Homeಮುಖಪುಟನಿಮ್ಮನ್ನು ಸಂಹಾರ ಮಾಡುತ್ತೀವಿ: ಎಚ್‌ಡಿಕೆ, ಅಮೀನ್‌ ಮಟ್ಟು, ಪ್ರಕಾಶ್‌ರಾಜ್‌ ಹೆಸರನ್ನೊಳಗೊಂಡ ನಿಜಗುಣಾನಂದ ಸ್ವಾಮಿಗಳಿಗೆ ಬಂದ ಬೆದರಿಕೆ...

ನಿಮ್ಮನ್ನು ಸಂಹಾರ ಮಾಡುತ್ತೀವಿ: ಎಚ್‌ಡಿಕೆ, ಅಮೀನ್‌ ಮಟ್ಟು, ಪ್ರಕಾಶ್‌ರಾಜ್‌ ಹೆಸರನ್ನೊಳಗೊಂಡ ನಿಜಗುಣಾನಂದ ಸ್ವಾಮಿಗಳಿಗೆ ಬಂದ ಬೆದರಿಕೆ ಪತ್ರ..

ದಾವಣಗೆರೆಯಿಂದ ಈ ಅನಾಮಧೇಯ ಪೋಸ್ಟ್‌ ಬಂದಿದ್ದು, ನಿಜಗುಣಾನಂದ ಸ್ವಾಮಿಗಳು ಕೂಡಲೇ ಜೇವರ್ಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

- Advertisement -
- Advertisement -

ನಿಜಗುಣಾನಂದ ಸ್ವಾಮಿಗಳೆ, ನಿಮ್ಮನ್ನು ಮತ್ತು ನಿಮ್ಮ ಜೊತೆ ಇರುವ ಧರ್ಮದ್ರೋಹಿಗಳನ್ನು, ದೇಶದ್ರೋಹಿಗಳನ್ನು 2020ರ, ಜನವರಿ 29 ಸಂಹಾರ ಮಾಡುತ್ತೇವೆ ಎಂಬ 15ಜನರ ಹೆಸರುಗಳ ಪಟ್ಟಿ ಇರುವ ಬೆದರಿಕೆ ಪತ್ರವೊಂದನ್ನು ನಿಜಗುಣಾನಂದ ಸ್ವಾಮಿಗಳಿಗೆ ಕಳಿಸಲಾಗಿದೆ.

ಈ ಕುರಿತು ಲೇಖಕ, ಚಿಂತಕ ಯೋಗೇಶ್‌ ಮಾಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ಆ ಪತ್ರವನ್ನು ಹಂಚಿಕೊಂಡಿದ್ದು ಅದರಲ್ಲಿ “ನಿಮ್ಮಗಳ ಸಂಹಾರಕ್ಕೆ ಮುಹೂರ್ತ ನಿಶ್ಚಯವಾಗಿದೆ. ನಿಮ್ಮ ಅಂತಿಮ ಯಾತ್ರೆಗೆ ಸಿದ್ದರಾಗಿ. ನಿಮ್ಮನ್ನು ಮಾತ್ರವಲ್ಲ, ಮುಂದೆ ನೋಡಿ ನಿಮ್ಮ ಜೊತೆ ಅಂತಿಮ ಯಾತ್ರೆಗೆ ಇವರುಗಳನ್ನು ನೀವು ಸಿದ್ದ ಮಾಡಬೇಕು” ಎಂದು 15 ಜನರನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದಾವಣಗೆರೆಯಿಂದ ಈ ಅನಾಮಧೇಯ ಪೋಸ್ಟ್‌ ಬಂದಿದ್ದು, ನಿಜಗುಣಾನಂದ ಸ್ವಾಮಿಗಳು ಕೂಡಲೇ ಜೇವರ್ಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪತ್ರದಲ್ಲಿ ಭಜರಂಗದಳದ ಮಾಜಿ ನಾಯಕರಾದ ಮಹೇಂದ್ರ ಕುಮಾರ್‌, ನಿಜಗುಣಾನಂದ ಸ್ವಾಮಿಗಳು, ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮಿ, ಚಿತ್ರನಟ ಪ್ರಕಾಶ್‌ ರಾಜ್‌, ಜ್ಞಾನಪ್ರಕಾಶ್‌ ಸ್ವಾಮಿ, ನಟ ಚೇತನ್‌, ಹಿರಿಯ ಲೇಖಕಿ ಬಿ.ಟಿ ಲಲಿತಾನಾಯಕ್‌, ಪ್ರೊ.ಮಹೇಶ್‌ ಚಂದ್ರ ಗುರು, ಪ್ರೊ ಕೆ.ಎಸ್‌ ಭಗವಾನ್‌, ಹಿರಿಯ ಪತ್ರಕರ್ತರಾದ ದಿನೇಶ್‌ ಅಮೀನ್‌ ಮಟ್ಟು, ಹಿರಿಯ ಸಾಹಿತಿ ಚಂಪಾ, ಲೇಖಕರಾದ ಯೋಗೇಶ್‌ ಮಾಸ್ಟರ್‌(ಢುಂಡಿ ಗಣೇಶ್‌), ಅಗ್ನಿ ಶ್ರೀಧರ್‌, ಸಿಪಿಎಂ ನಾಯಕಿ ಬೃಂದಾ ಕಾರಟ್‌ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿಯವರು ಹೆಸರನ್ನು ಸೂಚಿಸಿ ಇಷ್ಟು ಜನರನ್ನು ಸಂಹಾರ ಮಾಡುತ್ತೀವಿ ಎಂದು ಬರೆಯಲಾಗಿದೆ.

ಕೈಬರಹದಲ್ಲಿ ಪತ್ರ ಬರೆಯಲಾಗಿದ್ದು ಸಾಕಷ್ಟು ಅಕ್ಷರದೋಷ, ಕಾಗುಣಿತ ದೋಷಗಳಿವೆ. ಪತ್ರವನ್ನು ನಿಜಗುಣಾನಂದ ಸ್ವಾಮಿಗಳಿಗೆ ಬರೆಯಲಾಗಿದೆ.

ಈ ಕುರಿತು ಲೇಖಕರಾದ ಯೋಗೇಶ್‌ ಮಾಸ್ಟರ್‌ ನಾನುಗೌರಿ.ಕಾಂನೊಂದಿಗೆ ಮಾತನಾಡಿ, “ಮೊನ್ನೆ ತಾನೇ ಆದಿತ್ಯ ರಾ‌ವ್‌ ಎಂಬ ವ್ಯಕ್ತಿ ಬಾಂಬ್‌ ಇಟ್ಟು ಸಿಕ್ಕಿಬಿದ್ದಿದ್ದಾನೆ. ಇಂದು ಈ ಪತ್ರ ಬಂದಿದೆ ಅಂದರೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಬಲಪಂಥೀಯ ಶಕ್ತಿಗಳು ಯಾವ ಮಟ್ಟಕ್ಕೆ ಹೆದರಿದ್ದಾರೆ ಎಂದು ತಿಳಿಯುತ್ತದೆ. ಬಲಪಂಥೀಯ ನಾಯಕರಾಡುವ ಹಿಂಸಾತ್ಮಕ ಮಾತುಗಳಿಗೆ ಇಂತಹ ಬ್ರೈನ್‌ ವಾಶ್‌ ಆದವರು ಬಲಿಯಾಗಿ ಈ ರೀತಿಯ ಪತ್ರ ಬರೆಯುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿಯವರನ್ನು ಪಟ್ಟಿಗೆ ಸೇರಿಸಿದ್ದಾರೆಂದರೆ ಅವರ ಅಸಹನೆ ಪ್ರಮಾಣ ಊಹಿಸಿ” ಎಂದು ಹೇಳಿದ್ದಾರೆ.

ಪಟ್ಟಿಯಲ್ಲಿರುವ ಬಹುತೇಕ ಹೆಸರುಗಳು ಪ್ರಗತಿಪರ ಜನಪರ ನಾಯಕರಾಗಿದ್ದಾರೆ. ಅದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಿಎಎ, ಎನ್‌ಆರ್‌ಸಿ ವಿರುದ್ಧ ಮತ್ತು ಬಿಜೆಪಿಯ ವಿರುದ್ಧ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ.ಕೆ ಏರುದನಿಯಲ್ಲಿ ಮಾತನಾಡುತ್ತಿದ್ದಾರೆ. ಅದಕ್ಕಾಗಿಯೇ ಅವರನ್ನು ಸಹ ಪಟ್ಟಿಯಲ್ಲಿ ಸೇರಿಸಲಾಗಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಸುಮ್ಮನೆ ಬೆದರಿಕೆಗೇಂದೇ ಪತ್ರ ಬರೆದಿದ್ದರೂ ಸಹ ಇದನ್ನು ನಿರ್ಲಕ್ಷಿಸದೇ ಪೊಲೀಸರು ಕಾರ್ಯಪ್ರವೃತ್ತರಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. ಬೆದರಿಕೆ ಹಾಕಿರುವವರನ್ನು ಈ ಕೂಡಲೇ ಬಂಧಿಸಿ, ನ್ಯಾಯಾಂಗದ ವಶಕ್ಕೆ ಒಪ್ಪಿಸಬೇಕು.

  2. ಈ ಧರ್ಮದ ನಶೆ ಏರಿಸಿಕೊಂಡು ಕೊಲ್ಲುವಷ್ಟು ಧೈರ್ಯ ಮಾಡಿರುವ ಕೀಚಕರು ವಧೆ ಮಾಡುವವರು ಯಾರೂ ಇಲ್ಲವೇ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...