Homeಮುಖಪುಟ1% ಶ್ರೀಮಂತರ ಬಳಿ 40.5% ದೇಶದ ಸಂಪತ್ತು: ಆಕ್ಸ್‌ಫ್ಯಾಮ್ ಇಂಡಿಯಾ ವರದಿ

1% ಶ್ರೀಮಂತರ ಬಳಿ 40.5% ದೇಶದ ಸಂಪತ್ತು: ಆಕ್ಸ್‌ಫ್ಯಾಮ್ ಇಂಡಿಯಾ ವರದಿ

- Advertisement -
- Advertisement -

ಭಾರತದ ಜನಸಂಖ್ಯೆಯ 1% ಶ್ರೀಮಂತರು ದೇಶದ ಒಟ್ಟು ಸಂಪತ್ತಿನ 40.5%ಕ್ಕಿಂತ ಹೆಚ್ಚು ಸಂಪತ್ತನ್ನು 2021ರಲ್ಲಿ ಹೊಂದಿದ್ದರು. ಆದರೆ ದೇಶದ ಜನಸಂಖ್ಯೆಯಲ್ಲಿ ಕೊನೆಯ ಸ್ಥಾನದಲ್ಲಿರುವ 50% ಜನರು ಸುಮಾರು 3%ರಷ್ಟು ಸಂಪತ್ತನ್ನು ಮಾತ್ರ ಹೊಂದಿದ್ದಾರೆ ಎಂದು ಲಾಭರಹಿತ ಸಂಸ್ಥೆಯಾಗಿರುವ ‘ಆಕ್ಸ್‌ಫ್ಯಾಮ್ ಇಂಡಿಯಾ’ ತನ್ನ ವರದಿಯಲ್ಲಿ ತಿಳಿಸಿದೆ.

‘ಶ್ರೀಮಂತರ ಬದುಕುಳಿಯುವಿಕೆ: ಭಾರತ ಪೂರಕ’ ಎಂಬ ವರದಿಯನ್ನು ಆಕ್ಸ್‌ಫ್ಯಾಮ್ ಬಿಡುಗಡೆ ಮಾಡಿದ್ದು, ಭಾರತದ 100 ಶ್ರೀಮಂತ ವ್ಯಕ್ತಿಗಳ ಒಟ್ಟು ಸಂಪತ್ತು 2022ರಲ್ಲಿ 54.12 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ ಎಂದು ಹೇಳಿದೆ. 2022ರಲ್ಲಿ 10 ಶ್ರೀಮಂತ ಭಾರತೀಯರ ಒಟ್ಟು ಸಂಪತ್ತು 27.52 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು, 2021ರಿಂದ 32.8% ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಒಟ್ಟು ಶತಕೋಟ್ಯಾಧಿಪತಿಗಳ ಸಂಖ್ಯೆಯು 2020ರಲ್ಲಿ 102 ಇತ್ತು. 2021ರಲ್ಲಿ 142ಕ್ಕೆ ಏರಿಕೆಯಾಯಿತು. 2022ರಲ್ಲಿ ಈ ಸಂಖ್ಯೆ 166ಕ್ಕೆ ತಲುಪಿದೆ. ಇದಕ್ಕೆ ತದ್ವಿರುದ್ಧವಾಗಿ ಭಾರತದಲ್ಲಿ 22.89 ಕೋಟಿ ಜನರು ಬಡತನ ನರಳುತ್ತಿದ್ದಾರೆ. ಇದು ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ತೆರಿಗೆ ಪದ್ಧತಿಯು ಪ್ರಗತಿಪರವಾಗದಿದ್ದರೆ ಈ ಅಸಮಾನತೆ ಮತ್ತಷ್ಟು ಉಲ್ಬಣವಾಗಬಹುದು ಎಂದು ವರದಿ ಎಚ್ಚರಿಸಿದೆ.

ಪ್ರಗತಿಪರ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆಯ ಪ್ರಮಾಣವು ಹೆಚ್ಚಾದಂತೆ ತೆರಿಗೆ ದರವು ಹೆಚ್ಚಾಗುತ್ತದೆ. ಭಾರತದಲ್ಲಿ ಆದಾಯ ತೆರಿಗೆ ದರಗಳು ಆದಾಯವನ್ನು ಆಧರಿಸಿರುತ್ತದೆ, ಆದರೆ ಪರೋಕ್ಷ ತೆರಿಗೆಗಳು ಅವರ ಗಳಿಕೆಯನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳಿಗೆ ಒಂದೇ ರೀತಿಯಲ್ಲಿ ಇರುತ್ತದೆ ಎಂದು ‘ಆಕ್ಸ್‌ಫ್ಯಾಮ್ ಇಂಡಿಯಾ’ ಗಮನಸೆಳೆದಿದೆ.

“ವ್ಯಾಟ್ [ಮೌಲ್ಯವರ್ಧಿತ ತೆರಿಗೆ] ನಂತಹ ತೆರಿಗೆಗಳ ಮೇಲೆ ಭಾರೀ ಅವಲಂಬಿಸುವುದು ಅಸಮಾನತೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ಬಡ ಜನರು ತಮ್ಮ ಆದಾಯದ ಹೆಚ್ಚಿನ ಪಾಲನ್ನು ಇದಕ್ಕಾಗಿ ಪಾವತಿಸಬೇಕಾಗುತ್ತದೆ” ಎಂದಿದೆ.

ದೇಶದ ಜನಸಂಖ್ಯೆಯ ಕಟ್ಟೆಕಡೆಯಲ್ಲಿರುವ 50%ರಷ್ಟು ಜನರನ್ನು ಮೇಲ್ಬಾಗದಲ್ಲಿನ 10%ರಷ್ಟು ಜನರಿಗೆ ಹೋಲಿಸಿದರೆ ಆದಾಯದ ಶೇಕಡಾವಾರು ಪ್ರಮಾಣದಲ್ಲಿ ಆರು ಪಟ್ಟು ಹೆಚ್ಚು ಪರೋಕ್ಷ ತೆರಿಗೆಯನ್ನು ಶೇ.50ರಷ್ಟು ಜನರು ಪಾವತಿಸುತ್ತಾರೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.

ಆಹಾರ ಮತ್ತು ಆಹಾರೇತರ ವಸ್ತುಗಳಿಂದ ಸಂಗ್ರಹಿಸಲಾದ ಒಟ್ಟು ತೆರಿಗೆಗಳಲ್ಲಿ 64.3%ರಷ್ಟನ್ನು ಕಟ್ಟಕಡೆಯ 50% ಜನರಿಂದ ಪಡೆಯಲಾಗಿದೆ.

ಸಂಪತ್ತಿನ ಮೇಲೆ ತೆರಿಗೆಯನ್ನು ವಿಧಿಸಿದರೆ ಸರ್ಕಾರದ ಆದಾಯ ಹೆಚ್ಚುತ್ತದೆ ಎಂದು ಆಕ್ಸ್‌ಫ್ಯಾಮ್ ಶಿಫಾರಸ್ಸು ಮಾಡಿದೆ. ಈ ಆದಾಯವನ್ನು ದೇಶದ ಅಭಿವೃದ್ಧಿಗೆ ಬಳಸಬಹುದು ಎಂದಿದೆ. ಉದಾಹರಣೆಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿಯವರು 2017-2021ರ ಅವಧಿಯಲ್ಲಿ ಅವಾಸ್ತವಿಕವಾಗಿ ಗಳಿಸಿದ ಲಾಭಗಳ ಮೇಲೆ ಒಂದು-ಬಾರಿ ತೆರಿಗೆಯನ್ನು ವಿಧಿಸಿದರೆ 1.79 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಬಹುದು. ಇಷ್ಟು ಹಣ ಒಂದು ವರ್ಷಕ್ಕೆ 50 ಲಕ್ಷಕ್ಕೂ ಹೆಚ್ಚು ಭಾರತೀಯ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಾಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಅಗತ್ಯ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ದರಗಳನ್ನು ಕಡಿಮೆ ಮಾಡಲು, ಐಷಾರಾಮಿ ಸರಕುಗಳ ಮೇಲೆ ಹೆಚ್ಚಿಸಲು ಆಕ್ಸ್‌ಫ್ಯಾಮ್ ಸೂಚಿಸಿದೆ.

ಅಂಕಿ-ಅಂಶಗಳ ಕುರಿತು ಪ್ರತಿಕ್ರಿಯಿಸಿದ ಆಕ್ಸ್‌ಫ್ಯಾಮ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಬೆಹರ್, “ಶ್ರೀಮಂತರು ತಮ್ಮ ನ್ಯಾಯಯುತವಾದ ತೆರಿಗೆಯನ್ನು ಪಾವತಿಸುವುದನ್ನು ಖಚಿತಪಡಿಸಿಕೊಳ್ಳುವ ಸಮಯ ಬಂದಿದೆ” ಎಂದಿದ್ದಾರೆ.

“ಶ್ರೀಮಂತರನ್ನು ಬೆಳೆಸುವ ವ್ಯವಸ್ಥೆಯಲ್ಲಿ ಕಟ್ಟಕಡೆಯ ಸಮುದಾಯದವರಾದ ದಲಿತರು, ಆದಿವಾಸಿಗಳು, ಮುಸ್ಲಿಮರು, ಮಹಿಳೆಯರು ಮತ್ತು ಅನೌಪಚಾರಿಕ ವಲಯದ ಕಾರ್ಮಿಕರು ಬಳಲುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಪತ್ತಿನ ಮೇಲೆ ತೆರಿಗೆಯನ್ನು ವಿಧಿಸುವಂತಹ ಪ್ರಗತಿಪರ ತೆರಿಗೆ ಕ್ರಮಗಳನ್ನು ಹಣಕಾಸು ಸಚಿವರು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...