Homeಮುಖಪುಟದಕ್ಷಿಣ ಕೊರಿಯಾದ ಖ್ಯಾತ ಚಿತ್ರನಿರ್ದೇಶಕ ಕಿಮ್ ಕಿ ಡುಕ್ ವಿಧಿವಶ

ದಕ್ಷಿಣ ಕೊರಿಯಾದ ಖ್ಯಾತ ಚಿತ್ರನಿರ್ದೇಶಕ ಕಿಮ್ ಕಿ ಡುಕ್ ವಿಧಿವಶ

- Advertisement -
- Advertisement -

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದ, ‘ಸ್ಪ್ರಿಂಗ್, ಸಮ್ಮರ್, ಫಾಲ್, ವಿಂಟರ್’ ಸಿನೆಮಾದ ಮೂಲಕ ವಿಶ್ವದ ಸಿನೆಪ್ರಿಯರ ಮನೆಮಾತಾಗಿದ್ದ ದಕ್ಷಿಣ ಕೊರಿಯಾದ ಖ್ಯಾತ ಚಿತ್ರನಿರ್ದೇಶಕ ಕಿಮ್ ಕಿ ಡುಕ್ ಇಂದು ಕೊನೆಯುಸಿರೆಳೆದಿದ್ದಾರೆ. ಕಿಮ್ ಅವರು ಕೊರೊನಾ ಸೋಂಕಿಗೆ ಗುರಿಯಾಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರೈತರಿಗೆ ಬೆಂಬಲ: ‘#WeUnitedForFarmers’ ಟ್ರೆಂಡಿಂಗ್ – ಪ್ರತಿತಂತ್ರ ಹೂಡುತ್ತಿರುವ ಬಿಜೆಪಿ!

1960 ರಲ್ಲಿ ಜನಿಸಿದ ಇವರು 1996 ರಲ್ಲಿ ಕ್ರೊಕಡೈಲ್ ಎನ್ನುವ ಚಿತ್ರವನ್ನು ನಿರ್ದೇಶಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಹಲವು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದ ಕಿಮ್ ಅವರ ಚಲನಚಿತ್ರಗಳು ಬೆಂಗಳೂರು, ಕೇರಳ ಸೇರಿದಂತೆ ಹಲವು ಭಾರತೀಯ ಚಿತ್ರೋತ್ಸವಗಳಲ್ಲಿ ಕೂಡ ಪ್ರದರ್ಶನಗೊಂಡು ಪ್ರೇಕ್ಷಕರ ಗಮನ ಸೆಳೆದಿದ್ದವು.

ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರೈತ ಸಂಘಟನೆ

ಸುಮಾರು 40 ಕ್ಕೂ ಹೆಚ್ಚು ಸಿನೆಮಾಗಳನ್ನು ನಿರ್ದೇಶಿಸಿರುವ ಕಿಮ್ ಹಲವು ವಿವಾದಗಗಳಿಗೂ ಸಿಲುಕಿದ್ದರು. ವಿವಾದಾತ್ಮಕ ಚಲನಚಿತ್ರ ‘ಮೊಬಿಯಸ್’ ಚಿತ್ರೀಕರಣದ ವೇಳೆ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಎದುರಿಸಿದ್ದರು.

3-ಐರನ್, ದ ಬೋ, ಬ್ಯಾಡ್ ಗಯ್, ಡ್ರೀಮ್, ಕ್ರೋಕೋಡೈಲ್ ಇತ್ಯಾದಿ ಸಿನೆಮಾಗಳು ವಿಶ್ವದಾದ್ಯಂತ ಪ್ರೇಕ್ಷಕರ ನಡುವೆ ಜನಪ್ರಿಯವಾಗಿವೆ. 2016 ರಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾ ದೇಶಗಳ ನಡುವಿನ ಸಂಘರ್ಷವನ್ನು ಅವಲೋಕಿಸುವ ‘ದ ನೆಟ್’ ಚಲನಚಿತ್ರವನ್ನು ಕೂಡ ಕಿಮ್ ನಿರ್ದೇಶಿಸಿದ್ದರು. ಇದು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು,.

2013ರ ಕೇರಳ ಚಲನಚಿತ್ರೋತ್ಸವಕ್ಕೆ ತಿರುವನಂತಪುರಂಗೆ ಕಿಮ್ ಕಿ ಡುಕ್ ಆಗಮಿಸಿದ್ದು ಆ ಉತ್ಸವದ ಮುಖ್ಯ ಆಕರ್ಷಣೆಯಲ್ಲೊಂದಾಗಿತ್ತು.

ಇದನ್ನೂ ಓದಿ: ಟೊಯೊಟಾ ಕಿರ್ಲೋಸ್ಕರ್‌ ದರ್ಪ ಮುಂದುವರಿಕೆ: ’ಛತ್ರಿ ಚಳುವಳಿ’ ಆರಂಭಿಸಿದ ಕಾರ್ಮಿಕರು!

ಇವರ ಸಿನಿಮಾಗಳನ್ನು ಶ್ರೇಷ್ಠ ಚಿತ್ರಗಳೆಂದು ಆರಾಧಿಸುವ ದೊಡ್ಡ ಸಮೂಹವೇ ಜಗತ್ತಿನಾದ್ಯಂತ ಇದೆ. ಹಾಗೇ ಅವರೊಬ್ಬ ಕೀಳು ಅಭಿರುಚಿಯ ಕೆಟ್ಟ ನಿರ್ದೇಶಕ; ಕ್ರೌರ್ಯ, ಲೈಂಗಿಕತೆಯನ್ನೇ ಬಂಡವಾಳ ಮಾಡಿಕೊಂಡು ಸಿನಿಮಾ ಮಾಡುವ ಸ್ಯಾಡಿಸ್ಟ್ ಎಂದು ಜರಿಯುವವರ ಸಂಖ್ಯೆಯೂ ಕಮ್ಮಿಯಿಲ್ಲ. ‘ಕೊರಿಯನ್ ಸಿನಿಮಾ’ ಎಂಬ ಹಣೆಪಟ್ಟಿಯಲ್ಲಿ ಜಗತ್ತಿನಾದ್ಯಂತ ಗಮನಸೆಳೆಯುತ್ತಿರುವ ಚಿತ್ರಗಳಿಗಿಂತ ತುಂಬ ಭಿನ್ನವಾದ, ವಿರುದ್ಧವೇನೋ ಅನಿಸುವಂಥ ಸಿನಿಮಾಗಳನ್ನು ನೀಡಿದ ನಿರ್ದೇಶಕ ಕಿಮ್ ಕಿ ಡುಕ್. ಕಿಮ್‌ ಕಿ ಡುಕ್ ಹೆಸರಿನ ಹಿಂದೆ ‘ಕಾಂಟ್ರವರ್ಷಿಯಲ್ ಡೈರೆಕ್ಟರ್’ ಎಂಬ ಒಂದು ಬಿರುದು ಸದಾಕಾಲ ಉಲ್ಲೇಖಿತಗೊಳ್ಳುತ್ತಿರುತ್ತದೆ.

ಇವೆಲ್ಲ ಏನೇ ಇದ್ದರೂ ಜಗತ್ತಿನ ಸಿನಿಮಾ ಆಸ್ಥಾನದಲ್ಲಿ ಕಿಮ್‌ ಕಿ ಡುಕ್‌ಗೆ ಒಂದು ಗಟ್ಟಿಯಾದ ಸಿಂಹಾಸನ ಇರುವುದಂತೂ ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ.

ಇದನ್ನೂ ಓದಿ: ಗೋಹತ್ಯೆ ನಿಷೇಧ: ವಯಸ್ಸಾದ ದನಗಳನ್ನು ಸರ್ಕಾರವೇ ಖರೀದಿಸಲಿ – ಸಿದ್ದರಾಮಯ್ಯ ಸಲಹೆ

ಇಂದಿಗೂ ತಮ್ಮ ಸಿನಿಮಾಗಳ ಮೂಲಕ ಸಿನಿಮಾಜಗತ್ತಿನಲ್ಲಿ ಕಂಪನ ಎಬ್ಬಿಸುತ್ತಲೇ ಇರುವ ಕಿಮ್ ಕಿ ಡುಕ್ ಸಿನಿಮಾ ಕಲೆಯನ್ನು ಅಕಾಡೆಮಿಕ್ ಆಗಿ ಕಲಿತವರಲ್ಲ. ಆದರೆ ಅವರ ಎಷ್ಟೋ ಸಿನಿಮಾಗಳನ್ನು ನೋಡಿದಾಗ ಸಿನಿಮಾ ಮಾಧ್ಯಮವೂ ತನ್ನನ್ನು ತಾನು ವಿಸ್ತರಿಸಿಕೊಳ್ಳಲು, ಅಭಿವ್ಯಕ್ತಿಸಿಕೊಳ್ಳಲು ಈ ನಿರ್ದೇಶಕನಿಗಾಗಿ ಕಾಯುತ್ತಿತ್ತೇನೋ ಎಂಬುದು ಹಲವರ ಅಭಿಪ್ರಾಯವಾಗಿತ್ತು.


ಇದನ್ನೂ ಓದಿ: ಯುಪಿಎ ಅಧ್ಯಕ್ಷ ಸ್ಥಾನಕ್ಕೆ ಎನ್‌ಸಿಪಿ ಹಿರಿಯ ಮುಖಂಡ ಶರದ್ ಪವಾರ್?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...