದ್ಧ ಬಲವಂತದ ಮತಾಂತರದ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಅನೇಕರು ಈಗ ‘ಜೂಮ್ ಕರೆ’ಗಳಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದಾರೆ. ನಾವು ಬಲಪಂಥೀಯರಿಗೆ ಅವಕಾಶ ನೀಡಲು ಬಯಸುವುದಿಲ್ಲ” ಎಂದು ಪಾದ್ರಿ ಥಾಮಸ್ ಹೇಳಿದ್ದಾರೆ.

ಬುಧವಾರ, ರೆವರೆಂಡ್ ನಂದು ಕುಮಾರ್ ಮತ್ತು ರೆವರೆಂಡ್ ಡೆರೆಕ್ ಫೆರ್ನಾಂಡಿಸ್ ನೇತೃತ್ವದ ಬಿಷಪ್‌ಗಳು ಮತ್ತು ಕ್ರಿಶ್ಚಿಯನ್ ಮುಖಂಡರ ನಿಯೋಗವು ಬೆಳಗಾವಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ರಕ್ಷಣೆ ಕೋರಿ ಮನವಿ ಸಲ್ಲಿಸಿದೆ.

ಕಳೆದ ಕೆಲವು ತಿಂಗಳುಗಳಿಂದ, ಬಿಜೆಪಿ ಬೆಂಬಲಿತ ಬಜರಂಗದಳ ಸೇರಿದಂತೆ ಹಲವಾರು ಸಂಘಟನೆಗಳು ರಾಜ್ಯದ ಹಲವು ಭಾಗಗಳಲ್ಲಿ ಕ್ರಿಶ್ಚಿಯನ್ ಪಾದ್ರಿಗಳಿಂದ ಬಲವಂತದ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿವೆ. ಈ ಪ್ರತಿಭಟನೆಗಳು ಮತಾಂತರವನ್ನು ನಿಷೇಧಿಸುವ ಕಾನೂನನ್ನು ತರುವ ದೊಡ್ಡ ಯೋಜನೆಯ ಭಾಗವಾಗಿದೆ ಎಂಬುವುದನ್ನು ನ್ಯೂಸ್‌ ಮಿನಿಟ್‌ ಉಲ್ಲೇಖಿಸಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮತೀಯ ಗೂಂಡಾಗಿರಿ: ಅನ್ಯಧರ್ಮದ ಗೆಳತಿಯನ್ನು ಡ್ರಾಪ್ ಮಾಡುತ್ತಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. ಸಮಸ್ಯೆಗಳು ಎಂದೂ ಹಿಂದೂ ಸಮುದಾಯಗಳಿಂದ ಉದ್ಬವಿಸಿಲ್ಲಾ ,ಸಮಸ್ಯೆಗಳ ಸರಮಾಲೆ ಇರೋದು ಕ್ರಿಶ್ಚಿಯನ್ನರು ಮಾಡುವ ಮತಾಂತರದಿಂದಲೇ ,ಪಾದ್ರಿಗಳು ಮಾಡು ಅನಾಚಾರ ಚಟುವಟಿಕೆಗಳಿಂದ ,ಮೊದಲು ಸಮಾಜದಲ್ಲಿ ಅನಿಶ್ಚಿತತೆ ಗೆ ಕಾರಣರಾದ ಮತಾಂತರಿಗಳನ್ನ ,ಅದಕ್ಕೆ ಸಹಕರಿಸುವ ಪತ್ರಿಕೆಗಳನ್ನು ಅನಿಶ್ಚಿತತೆ ಯೊಂದಿಗೆ ದುರ್ಬಲ ಗೊಳಿಸಬೇಕು.

  2. ಕರ್ನಾಟಕದ ಪೊಲೀಸರ ಈ ಕ್ರಮ ಕಂಡನಾರ್ಹ. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ತನಗಿಶ್ಟವಾದ ದಾರ್ಮಿಕ ಆಚರಣೆಗಳನ್ನು, ಬೇರೆಯವರಿಗೆ ತೊಂದರೆ ಆಗದಂತೆ ಆಚರಣೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. “ನಾವು ರಕ್ಷಣೆ ಕೊಡುವುದು ಸಾದ್ಯವಿಲ್ಲ” ಎನ್ನುವುದು ಪೊಲೀಸರ ಕರ್ತವ್ಯಲೋಪ ಆಗುತ್ತದೆ.

  3. (ಬೆಳಗಾವಿ) ಪೊಲೀಸರ ಈ ಕ್ರಮ ಸರಿಯಲ್ಲ ಎಂದು ನನ್ನ ಅಭಿಪ್ರಾಯ, ಈ ದೇಶದ ಪ್ರತಿಯೊಬ್ಬ ಪ್ರಜೆಗೂ ತನ ಇಷ್ಟವಾದ ದಾರ್ಮಿಕ ಆಚರಣೆಗಳನ್ನು, ಬೇರೆಯವರಿಗೆ ತೊಂದರೆ ಆಗದಂತೆ ಆಚರಣೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ.
    (Article 25 26) “ನಾವು ರಕ್ಷಣೆ ಕೊಡುವುದು ಸಾದ್ಯವಿಲ್ಲ” ಎನ್ನುವುದು ಬೆಳಗಾವಿ ಪೊಲೀಸರ ಅಭಿಪ್ರಾಯ ಸರಿಯಲ್ಲ, ಪ್ರತಿಯೊಬ್ಬರಿಗೂ ರಕ್ಷಣೆ ಕೊಡುವುದು ನಿಮ್ಮ ಧರ್ಮ ಮತ್ತು ಕರ್ತವ್ಯ , ದಯವಿಟ್ಟು ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ
    ಧನ್ಯವಾದಗಳು

  4. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ತನಗಿಶ್ಟವಾದ ದಾರ್ಮಿಕ ಆಚರಣೆಗಳನ್ನು, ಬೇರೆಯವರಿಗೆ ತೊಂದರೆ ಆಗದಂತೆ ಆಚರಣೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. “ನಾವು ರಕ್ಷಣೆ ಕೊಡುವುದು ಸಾದ್ಯವಿಲ್ಲ” ಎನ್ನುವುದು ಪೊಲೀಸರ ಕರ್ತವ್ಯಲೋಪ ಆಗುತ್ತದೆ.

LEAVE A REPLY

Please enter your comment!
Please enter your name here

- Advertisment -

Must Read

ಐರ್ಲೆಂಡ್‌ನಲ್ಲಿರುವ ಭಾರತೀಯ ರಾಯಭಾರಿಯಿಂದ ವಿಪಕ್ಷಗಳ ಟೀಕೆ: ರಾಜತಾಂತ್ರಿಕ ಅಧಿಕಾರಿಯ ನಿಲುವಿಗೆ ವ್ಯಾಪಕ ವಿರೋಧ

0
ಐರ್ಲೆಂಡ್‌ನಲ್ಲಿರುವ ಭಾರತೀಯ ರಾಯಭಾರಿ ಅಖಿಲೇಶ್ ಮಿಶ್ರಾ ದಿ ಐರಿಶ್ ಟೈಮ್ಸ್‌ನ ಸಂಪಾದಕೀಯಕ್ಕೆ ಪ್ರತಿಕ್ರಿಯೆಯಾಗಿ ಪ್ರತಿಪಕ್ಷಗಳನ್ನು ಟೀಕಿಸಿ, ಮೋದಿಯನ್ನು ಶ್ಲಾಘಿಸಿ ಪೋಸ್ಟ್‌ ಮಾಡಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ. ದಿ ಐರಿಶ್ ಟೈಮ್ಸ್‌ನ ಸಂಪಾದಕೀಯದಲ್ಲಿ ಪ್ರಧಾನಿ ನರೇಂದ್ರ...