ತಮಿಳುನಾಡು: ಮುಂಬರುವ ವಿಧಾನಸಭಾ ಚುನಾವಣೆಗಳು ತಮಿಳುನಾಡು ತಂಡ ಮತ್ತು ದೆಹಲಿ ತಂಡದ ನಡುವಿನ ಹೋರಾಟವಾಗಿದ್ದು, ದಕ್ಷಿಣ ರಾಜ್ಯವು ದೆಹಲಿಯನ್ನು “ಓಡಿಸಬೇಕು” ಎಂದು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಬುಧವಾರ ಮತ್ತೊಮ್ಮೆ ಒತ್ತಾಯಿಸಿದ್ದಾರೆ.
“ನಮ್ಮ ನಾಯಕ (ಎಂ.ಕೆ. ಸ್ಟಾಲಿನ್) ಪದೇ ಪದೇ ಹೇಳುವಂತೆ, ಈ ವಿಧಾನಸಭಾ ಚುನಾವಣೆ ದೆಹಲಿ vs ತಮಿಳುನಾಡು. ನಾವು ತಮಿಳುನಾಡು ತಂಡವಾಗಿ ಗೆಲ್ಲಬೇಕು. ಹಾಗೇ ದೆಹಲಿ ತಂಡವನ್ನು ಓಡಿಸಬೇಕು” ಎಂದು ಉದ್ಯನಿಧಿ ಹೇಳಿದ್ದಾರೆ.
ಏಪ್ರಿಲ್ 23 ರಂದು ನಡೆಯಲಿರುವ ಚುನಾವಣೆಗಾಗಿ ತೂತುಕುಡಿ ಜಿಲ್ಲೆಯ ಒಟ್ಟಪಿದರಾಮ್ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಸ್ವಾಭಿಮಾನವನ್ನು ಕಾಪಾಡಲು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ತಿರಸ್ಕರಿಸುವಂತೆ ಮತದಾರರನ್ನು ಒತ್ತಾಯಿಸಿದ್ದಾರೆ.
ಡಿಎಂಕೆ ಅಭ್ಯರ್ಥಿ ಎಂ.ಸಿ. ರಾಮಜಯಂ ಪರ ಪ್ರಚಾರ ನಡೆಸುತ್ತಿರುವ ಉದಯನಿಧಿ, ಅಭ್ಯರ್ಥಿಯ ಲಭ್ಯತೆಯನ್ನು ಎತ್ತಿ ತೋರಿಸಿದ್ದು, ರಾಮಜಯಂ ಯಾವಾಗಲೂ ಜನರ ನಡುವೆಯೇ ಇದ್ದಾರೆ ಮತ್ತು ನೀರಿನ ಸಂಪರ್ಕ ಮತ್ತು ಮೂಲಸೌಕರ್ಯದಂತಹ ಕ್ಷೇತ್ರದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ಹೇಳಿದ್ದಾರೆ.


