Homeಕ್ರೀಡೆಕ್ರಿಕೆಟ್ಟಿ20 ವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಪಾಕ್ ವಿರುದ್ಧ ರೋಚಕ ಗೆಲುವು ತಂದುಕೊಟ್ಟ ಕೊನೆಯ 8 ಎಸೆತಗಳು...

ಟಿ20 ವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಪಾಕ್ ವಿರುದ್ಧ ರೋಚಕ ಗೆಲುವು ತಂದುಕೊಟ್ಟ ಕೊನೆಯ 8 ಎಸೆತಗಳು ಹೀಗಿದ್ದವು..

- Advertisement -
- Advertisement -

ಇಂದು ನಡೆದ ಟಿ20 ವಿಶ್ವಕಪ್ ಕ್ರಿಕೆಟ್‌ನ ಭಾರತ ಪಾಕಿಸ್ತಾನನ ಎದುರಿನ ಪಂದ್ಯ ಹಲವಾರು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಪಾಕ್ ನೀಡಿದ 160 ರನ್‌ಗಳ ಗುರಿಯನ್ನು ಭಾರತ ತಂಡ ಕೊನೆಯ ಎಸೆತದಲ್ಲಿ ಮುಟ್ಟಿತು. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಶತಕದ ಜೊತೆಯಾಟದ ನೆರವಿನೊಂದಿಗೆ ಗೆಲುವಿನ ಪತಾಕೆ ಹಾರಿಸಿತು. ಕೊನೆಯ 8 ಎಸೆತಗಳಲ್ಲಿ 28 ರನ್ ಗಳಿಸಿದ ಭಾರತ ತಂಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿತು. ಆ ಒಂದೊಂದು ಎಸೆತವು ಪಂದ್ಯದ ದಿಕ್ಕು ಬದಲಿಸುವಂತಿದ್ದವು. ಆ 8 ಎಸೆತಗಳ ನೋಟ ಇಲ್ಲಿದೆ.

18 ಓವರ್ ಮುಗಿದಾಗ ಭಾರತ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತ್ತು. ಗೆಲುವಿಗೆ 12 ಎಸೆತಗಳಲ್ಲಿ 31 ಬೇಕಿತ್ತು. ಪಾಕ್ ಬೌಲರ್ ಹ್ಯಾರಿಸ್ ರೌಫ್ ಎಸೆದ 19ನೇ ಓವರ್‌ನ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಒಂದು ರನ್ ಗಳಿಸಿದರೆ ಮರು ಎಸೆತದಲ್ಲಿ ಕೊಹ್ಲಿ ಸಹ ಒಂದು ರನ್ ಗಳಿಸಿದರು. ಆದರೆ ಮೂರನೇ ಎಸೆತದಲ್ಲಿ ಹಾರ್ದಿಕ್ ರನ್ ಗಳಿಸದೆ ನಾಲ್ಕನೆ ಎಸೆತದಲ್ಲಿ 1 ರನ್ ಗಳಿಸಿದರು. ಆಗ ಭಾರತ 131 ರನ್ ಗಳಿಸಿತ್ತು. ಗೆಲುವಿಗೆ 8 ಎಸೆತಗಳಲ್ಲಿ 28 ರನ್ ಗಳಿಸಬೇಕಿತ್ತು. ಪಂದ್ಯ ಪಾಕ್‌ ಪರವಾಗಿತ್ತು. ಆನಂತರ ನಡೆದಿದ್ದು ಕೊಹ್ಲಿ ಆಟ. ಅದು ಹೀಗಿತ್ತು..

18.5: ಸ್ಲೊ ಬಾಲ್ ಅನ್ನು ವಿರಾಟ್ ಕೊಹ್ಲಿ ನೇರ ಸಿಕ್ಸ್‌ ಭಾರಿಸಿದರು.

18.6: ಫೈನ್‌ ಲೆಗ್‌ನಲ್ಲಿ ವಿರಾಟ್ ಕೊಹ್ಲಿ ಸಿಕ್ಸರ್ ಭಾರಿಸಿದರು. ಅಲ್ಲಿಗೆ ಕೊನೆಯ ಓವರ್‌ನಲ್ಲಿ 16 ರನ್ ಗಳಿಸಬೇಕಾಗಿತ್ತು.

19.1: ಸ್ಪಿನ್ ಬೌಲರ್ ಮೊಹಮ್ಮದ್ ನವಾಜ್ ಎಸೆತ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಬಾಬರ್ ಅಜಂಗೆ ಕ್ಯಾಚಿತ್ತು ಔಟಾದರು. ಭಾರತಕ್ಕೆ ಆಗ 5 ಎಸೆತಗಳಲ್ಲಿ 16 ರನ್ ಬೇಕಿತ್ತು.

19.2:  ಕ್ರಿಸ್‌ಗೆ ಬಂದಿದ್ದ ಹೊಸ ಬ್ಯಾಟರ್ ದಿನೇಶ್ ಕಾರ್ತಿಕ್ ಫುಲ್ ಟಾಸ್ ಬಾಲನ್ನು ಲಾಂಗ್‌ಆನ್‌ನತ್ತ ಬಾರಿಸಿ ಕೇವಲ ಒಂದು ರನ್ ಗಳಿಸಿದರು. ಭಾರತಕ್ಕೆ ಆಗ 4 ಎಸೆತಗಳಲ್ಲಿ 15 ರನ್ ಬೇಕಿತ್ತು.

19.3: ವಿರಾಟ್ ಕೊಹ್ಲಿ ಲಾಂಗ್ ಆನ್‌ನತ್ತ ಭಾರಿಸಿ ಎರಡು ರನ್ ಗಳಿಸಿದರು. ಭಾರತಕ್ಕೆ ಆಗ 3 ಎಸೆತಗಳಲ್ಲಿ 13 ರನ್ ಬೇಕಿತ್ತು.

19.4: ಫುಲ್ ಟಾಸ್ ಬಂದ ಬಾಲನ್ನು ಕೊಹ್ಲಿ ಲೈನ್ ಮತ್ತು ಡೀಪ್ ಸ್ಕ್ವೇರ್‌ ನಡುವೆ ಸಿಕ್ಸರ್ ಬಾರಿಸಿದರು. ಅದು ಹೈ ಪುಲ್ ಟಾಸ್ ಇದ್ದ ಕಾರಣ ಅಂಪೈರ್ ನೋಬಾಲ್ ಎಂದು ಘೋಷಿಸಿದರು.  ಅಲ್ಲಿಗೆ ಪಂದ್ಯ ಭಾರತದ ಕಡೆ ವಾಲಿತು. ಭಾರತಕ್ಕೆ ಆಗ 3 ಎಸೆತಗಳಲ್ಲಿ 6 ರನ್ ಬೇಕಿತ್ತು.

19.4- ಫ್ರಿ ಹಿಟ್: ನವಾಜ್ ಎಸೆದ ಬಾಲ್ ವೈಡ್ ಆಯಿತು. ಭಾರತಕ್ಕೆ ಒಂದು ರನ್ ಸಿಕ್ಕಿತು. ಪಾಕ್ ಆಟಗಾರರು ನೋಬಾಲ್ ಅಲ್ಲವೆಂದು ವಾದ ಮಾಡಿದರು. ಆದರೆ ಅಂಪೈರ್ ನೋಬಾಲ್ ನೀಡಿದರು. ಭಾರತಕ್ಕೆ ಆಗ 3 ಎಸೆತಗಳಲ್ಲಿ 5 ರನ್ ಬೇಕಿತ್ತು.

13.4 -ಫ್ರಿ ಹಿಟ್: ನವಾಜ್ ವೇಗದಲ್ಲಿ ಎಸೆದ ಬಾಲ್ ಕೊಹ್ಲಿಯನ್ನು ತಪ್ಪಿಸಿ ವಿಕೆಟ್‌ಗೆ ಬಡಿದು ಥರ್ಡ್ ಮ್ಯಾನ್ ಕಡೆಗೆ ಹೋದಾಗ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಬೈಸ್ ರೂಪದಲ್ಲಿ ಮೂರು ರನ್ ಓಡಿದರು. ಚೆಂಡು ವಿಕೆಟ್‌ಗೆ ಬಡಿದ ಕಾರಣ ಬೈಸ್ ನೀಡಬಾರದೆಂದು ಪಾಕ್ ಆಟಗಾರರು ವಾದ ಮಾಡಿದರು. ಆದರೆ ಅಂಪೈರ್ ಬೈಸ್ ರನ್ ನೀಡಿದರು. ಭಾರತಕ್ಕೆ ಆಗ 2 ಎಸೆತಗಳಲ್ಲಿ 2 ರನ್ ಬೇಕಿತ್ತು.

13.5: ವೈಡ್ ಆಗುತ್ತಿದ್ದ ಬಾಲ್ ಆಡಿದ ದಿನೇಶ್ ಕಾರ್ತಿಕ್ ಸ್ಟಂಪ್ ಔಟ್ ಆದರು. ಅಲ್ಲಿಗೆ ಪಂದ್ಯ ಪಾಕ್ ಕಡೆಗೆ ವಾಲಿತು. ಭಾರತಕ್ಕೆ ಆಗ 1 ಎಸೆತಗಳಲ್ಲಿ 2 ರನ್ ಬೇಕಿತ್ತು.

13.6: ನವಾಜ್ ವೈಡ್ ಮಾಡಿದರು. ಅಶ್ವಿನ್ ಬಾಲ್ ಮುಟ್ಟಲಿಲ್ಲ. ಭಾರತಕ್ಕೆ ಎಕ್ಸ್ಟ್ರಾ ರೂಪದಲ್ಲಿ ಒಂದು ರನ್ ಸಿಕ್ಕಿತು. ಭಾರತಕ್ಕೆ ಆಗ 1 ಎಸೆತಗಳಲ್ಲಿ 1 ರನ್ ಬೇಕಿತ್ತು.

13.6: ನವಾಜ್ ಎಸೆತವನ್ನು ಆರ್ ಅಶ್ವಿನ್ ಓವರ್ ಮಿಡ್ ಆಫ್ ಕಡೆ ಬಾರಿಸಿ ಒಂದು ರನ್ ಓಡಿದರು. ಅಲ್ಲಿಗೆ ಭಾರತ ತಂಡಕ್ಕೆ ನಾಲ್ಕು ವಿಕೆಟ್ ಜಯ ಲಭಿಸಿತು. ಅಶ್ವಿನ್ ಕುಣಿದು ಕುಪ್ಪಳಿಸಿದರೆ, ಮೈದಾನಕ್ಕೆ ನುಗ್ಗಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೊಹ್ಲಿಯನ್ನು ಭುಜದ ಮೇಲೆತ್ತಿ ಸಂಭ್ರಮಿಸಿದರು.

53 ಎಸೆತಗಳಲ್ಲಿ 06 ಬೌಂಡರಿ ಮತ್ತು 04 ಸಿಕ್ಸರ್ ಸೇರಿ 82 ರನ್ ಚಚ್ಚಿದ ವಿರಾಟ್ ಕೊಹ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಆರಂಭಿಕ ಆಘಾತ ಕಂಡಿತು. ಆನಂತರ ಮಸೂದ್ (52) ಮತ್ತು ಇಫ್ತಿಕಾರ್ ಅಹ್ಮದ್‌ರವರ (51) ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಪೇರಿಸಿತ್ತು. ಭಾರತದ ಪರವಾಗಿ ಹಾರ್ದಿಕ್ ಪಾಂಡ್ಯ ಮತ್ತು ಅರ್ಶದೀಪ್ ಸಿಂಗ್ ತಲಾ ಮೂರು ವಿಕೆಟ್ ಪಡೆದರು.

ಆನಂತರ ಭಾರತವೂ ತಂಡವೂ ಸಹ ಆರಂಭಿಕ ಆಘಾತ ಕಂಡಿತು. 31 ರನ್ ಗಳಿಸುವಷ್ಟಲ್ಲಿ ಕೆ.ಎಲ್ ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಅಕ್ಸರ್ ಪಟೇಲ್ ಔಟ್ ಆಗಿ ಪೆವಿಲಿಯನ್ ಸೇರಿದ್ದರು. ಆನಂತರ ಜೊತೆಗೂಡಿದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಜೊತೆಯಾಟ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ಪಾಕ್ ಪರವಾಗಿ ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ನವಾಜ್ ತಲಾ ಎರಡು ವಿಕೆಟ್ ಪಡೆದರು.

ಇದನ್ನೂ ಓದಿ: 2023ರಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ ಕ್ರಿಕೆಟ್ ಬಹಿಷ್ಕರಿಸುವ ಎಚ್ಚರಿಕೆ ನೀಡಿದ ಪಾಕ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...