ಸಿನಿಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿರುವ ಚಿತ್ರ, ನಲ್ಮೆಯ ಕೂಸು ಕನ್ನಡದ ’ಬಬ್ರೂ’ ಚಿತ್ರ ಡಿಸೆಂಬರ್‌ ೬ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.

ಸುಮನ್ ನಗರ್‌ಕರ್ ಪ್ರೊಡಕ್ಷನ್ಸ್ ಹಾಗೂ ಯುಗ ಕ್ರಿಯೇಷನ್ಸ್ ನಿರ್ಮಿಸಿರುವ ಚಿತ್ರ ’ಬಬ್ರೂ’. ಸುಜಯ್ ರಾಮಯ್ಯ ನಿರ್ದೇಶಿಸಿದ್ದು, ಸಂಪೂರ್ಣವಾಗಿ ಅಮೆರಿಕಾದಲ್ಲೇ ಚಿತ್ರೀಕರಣಗೊಂಡಿರುವ ಮೊಟ್ಟ ಮೊದಲ ಹಾಲಿವುಡ್ ಕನ್ನಡ ಚಲನಚಿತ್ರವಾಗಿದೆ.

KRG Studios ಕರ್ನಾಟಕದಲ್ಲಿ ಹಾಗು ಕಸ್ತೂರಿ ಮೀಡಿಯಾ ಹೊರ ದೇಶಗಳಲ್ಲಿ ಬಿಡುಗಡೆ ಮಾಡುತ್ತಿರುವ ಬಬ್ರೂ ಚಿತ್ರದಲ್ಲಿ ಸುಮನ್ ನಗರ್‌‌ಕರ್, ಮಾಹಿ ಹಿರೇಮಠ್, ಪ್ರಕೃತಿ ಕಶ್ಯಪ್, ರೇ ಟೊಸ್ಟಾಡೊ, ಗಾನಾ ಭಟ್, ಸನ್ನಿ ಮೋಜಾ ಅಭಿನಯಿಸಿದ್ದಾರೆ.

ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಮೂವಿ ಇದಾಗಿದ್ದು, ಹಾಲಿವುಡ್‌ ಶೈಲಿಯಲ್ಲಿ ನಿರ್ಮಾಣವಾಗಿರುವ ಕನ್ನಡ ಚಿತ್ರವಾಗಿದೆ. ಮೆಕ್ಸಿಕೋದಿಂದ ಕೆನಡಾವರೆಗೆ ನಡೆಯುವ ಜರ್ನಿಯಲ್ಲಿ ನಡೆಯುವ ಘಟನೆಗಳೇ ಚಿತ್ರದ ಕಥಾವಸ್ತು. ಚಿತ್ರದಲ್ಲಿ ಸ್ಪ್ಯಾನಿಶ್‌ ಮಿಶ್ರಿತ ಕನ್ನಡ ಭಾಷೆ ಬಳಸಲಾಗಿದೆ. ವಿಜಯ್‌ ಪ್ರಕಾಶ್, ಚಂದನ್‌ ಶೆಟ್ಟಿ ಸಂದೀಪ್‌ ಹೆಗಡೆ ಅವರ ಹಿನ್ನೆಲೆ ಗಾಯನವಿದೆ.

LEAVE A REPLY

Please enter your comment!
Please enter your name here