Homeಕರ್ನಾಟಕಪ್ರಧಾನಿಯಾಗಿ ಪ್ರಣಬ್ ಮುಖರ್ಜಿ: ಈ ‘ಮಾಹಿತಿ’ ನಿಜವಾಗಬಹುದೇ?

ಪ್ರಧಾನಿಯಾಗಿ ಪ್ರಣಬ್ ಮುಖರ್ಜಿ: ಈ ‘ಮಾಹಿತಿ’ ನಿಜವಾಗಬಹುದೇ?

 ಪ್ರಣಬ್ ಮುಖರ್ಜಿ ಮಾತ್ರ ಸರ್ವಸಮ್ಮತ ಅಭ್ಯರ್ಥಿ ಎಂಬುದು ಚಂದ್ರಬಾಬು ನಾಯ್ಡು ಅವರ ಪ್ರಸ್ತಾಪವಂತೆ

- Advertisement -
- Advertisement -

| ನಾನುಗೌರಿ ಡೆಸ್ಕ್ |

ಇಂತಹ ಆಶ್ಚರ್ಯಕರವಾದ ಸುದ್ದಿಯೊಂದು ನಮಗೆ ತಲುಪಿದೆ. ಚಂದ್ರಬಾಬು ನಾಯ್ಡು ನಡೆಸುತ್ತಿರುವ ರಾಯಭಾರದ ನಡುವೆ ಪ್ರಧಾನಿ ಪಟ್ಟಕ್ಕೆ ಮೇಲೆದ್ದಿರುವ ಹೆಸರು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ನಿನ್ನೆ ದಿನ ದಿಢೀರನೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಂಗಳೂರಿಗೆ ಬಂದು ಹೋದರು. ದೆಹಲಿಯಲ್ಲಿ ಇವಿಎಂ ವಿಚಾರದಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ 22 ಪ್ರತಿಪಕ್ಷಗಳ ನಿಯೋಗದಲ್ಲಿ ಜೆಡಿಎಸ್ ಮುಖಂಡರುಗಳು ಹಾಜರಿರಲಿಲ್ಲ. ದೆಹಲಿಗೆ ಹೋಗುವುದನ್ನೂ ದೇವೇಗೌಡರು ಮತ್ತು ಎಚ್‍ಡಿಕೆ ರದ್ದು ಮಾಡಿದ್ದರು. ಅದನ್ನು ಕಾಂಗ್ರೆಸ್ ವಿರುದ್ಧದ ಮುನಿಸು ಎಂದೇ ಅರ್ಥೈಸಲಾಗುತ್ತಿದೆ. ಆದರೆ, ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಚರ್ಚಿಸಿರುವ ನಾಯ್ಡು ದೇವೇಗೌಡರ ಜೊತೆ ಅಂತಿಮ ಚರ್ಚೆ ಮಾಡಲೇಬೇಕಿತ್ತು. ಅದಕ್ಕಾಗಿ ಬೆಂಗಳೂರಿಗೆ ಬಂದಿದ್ದರು.

ಈ ಚರ್ಚೆಯಲ್ಲಿ ಬಂದ ಪ್ರಮುಖ ವಿಷಯವೆಂದರೆ, ಪ್ರತಿಪಕ್ಷಗಳ ಒಮ್ಮತದ ಪ್ರಧಾನಿ ಅಭ್ಯರ್ಥಿಯಾಗಿ ಪ್ರಣಬ್ ಮುಖರ್ಜಿಯವರನ್ನು ಆಯ್ಕೆ ಮಾಡುವುದು. ಇದು ನಾನುಗೌರಿ.ಕಾಂಗೆ ತಿಳಿದು ಬಂದಿರುವ ಮಾಹಿತಿ. ಅಷ್ಟೇ ಅಲ್ಲದೇ, ಎಲ್ಲಾ ಎಕ್ಸಿಟ್ ಪೋಲ್‍ಗಳ ನಂತರವೂ ನಾಯ್ಡು ಮತ್ತಿತರರು, ನರೇಂದ್ರ ಮೋದಿ ಸೋಲಿನ ಕುರಿತು ಬಹಳ ವಿಶ್ವಾಸ ಹೊಂದಿದ್ದಾರೆ. ಯಾವುದೇ ಕಾರಣಕ್ಕೂ ಎನ್‍ಡಿಎಗೆ 200ಕ್ಕಿಂತ ಹೆಚ್ಚು ಸೀಟುಗಳು ಬರುವುದಿಲ್ಲ ಎಂಬುದು ಅವರುಗಳ ಖಚಿತ ಅಭಿಪ್ರಾಯವಂತೆ.

ಇವೆರಡೂ ಸಹಾ ಆಶ್ಚರ್ಯಕರ ಸಂಗತಿಗಳೇ. ಏಕೆಂದರೆ ಎನ್‍ಡಿಎಗೆ 300ಕ್ಕೂ ಹೆಚ್ಚು ಸೀಟುಗಳು ಬರುತ್ತವೆಂದು ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಈ ಸಮೀಕ್ಷೆಗಳ ವಿಶ್ವಾಸಾರ್ಹತೆ ಪ್ರಶ್ನಾರ್ಹವೇ. ಆದರೆ ಬಹುತೇಕ ಎಲ್ಲಾ ಸಮೀಕ್ಷೆಗಳೂ ಎನ್‍ಡಿಎಗೆ ಬಹುಮತವನ್ನಂತೂ ಅಂದಾಜು ಮಾಡಿವೆ.

ಇದನ್ನು ಓದಿ: ಆಂಧ್ರ ಚುನಾವಣೆ: ಮಂಕಾದ `ಚಂದ್ರ’ನ ಮುಂದೆ ಜಗನ್ `ಮಿಂಚು’!

ಎರಡನೆಯದಾಗಿ, ದೇಶದ ರಾಷ್ಟ್ರಪತಿಯಾಗಿದ್ದ ವ್ಯಕ್ತಿಯೊಬ್ಬರು ಪ್ರಧಾನಿಯಾಗಲು ಒಪ್ಪಿಕೊಳ್ಳುತ್ತಾರೆಯೇ ಎಂಬುದೂ ಸಹಾ ಸಂದೇಹಾಸ್ಪದ. ರಾಷ್ಟ್ರಪತಿ ಸ್ಥಾನವು ಸಾಂಕೇತಿಕ ಮಹತ್ವವನ್ನಷ್ಟೇ ಹೊಂದಿದ್ದು, ದಿನನಿತ್ಯದ ಆಡಳಿತದಲ್ಲಿ ಹೆಚ್ಚಿನ ಪಾತ್ರ ಹೊಂದಿಲ್ಲ. ಆದರೂ ಭಾರತದ ಪ್ರಜಾಪ್ರಭುತ್ವದಲ್ಲಿ ಅದನ್ನು ಅತ್ಯುನ್ನತ ಸ್ಥಾನವೆಂದು ಪರಿಗಣಿಸಲಾಗಿದ್ದು, ಪ್ರಧಾನಿ ಸ್ಥಾನವು ಅದಕ್ಕಿಂತ ಕೆಳಗಿನದ್ದು. ರಾಷ್ಟ್ರಪತಿಯಾಗಿರುವವರು ಆಯ್ಕೆಯಾದ ನಂತರ ರಾಜಕೀಯ ಒಲವು-ನಿಲುವುಗಳಿಂದ ದೂರ ಇರಬೇಕೆಂದು ನಿರೀಕ್ಷಿಸಲಾಗುತ್ತದೆ.

ಆದರೆ, ಎಲ್ಲಾ ಪ್ರತಿಪಕ್ಷಗಳಿಗೂ ಸರ್ವಸಮ್ಮತವಾಗುವ ಅಭ್ಯರ್ಥಿಯೆಂದರೆ ಅದು ಪ್ರಣಬ್ ಮುಖರ್ಜಿಯೇ ಎಂಬುದು ಅವರ ಹೆಸರನ್ನು ಮುಂದಿಡುತ್ತಿರುವವರ ಅಭಿಪ್ರಾಯವಾಗಿದೆಯಂತೆ. ಒಮ್ಮೆ ಪ್ರಧಾನಿಯಾಗಬೇಕು ಎಂಬ ಬಯಕೆಯನ್ನು ಹೊಂದಿದ್ದ ಮುಖರ್ಜಿಯವರಿಗೆ ಈಗ ‘ರಾಷ್ಟ್ರದ ಹಿತಾಸಕ್ತಿ’ಯಿಂದ ಸಂಪ್ರದಾಯ ಬದಿಗಿಡಬೇಕು ಎಂಬ ಒತ್ತಡ ಹೇರಲಾಗಿದೆಯೆಂತೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್‍ರನ್ನೂ ಈ ವಿಚಾರಕ್ಕೆ ಒಪ್ಪಿಸಲಾಗಿದೆಯೆಂದು ಹೇಳಲಾಗುತ್ತಿದೆ.

ಈ ಹಂತದಲ್ಲಂತೂ ಇದು ಕೇವಲ ವದಂತಿಯೆಂಬಷ್ಟು ತೂಕ ಮಾತ್ರ ಹೊಂದಿರುವ ಸುದ್ದಿಯಾಗಿದೆ. ಆದರೆ, ಇಂತಹ ಸುದ್ದಿಯು ನಾಯ್ಡು ಅವರು ಬೆಂಗಳೂರಿಗೆ ಬಂದು ಹೋದ ನಂತರ ಕೆಲವು ವಲಯಗಳಲ್ಲಿ ಗಾಢವಾಗಿ ಹಬ್ಬಿರುವುದಂತೂ ವಾಸ್ತವ. ‘ರಾಜಕಾರಣದ ಒಳಸುಳಿ’ಗಳು ಯಾವ್ಯಾವ ತಿರುವುಗಳನ್ನು ತೆಗೆದುಕೊಳ್ಳುತ್ತದೇ ಹೇಳಲಾಗುವುದಿಲ್ಲ ಎಂಬ ಏಕೈಕ ಕಾರಣಕ್ಕೆ ಇರಬಹುದೇನೋ ಎಂದುಕೊಳ್ಳಬಹುದಾದ ‘ಮಾಹಿತಿ’ ಇದಾಗಿದೆ.

ಇದನ್ನು ಓದಿ: ಮೇ 23ಕ್ಕೆ ಸಭೆ ಕರೆದ ಸೋನಿಯಾ ಗಾಂಧಿ: ಫೀಲ್ಡಿಗಿಳಿದ ಮಾಸ್ಟರ್ ನೆಗೋಷಿಯೇಟರ್‍ಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...