Homeಮುಖಪುಟ’ಆಝಾದಿ’ ಘೋಷಣೆ ಕೂಗಿದ್ದಾರೆಂದು 6 ವಿದ್ಯಾರ್ಥಿಗಳ ಮೇಲೆ ದೇಶದ್ರೋಹಿ ಪ್ರಕರಣ ದಾಖಲು

’ಆಝಾದಿ’ ಘೋಷಣೆ ಕೂಗಿದ್ದಾರೆಂದು 6 ವಿದ್ಯಾರ್ಥಿಗಳ ಮೇಲೆ ದೇಶದ್ರೋಹಿ ಪ್ರಕರಣ ದಾಖಲು

- Advertisement -
- Advertisement -

ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಉತ್ತರ ಪ್ರದೇಶದ ಅಯೋದ್ಯೆಯ ಕೆ.ಎಸ್. ಸಾಕೇತ್‌ ಪದವಿ ಕಾಲೇಜ್‌‌ನ ವಿದ್ಯಾರ್ಥಿಗಳು ಡಿಸೆಂಬರ್‌ 16 ರಂದು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ’ಆಝಾದಿ’ ಘೋಷಣೆ ಕೂಗಿದ್ದಾರೆಂದು ಆರೋಪಿಸಿ 6 ವಿದ್ಯಾರ್ಥಿಗಳ ವಿರುದ್ದ ದೇಶದ್ರೋಹಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ವಿರೋಧಿಗಳ ದಮನಕ್ಕೆ ರಾಷ್ಟ್ರದ್ರೋಹ ಕಾಯಿದೆ ದುರ್ಬಳಕೆಯಾಗುತ್ತಿದೆ: ಮಾಜಿ ಐಪಿಎಸ್ ಎನ್.ಸಿ.ಅಸ್ತಾನ

ವಿದ್ಯಾಥಿಗಳ ವಿರುದ್ದ ಕಾಲೇಜು ಪ್ರಾಂಶುಪಾಲ ಎನ್‌.ಡಿ. ಪಾಂಡೆ ಪೊಲೀಸ್ ದೂರು ನೀಡಿದ್ದು, ತಮ್ಮ ದೂರಿನಲ್ಲಿ, ವಿದ್ಯಾರ್ಥಿಗಳು ”ಆಝಾದಿ ಲೇಕೆ ರಹೇಂಗೆ” ಎಂಬಂತಹ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿದ್ದಾರೆ.

“ವಿದ್ಯಾರ್ಥಿಗಳು ‘ಆಝಾದಿ’ ಘೋಷಣೆಗಳನ್ನು ಎತ್ತಿದ್ದು, ಅವರು ದಂಗೆ ಮತ್ತು ಹಿಂಸಾಚಾರದ ಮೂಲಕ ಸ್ವಾತಂತ್ಯ್ರ ಪಡೆದುಕೊಳ್ಳಲು ಬಯಸಿದ್ದರು. ಮಾತೃಭೂಮಿಯನ್ನು ರಕ್ಷಿಸುವುದು ನನ್ನ ಕರ್ತವ್ಯ, ಆದ್ದರಿಂದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ್ದೇನೆ” ಎಂದು ಪಾಂಡೆ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಪ್ರಾಂಶುಪಾಲರ ದೂರಿನ ಮೇರೆಗೆ ಪೊಲೀಸರು, ಸುಮಿತ್ ತಿವಾರಿ, ಶೇಶ್ ನಾರಾಯಣ್ ಪಾಂಡೆ, ಇಮ್ರಾನ್ ಹಶ್ಮಿ, ಸಾತ್ವಿಕ್ ಪಾಂಡೆ, ಮೋಹಿತ್ ಯಾದವ್ ಮತ್ತು ಮನೋಜ್ ಮಿಶ್ರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಆದರೆ ವಿದ್ಯಾರ್ಥಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ. ತಾವು ಕಾಲೇಜಿನ ಭ್ರಷ್ಟ ಪ್ರಾಂಶುಪಾಲ ಮತ್ತು ವಿದ್ಯಾರ್ಥಿ ವಿರೋಧಿ ವ್ಯವಸ್ಥೆಯಿಂದ “ಆಝಾದಿ” ಬೇಕೆಂದು ಘೋಷಣೆ ಕೂಗಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಕೇವಲ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ರಾಷ್ಟ್ರದ್ರೋಹವಲ್ಲ: ಮಾಜಿ ಸಾಲಿಸಿಟರ್ ಜನರಲ್ ಸೋಲಿ ಸೊರಾಬ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...