Homeಅಂಕಣಗಳುಮೂರು ದಿನವೂ ಉಳಿಯದ ’ವಿರಳ’ ಪತ್ರಿಕಾ ಗೋಷ್ಠಿಯ ಎತ್ತರದ ಪ್ರತಿಪಾದನೆಗಳು!

ಮೂರು ದಿನವೂ ಉಳಿಯದ ’ವಿರಳ’ ಪತ್ರಿಕಾ ಗೋಷ್ಠಿಯ ಎತ್ತರದ ಪ್ರತಿಪಾದನೆಗಳು!

- Advertisement -
- Advertisement -

ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗಳಾಗಲಿ, ಸಂಸತ್ ಭವನದಲ್ಲಿ ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳಾಗಲೀ, ಅವಕ್ಕೆ ನೀಡುವ ಪ್ರತಿಕ್ರಿಯೆ ವಸನಿಷ್ಠ ಉತ್ತರಗಳಾಗಿರದೆ, ಅದು ಮುಂದೆ ಚುನಾವಣಾ ರ್‍ಯಾಲಿಗಳಲ್ಲಿ ಮಾಡುವ ಭಾಷಣದ ಪೂರ್ವತಯ್ಯಾರಿ ಆಗಿರಲಿದೆ ಎಂಬ ಆಪಾದನೆಯನ್ನು ಮಾನ್ಯ ಪ್ರಧಾನಮಂತ್ರಿಗಳು ಸಾಬೀತುಮಾಡಿಕೊಂಡೇ ಬಂದಿದ್ದಾರೆ. ಅತಿ ಹೆಚ್ಚು ಪ್ರಚಾರ ಮಾಡಲಾಗಿದ್ದ ಪ್ರಧಾನಿ ಅವರ ಯುಎಸ್‌ಎ ಪ್ರವಾಸದ ಕಾರ್ಯಕಲಾಪಗಳಲ್ಲಿ, ಆ ದೇಶದ ಅಧ್ಯಕ್ಷ ಜೋ ಬೈಡೆನ್ ಜೊತೆಗೆ ಮೋದಿ ನಡೆಸಲಿದ್ದ ಪತ್ರಿಕಾಗೋಷ್ಠಿ ಪ್ರವಾಸಕ್ಕಿಂತಲೂ ಸ್ವಲ್ಪ ಹೆಚ್ಚು ಪ್ರಚಾರ ಪಡೆದುಕೊಂಡಿದ್ದೇನೋ ನಿಜ. ಕೇವಲ ಎರಡು ಪ್ರಶ್ನೆಗಳಿಗೆ ಸೀಮಿತವಾಗಿದ್ದ ಆ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಎರಡೂ ರಾಷ್ಟ್ರಗಳ ಮುಖಂಡರು ಉತ್ತರಿಸಿದ್ದು, ಎರಡೂ ದೇಶಗಳಲ್ಲಿ ಇನ್ನೇನು ಬರಲಿರುವ ಚುನಾವಣೆಗಳಿಗೆ ಭಾಷಣ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಿರುವಂತಿತ್ತು. ಭಾರತದ ಪ್ರಧಾನಿಯವರಿಗೆ ಪ್ರೆಸ್ ಕಾನ್ಫರೆನ್ಸ್ ಎಂಬುದು ಬ್ರಹ್ಮಾಂಡದಲ್ಲಿ ನಡೆಯುವ ವಿರಳ ಘಟನೆಯಂತಾಗಿರುವ ಸಮಯದಲ್ಲಿ, ಪ್ರಜಾಪ್ರಭುತ್ವ ನಮ್ಮ ನರನಾಡಿಗಳಲ್ಲಿದೆ, ಪರಿಸರ-ಹವಾಮಾನ ಇವೆಲ್ಲವೂ ನಮ್ಮ ಸಂಸ್ಕೃತಿ ಎಂಬಿತ್ಯಾದಿಯಾಗಿ ಎಂದಿನಂತೆ ಯಾವುದೇ ಅಂಕಿಅಂಶಗಳ ಆಧಾರವಿಲ್ಲದೆ ಅವರು ಕೊಚ್ಚಿಕೊಂಡಿದ್ದಾರೆ. ಫಾಲೋ-ಅಪ್ ಪ್ರಶ್ನೆಗೆ ಅವಕಾಶವೂ ಇಲ್ಲದಂತೆ ’ಫಿಕ್ಸ್’ ಮಾಡಿಕೊಂಡಿದ್ದ ಪ್ರೆಸ್ ಕಾನ್ಫರೆನ್ಸ್‌ನಲ್ಲಿನ ಮಾತುಗಳಿಗೆ ಯಾವ ಆತ್ಮಸಾಕ್ಷಿಯ ಅವಶ್ಯಕತೆಯೂ ಇರುವುದಿಲ್ಲ. ಅದರಂತೆಯೇ ಇಬ್ಬರೂ ಮುಖಂಡರು ನಡೆದುಕೊಂಡಿದ್ದಾರೆ. ಕನಿಷ್ಠ ಪಕ್ಷ ಬೈಡೆನ್ ನಡೆಯನ್ನು ಬೂಟಾಟಿಕೆ ಎಂದು ಅಲ್ಲಿನ ಮಾಧ್ಯಮಗಳು (ಸ್ವತಂತ್ರ, ಸಣ್ಣವು, ದೊಡ್ಡವು ಮತ್ತು ಮುಖ್ಯವಾಹಿನಿಗಳು ಸೇರಿದಂತೆ) ಬಣ್ಣಿಸುವುದಕ್ಕೆ ಸಾಧ್ಯವಾದಷ್ಟು ಅಲ್ಲಿ ಖಂಡಿತಾ ಪ್ರಜಾಪ್ರಭುತ್ವ ಉಳಿದಿದೆ! ಇಲ್ಲಿ ಮೋದಿಯವರನ್ನು ಟೀಕಿಸಿದ ಮೇನ್‌ಸ್ಟ್ರೀಮ್ ಮಾಧ್ಯಮಗಳನ್ನು ದುರ್ಬೀನು ಹಾಕಿ ಹುಡುಕಿದರೂ ಸಿಗುವುದು ಕಷ್ಟ. ಆ ಮಟ್ಟಿಗೆ ತೋರಿಕೆಯ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಕೂಡ ಇಲ್ಲಿನ ಪ್ರಭುತ್ವ ಎಫರ್ಟ್ ಹಾಕಿರುವಂತೆ ಕಾಣುವುದಿಲ್ಲ.

ಪ್ರಜಾಪ್ರಭುತ್ವದ ತೋರಿಕೆಯೂ ಇಲ್ಲ ಎಂಬುವುದಕ್ಕೆ ಕ್ಲಾಸಿಕ್ ಉದಾಹರಣೆಯೆಂಬಂತೆ ಮೋದಿಯವರನ್ನು ಅಂದು ಪ್ರಶ್ನಿಸಿದ ’ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆಯ ಪತ್ರಕರ್ತೆಯ ಮೇಲೆ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ದಾಳಿ ಪ್ರಾರಂಭವಾಗಿತ್ತು. ದಾಳಿ ನಡೆಸುತ್ತಿದ್ದವರು ಯಾರೋ ’ಫ್ರಿಂಜ್’ಗಳಲ್ಲ; (2022ರಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಇಸ್ಲಾಂ ಧರ್ಮ ಪ್ರವಾದಿ ಮೊಹಮದ್ ಅವರ ಮೇಲೆ ಅನುಚಿತ ಪ್ರತಿಕ್ರಿಯೆಗಳನ್ನು ನೀಡಿದ್ದರು. ಮಧ್ಯಪ್ರಾಚ್ಯದ ಕೆಲವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಇದನ್ನು ವಿರೋಧಿಸಿ ಆರ್ಥಿಕ ನಿರ್ಬಂಧದ ಬೆದರಿಕೆ ಹಾಕಿದ ಮೇಲೆ ಬಿಜೆಪಿ ಅವರನ್ನು ಫ್ರಿಂಜ್ ಎಂದು ಬಗೆದು ತನ್ನನ್ನು ನೂಪುರ್ ಅವರ ಹೇಳಿಕೆಯಿಂದ ಪ್ರತ್ಯೇಕಿಸಿಕೊಳ್ಳಲು ಪ್ರಯತ್ನಿಸಿತ್ತು. ಇಂತಹ ಸಂದರ್ಭ ಈಗ ಡಬ್ಲ್ಯುಎಸ್‌ಜೆ ಪತ್ರಕರ್ತೆಯ ಮೇಲೆ ಪ್ರತಿಕ್ರಿಯಿಸುವ ವ್ಯಕ್ತಿಗೆ ಮುಂದೆಂದಾದರೂ ಬರಬಹುದಾದರೂ, ಸದ್ಯಕ್ಕೆ ಆತ ಬಿಜೆಪಿಯಲ್ಲಿ ಪ್ರಭಾವಿ) ಆತ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವಿಯ. “ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳ ’ರಕ್ಷಣೆ’ ಮಾಡಲು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ಬೇಕಂತಲೇ ಕೇಳಿದ ಪೂರ್ವನಿರ್ಧರಿತ ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣವಾಗಿ ಹೊಡೆದುಹಾಕಿದರು. ಅವರ ಪ್ರತಿಕ್ರಿಯೆಯಲ್ಲಿ ಅವರು ಮುಸ್ಲಿಮರ ಹೆಸರನ್ನಾಗಲೀ ಅಥವಾ ಇನ್ಯಾವುದೇ ಹೆಸರನ್ನು ಎತ್ತಲಿಲ್ಲ, ಸಂವಿಧಾನದ ಬಗ್ಗೆ, ಅರ್ಹತೆಯ ಮಾನದಂಡದ ಆಧಾರದ ಮೇಲೆ ಸರ್ಕಾರಿ ಸಂಪನ್ಮೂಲಗಳನ್ನು ಪಡೆಯುವ ಪ್ರವೇಶಾವಕಾಶ ಮತ್ತು ಜಾತಿ, ಗುಂಪು, ಮತ ಅಥವಾ ಭೌಗೋಳಿಕತೆಯ ಮೇಲೆ ಯಾವುದೇ ತಾರತಮ್ಯ ಮಾಡದಿರುವುದರ ಬಗ್ಗೆ ಮಾತನಾಡಿದರು… ಅಂತಹುದೇ ಪ್ರಶ್ನೆಗೆ ಅಧ್ಯಕ್ಷ ಬೈಡೆನ್ ಅವರ ತಣ್ಣಗಿನ ಪ್ರತಿಕ್ರಿಯ ಬಳಿಕ ಇದು ಟೂಲ್‌ಕಿಟ್ ಗ್ಯಾಂಗ್‌ಗೆ ಕೊಟ್ಟ ಮತ್ತೊಂದು ಹೊಡೆತವಾಗಿತ್ತು” ಎಂದು ಮಾಳವಿಯ ಟ್ವೀಟ್ ಮಾಡಿದರು. ’ಮೋಟಿವೇಟೆಡ್’, ’ಟೂಲ್‌ಕಿಟ್’ ಎಂಬ ಪದಗಳನ್ನು ಬಳಸುವ ಮೂಲಕ ತಮ್ಮ ಟ್ರೋಲ್ ಪಡೆಯನ್ನು ಪ್ರಚೋದಿಸಿ ಉದ್ರೇಕಗೊಳಿಸಿದ್ದರು. ಅಲ್ಲಿಂದ ಪ್ರಾರಂಭವಾಯಿತು ನೋಡಿ, ಬಿಜೆಪಿ ಐಟಿ ಸೇನೆ ಡಬ್ಲ್ಯುಎಸ್‌ಜೆ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ವಿರುದ್ಧ ಸೆಟೆದು ನಿಂತಿತು. ಆಕೆ ಪಾಕಿಸ್ತಾನಿ, ಇಸ್ಲಾಮಿಸ್ಟ್, ಹಿಂದೂ ವಿರೋಧಿ ಮುಂತಾಗಿ ಟ್ರಾಲಿಂಗ್ ಶುರುಹಚ್ಚಿಕೊಂಡಿತು. ಈ ಆನ್‌ಲೈನ್ ಅಟ್ಯಾಕ್ ಯಾವ ಹಂತಕ್ಕೆ ಬೆಳೆಯಿತೆಂದರೆ, ಇದಕ್ಕೆ ವೈಟ್‌ಹೌಸ್ ಪ್ರತಿಕ್ರಿಯೆ ನೀಡಬೇಕಾಗಿ ಬಂತು. ಯುಎಸ್‌ನ ರಾಷ್ಟ್ರೀಯ ಭದ್ರತಾ ಪರಿಷತ್ತಿನ ಸಂವಹನ ವಿಭಾಗದ ಮುಖ್ಯಸ್ಥ ಜಾನ್ ಕಿರ್ಬಿ ಪ್ರತಿಕ್ರಿಯಿಸಿ, “ದೌರ್ಜನ್ಯದ ಬಗೆಗಿನ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಇದನ್ನು ಒಪ್ಪಲು ಅಸಾಧ್ಯ, ಯಾವುದೇ ಸನ್ನಿವೇಶದಲ್ಲಿ, ಎಲ್ಲೇ ಆಗಲಿ, ಪತ್ರಕರ್ತರಿಗೆ ಕಿರುಕುಳ ನೀಡುವುದನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಕಳೆದ ವಾರ ಸ್ಟೇಟ್ (ಅಮೆರಿಕ) ಭೇಟಿಯ ವೇಳೆ ಪ್ರದರ್ಶಿಸಲಾಗಿದ್ದ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದ್ದು ಇದು ಅನೈತಿಕವಾಗಿದೆ” ಎಂದಿದ್ದಾರೆ. ’ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ಕೂಡ ತನ್ನ ಉದ್ಯೋಗಿಯ ಮೇಲೆ ನಡೆದ ದಾಳಿಯನ್ನು ಖಂಡಿಸಿ ಪ್ರಕಟಣೆ ನೀಡಿತು. ಸಬ್ರಿನಾ ಸಿದ್ದಿಕಿ ತಾನು ಮತ್ತು ತನ್ನ ತಂದೆ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಬೆಂಬಲಿಸಿ ಟಿವಿ ನೋಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿಕೊಂಡರು ಕೂಡ!

ಇದನ್ನೂ ಓದಿ: ಮೋದಿಗೆ ಪ್ರಶ್ನೆ ಮಾಡಿದ್ದ ಪತ್ರಕರ್ತೆಗೆ ಹಿಂದುತ್ವವಾದಿಗಳಿಂದ ನಿಂದನೆ; ಅಮೆರಿಕ ಶ್ವೇತಭವನದಿಂದ ಖಂಡನೆ

ಈಗ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಅವರ ಹೆಸರಿನಲ್ಲಿ ಇರುವ ’ಸಿದ್ದಿಕಿ’ ಭಾರತದಲ್ಲಿ ಪತ್ರಕರ್ತರ ಮೇಲೆ ನಡೆದ ದಾಳಿಯ ಮತ್ತೊಂದು ಪ್ರಕರಣವನ್ನು ನೆನಪಿಸದೆ ಇರದು. ಉತ್ತರಪ್ರದೇಶದ ಹಾತ್ರಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ನಡೆದ ರೇಪ್ ಮತ್ತು ಕೊಲೆ ಘಟನೆಯನ್ನು ವರದಿ ಮಾಡಲು ಸಿದ್ದಿಕ್ ಕಪ್ಪನ್ ಕೇರಳದಿಂದ ಬಂದಿದ್ದರು. ಅವರ ಜೊತೆಗೆ ಆತಿಕುರ್ ರಹಮಾನ್ ಮತ್ತು ವಿದ್ಯಾರ್ಥಿ ಮಸೂದ್ ಅಹ್ಮದ್ ಇದ್ದರು. ಅತ್ತ ಒಂದು ಕಡೆ ಕುಟುಂಬಸ್ಥರಿಗೂ ಶವವನ್ನು ನೀಡದೆ 19 ವರ್ಷದ ಆ ಸಂತ್ರಸ್ತ ಯುವತಿಯ ಶವವನ್ನು ಆತುರಾತುರದಲ್ಲಿ ಪೊಲೀಸರು ಸುಟ್ಟುಹಾಕುತ್ತಿದ್ದರೆ ಮತ್ತೊಂದು ಕಡೆ ಸಿದ್ದಿಕ್, ರಹಮಾನ್, ಅಹ್ಮದ್‌ರ ಮೇಲೆ ಪೊಲೀಸರು ’ಫಿಲ್ಮಿ’ ರೀತಿಯಲ್ಲಿ ಆರೋಪಗಳನ್ನು ಹೊರಿಸಿ ಯುಎಪಿಎ ಜಡಿದು ಬಂಧಿಸುತ್ತಿದ್ದರು. ಅಷ್ಟು ಸಾಲದೆಂಬಂತೆ ಅವರನ್ನು ಕರೆತಂದಿದ್ದ ಟ್ಯಾಕ್ಸಿ ಚಾಲಕ ಮೊಹಮ್ಮದ್ ಆಲಂ ಅವರ ಮೇಲೆಯೂ ಯುಎಪಿಎ ಹಾಕಿ ಬಂಧಿಸಿದ್ದರು. ಆಲಂ ಮತ್ತು ಸಿದ್ದಿಕಿ ಕ್ರಮವಾಗಿ 27 ಮತ್ತು 28 ತಿಂಗಳುಗಳ ಕಾಲ ಜೈಲಿನಲ್ಲಿದ್ದು 2022ರಲ್ಲಿ ಜಾಮೀನು ಪಡೆದರೆ ರಹಮಾನ ಅವರು 32 ತಿಂಗಳು ಕಾಲ ಜೈಲಿನಲ್ಲಿದ್ದು 23 ಜೂನ್ 2023ರಂದು ಜಾಮೀನು ಪಡೆದು ಹೊರಬಂದಿದ್ದಾರೆ. ಮಸೂದ್ ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಜಾಮೀನಿನ ಮೇಲೆ ಕೆಲವೇ ದಿನಗಳ ಹಿಂದೆ ಹೊರಬಂದ ರಹಮಾನ್ ಅವರು “ಮುಸ್ಲಿಮರಾಗಿದ್ದಕ್ಕೆ ನಮ್ಮನ್ನು ಶಿಕ್ಷಿಸಲಾಯಿತು. ಜೈಲಿನಲ್ಲಿ ನನ್ನ ಆತ್ಮಬಲವನ್ನು ಮುರಿಯಲು ಎಲ್ಲಾ ತಂತ್ರಗಳನ್ನು ಅವರು ಬಳಸಿದರು, ಆದರೆ ಆ ಕೆಲಸದಲ್ಲಿ ಅವರು ಸೋತರು. ನನಗೆ ಯಾವುದರ ಬಗ್ಗೆಯೂ ಭಯವಿಲ್ಲ. ಇನ್ನೂ ಹೆಚ್ಚೇನು ಅವರು ಮಾಡಬಲ್ಲರು? ನಿಮ್ಮನ್ನು ಜೈಲಿಗೆ ಹಾಕಿದ ಮೇಲೆ ಭಯ ಕಾಣೆಯಾಗಿಬಿಡುತ್ತದೆ” ಎಂದಿದ್ದಾರೆ. ನಮ್ಮ ಪ್ರಜಾಪ್ರಭುತ್ವ ಈ ಸ್ಥಿತಿಯನ್ನು ಎದುರಿಸುತ್ತಿರುವಾಗ ಯುಎಸ್‌ಎನಲ್ಲಿ ಪತ್ರಕರ್ತೆಯಾಗಿರುವ ಸಬ್ರಿನಾ ಸಿದ್ದಿಕಿ ಸಾಪೇಕ್ಷವಾಗಿ ಸ್ವಲ್ಪ ಹೆಚ್ಚು ಸೇಫ್ ಎನ್ನಬಹುದೇನೋ!

ಇದ್ರಿಸ್ ಪಾಷಾ

ದೊಡ್ಡದೊಡ್ಡ ಕಾರ್ಪೊರೇಟ್ ಧಣಿಗಳನ್ನು ಭೇಟಿ ಮಾಡಿ, ಅಮೆರಿಕದ ಕಾಂಗ್ರೆಸ್‌ನಲ್ಲಿ ಭಾಷಣ ಮಾಡಿ (ಭಾರತದಲ್ಲಿ ಅಲ್ಪಸಂಖ್ಯಾತರನ್ನು ದಮನಿಸಲಾಗುತ್ತಿದೆ ಎಂದು ಆರೋಪಿಸಿ ಮೂವರು ಅಮೆರಿಕ ಲಾಮೇಕರ್‌ಗಳು ಇದರಿಂದ ದೂರವುಳಿದಿದ್ದರು), ಬೈಡೆನ್ ಅವರ ಜೊತೆಗೆ ಪ್ರಜಾಪ್ರಭುತ್ವದ ಬಗ್ಗೆ ಕೊಚ್ಚಿಕೊಂಡು ಯುಎಸ್‌ಎ ಪ್ರವಾಸ ಮುಗಿಸಿ ಈಜಿಪ್ಟ್ ಪ್ರವಾಸ ಶುರುಮಾಡುವ ಹೊತ್ತಿಗೆ ಜೂನ್ 26ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಗೋರಕ್ಷಣೆಯ ಹೆಸರಿನ ಕೊಲೆಗಡುಕರು ಇಬ್ಬರು ಮುಸಲ್ಮಾನರ ಮೇಲೆ ದೊಣ್ಣೆ ಮತ್ತು ಸ್ಟೀಲ್ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಅಫನ್ ಅನ್ಸಾರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರೆ, ನಾಸಿರ್ ಖುರೇಶಿ ತೀವ್ರ ಗಾಯಗಳಿಗೆ ತುತ್ತಾಗಿದ್ದಾರೆ. ಇದಕ್ಕೆ ಎರಡು ವಾರಗಳ ಹಿಂದೆಯಷ್ಟೇ ಜೂನ್ 8ರಂದು ನಾಸಿಕ್‌ನಲ್ಲಿಯೇ ಗೋರಕ್ಷಕರ ದಾಳಿಗೆ ಕೊಲೆಯಾಗಿದ್ದರು ಎನ್ನಲಾಗಿದ್ದ ಲುಕ್‌ಮನ್ ಅನ್ಸಾರಿ ಅವರ ಮೃತದೇಹ ಪತ್ತೆಯಾಗಿತ್ತು. ಏಪ್ರಿಲ್‌ನಲ್ಲಿ ಕರ್ನಾಟಕದ ರಾಮನಗರದಲ್ಲಿ ಇದ್ರಿಸ್ ಪಾಷಾ ಎಂಬುವವರನ್ನು ಗೋರಕ್ಷಣೆಯ ಹೆಸರನಲ್ಲಿ ಕೊಲೆಗೈಯ್ಯಲಾಗಿತ್ತು. ಇದ್ರಿಸ್ ಪಾಷಾ ಮತ್ತು ಸಹಚರರು ಅಧಿಕೃತ ರಶೀದಿಯೊಂದಿಗೇ ದನಗಳನ್ನು ಸಾಗಣೆ ಮಾಡುತ್ತಿದಾರೂ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ಗೋಸಾಗಣೆ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಲಾಗಿತ್ತು. ಈಗ ಪುನೀತ್ ಕೆರೆಹಳ್ಳಿ ಮತ್ತು ಇತರ ಐವರು ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆದರೆ ಕೊಲೆ ಆರೋಪಿಗಳು ಜಾಮೀನು ಪಡೆದು ರೋಷಾವೇಷದ ಮಾತುಗಳನ್ನಾಡುವುದರಲ್ಲಿ ನಿರತರಾಗಿದ್ದಾರೆ!

ಅಲ್ಪಸಂಖ್ಯಾತ ಧರ್ಮೀಯರ ಮೇಲೆ ದೇಶದ ಬಹುಸಂಖ್ಯಾತರು ಸವಾರಿ ನಡೆಸುತ್ತ್ತಿರುವುದಕ್ಕೆ ಬಹುಶಃ ದಿನಾಲು ನೂರಾರು ಉದಾಹರಣೆಗಳು ಸಿಕ್ಕಾವು.

ಇಂತಹ ಪರಿಸ್ಥಿತಿ ಸೃಷ್ಟಿಯಾಗುವುದಕ್ಕೆ ಮೋದಿ ಆಡಳಿತದ ಸರ್ಕಾರ ಕಾರಣವಲ್ಲವೇ? ಮೋದಿಯವರ ಪಕ್ಷ ಬಿಜೆಪಿ ಕಾರಣವಲ್ಲವೇ? ಬಿಜೆಪಿಯ ತಾತ್ವಿಕ ಪೋಷಕ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಕಾರಣವಲ್ಲವೇ? ಇದನ್ನು ತಡೆಯಲು ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡುವುದರ ಬದಲು ಪ್ರಜಾಪ್ರಭುತ್ವ ನರನಾಡಿಗಳಲ್ಲಿ ಹರಿಯುತ್ತಿದೆ ಎಂಬ ಒಣಮಾತು ಇದ್ರಿಸ್ ಪಾಷಾನ ಜೀವವನ್ನು ವಾಪಸ್ ತಂದುಕೊಡುತ್ತದೆಯೇ? ಅವರ ಕುಟುಂಬದ ಸಂಕಟವನ್ನು ಕಡಿಮೆ ಮಾಡುತ್ತದೆಯೇ?

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತದಲ್ಲಿ ಕುಸಿಯುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಬಿಜೆಪಿ ಮುಖಂಡರು ಒಬಾಮಾ ಹೆಸರನ್ನೂ ಆಡಿಕೊಂಡು ಟ್ರಾಲ್ ಮಾಡಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಟೀಕೆಯನ್ನು ಒಂದು ಹಂತ ಮುಂದಕ್ಕೆ ತೆಗೆದುಕೊಂಡುಹೋಗಿ, ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ಸಮಯದಲ್ಲಿ ಮುಸ್ಲಿಂ ರಾಷ್ಟ್ರಗಳ ಮೇಲಿನ ಅಮೆರಿಕ ದಾಳಿಯನ್ನು ನಿಲ್ಲಿಸಲಿಲ್ಲವೇಕೆ ಎಂದು ಪ್ರಶ್ನಿಸಿದರು. ಬೇರೆ ರಾಷ್ಟ್ರಗಳ ಜನರ ಮೇಲಿನ ಮಾನವ ಹಕ್ಕುಗಳ ಹರಣದ ವಿಷಯದಲ್ಲಿ ಯುಎಸ್‌ಎ ದಾಖಲೆ ಭಯಾನಕವಾಗಿರುವುದು ನಿಜ. ಅದು ಬರಾಕ್ ಒಬಾಮಾ ಅವರ ಕಾಲಕ್ಕೂ ದಯನೀಯವಾಗಿತ್ತು ಎಂಬುದನ್ನು ಹಲವರು ಗುರುತಿಸಿದ್ದಾರೆ.

ಬರಾಕ್ ಒಬಾಮಾ

ಆದರೆ ಇದು ಭಾರತದಂತಹ ದೇಶಕ್ಕೆ ಮಾದರಿಯಾಗಬಾರದಲ್ಲವೇ? ಪ್ರಜಾಪ್ರಭುತ್ವ ನರನಾಡಿಗಳಲ್ಲ ಹರಿಯುವ ದೇಶದಲ್ಲಿ ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಲಿಂಚಿಂಗ್‌ಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲವೇಕೆ?

ಮತ್ತೊಮ್ಮೆ ಆ ವಿರಳಾತಿ ವಿರಳ ಪತ್ರಿಕಾ ಗೋಷ್ಠಿಯಲ್ಲಿ ಸಬ್ರಿನಾ ಸಿದ್ದಿಕಿ ಕೇಳಿದ ಆ ಪ್ರಶ್ನೆಯನ್ನು ಇಲ್ಲಿ ಮತ್ತೆ ನೆನಪಿಸಿಕೊಳ್ಳುವುದು ಉಚಿತವಾದೀತು: “ಪ್ರಧಾನ ಮಂತ್ರಿಯವರೇ, ಭಾರತ ಬಹಳ ಕಾಲದಿಂದಲೂ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಾ ಬಂದಿದೆ, ಆದರೆ ಹಲವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯವೆಸಗಿರುವ ಮತ್ತು ವಿರೋಧಿಗಳ ಸದ್ದಡಗಿಸಿರುವ ಬಗ್ಗೆ ಮಾತಾಡುವ ಹಲವು ಮಾನವ ಹಕ್ಕುಗಳ ಸಂಘಟನೆಗಳಿವೆ. ಶ್ವೇತ ಭವನದ ಪೂರ್ವ ಕೊಠಡಿಯಲ್ಲಿ ಈಗ ನೀವು ನಿಂತಿರುವಾಗ, ಎಲ್ಲಿ ವಿಶ್ವದ ಹಲವು ನಾಯಕರು ಪ್ರಜಾಪ್ರಭುತ್ವವನ್ನು ರಕ್ಷಿಸುವ ಬಗ್ಗೆ ಭರವಸೆಗಳನ್ನು ನೀಡಿದ್ದಾರೋ ಅಲ್ಲಿ, ನಿಮ್ಮ ದೇಶದಲ್ಲಿ ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನಿಮ್ಮ ಸರ್ಕಾರ ಮತ್ತು ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುತ್ತೀರಿ?

ಈ ಪ್ರಶ್ನೆಗೆ ಪ್ರಜಾಪ್ರಭುತ್ವದ ಬಗ್ಗೆ ಕೊಚ್ಚಿಕೊಳ್ಳುವ ಯಾವ ಉತ್ತರವನ್ನಾದರೂ ನೀಡಿ ನುಣುಚಿಕೊಳ್ಳಬಹುದು. ಆದರೆ ದಿನನಿತ್ಯ ಇಲ್ಲಿ ನಡೆಯುವ ಘಟನೆಗಳು ಅದಕ್ಕೆ ವ್ಯತಿರಿಕ್ತವಾದ ಮೆಜಾರಿಟೇರಿಯನ್ ಭಾವನೆ ಭಾರತದಲ್ಲಿ ನೆಲೆಸಿರುವುದಕ್ಕೆ ಸಾಕ್ಷ್ಯ ನುಡಿಯುತ್ತಿರುತ್ತವೆ. ಅಪರೂಪದ ಪತ್ರಿಕಾಗೋಷ್ಠಿಯ ಈ ಪ್ರಶ್ನೆ ಇನ್ನಷ್ಟು ದಿನ ಕಾಡಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...