Homeಮುಖಪುಟಉತ್ತರ ಪ್ರದೇಶ ಸರ್ಕಾರಕ್ಕೆ ‘ಅಧಿಕಾರದ ಅಹಂಕಾರ’ವಿದೆ: ಪ್ರಿಯಾಂಕಾ ಗಾಂಧಿ 

ಉತ್ತರ ಪ್ರದೇಶ ಸರ್ಕಾರಕ್ಕೆ ‘ಅಧಿಕಾರದ ಅಹಂಕಾರ’ವಿದೆ: ಪ್ರಿಯಾಂಕಾ ಗಾಂಧಿ 

- Advertisement -
- Advertisement -

ಚಿನ್ಮಯಾನಂದ್ ವಿರುದ್ಧದ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ. ಕೇಂದ್ರದ ಮಾಜಿ ಸಚಿವ ಚಿನ್ಮಯಾನಂದ್ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ಕಾನೂನು ವಿದ್ಯಾರ್ಥಿಯನ್ನು ಬಂಧಿಸುವುದರ ವಿರುದ್ಧ ಕಾಂಗ್ರೆಸ್ ‘ನ್ಯಾಯ ಯಾತ್ರೆ’ ಯೋಜಿಸಿತ್ತು.

ಮಾಜಿ ಸಚಿವ ಜಿತಿನ್ ಪ್ರಸಾದ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರನ್ನು ಮೆರವಣಿಗೆಗೆ ಮುಂಚಿತವಾಗಿ ರ್‍ಯಾಲಿ ನಡೆಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.

“ಅಧಿಕಾರದ ದುರಹಂಕಾರ” ದಲ್ಲಿ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದೆ ಎಂದಿರುವ ಪ್ರಿಯಾಂಕಾ ಗಾಂಧಿ, “ಇದು (ಬಿಜೆಪಿ ಸರ್ಕಾರ) ಅತ್ಯಾಚಾರ ಆರೋಪಿಗಳನ್ನು ಉಳಿಸಲು ಮತ್ತು ಶಹಜಹಾನ್ಪುರದ ಮಗಳ ಧ್ವನಿಯನ್ನು ನಿಗ್ರಹಿಸಲು ಯಾವುದೇ ಮಟ್ಟಕ್ಕೆ ಬೇಕಾದರೂ ಹೋಗಬಹುದು” ಎಂದು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ನಮ್ಮ ಹೋರಾಟಕ್ಕೆ ಹೆದರಿದೆ. ಹಾಗಾಗಿ ಅವರ ವಿರುದ್ಧದ ಪ್ರತಿಭಟನೆಯ ಬಗ್ಗೆ ತಿಳಿದಾಗಲೆಲ್ಲಾ ಸಿಆರ್ಪಿಸಿಯ ಸೆಕ್ಷನ್ 144 ಅನ್ನು ವಿಧಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

“ಜನರ ಧ್ವನಿಯನ್ನು ನಿಗ್ರಹಿಸಲು ಸಾಧ್ಯವಿಲ್ಲ. ಶಹಜಹಾನ್ಪುರದ ಹುಡುಗಿಗೆ ನ್ಯಾಯ ನೀಡಿ. ನಿಮ್ಮ ಮಂತ್ರಿಯನ್ನು ಉಳಿಸುವುದನ್ನು ನಿಲ್ಲಿಸಿ” ಎಂದು ಒತ್ತಾಯಿಸಿದ್ದಾರೆ.

ಇಂದು ಬನಾರಸ್‌ನಲ್ಲಿ ದುಷ್ಕರ್ಮಿಗಳು ಬಹಿರಂಗವಾಗಿ 6 ಗುಂಡುಗಳನ್ನು ಹೊಡೆದು ವ್ಯಕ್ತಿಯನ್ನು ಕೊಂದಿದ್ದಾರೆ. ಬಿಜೆಪಿ ಸರ್ಕಾರವು ಆಡಳಿತದ ಸಂಪೂರ್ಣ ಕುಸಿದಿದೆ. ಇಲ್ಲಿ ಅಪರಾಧಿಗಳಿಗೆ ಎಸಿ ಕೊಠಡಿಗಳಿವೆ, ಅನಿಯಂತ್ರಿತ ಅಪರಾಧಗಳನ್ನು ಮಾಡಲು ಮುಕ್ತ ಅವಕಾಶವಿದೆ ಎಂದು ಅವರು ಕಿಡಿಕಾರಿದ್ದಾರೆ.

ಯುಪಿಯ ಬಿಜೆಪಿ ಸರ್ಕಾರ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವೆಸಗಿದ ದುಷ್ಕರ್ಮಿಗಳ ಪರ ನಿಂತಿದೆ. ಪ್ರತಿಭಟನಾ ನಿರತ ಕಾಂಗ್ರೆಸ್ಸಿಗರನ್ನು ವಶಕ್ಕೆ ತೆಗೆದುಕೊಳ್ಳುತ್ತಿದೆ. ಆದರೆ ಈ ಹೋರಾಟದ ಹಾದಿಯಲ್ಲಿ, ನಮ್ಮ ಸಹಚರರು ಬೀದಿಗಳಲ್ಲಿ ನಿಂತು ದಬ್ಬಾಳಿಕೆಯನ್ನು ಎದುರಿಸುತ್ತಾರೆ. ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಹಬ್ಬದ ಸಮಯದಲ್ಲಿ “ಕಾನೂನು ಸುವ್ಯವಸ್ಥೆ” ಯನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್ ನಾಯಕರಿಗೆ ಭಾನುವಾರದಂದು ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ಯುಪಿ ಸರ್ಕಾರ ಹೇಳಿದೆ.

ಹುಡುಗಿಯ ತಂದೆ ಪ್ರಿಯಾಂಕಾ ಗಾಂಧಿಗೆ ಸಹಾಯ ಕೋರಿ ಪತ್ರ ಬರೆದಿದ್ದರು. “ಚಿನ್ಮಯಾನಂದ್ ಅವರ ರಾಜಕೀಯ ಪ್ರಭಾವದಿಂದಾಗಿ ನನ್ನ ಮಗಳನ್ನು ತನಿಖಾ ಸಂಸ್ಥೆ ತಪ್ಪಾಗಿ ನಡೆಸಿಕೊಳ್ಳುತ್ತಿದೆ. ಅತ್ಯಾಚಾರಕ್ಕಾಗಿ  ಚಿನ್ನಮಯಾನಂದ್ ಮೇಲೆ ಕೇಸು ದಾಖಲಿಸುವಂತೆ ನಾನು ನಿಮ್ಮಲ್ಲಿ ವಿನಂತಿಸುತ್ತೇನೆ” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಮಾಜಿ ಕೇಂದ್ರ ಸಚಿವರಾಗಿದ್ದ ಚಿನ್ಮಯಾನಂದ್ ಅವರನ್ನು ಯುಪಿ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೆಪ್ಟೆಂಬರ್ 20 ರಂದು ಬಂಧಿಸಿತ್ತು. ಆತನ ಮೇಲೆ ಇನ್ನೂ ಅತ್ಯಾಚಾರ ಆರೋಪ ಹೊರಿಸಲಾಗಿಲ್ಲ. ಅವರು ಪ್ರಸ್ತುತ ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...