Homeಮುಖಪುಟಆರೆಸ್ಸೆಸ್‌ ಮುಖಂಡನ ಮನೆಯಲ್ಲಿ 770 ಕೆಜಿ ಸ್ಪೋಟಕ ಪತ್ತೆ

ಆರೆಸ್ಸೆಸ್‌ ಮುಖಂಡನ ಮನೆಯಲ್ಲಿ 770 ಕೆಜಿ ಸ್ಪೋಟಕ ಪತ್ತೆ

- Advertisement -
- Advertisement -

ಕೇರಳ ಪೊಲೀಸರು ಕಣ್ಣೂರು ಜಿಲ್ಲೆಯ ಪೊಯಿಲೂರಿನಲ್ಲಿರುವ ಸ್ಥಳೀಯ ಆರೆಸ್ಸೆಸ್‌ ಮುಖಂಡ ಮತ್ತು ಆತನ ಸಂಬಂಧಿಕರ ನಿವಾಸದಿಂದ 770 ಕೆಜಿ ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಗಣನೀಯ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಆರೆಸ್ಸೆಸ್‌ ಸ್ಥಳೀಯ ಮುಖಂಡ ವಡಕಯಿಲ್ ಪ್ರಮೋದ್ ಮತ್ತು ಆತನ ಸಂಬಂಧಿ ವಡಕಯಿಲ್ ಶಾಂತಾ ಅವರ ಮನೆಗಳಲ್ಲಿ ಈ ಭಾರೀ ಪ್ರಮಾಣದ ಸ್ಪೋಟಕಗಳು ಪತ್ತೆಯಾಗಿದೆ. ಇದರ ಬೆನ್ನಲ್ಲಿ ಸದ್ಯ ಪ್ರಮೋದ್ ತಲೆಮರೆಸಿಕೊಂಡಿದ್ದಾನೆ.

ಗೌಪ್ಯ ಮಾಹಿತಿಯ ಆಧಾರದ ಮೇಲೆ ಕೊಲವಲ್ಲೂರು ಪೊಲೀಸ್ ಇನ್ಸ್‌ಪೆಕ್ಟರ್ ಸುಮೀತ್ ಕುಮಾರ್ ಮತ್ತು ಸಬ್ ಇನ್ಸ್‌ಪೆಕ್ಟರ್ ಸೋಬಿನ್ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನಡೆಸಿದಾಗ ಈ ಭಾರೀ ಪ್ರಮಾಣದ ಸ್ಪೋಟಕಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಕೊಳವಲ್ಲೂರು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಗಳ ಪ್ರಕಾರ, ಸ್ಫೋಟಕಗಳನ್ನು ಅಕ್ರಮವಾಗಿ ವಿತರಿಸಲು ಉದ್ದೇಶಿಸಲಾಗಿತ್ತು ಎಂದು ಸೂಚಿಸುತ್ತದೆ. ನಾವು ಈ ಬಗ್ಗೆ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದೇವೆ. ಈ ಬೆಳವಣಿಗೆಗಳ ಮಧ್ಯೆ ಆ ಪ್ರದೇಶದ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ, ಕಣ್ಣೂರಿನ ಎರಂಜೋಲಿಪಾಲಂ ಬಳಿ ಬಾಂಬ್ ತಯಾರಿಕೆ ವೇಳೆ ಸ್ಫೋಟ ಸಂಭವಿಸಿ ಆರೆಸ್ಸೆಸ್‌ಗೆ ಸೇರಿದ ಯುವಕ ತೀವ್ರ ಗಾಯಗೊಂಡಿದ್ದರು. ಘಟನೆಯಲ್ಲಿ ವಿಷ್ಣು(20) ಅವರ ಅಂಗೈ ಒಡೆದು ಚೆಲ್ಲಾಪಿಲ್ಲಿಯಾಗಿತ್ತು. ವಿಷ್ಣು ಮನೆಯ ಸಮೀಪದ ಮೈದಾನದಲ್ಲಿ ಬಾಂಬ್ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾಗ ಸ್ಫೋಟ ಸಂಭವಿಸಿತ್ತು. 30 ದಿನಗಳಲ್ಲಿ ಇದು ಎರಡನೇ ಘಟನೆಯಾಗಿದ್ದು, ಬಾಂಬ್ ತಯಾರಿಕೆಯಲ್ಲಿ ಆರೆಸ್ಸೆಸ್‌ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎನ್ನುವುದನ್ನು ಬಹಿರಂಗಪಡಿಸುತ್ತದೆ.

ಈ ಕುರಿತು ಕೇರಳ ಕಾಂಗ್ರೆಸ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಆರೆಸ್ಸೆಸ್ ಸ್ಥಳೀಯ ಮುಖಂಡ ವಡಕ್ಕೈಲ್ ಪ್ರಮೋದ್ ಮತ್ತು ಆತನ ಸೋದರ ಸಂಬಂಧಿ ವಡಕ್ಕೈಲ್ ಶಾಂತಾ ಅವರ ಮನೆಗಳಿಂದ 770 ಕೆಜಿ ಸ್ಫೋಟಕಗಳನ್ನು ಕೇರಳ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಭಯೋತ್ಪಾದನೆ ಮತ್ತು ರಾಜ್ಯದ ವಿರುದ್ಧದ ಷಡ್ಯಂತ್ರದಂತಹ ಪ್ರಕರಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಆಗಾಗ್ಗೆ ಸಿಕ್ಕಿಬಿದ್ದಿದ್ದಾರೆ. ಇಂತಹ ಭಾರೀ ಸ್ಫೋಟಕಗಳನ್ನು ಸಂಗ್ರಹಿಸುವ ಇತ್ತೀಚಿನ ಪ್ರಯತ್ನದ ಹಿಂದೆ ಬಿಜೆಪಿಯ ನಿಜವಾದ ಗುರಿ ಏನು? ಇದು ಚುನಾವಣೆಗೆ ಮುನ್ನ ಭಯೋತ್ಪಾದನೆ ಮತ್ತು ರಾಜಕೀಯ ಮತ್ತು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವ ತಂತ್ರವೇ? ಈ ಬಗ್ಗೆ ಎನ್‌ಐಎ ತನಿಖೆಯನ್ನು ವಹಿಸಿಕೊಳ್ಳುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

 

ಇದನ್ನು ಓದಿ:ನೋಟ್‌ ಬ್ಯಾನ್‌ ಮಾಡಿದ ರೀತಿ ಸರಿಯಿಲ್ಲ: ಜಸ್ಟಿಸ್‌ ನಾಗರತ್ನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...