Homeಮುಖಪುಟಯೆಸ್ ಬ್ಯಾಂಕ್ ಪತನಕ್ಕೆ ಮುನ್ನುಡಿ ಬರೆದ ಮೂವರು ಮಾಜಿ ಬಿಲಿಯಾಧಿಪತಿಗಳು: ಅಂಬಾನಿ, ವಾಧ್ವಾನ್ ಮತ್ತು ಚಂದ್ರ!

ಯೆಸ್ ಬ್ಯಾಂಕ್ ಪತನಕ್ಕೆ ಮುನ್ನುಡಿ ಬರೆದ ಮೂವರು ಮಾಜಿ ಬಿಲಿಯಾಧಿಪತಿಗಳು: ಅಂಬಾನಿ, ವಾಧ್ವಾನ್ ಮತ್ತು ಚಂದ್ರ!

ದಿವಾಳಿ ಅಂಚಿನಲ್ಲಿರುವ ಮೂವರು ಮಿಲಿಯಾಧಿಪತಿಗಳ ಜೊತೆ ವ್ಯವಹರಿಸುತ್ತಿದ್ದ ಯೆಸ್ ಬ್ಯಾಂಕ್ ಲೆಕ್ಕಪತ್ರಗಳ ಸೂಕ್ಷ್ಮ ಅಪರಾಧಿಕ ಪರಿಶೀಲನೆ ನಡೆಸಿದಲ್ಲಿ ಇನ್ನಷ್ಟು ಅಸ್ತಿಪಂಜರಗಳು ಹೊರಬರಲಿವೆ.

- Advertisement -
- Advertisement -

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಮುಂಬಯಿಯ ಗಜಿಬಿಜಿಯ ಲೋವರ್ ಪರೇಲ್‌ನಲ್ಲಿರುವ ಯಾವುದೇ ದೇಖಾದೇಕಿ ಇಲ್ಲದ ಮೂರು ಗಗನಚುಂಬಿ ಕಟ್ಟಡಗಳನ್ನು ಹೊಂದಿರುವ ಇಂಡಿಯಾ ಬುಲ್ಸ್ ಫೈನಾನ್ಸ್ ಸೆಂಟರ್ ಎಂಬ ವಾಣಿಜ್ಯ ಸಂಕೀರ್ಣದಲ್ಲಿರುವ ಯೆಸ್ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಈಗ ಭಯಹುಟ್ಟಿಸುವ ಮೌನವಿದೆ. ಕೆಟ್ಟ ಸಾಲಗಳು ಮತ್ತು ಅಭದ್ರ ಆಸ್ತಿಗಳ ಕಾರಣದಿಂದ ಕಳೆದ ವಾರ ಪ್ರಪಾತದ ಅಂಚಿನಲ್ಲಿದ್ದ ದೇಶದ ನಾಲ್ಕನೇ ಅತಿದೊಡ್ಡ ಖಾಸಗಿ ಬ್ಯಾಂಕಿನಲ್ಲೀಗ ಬದುಕಬಹುದೋ ಏನೋ ಎಂಬ ಆಶಾವಾದ ಮೂಡಿದೆ.

ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ ಈ ಬ್ಯಾಂಕಿನ ಮೇಲೆ ನಿರ್ಬಂಧ ಹೇರಿ ಹಣ ಹಿಂತೆಗೆತಕ್ಕೆ ಮಿತಿಯನ್ನು ವಿಧಿಸಿದಾಗ ಹಣ ಕಳೆದುಕೊಳ್ಳುವ ಭೀತಿಗೆ ಒಳಗಾದ ಸಾವಿರಾರು ಜನರು ಈ ಬ್ಯಾಂಕಿನ ವಿಶಾಲವಾದ ಲಾಬಿಯಲ್ಲಿ ಜಮಾಯಿಸಿದ್ದರು. ಈ ಕಟ್ಟಡಗಳಲ್ಲಿರುವ ಹಲವಾರು ಮಧ್ಯಮ ಪ್ರಮಾಣದ ಕಂಪನಿಗಳು ಈ ಬ್ಯಾಂಕಿನ ಕಾರ್ಪೊರೇಟ್ ಗ್ರಾಹಕರಾಗಿದ್ದು, ತಮ್ಮ ನೌಕರರ ಸಂಬಳದ ಖಾತೆಗಳನ್ನು ಇಲ್ಲಿಯೇ ಹೊಂದಿರುವುದು ಬಹುದೊಡ್ಡ ಗದ್ದಲಕ್ಕೆ ಕಾರಣವಾಗಿತ್ತು.

ಇದೀಗ ನಿಮ್ಮ ಹಣ ಸುರಕ್ಷಿತ ಎಂದು ಸರಕಾರ ಭರವಸೆ ನೀಡಿರುವುದರಿಂದ ಗ್ರಾಹಕರು ಸ್ವಲ್ಪ ಮಟ್ಟಿನ ನಿಟ್ಟುಸಿರು ಬಿಟ್ಟಿದ್ದಾರೆ. 16 ವರ್ಷಗಳ ಹಿಂದೆ ಈ ಬ್ಯಾಂಕನ್ನು ಸ್ಥಾಪಿಸಿದ್ದ ರಾಣಾ ಕಪೂರ್ ಇದೀಗ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಹೊಸ ಖಳನಾಯಕ ಎನಿಸಿದ್ದಾರೆ. ಅವರೀಗ ಮುಂಬಯಿಯ ಜಾರಿ ನಿರ್ದೇಶನಾಲಯದ ವಶದಲ್ಲಿದ್ದು, ಕ್ರಿಮಿನಲ್ ಸಂಚು, ವಂಚನೆ ಮತ್ತು ಭ್ರಷ್ಟಾಚಾರದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಇದೇ ಕಪೂರ್ ಈಗ ಬ್ಯಾಂಕಿನ ಪತನಕ್ಕಾಗಿ ಆರ್ಥಿಕ ಹಿಂಜರಿತ ಮತ್ತು ನೋಟು ಅಮಾನ್ಯೀಕರಣವನ್ನು ದೂರಬಹುದು. ಆದರೆ, ಇವರೇ ಅದನ್ನು ಸರಕಾರದ ಮಾಸ್ಟರ್ ಸ್ಟ್ರೋಕ್ ಎಂದು ಕೊಂಡಾಡಿದ್ದರು. ಬ್ಯಾಂಕಿನ ರಕ್ತಸಿಕ್ತ ಲೆಕ್ಕಪತ್ರದ ವಿವರಗಳು ಏನನ್ನು ತೋರಿಸುತ್ತವೆ ಎಂದರೆ ಹಿಂದೆ ಬಿಲಿಯಾಧಿಪತಿಗಳಾಗಿದ್ದು ನಂತರ ಆಸ್ತಿಪಾಸ್ತಿಗಳ ವಿನಾಶಕರಾಗಿ ಪರಿಣಮಿಸಿದ ಮೂವರು ಮಹಾನುಭಾವರು ಈ ಬ್ಯಾಂಕಿನ ಪತನಕ್ಕೆ ಮುನ್ನುಡಿ ಬರೆದಿದ್ದಾರೆ.

ಅವರೇ ಅನಿಲ್ ಅಂಬಾನಿ (ರಿಲಯನ್ಸ್ ಗ್ರೂಪ್), ಕಪಿಲ್ ವಾಧ್ವಾನ್ (ಡಿಎಚ್‌ಎಫ್‌ಎಲ್) ಮತ್ತು ಸುಭಾಷ್ ಚಂದ್ರ (ಎಸ್ಸೆಲ್ ಗ್ರೂಪ್). ಇವರು ಅಪಾಯದೊಂದಿಗೆ ಆಟವಾಡುವ ಚಾಳಿಯ ಶೋಕಿಲಾಲ ಕಪೂರ್ ಜೊತೆ ನಡೆಸಿದ ಗುಪ್ತ ವ್ಯವಹಾರಗಳ ಈಗ ತನಿಖಾ ಸಂಸ್ಥೆಗಳ ಭೂತಕನ್ನಡಿಯ ಅಡಿಯಲ್ಲಿವೆ. ಇವರು ಬ್ಯಾಂಕಿನ ಒಟ್ಟು 50,000 ಕೋಟಿ ರೂ.ಗಳ ಒತ್ತಡದ ಆಸ್ತಿಯಲ್ಲಿ 20,000 ಕೋಟಿ ರೂ.ಗಳ ಆಸ್ತಿಯನ್ನು ಪಡೆಯಲು ಈ ಮೂವರು ಕಪೂರ್‌ಗೆ ನೆರವಾದರು ಎಂದು ಬ್ಯಾಂಕಿನ ಕಾರ್ಪೊರೇಟ್ ಸಾಲಗಳ ಲೆಕ್ಕಪುಸ್ತಕವು ತೋರಿಸುತ್ತದೆ. ಇದಕ್ಕಾಗಿ ಕಪೂರ್ ವಂಚನೆಯ ಪ್ರತಿಯೊಂದು ಕೊಳಕು ತಂತ್ರಗಳನ್ನು ಬಳಸಿದ್ದಾರೆ- ರೌಂಡ್ ಟ್ರಿಪ್ಪಿಂಗ್ ಅಂದರೆ ಮಾಲಕರೇ ಅಥವಾ ಸಹವರ್ತಿಗಳು ಹೊಂದಿರುವ ಶೆಲ್ ಕಂಪನಿಗಳಿಗೆ ಅಂದರೆ ನಕಲಿ ಕಂಪನಿಗಳಿಗೆ ಸಾಲ ನೀಡುವುದು, ಕಪ್ಪು ಹಣ ಬಿಳಿ ಮಾಡುವುದು, ಒಳಗಿನ ಗುಟ್ಟು ಬೇರೆಯವರಿಗೆ ನೀಡಿ ಲಾಭ ಮಾಡುವುದು (ಇನ್‌ಸೈಡರ್ ಟ್ರೇಡಿಂಗ್), ಭ್ರಷ್ಟಾಚಾರ, ಸಾಂಸ್ಥಿಕ ದುರಾಡಳಿತ ಇತ್ಯಾದಿ.

ಈ ಬೇಜವಾಬ್ದಾರಿ ಬ್ಯಾಂಕ್ ಮಾಲಕ ಅಪಾಯಕಾರಿ ಅಟಗಳನ್ನು ವಿಸ್ತರಿಸಿ, ತಾನೊಬ್ಬ ಬಹುದೊಡ್ಡ ಸಾಲ ನೀಡಿಕೆದಾರ ಎಂದು ಎಂದು ಸಾಬೀತುಪಡಿಸುತ್ತಿರುವಾಗ ತಾನೊಂದು ಚತುರ ನಿಯಂತ್ರಕ ಸಂಸ್ಥೆ ಎಂಬ ರಿಸರ್ವ್ ಬ್ಯಾಂಕಿನ ಪ್ರತಿಷ್ಟೆ ನಡುಗಲು ಆ‌ರಂಭಿಸಿತು.

ಪ್ರಸ್ತುತ ನಡೆಯುತ್ತಿರುವ ತನಿಖೆಯು ಬ್ಯಾಂಕಿನ ಬಾಕಿ ಸಾಲಗಳು 2013-14ರಲ್ಲಿ 55,000 ಕೋಟಿ ರೂ.ಗಳಿದ್ದದ್ದು, 2018-19ರಲ್ಲಿ ಬಹುಪಟ್ಟು ಹೆಚ್ಚಳವಾಗಿ 2.4 ಕೋಟಿ ರೂ.ಗಳಿಗೆ ತಲಪಿದವು ಎಂಬುದನ್ನು ತೋರಿಸುತ್ತದೆ. ಇದು ಆರ್ಥಿಕ ಹಿಂಜರಿಕೆಯ ಹೊರತಾಗಿಯೂ ನಡೆದಿದೆ. ಬ್ಯಾಂಕಿನ ಬಾಕಿ ಸಾಲವು 2016-17ರಲ್ಲಿದ್ದ 1.3 ಲಕ್ಷ ಕೋಟಿಯಿಂದ ಎರಡೇ ವರ್ಷಗಳಲ್ಲಿ  80 ಶೇಕಡಾ ರಹಿತ ಕ್ಷೇತ್ರಗಳು ಎಂದರೆ, ಖಾಸಗಿ ನಿರ್ಮಾಣಗಾರರಿಗೆ, ಪ್ರವಾಸೋದ್ಯಮ, ಸೇವೆಗಳು, ವೈಯಕ್ತಿಕ ಸಾಲ ಇತ್ಯಾದಿಗಳಿಗೆ ನೀಡಿದ ಸಾಲ ಅಸಹಜವಾದ ಏರಿಕೆ ಕಂಡಿತು- ಅದೂ ಎಲ್ಲಾ ಭಾರತೀಯ ಕಂಪನಿಗಳು ನಿರಾಶರಾಗಿ 2018-19ರ ವಿಸ್ತರಣಾ ಯೋಜನೆಗ ಕಸದ ಬುಟ್ಟಿಗೆ ಎಸೆದಿರುವ ಸಂದರ್ಭದಲ್ಲಿ! ಇದೇ ಸಂದರ್ಭದಲ್ಲಿ ದುಡಿಯದ ಬಂಡವಾಳವೂ ಅಸಹಜವಾಗಿ ಏರಿಕೆ ಕಂಡಿದೆ. ತುರ್ತು ನಿಧಿಯು 2017-18ರಲ್ಲಿ 1,553.8 ಕೋಟಿ ರೂ. ಇದ್ದದ್ದು, 2018-19ರಲ್ಲಿ ಒಮ್ಮೆಲೇ 272 ಶೇಕಡಾ ಏರಿ 5,777.56 ಕೋಟಿಗೆ ತಲಪಿತು. ಅದೇ ಹೊತ್ತಿಗೆ ಲಾಭವು 2018-19ರ ವಾರ್ಷಿಕ ವರದಿಯಂತೆ 59 ಶೇಕಡಾ ಇಳಿದು 1,720.28 ಕೋಟಿ ರೂ.ಗಳಿಗೆ ತಲಪಿತು.

ಬ್ಯಾಂಕಿನ ಅಂದಾಜು ಅಪಾಯಕಾರಿ ಸಾಲವು 46,000 ಕೋಟಿ ರೂ.ಗಳಷ್ಟಿದೆ ಎಂದು ಜೆಪಿ ಮೋರ್ಗನ್ ಹೇಳಿದ್ದರೆ, ಕೆಲವು ಆರ್ಥಿಕ ತಜ್ಞರು 55,000 ಕೋಟಿ ರೂ. ಎಂದು ಹೇಳುತ್ತಿದ್ದಾರೆ. ಇವೆಲ್ಲವೂ ಕಳೆದ ನಾಲ್ಕೈದು ವರ್ಷಗಳಲ್ಲಿ ಉಂಟಾದವುಗಳು. ಅತ್ಯಂತ ಹೆಚ್ಚು ಸಾಲ ಪಡೆದ 20 ಖಾತೆಗಳ ಸಾಲವು ಒಂದು ವರ್ಷ ಹಿಂದೆ 48,435.4 ಕೋಟಿ ರೂ. ಇದ್ದದ್ದು ಮಾರ್ಚ್ 31, 2019ರಲ್ಲಿ 61,799.3 ಕೋಟಿ ರೂ.ಗಳಿಗೆ ಏರಿರುವುದು ಸಾಲ ನೀಡಿಕೆಯು ಕೆಲವೇ ಆಪ್ತರಿಗೆ ಸೀಮಿತಗೊಳ್ಳುತ್ತಿತ್ತು ಎಂಬುದನ್ನು ಸೂಚಿಸುತ್ತದೆ.

ಕಳೆದ 2-3 ವರ್ಷಗಳಿಂದ ಬಿಲಿಯಾಧಿಪತಿಗಳ ಏಣಿಯಿಂದ ಉರುಳುತ್ತಲೇ ಬಂದಿರುವ ಅನಿಲ್ ಅಂಬಾನಿ ಮತ್ತು ಈ ಬ್ಯಾಂಕಿನ ಜೊತೆ ಸಂಬಂಧ ಹೊಂದಿರುವ ಬಹುತೇಕ ಎಲ್ಲಾ ಉದ್ಯಮ ಸಂಸ್ಥೆಗಳು ಉರುಳುತ್ತಲೇ ಇರುವುದು ಬ್ಯಾಂಕಿನ ದುರ್ಗತಿಗೆ ಕಾರಣ. ಡಿಸೆಂಬರ್ 31, 2019ರ ಲೆಕ್ಕಾಚಾರದಂತೆ ಅನಿಲ್ ಅಂಬಾನಿಯ ಟೆಲಿಕಾಂ, ಮೂಲಸೌಕರ್ಯ, ನೌಕಾ ಮತ್ತು ವಿದ್ಯುತ್ ಕ್ಷೇತ್ರದ ಕಂಪನಿಗಳು ಯೆಸ್ ಬ್ಯಾಂಕಿಗೆ 43,800 ರೂ. ಮುಳುಗಿಸಿವೆ. ಇದರಲ್ಲಿ ಕಾಲು ಭಾಗ ಯೆಸ್ ಬ್ಯಾಂಕಿನಿಂದ ಪಡೆದುದಾಗಿದೆ. ಈ ಎಲ್ಲಾ ಕಂಪನಿಗಳು ಇಸ್ಪೀಟ್ ಎಲೆಗಳಂತೆ ಉರುಳಿದವು. ಹಣಕಾಸು ಒದಗಿಸುವವರು ಭಾರೀ ತಳಮಳಕ್ಕೆ ಒಳಗಾದರು.

ಯೆಸ್ ಬ್ಯಾಂಕ್ ಭಾರಿ ಪ್ರಮಾಣದಲ್ಲಿ ಶೇರುಗಳ ಅಡಮಾನಿನ ಆಧಾರದಲ್ಲಿ ಸಾಲಗಳನ್ನು ನೀಡಲು ಆರಂಭಿಸಿತು. ಇದು ಕಡಲ ತಡಿಯಲ್ಲಿ ನೆಟ್ಟಗೆ ನಿಂತಂತೆ. ಕಾಲಡಿಯ ಉಸುಕು ಅಥವಾ ಹೊಯ್ಗೆ ಕೊಚ್ಚಿಹೋಗಿ ಯಾವಾಗ ಉರುಳುವಿರೋ ಗೊತ್ತಾಗದು. ಅನಿಲ್ ಅಂಬಾನಿಯ ರಿಲಯನ್ಸ್ ಪವರ್ 685 ಕೋಟಿ ಕೋಟಿ ರೂ.ಗಳ ಸಾಲ ಬಾಕಿ ಇರಿಸಿ ಇದೇ ಅಡವು ಸಾಲದ ಮೇಲೆ ತನ್ನದೇ ಸಬ್ಸಿಡರಿ ಕಂಪನಿಯಾದ ರೋಸಾ ಪಲರ್ ಸಪ್ಲೈ ಕಂಪನಿಯಿಂದ 30 ಶೇಕಡಾ ಪಾಲುದಾರಿಕೆ ಖರೀದಿಸಿತು.

ಸುಬಾಷ್ ಚಂದ್ರ ಅವರ ಎಸ್ಸೆಲ್ ಗ್ರೂಪ್ ಅದೇ ರೀತಿಯಲ್ಲಿ 3,330 ಕೋಟಿ ರೂ.ಗಳ ಧೋಕಾ ಮಾಡಿತು. ಈ ರೀತಿಯಲ್ಲಿ 20 ದೊಡ್ಡ ಸಾಲಗಾರ ಕುಳಗಳು ಬ್ಯಾಂಕಿನ ಮಾಲಕರ ಸಹಕಾರದ ಮೂಲಕವೇ ಸಾವಿರಾರು ಕೋಟಿ ಸಾಲ ಮಾಡಿ ಮುಳುಗಿಸಿದ್ದಾರೆ. ಠೇವಣಿದಾರರ ಹಣ ಮತ್ತು ನಂಬಿಕೆ ಮುಳುಗಿಸಿದ್ದಾರೆ. ಇದು ಸರಕಾರ ಜನರಿಗೆ ಒದಗಿಸುತ್ತಿರುವ ಆರ್ಥಿಕ ಭದ್ರತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...