Homeಮುಖಪುಟಪೆಟ್ರೋಲ್ 200 ರೂ.ಗೆ ಏರಿದಾಗ ಟ್ರಿಪಲ್ ರೈಡಿಂಗ್‌ಗೆ ಅವಕಾಶ: ಅಸ್ಸಾಂ ಬಿಜೆಪಿ ಮುಖ್ಯಸ್ಥನ ವಿಚಿತ್ರ ಹೇಳಿಕೆ

ಪೆಟ್ರೋಲ್ 200 ರೂ.ಗೆ ಏರಿದಾಗ ಟ್ರಿಪಲ್ ರೈಡಿಂಗ್‌ಗೆ ಅವಕಾಶ: ಅಸ್ಸಾಂ ಬಿಜೆಪಿ ಮುಖ್ಯಸ್ಥನ ವಿಚಿತ್ರ ಹೇಳಿಕೆ

- Advertisement -
- Advertisement -

ಅಸ್ಸಾಂ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 200 ರೂಪಾಯಿಗೆಗೆ ಏರಿದಾಗ ದ್ವಿಚಕ್ರ ವಾಹನಗಳಲ್ಲಿ ಟ್ರಿಪಲ್ ರೈಡಿಂಗ್‌ಗೆ ಅವಕಾಶ ನೀಡಲಾಗುವುದು ಎಂದು ಅಸ್ಸಾಂ ಬಿಜೆಪಿ ಮುಖ್ಯಸ್ಥ ಭಾಬೇಶ್ ಕಲಿತಾ ಮಂಗಳವಾರ ವಿಚಿತ್ರ ಹೇಳಿಕೆ ನೀಡಿದ್ದಾರೆ.

“ರಾಜ್ಯದಲ್ಲಿ ಪೆಟ್ರೋಲ್ ಬೆಲೆ ರೂ. 200 ಕ್ಕೆ ಏರಿಕೆಯಾದ ನಂತರ ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿ ಮಾಡಲು ಅವಕಾಶ ನೀಡಲಾಗುವುದು. ಆದರೆ, ಸರ್ಕಾರದಿಂದ ಅದಕ್ಕೆ ಅನುಮತಿ ಪಡೆಯಬೇಕು” ಎಂದು ಸ್ಥಳೀಯ ಮಾಧ್ಯಮಗಳಿಗೆ ಭಾಬೇಶ್ ಕಲಿತಾ ಹೇಳಿದ್ದಾರೆ.

ಅಸ್ಸಾಂನ ತಾಮುಲ್ಪುರದಲ್ಲಿ ನಡೆದ ಸಮಾರಂಭದಲ್ಲಿ ಈ ವಿಚಿತ್ರವಾದ ಹೇಳಿಕೆಯನ್ನು ನೀಡಿದ್ದು, ಮಾಜಿ ಸಚಿವರಾಗಿದ್ದ ಭಾಬೇಶ್ ಕಲಿತಾ, ಈ ವರ್ಷದ ಜೂನ್‌ನಲ್ಲಿ ಅಸ್ಸಾಂ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ‘ಪೆಟ್ರೋಲ್ ಬೆಲೆ ಹೆಚ್ಚುತ್ತಿದೆ’ ಎಂದರೆ ಅಫ್ಘಾನ್‌ಗೆ ಹೋಗಿ ಎಂದ ಬಿಜೆಪಿ ನಾಯಕ!

ಪೆಟ್ರೋಲ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನರು ವಾಹನಗಳನ್ನು ರೋಡಿಗಿಳಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಮಯದಲ್ಲಿ ಬಿಜೆಪಿ ಮುಖ್ಯಸ್ಥರ ಹೇಳಿಕೆ ರಾಜ್ಯದಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

ಟ್ರಿಪಲ್ ರೈಡಿಂಗ್‌ಗೆ ಅವಕಾಶ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ಆಡಳಿತಾರೂಢ ಬಿಜೆಪಿಯ ಅಧ್ಯಕ್ಷರಾದ ಭಾಬೇಶ್ ಕಲಿತಾ ಇಂತಹ ವಿಲಕ್ಷಣವಾದ ಹೇಳಿಕೆಯನ್ನು ನೀಡುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಅವರು ಈ ಹೇಳಿಕೆಯನ್ನು ತಮಾಷೆಗಾಗಿ ಹೇಳಿದ್ದಾರೋ ಅಥವಾ ನಿಜವಾಗಿಯೂ ಗಂಭೀರವಾಗಿ ಹೇಳಿದ್ದಾರೋ?” ಎಂದು ಅಸ್ಸಾಂ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಅಧ್ಯಕ್ಷರಾದ ಬೊಬೀತಾ ಶರ್ಮಾ ಪ್ರಶ್ನಿಸಿದ್ದಾರೆ.

“ಅವರ ಹೇಳಿಕೆಗೆ ಕಾರಣ ಏನಾದರೂ ಇರಲಿ, ಇಂಧನ ಬೆಲೆ ಏರಿಕೆಯ ಬಗ್ಗೆ ಅವರು ಇಂತಹ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿರುವುದು ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಂಕಷ್ಟ ಎದುರಿಸುತ್ತಿರುವ ಸಾಮಾನ್ಯ ಜನರ ಬಗೆಗಿನ ಅಗೌರವ ಮತ್ತು ಅಸೂಕ್ಷ್ಮತೆಯನ್ನು ವ್ಯಕ್ತಪಡಿಸುತ್ತದೆ” ಎಂದು ಶರ್ಮಾ ಕಿಡಿಕಾರಿದ್ದಾರೆ.

ಅಸ್ಸಾಂನ ಗುವಾಹಟಿಯಲ್ಲಿ ಮಂಗಳವಾರ ಪೆಟ್ರೋಲ್ ಬೆಲೆ 101.80 ರೂಪಾಯಿ ಮತ್ತು ಡೀಸೆಲ್ 94.27 ರೂಪಾಯಿಯಾಗಿದೆ.


ಇದನ್ನೂ ಓದಿ: ಪೆಟ್ರೋಲ್ ದರ ಹೆಚ್ಚಳಕ್ಕೆ ಆಯಿಲ್ ಬಾಂಡ್ ಕಾರಣ? – BJP ನಾಯಕರ ಹೇಳಿಕೆಯ ನಿಜಾಂಶವೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...