Homeಮುಖಪುಟಉಬರ್ ಆಪ್ ಬಳಸಿ 800ಕ್ಕೂ ಅಧಿಕ ಜನರ ಕಳ್ಳಸಾಗಣೆ: ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಶಿಕ್ಷೆ

ಉಬರ್ ಆಪ್ ಬಳಸಿ 800ಕ್ಕೂ ಅಧಿಕ ಜನರ ಕಳ್ಳಸಾಗಣೆ: ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಶಿಕ್ಷೆ

- Advertisement -
- Advertisement -

ಉಬರ್ ಆಪ್ ಬಳಸಿಕೊಂಡು 800ಕ್ಕೂ ಅಧಿಕ ಭಾರತೀಯ ಪ್ರಜೆಗಳನ್ನು ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಭಾರತ ಮೂಲದ ಕ್ಯಾಲಿಫೋರ್ನಿಯಾ ನಿವಾಸಿ ರಾಜಿಂದರ್ ಪಾಲ್ ಸಿಂಗ್ ಎಂಬಾತನಿಗೆ ಅಮೆರಿಕ ಜಿಲ್ಲಾ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ರಾಜಿಂದರ್ ಪಾಲ್ ಸಿಂಗ್ ಅಲಿಯಾಸ್ ಜಸ್ಪಾಲ್ ಗಿಲ್ ಎಂಬಾತ ಫೆಬ್ರವರಿಯಲ್ಲಿ ತನ್ನ ತಪ್ಪು ಒಪ್ಪಿಕೊಂಡಿದ್ದನು.ಅವರು ನೂರಾರು ಭಾರತೀಯ ಪ್ರಜೆಗಳಿಗೆ ಕೆನಡಾದಿಂದ ಗಡಿ ದಾಟಲು ಸಹಾಯ ಮಾಡಿದ್ದ, ಈ ಸಮಯದಲ್ಲಿ ನಾಗರಿಕರಿಂದ 500,000 ಯುಎಸ್​ ಡಾಲರ್​ಗಿಂತ ಹೆಚ್ಚು ತೆಗೆದುಕೊಂಡಿದ್ದರು ಎನ್ನಲಾಗಿದೆ.

ಭಾರತದಿಂದ ಅಮೇರಿಕಾಕ್ಕೆ ಸಾಗುವ ಕಳ್ಳಸಾಗಾಣಿಕೆ ಮಾರ್ಗದ ಮೂಲಕ ದೇಶಕ್ಕೆ ಮಾತ್ರವಲ್ಲದೆ ಜನರ ಸುರಕ್ಷತೆಗೂ ಅಪಾಯವಿದೆ ಎಂದು ಹಂಗಾಮಿ ಅಟಾರ್ನಿ ಟೆಸ್ಸಾ ಎಂ ಗಾರ್ಮನ್ ಹೇಳಿದ್ದಾರೆ.

ಕ್ಯಾಲಿಫೋರ್ನಿಯಾ ನಿವಾಸಿಯಾಗಿರುವ ಸಿಂಗ್‌ಗೆ ಅಮೆರಿಕ ಜಿಲ್ಲಾ ನ್ಯಾಯಾಲಯವೊಂದು ಲಾಭಕ್ಕಾಗಿ ಹಾಗೂ ಅಕ್ರಮ ಹಣ ವರ್ಗಾವಣೆ ಎಸಗುವ ಸಂಚಿಗಾಗಿ 45 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

”ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ರಾಜಿಂದರ್ ಪಾಲ್ ಸಿಂಗ್ 800ಕ್ಕೂ ಅಧಿಕ ಜನರನ್ನು ಅಮೆರಿಕದ ಉತ್ತರ ಗಡಿಯೊಳಗೆ ಹಾಗೂ ವಾಷಿಂಗ್ಟನ್‌ ಒಳಗೆ ಕಳ್ಳಸಾಗಣೆ ಮಾಡಿದ್ದಾನೆ” ಎಂದು ಗಾರ್ಮನ್ ಹೇಳಿದ್ದಾರೆ.

”ಸಿಂಗ್ ಎಸಗಿದ ಕೃತ್ಯವು ಅಮೆರಿಕಕ್ಕೆ ಭದ್ರತಾ ಅಪಾಯ ಉಂಟು ಮಾಡಿರುವುದು ಮಾತ್ರವಲ್ಲದೆ, ಭಾರತದಿಂದ ಅಮೆರಿಕಕ್ಕೆ ಹಲವು ವಾರಗಳ ಕಳ್ಳಸಾಗಣೆ ಮಾರ್ಗದಲ್ಲಿ ಬರುವವರ ಭದ್ರತೆ ಹಾಗೂ ಸುರಕ್ಷತೆಗೆ ಕೂಡ ಅಪಾಯಕಾರಿಯಾಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.

”ಅಮೆರಿಕದಲ್ಲಿ ಉತ್ತಮ ಜೀವನ ಕಂಡುಕೊಳ್ಳುವ ಆಶಯವಿರುವ ಭಾರತದ ಪ್ರಜೆಗಳ ಮೇಲೆ ಸಂಚು ನಡೆಸಿ ಅವರಿಂದ ಸುಮಾರು 70,000 ಅಮೆರಿಕನ್ ಡಾಲರ್ ವಸೂಲಿ ಮಾಡಿಕೊಂಡು ಕಳ್ಳಸಾಗಣೆ ಮಾಡುವುದರಲ್ಲಿ ಸಿಂಗ್ ಭಾಗಿಯಾಗಿದ್ದಾನೆ” ಎಂದು ಹೇಳಿದ್ದಾರೆ.

ಸಿಯಾಟಲ್ ಪ್ರದೇಶದಲ್ಲಿ ಅಕ್ರಮವಾಗಿ ಗಡಿ ದಾಟುವ ಜನರಿಗೆ ಉಬರ್ ಬಳಸಲಾಗಿದೆ. 2018 ಮತ್ತು 2022 ರ ನಡುವೆ, ಸಿಂಗ್ 600 ಜನರನ್ನು ಕಳ್ಳಸಾಗಣೆ ಮಾಡಿದ್ದನು. ಆರೋಪಿಯ ನಿವಾಸದಿಂದ USD 45,000 ಮತ್ತು ಕೆಲವು ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖಾ ತಂಡಗಳ ಅಂದಾಜಿನ ಪ್ರಕಾರ, 2018ರ ಜುಲೈನಿಂದ 2022ರ ಏಪ್ರಿಲ್‌ ನಡುವೆ ಈ ಕಳ್ಳಸಾಗಣೆ ಕೃತ್ಯದಲ್ಲಿ ಭಾಗಿಯಾದ 17 ಉಬರ್ ಖಾತೆಗಳು 80,000 ಡಾಲರ್‌ಗೂ ಅಧಿಕ ಹಣ ವಸೂಲಿ ಮಾಡಿವೆ.  ರಾಜಿಂದರ್ ಸಿಂಗ್ ಕೂಡ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದು, ಜೈಲು ಶಿಕ್ಷೆ ಮುಗಿದ ಬಳಿಕ ಅವರನ್ನು ಗಡಿಪಾರು ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಉಬರ್ ವಾಹನದ ಮೂಲಕ ಸಾಗಣೆ

ಸಿಂಗ್‌ನ ಹಿಂಬಾಲಕರು ಕೆನಡಾ ಮೂಲಕ ಕಳ್ಳಮಾರ್ಗದಿಂದ ಅಮೆರಿಕ ಗಡಿಯೊಳಗೆ ಬಂದ ಭಾರತೀಯ ಪ್ರಜೆಗಳನ್ನು ಗಡಿಯಿಂದ ವಾಷಿಂಗ್ಟನ್ ಹೊರಗೆ ಸಾಗಿಸಲು ಒನ್ ವೇ ಪ್ರಯಾಣಕ್ಕಾಗಿ ವಾಹನಗಳನ್ನು ಬಾಡಿಗೆಗೆ ಪಡೆಯುತ್ತಿದ್ದರು. ಈ ಚಟುವಟಿಕೆಗಳು ಗಡಿ ಭಾಗದಲ್ಲಿ ನಸುಕಿನಲ್ಲಿ ಶುರುವಾಗುತ್ತಿತ್ತು. ಕಳ್ಳಸಾಗಣೆಯನ್ನು ಎರಡು ವಿಭಿನ್ನ ಪ್ರಯಾಣಗಳ ಮೂಲಕ ನಡೆಸಲಾಗುತ್ತಿತ್ತು. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ, ದೊಡ್ಡ ವ್ಯಕ್ತಿಗಳ ಸೋಗಿನಲ್ಲಿ ಆತನ ಸಹಚರರು ಕಳ್ಳಸಾಗಣೆ ಕೃತ್ಯ ನಡೆಸುತ್ತಿದ್ದರು. ಸಿಂಗ್ ಬಳಿ 45,000 ಡಾಲರ್ ನಗದು ಹಾಗೂ ನಕಲಿ ಗುರುತು ದಾಖಲೆ ಪತ್ರಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೋದಿಗೆ ಪ್ರಶ್ನೆ ಮಾಡಿದ್ದ ಪತ್ರಕರ್ತೆಗೆ ಹಿಂದುತ್ವವಾದಿಗಳಿಂದ ನಿಂದನೆ; ಅಮೆರಿಕ ಶ್ವೇತಭವನದಿಂದ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನಾಡಾ’ದಿಂದ ಕುಸ್ತಿಪಟು ಬಜರಂಗ್ ಪುನಿಯಾ ಅಮಾನತು: ವರದಿ

0
ಡೋಪಿಂಗ್ ಪರೀಕ್ಷೆ (ಮಾದಕವಸ್ತು ಪತ್ತೆ ಪರೀಕ್ಷೆ)ಗೆ ಸರಿಯಾದ ಸಮಯಕ್ಕೆ ಮೂತ್ರದ ಮಾದರಿಯನ್ನು ನೀಡದ ಆರೋಪದ ಮೇಲೆ ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ...