Homeಮುಖಪುಟಉತ್ತರಾಖಂಡ: 'ಲವ್ ಜಿಹಾದ್' ಆರೋಪದ ಮೇಲೆ ಬಲವಂತವಾಗಿ ಸಲೂನ್ ಮುಚ್ಚಿಸಿದ ಹಿಂದುತ್ವ ಗುಂಪು

ಉತ್ತರಾಖಂಡ: ‘ಲವ್ ಜಿಹಾದ್’ ಆರೋಪದ ಮೇಲೆ ಬಲವಂತವಾಗಿ ಸಲೂನ್ ಮುಚ್ಚಿಸಿದ ಹಿಂದುತ್ವ ಗುಂಪು

- Advertisement -
- Advertisement -

ಉತ್ತರಾಖಂಡದ ಋಷಿಕೇಶದಲ್ಲಿ ಮುಸ್ಲಿಂ ಒಡೆತನದ ಯೂನಿಸೆಕ್ಸ್ ಸಲೂನ್ ಅನ್ನು ‘ಅನೈತಿಕ ಚಟುವಟಿಕೆಯ ಕೇಂದ್ರ’ ಎಂದು ಹಿಂದುತ್ವ ಸಂಘಟನೆ ಗುಂಪೊಂದು ಆರೋಪಿಸಿದ ನಂತರ ಅದನ್ನು ಬಲವಂತವಾಗಿ ಮುಚ್ಚಲಾಯಿತು.

ಸೆಪ್ಟೆಂಬರ್ 30 ರ ಗುರುವಾರ ತಿಲಕ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಬಲಪಂಥೀಯ ಸದಸ್ಯರು ಕೋಮು ಘೋಷಣೆಗಳನ್ನು ಕೂಗಿ, ರಾಜ್ಯಾದ್ಯಂತ ಎಲ್ಲ ಯೂನಿಸೆಕ್ಸ್ ಸಲೂನ್‌ಗಳನ್ನು ಮುಚ್ಚಬೇಕೆಂದು ಒತ್ತಾಯಿಸಿದರು.

ಅದರ ಅಧ್ಯಕ್ಷ ರಾಘವೇಂದ್ರ ಭಟನಾಗರ್, ಮುಸ್ಲಿಂ ಕ್ಷೌರಿಕರು ‘ಲವ್ ಜಿಹಾದ್’ ಮಾಡುತ್ತಿದ್ದಾರೆ. ಅವರು ಹಿಂದೂ ಮಹಿಳೆಯರನ್ನು ಆಮಿಷವೊಡ್ಡುತ್ತಾರೆ, ಅವರನ್ನು ಇಸ್ಲಾಂಗೆ ಮತಾಂತರಗೊಳಿಸುತ್ತಾರೆ” ಎಂದು ಆರೋಪಿ.

“ಒಂದು ನಿರ್ದಿಷ್ಟ ಸಮುದಾಯದ ಹುಡುಗರು ಈ ಸಲೂನ್‌ಗಳ ಹಿಂದೂ ಗ್ರಾಹಕರ ಫೋನ್ ಸಂಖ್ಯೆಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಅವರನ್ನು ಬ್ರೈನ್ ವಾಶ್ ಮಾಡುತ್ತಾರೆ, ಜಿಹಾದಿ ಮಾತಿನಿಂದ ಬಲೆಗೆ ಬೀಳಿಸುತ್ತಾರೆ. ಅವರೊಂದಿಗೆ ಓಡಿಹೋಗುತ್ತಾರೆ. ಇದು ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಗೆ ಅಪಾಯಕಾರಿ” ಎಂದು ಅವರು ಹೇಳಿದರು.

“ಲವ್ ಜಿಹಾದ್ ಎಂಬುದು ಒಂದು ಪಿತೂರಿ ಸಿದ್ಧಾಂತವಾಗಿದ್ದು, ಮುಸ್ಲಿಂ ಪುರುಷರು ಇಸ್ಲಾಮೀಕರಣ ಯೋಜನೆಯ ಭಾಗವಾಗಿ ಮುಸ್ಲಿಮೇತರ ಮಹಿಳೆಯರನ್ನು ಮದುವೆಯಾಗಲು, ಮತಾಂತರಿಸಲು ಉದ್ದೇಶಪೂರ್ವಕವಾಗಿ ಮತ್ತು ಕಾರ್ಯತಂತ್ರದಿಂದ ಆಕರ್ಷಿಸುತ್ತಿದ್ದಾರೆ” ಎಂದು ಆರೋಪಿಸುತ್ತಾರೆ.

ಸಲೂನ್ ಕೆಲಸಗಾರರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರೆ, ಹಿಂದೂ ಮಹಿಳೆಯರನ್ನು ಸಹಾಯಕರಾಗಿ ಏಕೆ ನೇಮಿಸಲಾಗಿತ್ತು ಎಂದು ಅವರು ಪ್ರಶ್ನಿಸಿದರು. “ಅವರು ತಮ್ಮ ಸ್ವಂತ ಕುಟುಂಬಗಳ ಮಹಿಳೆಯರನ್ನು ಏಕೆ ನೇಮಿಸಿಕೊಳ್ಳುವುದಿಲ್ಲ? ನಮ್ಮ ಹೆಣ್ಣುಮಕ್ಕಳನ್ನು ಮಾತ್ರ ಇದರಲ್ಲಿ ಏಕೆ ಎಳೆಯಲಾಗುತ್ತಿದೆ” ಎಂದು ಅವರು ಪ್ರಶ್ನಿಸಿದರು, ಸಲೂನ್‌ಗಳು ತಮ್ಮ ವ್ಯವಹಾರವನ್ನು ಮುಂದುವರಿಸಿದರೆ ಬೀದಿಗಳಲ್ಲಿ ದೊಡ್ಡ ಚಳುವಳಿ ನಡೆಯುವ ಬಗ್ಗೆ ಎಚ್ಚರಿಸಿದರು.

ಸ್ಥಳೀಯ ಕ್ಷೌರಿಕರ ಸಂಘವು ಹಿಂದೂ ಶಕ್ತಿ ಸಂಘಟನೆಯ ಬೇಡಿಕೆಗಳಿಗೆ ಬೆಂಬಲ ನೀಡಿದ್ದು, ಯುನಿಸೆಕ್ಸ್ ಸಲೂನ್‌ಗಳು ಅಸ್ತಿತ್ವದಲ್ಲಿರಬಾರದು ಎಂದು ಹೇಳಿದೆ.

ಘಟನೆ ಬಗ್ಗೆ ಮುಸ್ಲಿಮರು ಭಯ ಮತ್ತು ಕೋಪ ವ್ಯಕ್ತಪಡಿಸಿದ್ದು, ಒಂದು ದಿನ ಚಹಾ ಮಾರಾಟ ಮಾಡುವುದನ್ನು ಸಹ ‘ಲವ್ ಜಿಹಾದ್’ ಎಂದು ಕರೆಯಲಾಗುತ್ತದೆ ಎಂದು ಒಬ್ಬರು ಹೇಳಿದ್ದಾರೆ.

“ಇದು ಮುಸ್ಲಿಂ ಅಸ್ತಿತ್ವದ ಮೇಲೆ ಯೋಜಿತ ದಾಳಿ. ಮುಸ್ಲಿಮರ ಜೀವನ ನಿರ್ವಹಣೆಯ ಪ್ರತಿಯೊಂದು ಮಾರ್ಗವನ್ನು ಹತ್ತಿಕ್ಕಲು ಬಯಸುತ್ತಾರೆ, ಇದರಿಂದ ನಾವು ಗುಲಾಮರಂತೆ ಆಗುತ್ತೇವೆ ಅಥವಾ ಬದುಕುತ್ತೇವೆ. ಸರ್ಕಾರವು ಈ ದ್ವೇಷವನ್ನು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಿಲ್ಲವಾದರೂ ಮೌನವಾಗಿ ನೋಡುತ್ತಿದೆ” ಎಂದು ಡೆಹ್ರಾಡೂನ್ ಮೂಲದ ಮುಸ್ಲಿಂ ಹಕ್ಕುಗಳ ಕಾರ್ಯಕರ್ತ ಹೇಳಿದರು.

ಇದು ಮೊದಲ ನಿದರ್ಶನವಲ್ಲ, ಇತ್ತೀಚೆಗೆ, ಉತ್ತರಾಖಂಡದಾದ್ಯಂತ ಯುನಿಸೆಕ್ಸ್ ಸಲೂನ್‌ಗಳನ್ನು ಹೊಂದಿರುವ ಅನೇಕ ಮುಸ್ಲಿಂ ಕ್ಷೌರಿಕರು ಬಲಪಂಥೀಯ ಸಂಘಟನೆಗಳ ದಾಳಿಗೆ ಗುರಿಯಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ ವೈದ್ಯರು; ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...